ಅಥವಾ
(5) (1) (1) (2) (2) (0) (0) (0) (1) (0) (0) (3) (0) (0) ಅಂ (1) ಅಃ (1) (18) (1) (4) (1) (0) (2) (0) (2) (0) (0) (0) (0) (0) (0) (0) (5) (0) (1) (1) (1) (5) (0) (5) (3) (8) (1) (3) (0) (0) (1) (3) (0) (6) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೊಯಿದಡೆ ಅಂಗದ ಮೇಲಣ ನೋವ, ಮನವರಿವಂತೆ, ಬಾಹ್ಯ ಉಪಚರಣೆಯ ಪೂಜೆ, ನಿನಗೆ ಹೊರಗಾದುದುಂಟೆ ? ಆ ತೆರನನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು, ಒಳಗೂ ತಾನೆ, ಹೊರಗೂ ತಾನೆ.
--------------
ಸಗರದ ಬೊಮ್ಮಣ್ಣ
ಹಾರುವ ಹಕ್ಕಿಯ ತಲೆಯ, ಕುಳಿತಿದ ಗೂಗೆ ನುಂಗಿತ್ತು, ಕುಳಿತಿದ ಗೂಗೆಯ ಕಣ್ಣ, ಕಾಗೆಯ ಮರಿ ಕುಡುಕಿತ್ತು. ಕಾಗೆಯ ಮರಿಯ, ಕೋಗಿಲ ಕಂಡು, ಅದ ಬೇಡಾ ಎಂದಡೆ, ಗಿಳಿ ಹಾಗಹುದೆಂದು ಹಾರಿ ಹೋಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರನು ಘಟಪಂಜರವನೊಲ್ಲದೆ.
--------------
ಸಗರದ ಬೊಮ್ಮಣ್ಣ
ಹೂವ ಕೊಯ್ಯುವರಲ್ಲದೆ, ಹೂವಿನ ಗಂಧವ ಕೊಯ್ದವರುಂಟೆ ಅಯ್ಯಾ? ಮಾತನಾಡುವರಲ್ಲದೆ, ಮಾತಿನ ಭೇದದ ವಾಸನೆಯ ಕಂಡವರುಂಟೆ ಅಯ್ಯಾ? ಇದು ನೀತಿಯ ಒದಗು, ಕ್ರೀಯ ನಿಹಿತವಾಗಿ ಮಾಡುವಲ್ಲಿ ಭಾವಶುದ್ಧವಾಗಿರಬೇಕು. ಮಾತನರಿದಾಡುವಲ್ಲಿ, ಮಾತಿನ ರೀತಿಗೆ ತಾ ಒದಗು ನಿಹಿತವಾಗಿರಬೇಕು. ಅದು ಕೂಟಸ್ಥ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಹಗೆ ನಿದ್ರೆಗೈವಲ್ಲಿ ಕೊಲುವ ಅರಿ ಬಂದು, ಮರೆದೊರಗಿದನೆಯೆಂದು ಎಬ್ಬಿಸಿ, ನಿನ್ನ ನಾ ಕೊಲಬಂದೆ ಎಂದನೆ. ಅರಿ ನೋಡಿ, ಕೊಲಬಂದವನಲ್ಲಾ ಎಂದು ಎನ್ನನುಳುಹಿದೆ. ಎನಗೂ ನಿನಗೂ ಹಗೆಯಿಲ್ಲ. ಎನ್ನೆಡೆ ನಿನ್ನೆಡೆಗೆ ತಂದು ಹಾಕಿದವರೆ ಹಗೆ, ನಾನೂ ನೀನೂ ಕೂಡಿ ಹಗೆಯನರಸಿ [ಕೊಲ್ಲುವ], ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದಲ್ಲಿ.
--------------
ಸಗರದ ಬೊಮ್ಮಣ್ಣ
ಹುಟ್ಟಿ ಹೋಟಾರದಲ್ಲಿ ಒಂದಾವೆ, ಕೋಟಿ ಮರಿಯನಿಕ್ಕಿತ್ತು ಅವಕ್ಕೆ ಊಟ ಎಲ್ಲಿಂದ ಬಹವು ಎಂಬುದನರಿತಲ್ಲಿ, ಲಿಂಗಮೂರ್ತಿಯ ಧ್ಯಾನ. ಆ ಕೂರ್ಮ ತನ್ನೂಟ, ಅವರಸುವಿನಾಟ. ಸಗರದ ಬೊಮ್ಮನೊಡೆಯ ತನುಮನದಲ್ಲಿ ಕೂರ್ತು ಸಂಗವಾಗಿರು.
--------------
ಸಗರದ ಬೊಮ್ಮಣ್ಣ
ಹಾಲಿನ ಗಡಿಗೆಯಲ್ಲಿ ಮೂರೆಡಗೊತ್ತಿ, ಮರಿಯನೀದುದ ಕಂಡೆ, ಮರಿ ಹಾಲಾಗಿ, ಕುಡಿಕೆ ಕೊತ್ತಿಯಾಗಿ, ಮನೆಯೊಡೆಯ ಇಲಿಯಾಗಿ, ಬೆಕ್ಕ ಗಕ್ಕನೆ ಹಿಡಿದ. ಸಿಕ್ಕಿತ್ತು ಸಂಸಾರದ ವಿಷಯದಲ್ಲಿ ಮನ. ಎನಗಪ್ಪದ ಹೇಳು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ