ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಸವಿನ ಗುರು ಹೋಗಿ ಶಿಶುವಧೆಯ ಮಾಡಿದ. ಶಿಶು ಹೋಗಿ ಮರಳಿ ಗುರುವ ಕೊಂದಡೆಯು, ಹೆಸರುಗೊಂಬ ಅಣ್ಣಗಳು ನೀವು ಕೇಳಿರೋ: ವರಿಬ್ಬರೂ ಸತ್ತಠಾವನೊಬ್ಬರೂ ಅರಿಯರು, ನಿರ್ವಯಲೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಎಲ್ಲವ ಕಳಿದುಳಿದ ಹೂವ ತಂದು, ಗೆಲ್ಲ ಸೋಲಕ್ಕೊಳಗಾಗದ ನೀರ ತುಂಬಿ, ಕರಣಂಗಳೆಲ್ಲವು ಕಂಗಳ ತುಂಬಿ ನಿಂದು ನೋಡಿ, ಎಂದೂ ತನ್ನಂಗದಿಚ್ಛೆಯ ಮರೆದು, ಲಿಂಗವ ಪೂಜಿಸಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಎಲ್ಲಾ ದೇವರಿಗೆ ಮಸ್ತಕದ ಪೂಜೆ, ನಮ್ಮ ಗುರುಲಿಂಗಜಂಗಮದೇವರಿಗೆ ಪಾದಾಂಗುಷ್ಟದ ಪೂಜೆಯೆಂಬುದು ಸಕಲ ವೇದಶಾಸ್ತ್ರಪುರಾಣಾಗಮಂಗಳು, ಶ್ರುತಿಸ್ಮೃತಿಗಳು ಸಾರುತ್ತಿರಲು, ಅದನರಿತು ಓದುತ್ತ ಓದುತ್ತ ಹಾಡುತ್ತ ಹಾಡುತ್ತ ಅದಕ್ಕೆ ಅಪಖ್ಯಾತಿಯ ತರುವವನೆಂತು ಜಂಗಮವೊ ? ಅವನೆಂತು ಭಕ್ತನೊ ? ತಾನೊಡೆಯ[ನ]ಂತೆ, ತಾ ಭಕ್ತನಂತೆ, ತನ್ನೆಡೆಯ ಗುಡಿಯ ಲಿಂಗದ ಮುಂದಿಟ್ಟು ತನ್ನಿಷ್ಟಲಿಂಗಕ್ಕೆ ಕೊಟ್ಟುಕೊಂಬ ತುಡುಗುಣಿ ನಾಯ ಮೂಳಹೊಲೆಯರ ಕಂಡಡೆ ನಡುವಿನ ಮೇಲೆ ಒದೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಎತ್ತ ಸುತ್ತಿ ಬಂದಡೂ ಊರಿಗೆ ಬಪ್ಪುದು ತಪ್ಪದು. ಹಲವು ಮಾತನಾಡಿದಡೇನು? ಮೂರು ಮಲವ ಮರೆದಿರಬೇಕು. ಹೊಲಬುದಪ್ಪಿದ ಮೃಗ ಬಲೆಯೊಳಗೆ ಬಿದ್ದಂತಾಗಬೇಡ. ಇದನರಿತು ಬದುಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಎಲೋ ಮಾನವ ಕೇಳೆಲೊ, ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೊ: ಹಣ್ಣುಗಳು ಸಣ್ಣ ಜಾತಿಯ ಎಂಜಲು, ಹಾಲು ಕರುವಿನ ಎಂಜಲು, ಮೊಸರು ಗೊಲ್ಲತಿಯ ಎಂಜಲು, ಅಕ್ಕಿ, ಗೋದಿ, ಬೇಳೆ, ಬೆಲ್ಲಗಳು ನೊಣದ ಎಂಜಲು, ನೀರು ಮೀನು ಕಪ್ಪೆಗಳ ಎಂಜಲು, ಉಪ್ಪು ಉಪ್ಪಾರನ ಎಂಜಲು, ಎಣ್ಣೆ ಸರ್ವಮಾನವರ ಎಂಜಲು, ಸಕಲಪದಾರ್ಥವು ಅನಂತ ಹುಳುಗಳ ಎಂಜಲು. ಇಂತಹ ಎಂಜಲವು ಎಂದು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ, ಮಾಡುವ ದುರಾಚಾರವ ಆರು ಬಣ್ಣಿಸಬಹುದುರಿ ಅರಿವು ಇಲ್ಲದವರು ಅರಮನೆಗೆ ಮಾಡಿದರು, ಭಕ್ತಿಯಿಲ್ಲದವರು ತಮ್ಮ ಗುರುಲಿಂಗಜಂಗಮಕ್ಕೆ ಮಾಡಿದರು. ಇಂತಪ್ಪ ಸರ್ವರ ಎಂಜಲು ತಿಂದು ಶಿವಲಿಂಗವ ಧರಿಸಿಕೊಂಡು, ಶಿವಭಕ್ತರೆಂದು ಹೇಳಿಸಿ, ಕಾಲಿಗೆ ಬಂದಂತೆ ಕುಣಿದು, ಬಾಯಿಗೆ ಬಂದಂತೆ ಅಂದು, ಮನಬಂದಂತೆ ಸ್ತ್ರೀಸಂಗದಲ್ಲಿ ಆಚರಿಸುವ ಭ್ರಷ್ಟ ಹೊಲೆಮಾದಿಗರಿಗೆ ಶೀಲವು ಎಲ್ಲಿಹುದು? ಆಚರಣೆ ಎಲ್ಲಿಹುದುರಿ ಕುಲವೆಲ್ಲಿಹುದು? ಇಂತಪ್ಪ ಮೂಳಹೊಲೆಯರ ಮೂಗ ಕೊಯ್ದು ಪಡಿಹಾರಿ ಉತ್ತಣ್ಣಗಳ ಪಾದುಕದಿ ಹೊಡೆ ಎಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಎಲುವೆಂಬ ಹಂಜರ ಥಟ್ಟಾಗಿ, ಉಭಯವ ಘಟಿಸಿದ ತೊಗಲು ಬ್ರಹ್ಮವೆಂಬ ಅಳಿಲೆಯ ಕಾಯಲ್ಲಿ ವಿಷ್ಣುವೆಂಬ ನೀರ ಹೊಯಿದು, ರುದ್ರನೆಂಬ ಚೂರ್ಣದಲ್ಲಿ ಖಾರಕ್ಕೆ ಮೆಟ್ಟಲಾಗಿ, ತೊಗಲ ಹೊಲಸು ಕೆಟ್ಟಿತ್ತು, ಹರುಗುಲ ಹುದಿಗಿತ್ತು. ವರ್ತನವೆಂಬ ಹುಟ್ಟ ಹಿಡಿದು, ಮಾಟಕೂಟವೆಂಬ ಹೊಳೆಯಲ್ಲಿ ಕೂಟದವರು ದಾಟುತ್ತಿದ್ದಾರೆ, ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಎರಡು ಗ್ರಾಮದ ನಡುವೆ ಕಡದ ಸೀಮೆಯ ಕಲ್ಲು. ಅದ ಕಟ್ಟಿದಾತ ಗುರುವಲ್ಲ, ಕಟ್ಟಿಸಿಕೊಂಡಾತ ಶಿಷ್ಯನಲ್ಲ. ಆದಿಯನರಿಯದ ಗುರುವು, ಭೇದಿಸಲರಿಯದ ಶಿಷ್ಯ, ಇವರಿಬ್ಬರೂ ಉಭಯಭ್ರಷ್ಟರೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಎಲ್ಲರೊಳಗೆ ಗೆಲ್ಲ ಸೋಲಕ್ಕೆ ಹೋರಬಂದೆನೆ ? ಬೆಲ್ಲವ ಮೆದ್ದಡೆ ತಮ್ಮ ತಮ್ಮ ಬಾಯಲ್ಲಿಗೆಲ್ಲ ಸಿಹಿ. ಬಲ್ಲವನಾದ ಮತ್ತೆ ನಾಡೆಲ್ಲರೂ ಕೂಡಿ ಬಾಳದ ಹೆಣ್ಣಿಗೆ ನ್ಯಾಯವನಾಡುವಂತೆ, ಅರಿದ ಅರಿವಿಂಗೆ ಮರೆದ ಮರವೆಗೆ ತನ್ನಲ್ಲಿದ್ದು ಕರಿಗೊಂಡವನೆ ಸಾಕ್ಷಿಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ