ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಡುವಿನ ಕಣ್ಣು, ಪಡಿಯ ಅಡಿ, ಕೀಟಕನ ಮುಟ್ಟು, ಘಾತಕನ ಸ್ನೇಹ, ವೇಸಿಯ ಮೋಹದ ಆಸೆ, ಸುಜಾತಿಯಲ್ಲದವನ ಕೊಳುಕೊಡೆ, ನಿರಾಸೆಯಿಲ್ಲದವನ ಮಾತಿನ ಮಾಲೆ ಅದೇತಕ್ಕೆ ಬಾ[ತೆ]ಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಉಪ್ಪಿಲ್ಲದ ಮೇಲೋಗರ ತುಪ್ಪದಲ್ಲಿ ಬೆಂದಡೆ, ತುಪ್ಪ ಲೇಸೆಂದಡೆ ಸಪ್ಪೆಯಾಗಿ ತೋರಿತ್ತು. ಅರಿವು ಶುದ್ಧವುಳ್ಳವನೆಂದಡೆ, ಕುರುಹಿನ ಬೆಂಬಳಿಯಲ್ಲಿ ಅಡಗಿದಡೆ ಅರಿವಿಗೆ ದೂರವೆ ? ಅರಿವು ಕುರುಹು ನಿಃಪತಿಯಹನ್ನಕ್ಕ ಆರನೂ ಕೆಡೆನುಡಿಯಬೇಡೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಉಂಡರೆ ಭೂತನೆಂಬರು, ಉಣದಿದ್ದರೆ [ಚಾತಕ]ನೆಂಬರು. ಭೋಗಿಸಿದರೆ ಕಾಮಿಯೆಂಬರು, ಭೋಗಿಸದಿದ್ದರೆ ಮುನ್ನ ಮಾಡಿದ ಕರ್ಮಿ ಎಂಬರು. ಊರೊಳಗಿದ್ದರೆ ಸಂಸಾರಿ ಎಂಬರು, ಅಡವಿಯೊಳಗಿದ್ದರೆ ಮೃಗಜಾತಿ ಎಂಬರು. ನಿದ್ರೆಗೈದರೆ ಜಡದೇಹಿ ಎಂಬರು, ಎದ್ದಿದ್ದರೆ ಚಕೋರನೆಂಬರು. ಇಂತೀ ಜನಮೆಚ್ಚಿ ನಡೆದವರ ಎಡದ ಪಾದ ಕಿರಿ ಕಿರುಗುಣಿಯಲ್ಲಿ ಮನೆ ಮಾಡು, ಮನೆ ಮಾಡು ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ