ಅಥವಾ
(5) (1) (1) (2) (2) (0) (0) (0) (1) (0) (0) (3) (0) (0) ಅಂ (1) ಅಃ (1) (18) (1) (4) (1) (0) (2) (0) (2) (0) (0) (0) (0) (0) (0) (0) (5) (0) (1) (1) (1) (5) (0) (5) (3) (8) (1) (3) (0) (0) (1) (3) (0) (6) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮನವೆಂಬ ವಿಧಾಂತನು ಕಾಯವೆಂಬ ಕಣೆಯ ನೆಟ್ಟು, ನಾನಾ ಬಹುವಿಷಯಂಗಳೆಂಬ ಸುತ್ತ ನೇಣ ಕಟ್ಟಿ, ನೋಡುವ ಕರಣಂಗಳು ಮೆಚ್ಚುವಂತೆ ಕಾಮದ ಕತ್ತಿಯ ತಪ್ಪಿ, ಕ್ರೋಧದ ಇಟ್ಟಿಯ ತಪ್ಪಿ, ಮೋಹದ ಕಠಾರಿಯ ತಪ್ಪಿ, ಮೆಟ್ಟಿದ ಮಿಳಿಗೆ ತಪ್ಪದೆ ಲೆಂಗಿಸಿ, ಸುತ್ತಣ ಕೈದ ತಪ್ಪಿಸಿ, ಚಿತ್ತ ಅವಧಾನವೆಂದು ಹಾಯ್ದುಳಿದು, ಮನವೆಂಬ ವಿಧಾಂತನಾಡಿ, ಗೆದ್ದ ಜಗಲೋಲ ಡೊಂಬರ. ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದ ಬಹುವಿಷಯ ಹಿಂಗಿದ ಕೂಟ.
--------------
ಸಗರದ ಬೊಮ್ಮಣ್ಣ
ಮಾಡುವ ಮಾಟದವರೆಲ್ಲರೂ ಆರೈಕೆಗೊಂಬವರಿಲ್ಲದಿರೆ, ಕೋಡಗ ಸತ್ತ ಜೋಗಿಯಂತಾದರು. ಆಗಮ ಹೇಳುವ ಅಣ್ಣಗಳೆಲ್ಲರೂ ಕೊಡುವರಿಲ್ಲದಿರೆ, ಹಾವ ಹಿಡಿದ ಕೋಡಗದಂತಾದರು. ನಾನಿನ್ನಾರ ಕೇಳುವೆ, ಇನ್ನಾರಿಗೆ ಹೇಳುವೆ. ನಾನಂಜುವೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಮನ ಮಲೆಯ ಮಂದಿರದಲ್ಲಿ, ಹೊಲಬಿನ ಹಾದಿಯ ತಪ್ಪಿದರೆಲ್ಲರು. ಕಾಯವೆಂಬ ಪಟ್ಟಣ ಜೀವಸುಪಾಯವೆಂಬ ಪಥ. ಪಯಣದಲ್ಲಿ ಹೊಲಬುದಪ್ಪಿ, ವಿಷಯವೆಂಬ ಗಹನದಲ್ಲಿ ಬಳಸಿ ಆಡುತ್ತಿದ್ದಾರೆ. ಎನಗಿನ್ನು ಅಸುವಿನ ಪಥವ ಹೇಳು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಮೋಹಮನವೆಂಬ ಒಂದಾಗರದಲ್ಲಿ ಬಾಳೆ ಹುಟ್ಟಿತ್ತು. ಕಣ್ಣೆಲೆ ಒಂದು, ಹೊಡೆ ಮೂರಾಗಿ ಮೂಡಿ, ಹೂವಿನ ಎಲೆ ಬಿಳಿದು, ಕುಸುಮ ಉದುರದು, ಚಿಪ್ಪು ಲೆಕ್ಕಕ್ಕೆ ಬಾರದು, ಬಾಳೆಯ ಸಾಕಿದಣ್ಣ ಬಾಳಲಾರ. ಬಾಳೆ ತರಿವುದಕ್ಕೆ ಮೊದಲೆ ಕೊಳೆಯಿತ್ತು, ಅಂಗನಷ್ಟಕ್ಕೆ ಮೊದಲೆ ಮನನಷ್ಟವಾಯಿತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ.
--------------
ಸಗರದ ಬೊಮ್ಮಣ್ಣ
ಮನೆ ಬೇಕಾದಡೆ ಮನೆಯ ಸುಡು. ಮಣ್ಣು ಬೇಕಾದಡೆ ಒಲ್ಲದಿರು. ಹೊನ್ನು ಬೇಕಾದಡೆ ಹಿಡಿಯದಿರು. ಹೆಣ್ಣು ಬೇಕಾದಡೆ ಕೂಡದಿರು. ಹಸಿವಿಲ್ಲದಡುಣ್ಣು, ಈ ಹುಸಿಯ ದಿಟ ಮಾಡು, ಸಗರದ ಬೊಮ್ಮನೊಡೆಯ ತನಮನ ಸಂಗಮೇಶ್ವರಲಿಂಗವನರಿಯಬಲ್ಲಡೆ.
--------------
ಸಗರದ ಬೊಮ್ಮಣ್ಣ
ಮಸಣ ಮನೆಯಾಯಿತ್ತು, ಮನೆ ಮಸಣವಾಯಿತ್ತು. ಹುಸಿಯ ನುಡಿದವ ಪಶುಪತಿಯ ಗೆದ್ದ. ದಿಟವ ನುಡಿದವ ಸರ್ವಪಾಪಕ್ಕೆ ಗತನಾದ. ಈ ಉಭಯದ ಕುಟಿಲವ ಹೇಳಾ, ಎನಗದು ಭೀತಿ | ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಮೆೃನವಾಗಿ ಜುಮದಟ್ಟಿ ಬಿಟ್ಟು, ವಿವರವಾಗಿ ಪರಪರರ ಕಲಂಕವ ಕರಗಿಸಿ, ಜ್ಞಾನಿಯಾಗಿ ಆರವೆಯನಾರೈಯದೆ ಆರೈಕೆಯಾಗಿ, ಕೂಲಿಗೆ ಕೊಳಬಿಟ್ಟು, ಕೂಳಿಗೆ ಲೋಲ ಸೆರೆವಿಡಿದು, ನಾಳೆಯ....ಗಂಟಲಗಾಣ ನಾನು ಕಾಣಾ, ವೈನಿಪುರದ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಮಗ ತಂದೆಯ ಕೊಂದು, ತಮ್ಮವ್ವೆಗೆ ಮೊಲೆನೀರ ಮಿಂದ. ತಾಯ ಶಿಶು ತಿಂದು, ಅವ್ವೆಯ ಮೊಲೆಯನರಸಿ ಅಳುತ್ತಿದ್ದಿತ್ತು. ಶಿಶುವಿನ ಹೊಟ್ಟೆಯಲ್ಲಿದ್ದ ಶಿಶು ತಾಯ ಬೆಸೆಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವನರಿತಲ್ಲಿ,
--------------
ಸಗರದ ಬೊಮ್ಮಣ್ಣ