ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತರು, ನೀರು, ಕಲ್ಲಿನ ಘಟದ ಮಧ್ಯದಲ್ಲಿ ತೋರುವ ಅಗ್ನಿ ಕೆಡದೆ ಉರಿಯದೆ ಅಡಗಿಪ್ಪ ಭೇದವನರಿತಡೆ ಪ್ರಸಾದಲಿಂಗಿಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತನ್ನ ಬುದ್ಧಿ ತನ್ನ ಚಿತ್ತದಲ್ಲಿ ಅಡಗಿದ ಮತ್ತೆ ನಾಡೆಲ್ಲರ ಕೂಡಿ ಓದಿ ಹಾಡಿ ಹೇಳಲೇತಕ್ಕೆ? ತನ್ನ ತಾನರಿದಲ್ಲಿ ಕಾಬ ಇದಿರು ತನಗೆ ಅನ್ಯಬ್ಥಿನ್ನವಿಲ್ಲಾ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತನ್ನ ತನ್ನಿಚ್ಛೆಗೆ ಬಹಲ್ಲಿ ಪಿನಾಕಿ ಬೋಸರಗಿತ್ತಿಯ ಹಾಸೆ? ಮನವ ಕಟ್ಟಿ, ಐದನೆಯ ಭೂತವ ಸುಟ್ಟಡೆ. ಎನ್ನ ದೇವನುಂಟಿಲ್ಲೆನ್ನಬೇಡ. ಮನಗಾಯಲಾರದೆ ತನುಗಾಯಹೋದಡೆ, ಎನ್ನ ದೇವ ಸೆರೆಯಲ್ಲೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತಿರುಳು ಒಡೆದ ಬಿತ್ತು ಮರಳಿ ಪೈರಪ್ಪುದೆ? ತ್ರಿವಿಧಕ್ಕೆ ಮನವೊಡ್ಡದೆ ತೆರಳಿ ತೀರ್ಚಿದವಂಗೆ ಮರಳಿ ಮುಟ್ಟಿದಡೆ, ಆಚಾರಕ್ಕೆ ಹುರುಳಿಲ್ಲ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತಡಿ ನೆಲೆ ಇಲ್ಲದ ಮಹಾನದಿಯಲ್ಲಿ ಒಡಲಿಲ್ಲದಂಬಿಗ ಬಂದೈದಾನೆ. ಹಿಡಿವ ಬಿಡುವ ಮನದ ಬೆಲೆಗೊಟ್ಟಡೆ ಗಡಣವಿಲ್ಲದೆ ಹಾಯಿಸುವೆ ಹೊಳೆಯ, ನುಡಿಯಿಲ್ಲದ ನಿಸ್ಸೀಮ ಗ್ರಾಮದಲಿರಿಸುವೆನೆಂದಾತನಂಬಿಗ ಚೌಡಯ್ಯ
--------------
ಅಂಬಿಗರ ಚೌಡಯ್ಯ
ತಟ್ಟು ಗೋಣಿಸೊಪ್ಪು ಸಕಲಾತಿ ಅಲ್ಲ[ವು], ತೊತ್ತಿನ ಮಗ ಭಕ್ತನಲ್ಲವಯ್ಯಾ, ಹಿರಿಯ ದೇವತೆಗೆ ಬಿಟ್ಟ ಕೋಣ ಗೂಳಿಯಲ್ಲವಯ್ಯಾ. ಕಂಡ ತೊತ್ತಿಗೆ ಹುಟ್ಟಿದವ ಜಂಗಮವಲ್ಲವಯ್ಯಾ. ಹಣತಿ ನೆಕ್ಕುವ ಮಠಪತಿ ಪಂಚಮಠಕ್ಕೆ ಸಲ್ಲ. ಈ ಮೂ[ಳ]ರಿಗೆ ಆದಿಯಲ್ಲಿ ಗುರುಉಪದೇಶ[ವ] ತುಂಬಿಲ್ಲ. ಈ ಮೂ[ಳ]ರ ಮೂಗು ಕೊಯ್ದು ಉಪ್ಪು ಸಾರು ತುಂಬಿ, ನೆತ್ತಿಯ ಬೋಳಿಸಿ ಕತ್ತೆಯನೇರಿಸಿ, ಮೇಲೆ ನಿಂಬೆಯ ಹುಳಿಯ ಬಿಟ್ಟು, ಪಡುವ ದಾರಿಗೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ
--------------
ಅಂಬಿಗರ ಚೌಡಯ್ಯ
ತಟಾಕ ಒಡೆದಡೆ ಕಟ್ಟುವಡೆವುದಲ್ಲದೆ. ಅಂಬುಧಿ ತುಂಬಿ ಮೇರೆದಪ್ಪಿದಲ್ಲಿ ಕಟ್ಟಿಂಗೆ ಹಿಂಗಿ ನಿಂದುದುಂಟೆ? ಅರಿಯದವಂಗೆ ಅರಿಕೆಯ ಹೇಳಿದಡೆ ಅರಿವನಲ್ಲದೆ ಅರಿದು ಮರೆದವಂಗೆ ಬೇರೊಂದೆಡೆಯ ಹೇಳಿಹೆನೆಂದಡೆ, ಕಡೆ ನಡು ಮೊದಲಿಲ್ಲಾ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತುತ್ತಿನಾಸೆಗೆ ಲಿಂಗವ ಕೊಟ್ಟುಹೋಹ ವ್ಯರ್ಥ ಮೂಳ ನಿಮಗೆ ಗುರುವಾದನೈಸೆ? ಸತ್ಯಸದಾಚಾರವ ಬಲ್ಲಡೆ ತತ್ವಜ್ಞಾನವ ಬೋಧಿಸಿ, ಆ ಮಹಾಲಿಂಗಕ್ಕೂ ನಿಮಗೂ ಸಂಬಂಧವ ಮಾಡದಿಹ ಕತ್ತೆ ಗುರುವಿನ ಪಾದವ ಹಿಡಿದು ಕೆಟ್ಟಿರಲ್ಲಾ! ಹತ್ತಿಲಿದ್ದ ಲಿಂಗವ ಕಿರಿದು ಮಾಡಿ, ಕ್ಷೇತ್ರದ ಲಿಂಗವ ಹಿರಿದು ಮಾಡಿ; [ಕಂಕುಳ ಹತ್ತಿದ]ಲಿಂಗವ ಕಿರಿದು ಮಾಡಿ, ಕೊಂಕಣ ಹತ್ತಿ ಲಿಂಗವ ಹಿರಿದು ಮಾಡಿ; ಎಂತುಟೋ ನಿನ್ನ ಲಿಂಗವ ಕೊಡಲಾರದಿದ್ದಡೆ! ಹರುಗೋಲು ಹೊರಲಾರ, ಭೋಂಕನೆ ಮುಳುಗುವನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತನ್ನುವ ಮರೆದು ದೇವರ ಕಂಡೇನೆಂಬ ಕಾರಣ, ಹರಿ ಸುರ ಬ್ರಹ್ಮಾದಿಗಳೆಲ್ಲರು ತಲೆ ಕೆಳಗಾಗಿ ಹೋದರು! ಆ ದೇವರ ಮರೆದು ತನ್ನುವನರಿದುದುಂಟಾದರೆ, ತಾನೆ ದಿಟವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತೋಯವಿಲ್ಲದ ಕುಂಭ, ಜ್ಞಾನವಿಲ್ಲದ ಘಟ, ದೇವರಿಲ್ಲದ ಗುಡಿ ಇವು ಹಾಳು ದೇಗುಲ ಸಮವು. ಎಲೆ ಪರವಾದಿಗಳಿರಾ: ಗುರುವು ಎಂಬ ನಾಮವು ಪರಶಿವನು, ಪರಶಿವನೆ ಇಷ್ಟಲಿಂಗವು. ಆ ಇಷ್ಟಲಿಂಗದ ಪೂಜೆಯಲ್ಲಿ ಲೋಲುಪ್ತನಾಗಿರಬೇಕು, ಆ ಗುರುಮಂತ್ರದಲ್ಲಿ ಮಗ್ನನಾಗಿರಬೇಕು, ಚರಭಕ್ತಿಯಲ್ಲಿ ಯುಕ್ತನಾಗಿರಬೇಕು. ಈ ತ್ರಿವಿಧವ ಬಿಟ್ಟು, ಮಲತ್ರಯಕ್ಕೆ ಒಳಗಾಗಿ ಬಂಧನಕ್ಕೆ ಹೋಗುವರ ನೋಡಿ ಮನ ನಾಚಿತ್ತೆಂದ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ತಿಂಬ ಜಾತಿಗೆ ಮೇವ ಹಾಕಿ ಹೇರಳ ಖಂಡವ ಕೊಯಿದು ತಿಂಬವನಂತೆ, ದಾತನಿಗೆ ಛಂದದ ಮಾತನಾಡಿ ಮೂರು ಮಲದಂದವ ಸಂಧಿಸಿಕೊಂಬವಂಗೆ, ಲಿಂಗವಿಲ್ಲಾ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತನ್ನುವ ಹುಸಿ ಮಾಡಿ, ಇನ್ನೊಂದು ದಿಟಮಾಡುವ ಅಣ್ಣಂಗೆ ನಂಬುಗೆ ಇನ್ನಾವುದಯಾಭ? ತನ್ನೊಳಗಿರ್ದ ಘನವ ತಾ ತಿಳಿಯಲರಿಯದೆ, ಪರಬ್ರಹ್ಮಕ್ಕೆ ತಲೆಯಿಕ್ಕಿ ತೆಗೆದೆನೆಂಬ ಅಣ್ಣ ಗಾವಿಲನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತಾನು ಮಾಡುವ ಭಕ್ತಿ ಲಿಂಗದ ಉಪದೇಶವನರಿಯದ ಕಾರಣ ಕಂಡ ಕಂಡ ದೈವಕ್ಕೆ ಹೋಗಿ, ಮಂಡೆ ಮುಂದಲೆಯ ಕೊಟ್ಟನಾದಡೆ ಆತ ಭಕ್ತನಲ್ಲ, ಆತನ ಸಂಗಡ ಹೋಗಿ ಉಪದೇಶವ ಮಾಡಿದಾತನು ಗುರುವಲ್ಲ, ಅಂಥವರ ಮನೆಯಲ್ಲಿ ಹೊಕ್ಕು ಉಂಬಾತ ಜಂಗಮವಲ್ಲ. ಈ ಭಕ್ತ ಜಂಗಮದ ಭೇದವೆಂತೆಂ[ದ]ಡೆ: ಒಡಲ ಕಿಚ್ಚಿಗೆ ಹೋಗಿ ತುಡುಗುಣಿನಾಯಿ ಹೊಕ್ಕು, ತನ್ನ ಒಡಲ ಹೊರೆದಂತಾಯಿತಯ್ಯ [ಎಂದು] ಪೊಡವಿಯೊಳಗೆ ಡಂಗುರವನಿಕ್ಕಿ ಸಾರಿದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ