ಅಥವಾ
(5) (1) (1) (2) (2) (0) (0) (0) (1) (0) (0) (3) (0) (0) ಅಂ (1) ಅಃ (1) (18) (1) (4) (1) (0) (2) (0) (2) (0) (0) (0) (0) (0) (0) (0) (5) (0) (1) (1) (1) (5) (0) (5) (3) (8) (1) (3) (0) (0) (1) (3) (0) (6) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭೂಮಿಯಿಲ್ಲದ ಧರೆಯಲ್ಲಿ, ಒಂದು ಮಹಾಮೇರುವೆಯ ಬೆಟ್ಟ ಹುಟ್ಟಿತ್ತು. ಅದರ ತಳ ಒಂದಂಡ, ಮೇಲೆ ಮೂರಂಡ ಮೂರರ ಮೇಲೆ ಹಾರಿಬಂದಿತ್ತು ಕಾಗೆ. ಬಂದ ಕಾಗೆ ತುದಿಯಲ್ಲಿ ಅಂತರಿಸಲಾಗಿ, ಮೇರುವೆ ಕುಸಿಯಿತ್ತು. ಕೆಳಗಣ ಅಂಡ ನಿಂದು, ಮೇಲಣ ಮೇರುವೆ ಒಡೆಯಿತ್ತು. ಮೂರಂಡವನೊಡಗೂಡಿದ ಕಾಗೆ ಹಾರಿತ್ತು , ಬೆಟ್ಟ ಬಟ್ಟಬಯಲು ಬೊಮ್ಮನೊಡೆಯ ತನುಮನ ಸಂಗಮೇಶ್ವರಲ್ಲಿ ಒಡಗೂಡಿದವಂಗೆ.
--------------
ಸಗರದ ಬೊಮ್ಮಣ್ಣ
ಭಾವಸಮುದ್ರದಲ್ಲಿ ಮನಮನೋಹರವೆಂಬ ಮಕರ ತಿರುಗಾಡುತ್ತಿರಲು, ತಾನಿದುದು ಒಂದೆ, ತನಗೆ ಆಹಾರವಿಲ್ಲ. ತನ್ನ ವಂಶವ ಭಕ್ಷಿಸುವುದಕ್ಕೆ ಪ್ರತಿರೂಪಿಲ್ಲ. ಅದು ಗಾಣಕ್ಕೆ, ಘಟದ ಬಲೆಗೆ ಗೋಚರವಲ್ಲ. ಸಾಕಾರದ ಕೂಳಿಗೆ ಸಿಕ್ಕದು. ಅದು ಹಿಡಿವ ಪುಳಿಂದ ನೀನೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಭಾನುವಿನ ಅಂಗಮಧ್ಯದಲ್ಲಿ ಒಂದು ಏಣಿ. ಏಣಿಗೆ ಮೂರು ಕಾವು, ಮೆಟ್ಟಿ ಹತ್ತುವುದಕ್ಕೆ ಮೆಟ್ಟು ಎಂಬತ್ತುನಾಲ್ಕುಲಕ್ಷ. ಅದ ತಾಳಲಾರದೆ ಏಣಿ ಜಾರಿತ್ತು, ಕಾವು ಮುರಿಯಿತ್ತು. ಹಲ್ಲು ಎಲ್ಲಿಗೆ ಹೋದವೆಂದು ಕಾಣಬಾರದು, ಸಗರದ ಬೊಮ್ಮನೊಡೆಯ ತನುಮನ ಸಂಗವಾಗಿ ಕುರುಹಡಗಿದ ಕಾರಣ.
--------------
ಸಗರದ ಬೊಮ್ಮಣ್ಣ