ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕ್ಷೀರದಿಂದಾದ ತುಪ್ಪ ಕ್ಷೀರವಪ್ಪುದೇ ? ನೀರಿನಿಂದಾದ ಮುತ್ತು ನೀರಪ್ಪುದೇ ? ವಿೂರಿ ಪೂರ್ವಕರ್ಮವನು ಹರಿದ ಭಕ್ತಗೆ ಬೇರೆ ಮತ್ತೆ ಜನ್ಮವುಂಟೆ ಲಿಂಗವಲ್ಲದೆ ? ಕಟ್ಟಿಹೆ ಬಿಟ್ಟಿಹೆವೆಂಬ ದಂದುಗ ನಿಮಗೇಕೆ ? ತೆರನನರಿಯದೆ ಹಲವು ತೊಪ್ಪಲ ತರಿತಂದು ಮೇಲೊಟ್ಟಲೇಕೊ ? ಜಂಗಮ ಬಂದರೆ ತೆರನರಿತು ಅರ್ಪಿಸಬಲ್ಲಡಲ್ಲಿ ಶಿವ ತೆರಹಿಲ್ಲದಿಪ್ಪನೆಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಶಿಯಾತ್ರೆಗೆ ಹೋದೆನೆಂಬ ಹೇಸಿಮೂಳರ ಮಾತ ಕೇಳಲಾಗದು! ಕೇತಾರಕ್ಕೆ ಹೋದೆನೆಂಬ ಹೇಸಿಹೀನರ ನುಡಿಯ ಲಾಲಿಸಲಾಗದು! ಸೇತುಬಂಧ ರಾಮೇಶ್ವರಕ್ಕೆ ಹೋದೆನೆಂಬ ಸರ್ವಹೀನರ ಮುಖವ ನೋಡಲಾಗದು! ಪರ್ವತಕ್ಕೆ ಹೋದೆನೆಂಬ ಪಂಚಮಹಾಪಾತಕರ ಮುಖವ ನೋಡಲಾಗದು! ಅದೆಂತೆಂದಡೆ: ಕಾಯವೆ ಕಾಶಿ, ಒಡಲೆ ಕೇತಾರ, ಮಾಡಿನೀಡುವ ಹಸ್ತವೆ ಸೇತುಬಂಧರಾಮೇಶ್ವರ, ಮಹಾಲಿಂಗವ ಹೊತ್ತಿರುವ ಶಿರಸ್ಸೆ ಶ್ರೀಶೈಲಪರ್ವತ ನೋಡಾ. ಇಂತಿವನರಿಯದೆ ಪರ್ವತಕ್ಕೆ ಹೋಗಿ, ಪಾತಾಳಗಂಗೆಯ ಮುಳುಗಿ, ತಲೆಯ ಬೋಳಿಸಿಕೊಂಡು, ಗಡ್ಡವ ಕೆರೆಸಿಕೊಂಡು, ಮೀಸೆಯ ತರಿಸಿಕೊಂಡು, ಗಂಗೆಯೊಳು ಕೋಣನ ಹಾಂಗೆ ಮೈಗೆಟ್ಟು ಫಕ್ಕನೆ ಮುಳುಗಿ, ಅಲ್ಲಿಂದ ಬಂದು ಅನ್ನವಸ್ತ್ರವಂ ಕಾಸುವೀಸವಂ ಕೊಟ್ಟು, ಪಾಪ ಹೋಯಿತ್ತೆಂದು ಅಲ್ಲಿಂದ ಬಂದು ಲಿಂಗವಡಿಗಡಿಗೆ ಹಾಯ್ದು, ಬಾರದ ಪಾಪವ ತಾವಾಗ ಬರಸಿಕೊಂಡು, ತಗರ ಜನ್ಮದಲ್ಲಿ ಹುಟ್ಟುವರಯ್ಯ. ಕೋಲು ಪುಟ್ಟಿಯಂ ಕೊಟ್ಟು ಅಟ್ಟಿಸಿ ಬಿಟ್ಟ ಬಳಿಕ, ಅಲ್ಲಿಂದ ಬಂದವರಿಗೆ ಇಲ್ಲಿದ್ದವರು ಹೋಗಿ, ಇದಿರುಗೊಂಡು ಕರತರುವುದಕ್ಕೆ! ಕತ್ತೆ ಮೂಳಹೊಲೆಯರಿರ, ನೀವು ಕೇಳಿರೋ, ಅದಂತೆಂದಡೆ: ಶ್ರೀಮಹಾಪರ್ವತಕ್ಕೆ ಹೋದವರು ತಿರಿಗಿಬಪ್ಪರೆ ? ಶ್ರೀಮಹಾಮೇರುವಿಗೆ ಹೋದವರು ಮರಳಿಬಪ್ಪರೆ ? ಛೀ! ಛೀ! ನೀಚ ಮೂಳ ದಿಂಡೆಯ ನೀಳಹೊಲೆಯರೆಂದಾತ ನಮ್ಮ ದಿಟ್ಟ ವೀರಾಧಿವೀರನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ಕುರಿಕೋಳಿ ಕಿರುಮೀನ ತಿಂಬವರ ಊರೊಳಗೆ ಇರು ಎಂಬರು. ಅಮೃತಾನ್ನವ ಕರೆವ ಗೋವ ತಿಂಬವರ ಊರಿಂದ ಹೊರಗಿರು ಎಂಬರು. ಆ ತನು ಹರಿಗೋಲಾಯಿತ್ತು, ಬೊಕ್ಕಣ, ಸಿದಿಕೆ, ಬಾರುಕೋಲು, ಪಾದರಕ್ಷೆ ದೇವರ ಮುಂದೆ ಬಾರಿಸುವುದಕ್ಕೆ ಮದ್ದಳೆಯಾಯಿತ್ತು. ಈ ಬುದ್ಧಲಿಕೆಯೊಳಗಣ ತುಪ್ಪವ ಶುದ್ಧಮಾಡಿ ತಿಂಬ ಗುಜ್ಜ ಹೊಲೆಯರ ಕಂಡಡೆ ಉದ್ದನ ಚಮ್ಮಾಳಿಗೆಯ ತೆಕ್ಕೊಂಡು ಬಾಯ ಕೊ[ಯ್ಯು]ವೆನು ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಷ್ಟನ ಮನೆಯಲ್ಲಿ ಸೃಷ್ಟಿಗೀಶ್ವರನುಂಬಾಗ ಎತ್ತ ಹೋದವು ನಿಮ್ಮ ಶಾಸ್ತ್ರಂಗಳು? ಕೆತ್ತ ಮುಚ್ಚುಳು [ಬೆ]ೀಡಗಚ್ಚರಿದೆರೆವಾಗ ಇಕ್ಕಿದ ಜನ್ನಿವಾರ ಭಿನ್ನವಾದವು. ಮುಕ್ಕುಳಿಸಿದುದಕವ ತಂದೆರೆದಡೆ ಎತ್ತಲಿದ್ದವು ನಿಮ್ಮ ವೇದಂಗಳು? ನಿಮ್ಮ ವೇದದ ದುಃಖ ಬೇಡೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಮವ ಕಳೆದು, ಕ್ರೋಧವ ದಾಂಟಿ, ಲೋಭವ ಹಿಂಗಿ, ಮೋಹಾದಿಗಳಲ್ಲಿ ಮನವಿಕ್ಕದೆ, ಆ ಕಾಮವ ಲಿಂಗದಲ್ಲಿ ಮರೆದು, ಕ್ರೋಧವ ಕರಣಂಗಳಲ್ಲಿ ಬೈಚಿಟ್ಟು, ಲೋಭವ ಸರ್ವೇಂದ್ರಿಯಂಗಳಲ್ಲಿ ಸಂಬಂಧಿಸಿ, ಮೋಹಾದಿ ಗುಣಂಗಳ ಸ್ವಯಚರಪರದಲ್ಲಿ ಗರ್ಭೀಕರಿಸಿ, ನಿಜವಾಸಿಯಾಗಿ ನಿಂದಾತನ ಅಡಿಗೆರಗುವೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಲಿತು ಹೇಳಿಹೆನೆಂಬ ಕರ್ಕಶ ಬೇಡ, ಅರಿಕೆಯಾದೆನೆಂಬ ಅರಿಹಿರಿಯತನ ಬೇಡ, ಅರಿದು ಮರದೆನೆಂಬ ಸಂದೇಹ ಬೇಡ. ದರ್ಪಣದಲ್ಲಿ ತೋರುವ ತನ್ನ ಒನಪ್ಪಾಫದ ಬಿಂಬದಂತೆ, ಅದ ನಿಶ್ಚಯವಾಗಿ ನಿಶ್ಚಯಿಸಿದಲ್ಲಿ ಬೇರೊಂದಿಪ್ಪುದಿಲ್ಲ, ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕುಡಿವ ನೀರೆನ್ನಬಹುದೆ, ಹುಡುಕುನೀರಲದ್ದುವಾಗ ? ಅಡುವ ಕಿಚ್ಚೆನ್ನಬಹುದೆ, ಮನೆಯ ಸುಡುವಾಗ ? ಒಡಲು ತನ್ನದೆನ್ನಬಹುದೆ, ಪುಣ್ಯ-ಪಾಪವನುಂಬಾಗ ? ಒಡಲಜೀವವೆನ್ನಬಹುದೆ, ಇಕ್ಕಿ ಹೋಹಾಗ ? ಇವನೊಡೆಬಡಿದು ಕಳೆಯೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಳವು ಪಾರದ್ವಾರಕ್ಕೆ ಪರಾಕುಂಟೆರಿ ಅದು ತನ್ನ ಒಡಲಳಿವ ಇರವು. ವರ್ಮ, ಧರ್ಮ, ವಚನಾನುಭವಂಗಳ ಮಾಡುವಲ್ಲಿ ಪರಚಿಂತೆ ಪರಾಕು ಪರಿಭ್ರಮಣ- ಈ ಗುಣ ತನ್ನರಿವಿಂಗೆ ಕೇಡೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಂಗಳ ನಾಮ ಹರುಗುಲವಾಗಿ, ನೋಡುವ ದೃಷ್ಟಿ ಅಂಬಿಗನಾಗಿ, ಕರಣೇಂದ್ರಿಯವೆಂಬ ಬಹುಜನಂಗಳ ಕೂಡಿ, ಆಸೆಯೆಂಬ ಹೊಳೆಯ ದಾಟುವುದಕ್ಕೆ ಹುಟ್ಟ ಕಾಣದೆ ಹರುಗುಲು ಈಚೆ ಉಳಿಯಿತ್ತೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಳೆಗದಲ್ಲಿ ಹೋಗದಿರಯ್ಯ, ಕೋಲು ಬಂದು ನಿಮ್ಮ ತಾಗುಗು. ಆರು ದರುಶನಕ್ಕೆ ತೋರದಿರಿ, ಸೂರೆಗೊಂಡಹವು ನಿಮ್ಮುವ. ನಾಲ್ಕು ವೇದ ಹದಿನಾರು ಶಾಸ್ತ್ರವೆಂಬರ ಬೆನ್ನುಹತ್ತದಿರು, ಬೇರೆ ತೀರ್ಥ ಜಾತ್ರೆಯೆಂಬವರ ಕೊಂ[ಡು]ಅರಡಿತನ ಬೇಡ, ಪುಣ್ಯಪಾಪವೆಂಬೆರಡು ಭಂಡವ ಬೆನ್ನಿಲಿಕ್ಕಿಕೊಂಡು ಬಾರದಿರು. ನಿನ್ನಾತ್ಮನ ನೀ ತಿಳಿ, ಜಗ ನಿನ್ನೊಳಗೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕೂರ್ಮನ ಭಾವ ನಿಂದಲ್ಲಿ, ಮೋಹವಾಗಿಪ್ಪುದು. ಮರ್ಕಟಭಾವ ನಿಂದಲ್ಲಿ, ಹೆಚ್ಚುಗೆ ತಗ್ಗನರಸುತ್ತಿಪ್ಪುದು. ವಿಹಂಗಜ್ಞಾನ ನಿಂದಲ್ಲಿ, ಅಡಿ ಆಕಾಶ ಉಭಯವನರಸುತ್ತಿಪ್ಪುದು. ಪಿಪೀಲಿಕಭಾವ ನಿಂದಲ್ಲಿ, ಮೂರ್ತಿಧ್ಯಾನವಾಗಿಪ್ಪುದು. ಧ್ಯಾನ ನಿಷ್ಪತ್ತಿಯಾಗಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕ್ರೀಯನರಿದವಂಗೆ ಗುರುವಿಲ್ಲ, ಆಚಾರವನರಿದವಂಗೆ ಲಿಂಗವಿಲ್ಲ, ಉತ್ಪತ್ತಿ ಸ್ಥಿತಿ ಲಯವನರಿದವಂಗೆ ಜಂಗಮವಿಲ್ಲ, ಪರಬ್ರಹ್ಮವನರಿದವಂಗೆ ಸರ್ವೇಂದ್ರಿಯವಿಲ್ಲ, ತನ್ನನರಿದವಂಗೆ ಹಿಂದೆ ಮುಂದೆ ಎಂಬುದೊಂದೂಯಿಲ್ಲ, ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಸಿನ ಕಲ್ಲ ಕೈಯಲ್ಲಿ ಕೊಟ್ಟು ಹೇಸದೆ ಕೊಂದ ಗುರುವೆಂಬ ದ್ರೋಹಿ. ಬಿಟ್ಟಡೆ ಸಮಯವಿರುದ್ಧ, ಹಿಡಿದಡೆ ಜ್ಞಾನವಿರುದ್ಧ. ಇದ್ದಂತೆಂಬೆನಯ್ಯ ಅಂಬಿಗರ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಕಾಯದ ಶೃಂಗಾರ ಕಾಮಿನಿಯರ ಕೂಟಕ್ಕೊಳಗು, ಜೀವನ ಬಾಳುವೆ ಸಕಲಜೀವಂಗಳಲ್ಲಿ ಸಾಧನ. ಕಾಯದ ಶೃಂಗಾರ, ಜೀವನ ಭವ- ಎರಡರ ಠಾವನರಿಯಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕುಲ ಹಲವಾದಡೇನು ? ಉತ್ಪತ್ಯ ಸ್ಥಿತಿ ಲಯ ಒಂದೆ ಭೇದ. ಮಾತಿನ ರಚನೆಯ ಬೇಕಾದಂತೆ ನುಡಿದಡೇನು ? ಬಿಡುಮುಡಿಯಲ್ಲಿ ಎರಡನರಿಯಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಲ್ಲದೇವರ ಪೂಜೆಯ ಮಾಡಿ, ಕಲಿಯುಗದ ಕತ್ತೆಗಳಾಗಿ ಹುಟ್ಟಿದರು. ಮಣ್ಣದೇವರ ಪೂಜಿಸಿ ಮಾನಹೀನರಾದರು. ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು. ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು! ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದ ಶಿವಭಕ್ತನೆ ಶ್ರೇಷ*ನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಟ್ಟಿಗೆಯ ಹೊರೆಯ ಹೊತ್ತು ಬಟ್ಟೆಯಲ್ಲಿ ಬಳಲಿ ಬರುವ ಮನುಜನಂ ಕಟ್ಟದಿರಿನಲ್ಲಿ ಕಂಡು, ಆ ಹೊರೆಗೆ ತಲೆಗೊಟ್ಟವರಿಗೆ ಪುಣ್ಯವುಂಟು. ಇದ್ದ...ಭಕ್ತ ವಿರಕ್ತರಿಗೆ ಮುಟ್ಟಾಳಾಗಿ, ಅವರ ಅನುವರಿತು ತಾ ನಡೆಯಬೇಕು. ನಡೆಯದಿರ್ದಡೆ ಹೋಗಲಿ ಅರ...... ಯಿಷ್ಟ ಇಲ್ಲದೆ, ಇದ ತನ್ನ ಕಟ್ಟುಮಾಡಿಕೊಳ್ಳ ಹೇಳಿದವರಾರೋ ಎಂದು, ತನ್ನ ನಷ್ಟಕ್ಕೆ ತಾನೇ ಎಯ್ದಿದ್ದಾನೆಂ[ಬ]ವಿಶ್ವಾಸಹೀನನ ಕೊರಳಲ್ಲಿ ಶಿವಲಿಂಗವು ಕಟ್ಟಿರ್ದಡೇನಯ್ಯಾರಿ ಪಡುವಲದ ಕಾಯಿಗೆ ಕ[ಲ್ಲ] ಕಟ್ಟಿ ಇಳಿಯ ಬಿಟ್ಟಂತೆ. ಮೈತುಂಬ ವಿಭೂತಿಯನಿಟ್ಟುಕೊಂಡಿರ್ದಡೇನಯ್ಯಾ ? ಕೊಟ್ಟಿಗೆಯ ಮೇಗಣ ಕಗ್ಗುಂಬಳ ಕಾಯಂತೆ...ವೇನಯ್ಯಾ? ಹುತ್ತದೊಳಗಣ ನಿಧಾನದಂತೆ. ಈ ಕೆಟ್ಟತನವುಳ್ಳ ಭಂಡರ ಕಂಡು ಹೊಟ್ಟೆಯ ಹೊಯ್ದುಕೊಂಡು ನಗುತಿರ್ದ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ