ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೀರೊಳಗಣ ನೆಯಿದಲು ತಾವರೆಯಂತೆ, ಅದಾರಿಗೆ ಸುಖ ಅದಾರಿಗೆ ದುಃಖವೆಂಬುದ ಆರೈದಲ್ಲಿ, ಆ ಉಭಯವು ನೀರಿನ ಆರೈಕೆಯಿಂದ ಲೇಸೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋರಗನ, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲಿ ಹೆಬ್ಬುಲಿಯ, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವ. ಇಂತಿವೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು, ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ ನಿಲ್ಲಿಸಲಾಗದು. ಈ ಲೋಭಕ್ಕೆ ದಾರಿದ್ರ್ಯವೇ ಔಷಧವು. ಹೇಳಿದರೆ ಕೇಳರು, ತಾವು ತಿಳಿಯರು, ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು. ಇಂತಹ ಗೊಡ್ಡು ಮೂಳ ಹೊಲೆಯರಿಗೆ ಕರ್ಮವೆಂಬ ಶರದ್ಥಿಯಲ್ಲಿ ಬಿದ್ದು ಉರುಳಾಡುವುದೆ ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ನುಡಿವ ಶಬ್ದವೆ ಕಾಯದ ಕಳವಳ, ಒಡಲುಗೊಂಡವರೆಲ್ಲಾ ಕೇಳಿರಯ್ಯಾ. ಸಂಜೆ ನೇಮ ನಿತ್ಯ ಜಪ ತಪ ಸಮಾದ್ಥಿ ಏನೆಂದಳೇನೆಂದು ಬರೆವಂತೆ ಬರೆವ ನುಡಿಯೊಳಗಿರ್ದು, ನುಡಿ ತಪ್ಪಿದೆನೆಂಬ ಈ ನುಡಿಗೆ ನಾಚುವೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಾದದ ಬಲದಿಂದ ವೇದಂಗಳಾದವಲ್ಲದೆ, ವೇದ ಸ್ವಯಂಭುವಲ್ಲ. ಮಾತಿನ ಬಲದಿಂದ ಶಾಸ್ತ್ರಂಗಳಾದವಲ್ಲದೆ, ಶಾಸ್ತ್ರ ಸ್ವಯಂಭುವಲ್ಲ ನಿಲ್ಲು. ಪಾಷಾಣದ ಬಲದಿಂದ ಸಮಯಂಗಳಾದವಲ್ಲದೆ ಸಮಯ ಸ್ವಯಂಭುವಲ್ಲ ನಿಲ್ಲು. ಇಂತೀ ಮಾತಿನ ಬಣಬೆಯ ಮುಂದಿಟ್ಟುಕೊಂಡು ಆತನ ಕಂಡೆಹೆನೆಂದಡೆ, ಆತನತ್ಯತಿಷ್ಟದ್ದಶಾಂಗುಲ, ಆತನೆಂತು ಸಿಲುಕುವನೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಾಯಿ ಬಲ್ಲುದೆ ದೇವರ ಬೋನವ? ದ್ರೋಹಿ ಬಲ್ಲನೆ ಗುರು-ಲಿಂಗ-ಜಂಗಮದ ನೆಲೆಯ? ಅಜ್ಞಾನಿ ಬಲ್ಲನೆ ಸುಜ್ಞಾನಿಯ ನೆಲೆಯ? ಕುಕ್ಕುರ ಬಲ್ಲುದೆ ಸುಭಿಕ್ಷದ ಸವಿಯ? ಇಂತಪ್ಪ ಆಚಾರಭ್ರಷ್ಟರ ಕಡೆಗೆ ನೋಡೆ[ನೆಂ]ದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ನವನಾಳಪದ್ಮದ ಅಷ್ಟದಳದೊಳಗೆ ಎಪ್ಪತ್ತುಮೂರು ನಾಳ ನೋಡಾ. ಸುಳಿದು ಬೀಸುವ ವಾಯು, ಒಳಗೆ ಆತ್ಮಜ್ಯೋತಿ, ಅಲ್ಲಿಂದೊಳಗಿಪ್ಪ ಹಂಸನ ಗೃಹವ ನೋಡಾ. ಹಿರಿದೊಂದು ಭೂತನು ಹುದುಗಿಪ್ಪ ಭೇದವ ನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಾಲ್ಕೈದು ಹದಿನೆಂಟು ಪುರಾಣ ಇಪ್ಪತ್ತೆಂಟು ದೇವತಾಗಮಂಗಳು Zõ್ಞಷಷ್ಟಿ ಅಖಿಳ ವಿದ್ಯಂಗಳ ಸಾಧಿಸಿ ನನಗಾರು ಸರಿ ಎಂಬ ಹೊಲೆಮಾದಿಗರ ಎನಗೊಮ್ಮೆ ತೋರದಿರಯ್ಯಾ. ಅದೇನು ಕಾರಣವೆಂದಡೆ: ಸಕಲಶಾಸ್ತ್ರಂಗಳಿಗೆ Zõ್ಞಷಷ್ಟಿ ಕಳಾವಿದ್ಯಕ್ಕೆ ನಿಲುಕದ ಪರಶಿವನ ಕಾಯ ಜೀವ ಪ್ರಸಾದದಲ್ಲಿ ನೆಲೆಗೊಳಿಸಲರಿಯದೆ ಒಡಲ ಹೊರೆವ ಹೊಲೆ ಮಾದಿಗರಾದಂತಾಯಿತ್ತೆಂದಡೆ ಶುಕನುಡಿದಂತಾಯಿತ್ತೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನೇಮಸ್ಥನೆಂಬವ ಕ್ರೂರಕರ್ಮಿ, ಶೀಲವಂತನೆಂಬವ ಸಂದೇಹಧಾರಿ. ಭಾಷೆವಂತನೆಂಬವ ಬ್ರಹ್ಮೇತಿಕಾರ. ಇವರು ಮೂವರು ಕುಳ್ಳಿರ್ದಲ್ಲಿ ಕುಳ್ಳಿರಲಾಗದು. ಇವರು ಹೋದ ಬಟ್ಟೆಯ ಹೊಗಲಾಗದು. ಇವರು ಮೂವರಿಗೂ ಗುರುವಿಲ್ಲ, ಲಿಂಗವಿಲ್ಲೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಿಜಗಂಡನ ಸಂಗವನೊಲ್ಲದೆ ಬೊಜಗರ ಸಂಗ ಮಾಡುವ [ಬೋಸ] ರಿತೊತ್ತಿಗೆಲ್ಲಿಯದೊ ನಿಜಮುತ್ತೈದೆತನ? ತ್ರಿಜಗವಂದಿತ ಲಿಂಗವ ಕರಕಮಲದಲ್ಲಿ ಹಿಡಿದುಕೊಂಡಿರ್ದ ಬಳಿಕ ಅಲ್ಲಿ ನಂಬಿ ಪೂಜಿಸಿ ಮುಕ್ತಿಯ ಪಡೆಯಲರಿಯದೆ ಲೋಕದ ಗಜಿಬಿಜಿ ದೈವಂಗಳಿಗೆರಗುವ ಕುನ್ನಿ ಮಾನವರ ಕಂಡರೆ ಯಮನು ಜಿಗಿದೆಳೆದೊಯ್ದು ಕೊಲ್ಲದಿಪ್ಪನೆ? ಹಾಗೆ ಸಾಯಲೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಾದ ಬಿಂದುವಿನಲ್ಲಿ ಸಾಧಿಸಿದ ಹದಿನಾರು[ದಳ] ಕಳೆಯ ಸುಳಿಯೊಳಗೆ ತಾವರೆಯ ಪದ್ಮದ ಜ್ಞಾನಮೇಲುದ ಹಾಸಿ, ದೇವನಾತ್ಮನಲ್ಲಿ ಕುಳ್ಳಿರ್ದ ಭಾವ ಮುಂದಟ್ಟಿ, ಕಾಯವ ನಿಲಿಸಿ ದೇವನೋಲಗದೊಳಗಿರ್ದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನೆನೆವೆನೆರಿ ಮರೆದವನಲ್ಲ. ನೆನೆಯನೆರಿ ಉದಾಸೀನಿಯಲ್ಲ. ಕುರುಹೆಂಬೆನೆರಿ ತೆರಹಿಲ್ಲವಾಗಿ. ಅರಿಯೆನಿನ್ನಾವ ಭಾವಂಗಳೆಂಬವನು. ಎರಡಳಿದು ಒಂದುಳಿದ ಕಾರಣ ನೆನೆಯಲಿಲ್ಲೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನೀರೊಳಗಿಕ್ಕಿದ ಕೋಲಿನಂತೆ ಭೇದವನೊಳಗೊಂಡ ವಾದ್ಯದಂತೆ, ನಾದದಲ್ಲಿ ಸೋಂಕಿದ ಶೂನ್ಯದಂತೆ, ಭೇದಾಭೇದಂಗಳಲ್ಲಿ ಅಭೇ ದ್ಯವ ಭೇದಿಸಬಲ್ಲಡೆ, ನಾದ ಬಿಂದು ಕಳೆಗೆ ಅತೀತವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಾಲ್ಕು ವೇದವನೋದಿದನಂತರ ಮನೆಯ ಬೋನವ ಶಿವಭಕ್ತರ ಮನೆಯಲ್ಲಿರುವ ನಾಯಿ ಮೂಸಿ ನೋಡಲಾಗದು. ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು ತಮ್ಮ ಪಾದುಕದಿಂದ ಪಾಕವ ಮುಚ್ಚಿದರು. ``ಶ್ವಾನೋ ಶ್ರೇಷ*ವೆಂದು ಇಕ್ಕಿದೆನು ಮುಂಡಿಗೆಯ. ಎತ್ತಿರೋ ಜಗದ ಸಂತೆಯ ಸೂಳೆಯ ಮಕ್ಕಳು. ಜಗಕ್ಕೆ ಪಿತನೊಬ್ಬನಲ್ಲದೆ ಇಬ್ಬರೆಂದು ಬೊಗಳುವರ ಮೋರೆಯ ಮೇಲೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ನಾರಿವಾಳವ ತಂದು ನಾಯಮುಂದೆ ಹಾಕಿದಡೆ, ಒಡೆಯಲರಿಯದು, ತಿನಲರಿಯದು. ಅದರವೊಲು ಜಂಗಮದೊಳಗೆ ಲಿಂಗವನರಿ[ಯ]ದವ ಭಂಗಿಯ ತಿಂದಂತೆ. ತನ್ನ ಹೊದ್ದಿದ್ದ ತನ್ನ, ತಾ ತಿಳಿಯಲರಿಯದಿದ್ದಡೆ ತೆಂಗ ತಿನಲರಿಯದ ನಾಯಂತೆ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನೇಮಸ್ಥನೇನು ಬಲ್ಲನಯ್ಯ ಲಿಂಗದ ಕುರುಹ ? ಸೂಳೆಯ ಮಗನೇನು ಬಲ್ಲನಯ್ಯ ತಂದೆಯ ಕುರುಹ ? ಜಂಗಮದ ಅನುವ ತೊತ್ತಿನ ಮಗನೇನು ಬಲ್ಲನಯ್ಯ ? ಇಂತಪ್ಪ ಅಂಗವೇ ಲಿಂಗ, ಲಿಂಗವೇ ಅಂಗ, ಲಿಂಗವೇ ಜಂಗಮವು, ಜಂಗಮವೇ ಲಿಂಗವೆಂದರಿಯದವನ ಭಕ್ತರೆಂದರೆ ಅಘೋರನರಕವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ನಮಗೊಬ್ಬರೆಂಜಲು ಸೇರದೆಂದು, ಶುಚಿತನದಲ್ಲಿ ಬದುಕುತ್ತೈ[ದೇ]ನೆ ಎಂದುಯೆಂಬ ಬರಿಯ ಮಾತಿನ ರಂಜಕರು ನೀವು ಕೇಳಿರೋ ಅಣ್ಣಗಳಿರಾ: ನೀವು ತಂದು ಕುಡಿವ ನೀರು ಜಲಚರದೆಂಜಲು, ಮೃಗಪಶುಪಕ್ಷಿಯ ಎಂಜಲು. ಭಾವಿಗೆ ಹೋಗಿ ಕೈಕಾಲು ತೊಳೆದು ಬಾಯಿ ಮುಕ್ಕಳಿಸುವಲ್ಲಿ ಮಾನವರೆಂಜಲು. ಇಂತೀ ಹಲವೆಂಜಲ ಬೆರಸಿದ ಆ ಎಂಜಲ ತಿಂದು ಬೆಳೆದು, ಬೆ[ಳೆ]ಸಿದ ಆ ಎಂಜಲಿಂದ ಬೆಳೆವ ಪದಾರ್ಥಂಗಳು, ಆ ಎಂಜಲಿಂದಾದ ಪಾಕವನು, ನಲಿನಲಿದುಂಡು ಕುಡಿವಲ್ಲಿ ಎಂಜಲು ಹಿಂಗಿದಠಾವ ತೋರಿರಣ್ಣಾ! ಇದ ಬಲ್ಲ ಭಕ್ತರು ಸರ್ವಪದಾರ್ಥಂಗಳನು ಶಿವಮಂತ್ರದಲೆ ಹಸ್ತಸ್ಪರ್ಶನವ ಮಾಡಿ, ವಿಭೂತಿಯಿಂದ ಶುದ್ಧಮಾಡಿ, ಲಿಂಗಕ್ಕೆ ಕೊಟ್ಟು ಕೊಂಬಲ್ಲಿ ಗುರುಪ್ರಸಾದವಾಯಿತ್ತು. ಇಂತೀ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವ ಕೊಂಬಲ್ಲಿ ಸರ್ವ ಎಂಜಲ ಹೊಲೆಯುವ ನೀಗಿದ. ಇದನರಿಯದಿರ್ದಡೆ ಮಿಕ್ಕಿನವರೆಲ್ಲರು ಹಲವರೆಂಜಲ ಹೊಲೆಯೊಳಗೆ ಮುಳುಗಿ ಉಂಡರೆಂದಾತ ನಮ್ಮ ಅಂಬಿಗರ ಚೌಡಯ್ಯ
--------------
ಅಂಬಿಗರ ಚೌಡಯ್ಯ