ಅಥವಾ
(5) (1) (1) (2) (2) (0) (0) (0) (1) (0) (0) (3) (0) (0) ಅಂ (1) ಅಃ (1) (18) (1) (4) (1) (0) (2) (0) (2) (0) (0) (0) (0) (0) (0) (0) (5) (0) (1) (1) (1) (5) (0) (5) (3) (8) (1) (3) (0) (0) (1) (3) (0) (6) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರೂಪಿನ ದರ್ಪಣವ ಹಿಡಿದು, ತನ್ನಯ ರೂಪ ನೋಡಿದಲ್ಲಿ, ನಿಹಿತದ ಇರವಾಯಿತ್ತು. ಆ ರೂಪ ಕಂಡ ನಿರೂಪಿನ ದೃಷ್ಟಿ, ಅದರೊಳಗೆ ಕೂರ್ತು ತೋರುವ ಬೆಳಗಿನ ಮರೆ. ಉಭಯವ ಹಿಡಿದು ನೋಡುವ ಘಟಪಟನ್ಯಾಯ, ಉಪದೃಷ್ಟಭೇದ. ಹಿಡಿದ ಇಷ್ಟಾಚರಣೆ ಕುರುಹಿನ ಲಕ್ಷಣ. ಪಡಿಬ್ಥಿನ್ನ ಭೇದವಿಲ್ಲದೆ ತೋರಿ ತೋರದಿಪ್ಪ ಉಭಯ ಅಂಗವು ನೀನೆ, ಸಗರದ ಬೊಮ್ಮನೊಡೆಯ ತನುಮನ [ಸಂಗ]ಮೇಶ್ವರಲಿಂಗದಲ್ಲಿ ಲೇಪವಾದ ಶರಣಂಗೆ.
--------------
ಸಗರದ ಬೊಮ್ಮಣ್ಣ
ರೂಪುಸಹಿತ ಭಕ್ತ, ರೂಪುವಿರಹಿತ ಶರಣ. ಶರಣಭಾವವಿರಹಿತ ಸಮ್ಯಜ್ಞಾನಿ. ಇಂತೀ ತ್ರಿವಿಧಗುಣವ ಕಳೆದಲ್ಲಿ, ಉಳಿದ ಶೇಷ ಸಂಭವಸಂಯುಕ್ತ. ಅದರ ಬೆಂಬಳಿಯನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ರಜವೆಂಬ ಹೂವಿನ ಗಿಡುವಿನಲ್ಲಿ, ನಿರ್ಜರವೆಂಬ ಕುಸುಮ ಹುಟ್ಟಿತ್ತು. ನಿರವಯವೆಂಬ ಗಂಧ ಸಂಭ್ರಮಿಸಿತ್ತು. ಕೈಯುಗುರಿನಲ್ಲಿ ಮುಟ್ಟದೆ, ಮನದ ನಖದ ಕೊನೆಯಲ್ಲಿ ಎತ್ತಿ, ನಿರೂಪವ ಮಂಡೆಯ ಮೇಲಿರಿಸಲು, ಎನ್ನ ಸಗರದ ಬೊಮ್ಮನೊಡೆಯ ತನುಮನ ಸಂಗವಾದಲ್ಲಿ, ಅಭೇದ್ಯವಾದ ಪ್ರಾಣಲಿಂಗಕ್ಕೆನ್ನ ಪ್ರಾಣಪೂಜೆಯಾಯಿತ್ತಯ್ಯಾ.
--------------
ಸಗರದ ಬೊಮ್ಮಣ್ಣ