ಅಥವಾ
(5) (1) (1) (2) (2) (0) (0) (0) (1) (0) (0) (3) (0) (0) ಅಂ (1) ಅಃ (1) (18) (1) (4) (1) (0) (2) (0) (2) (0) (0) (0) (0) (0) (0) (0) (5) (0) (1) (1) (1) (5) (0) (5) (3) (8) (1) (3) (0) (0) (1) (3) (0) (6) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರಿ ಒಂದಕ್ಕೆ ಧನು ಮೂರು, ಸರ ಹದಿನಾರು. ಒಂದೆ ಬಿಡುಮುಡಿಯಲ್ಲಿ ಎಸಲಿಕ್ಕೆ, ಗುರಿತಪ್ಪಿ ಎಚ್ಚವನಂಗ ಬಟ್ಟಬಯಲಾಯಿತ್ತು, ಅದು ತಪ್ಪಿಹೋದ ಕಾರಣ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವೆ ಗುರಿ, ಅರಿವ ಮನ ಸರವಾದ ಕಾರಣ.
--------------
ಸಗರದ ಬೊಮ್ಮಣ್ಣ
ಗೆಲ್ಲ ಸೋಲಬಲ್ಲವರಿಗೇಕೆ ? ಅದು ಬೆಳ್ಳರ ಗುಣ. ಪಥವೆಲ್ಲರಲ್ಲಿ ನಿಹಿತನಾಗಿ, ಅತಿಶಯದ ವಿಷಯದಲ್ಲಿ ಗತನಾಗದೆ, ಸರ್ವವನರಿತು, ಗತಮಯಕ್ಕೆ ಅತೀತನಾಗು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಗೋವ ಕುದುರೆಯ ಕಾಣದೆ, ಗೊಲ್ಲ ಕುರಿಯ ಕಾಣದೆ, ಗೋವಳ ಗೋವ ಕಾಣದೆ, ಗೊಲ್ಲನ ಕೇಳೆ, ಗೊಲ್ಲ ಗೋವನ ಕೇಳೆಂದು ಬೆಸಸೆ, ಕುರಿ, ಕುದುರೆ, ಗೋವು ತಮ್ಮಡಿಯಲ್ಲಿ ನಿಂದುವೆಂದು ಹೇಳೆ, ಚೋದ್ಯವಾಯಿತ್ತೆಂದು ಅಡಗಿದ. ಸಗರದ ಬೊಮ್ಮನೊಡೆಯ ತನುವಿನ ಮಧ್ಯದಲ್ಲಿ ನಿಸ್ಸಂಗ ಸಂಗಮೇಶ್ವರನಾದ.
--------------
ಸಗರದ ಬೊಮ್ಮಣ್ಣ
ಗೋಡೆಯ ಮರೆಯಲ್ಲಿ ನಿಂದು, ಕಾದುವರಿಗೇನು ಭೀತಿ ? ಅದೆ ನೆಲೆಯಿದಂತೆ ನೋಟದ ಬರುಬರಿಗೇನು ಭೀತಿ ? ಎನ್ನ ಸುಖದುಃಖಕ್ಕೆ ಮುಯ್ಯಾಂತು, ನೀ ಮುಂಚು, ನಾ ಹಿಂಚಾಗಿಯಿದ್ದ ಮತ್ತೆ ಎನಗೆ ಬಂದ ಉಬ್ಬಸವಾವುದು ? ಆಳಿನಪಮಾನ ಆಳ್ದಂಗೆ ಆದಂತೆ ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ, ನೀನಿರ್ದಂತೆ ಎನಗಾವ ಭೀತಿ ?
--------------
ಸಗರದ ಬೊಮ್ಮಣ್ಣ