ಅಥವಾ
(5) (1) (1) (2) (2) (0) (0) (0) (1) (0) (0) (3) (0) (0) ಅಂ (1) ಅಃ (1) (18) (1) (4) (1) (0) (2) (0) (2) (0) (0) (0) (0) (0) (0) (0) (5) (0) (1) (1) (1) (5) (0) (5) (3) (8) (1) (3) (0) (0) (1) (3) (0) (6) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಾರದ್ವಾರವ ಮಾಡಬಂದವ ಅಬೆಯ ಗಂಡಗೆ ಕೂಪನೆ ? ಅವಳು ತನ್ನ ಪತಿಗೆ ಓಪಳೆ ? ಈ ಉಭಯದ ಮಾರ್ಗ ಅರಿವ ಅರಿವಿಂಗೆ, ಹೇಸಿ ತಿಂಬ ಕರಣಕ್ಕೆ ಒಡಗೂಡಿದ ಸ್ನೇಹವುಂಟೆ ? ಇದನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವನರಿವುದಕ್ಕೆ.
--------------
ಸಗರದ ಬೊಮ್ಮಣ್ಣ
ಪರಮಜ್ಞಾನ ಪರತತ್ವ ಆ ಪರಶಿವಮೂರ್ತಿ ನೀನಾಗಿ, ಸಕಲತಂತ್ರ ಸೂತ್ರ ಯಂತ್ರ ನೀನಾಗಿ, ಶ್ರವದ ಬೊಂಬೆ ಸಾಕಾರ ನಾನಾಗಿ, ನೀನಾಡಿಸಿದಂತೆ ನಾನಾಡುತ್ತಿದೆ. ಸಂಜ್ಞೆಯನರಿದ ತಂಡಿನಂತೆ, ನಿವೇದಿಸಿದುದ ನಾ ಸಾಗಿಸಿದೆ. ನೀ ಬೈಚಿಟ್ಟ ಬಯಕೆಯ ನಿನಗಿತ್ತೆ. ನೀ ಕಳುಹಿದ ಮಣಿಹ ನಿನಗೆ ಸಂದಿತ್ತು. ಸಗರ ಸಾಕಾರದೊಡೆಯ ತನುಮನಘನದಲ್ಲಿ, ಸುಸಂಗ ಸಂಗನಿರಂಗ ಸಂಗಮೇಶ್ವರಲಿಂಗಾ, ಸಮರ್ಪಣ.
--------------
ಸಗರದ ಬೊಮ್ಮಣ್ಣ
ಪೂಜೆ ಪುಣ್ಯದೊದಗೆಂದು ಮಾಡುತ್ತಿದ್ದಲ್ಲಿ, ಮತ್ತಿನ್ನಾರುವ ಕೇಳಲೇಕೆ ? ಇಕ್ಕಿ, ಕೊಟ್ಟು ಮುಕ್ತಿಯ ಬಟ್ಟೆಯುಂಟೆಂದು ಇನ್ನೊಬ್ಬರ ದೃಷ್ಟವ ಕೇಳಲೇಕೆ ? ಇಹಪರದವನಲ್ಲಾ ಎಂದು, ತತ್ವಕ್ಕೆ ನಾ ಕರ್ತನೆಂದು ಮತ್ತೊಬ್ಬರ ಬಾಗಿಲ ಕಾಯಲೇಕೆ ? ಬಿದ್ದಿತ್ತು ಬೆಲ್ಲ ಅಶುದ್ಧದೊಳಗೆ, ಬುದ್ಧಿ ಇನ್ನಾವುದು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ
ಪಿಂಡ ಬಲಿದು ಹುಟ್ಟಿದಲ್ಲಿ ಮೂರು ಸಂದಾಯಿತ್ತು.. ಆ ಮೂರು ಸಂದಿನೊಳಗೆ ಕೂಡಿದ ಕೀಲು ಕೂಟ. ಅಂದು ಇಂದು ಎಂದೆಂದಿಂಗೆ ಬೆಂಬಳಿ ಬಿಡದು. ಇದರ ಸಂಗವೇನಯ್ಯಾ ? ಸಗರದ ಬೊಮ್ಮನೊಡೆಯ ತನುಮನದಲ್ಲಿ ಸುಸಂಗನಾಗಯ್ಯಾ.
--------------
ಸಗರದ ಬೊಮ್ಮಣ್ಣ
ಪಾತಾಳಲೋಕದಲ್ಲಿ ಪಾದವಿಲ್ಲದ ಪಕ್ಷಿ ಹುಟ್ಟಿತ್ತು. ಅದು ಅನೇಕ ವರ್ಣ, ಬಹುಕೃತ ವೇಷ. ರಟ್ಟೆಯಿಲ್ಲದೆ ಹಾರುವುದು, ಕೊಂಬಿನ ಮೇಲೆ ಇರದು. ಆಕಾಶದಲ್ಲಿ ಆಡುವುದು, ಭೂವಳಯದಲ್ಲಿ ಬಳಸಿ ಬಪ್ಪುದು. ವಿಹಂಗನ ಗುಣವಹುದು, ಪಕ್ಷಿಯ ಜಾತಿ ಗೋತ್ರವಲ್ಲ. ಪಕ್ಷಿಯೆಂಬುದಕ್ಕೆ ಮೊದಲೇ ಹಾರಿ ಹೋಯಿತ್ತು. ಎತ್ತಲೆಂದರಿಯೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ