ಅಥವಾ
(5) (1) (1) (2) (2) (0) (0) (0) (1) (0) (0) (3) (0) (0) ಅಂ (1) ಅಃ (1) (18) (1) (4) (1) (0) (2) (0) (2) (0) (0) (0) (0) (0) (0) (0) (5) (0) (1) (1) (1) (5) (0) (5) (3) (8) (1) (3) (0) (0) (1) (3) (0) (6) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನು ನಷ್ಟವಾದಲ್ಲಿ, ಉಸುರಿಗೆ ಒಡಲಿಲ್ಲ. ಮನ ನಷ್ಟವಾದಲ್ಲಿ, ಅರಿವಿಂಗೆ ತೆರಪಿಲ್ಲ. ಅರಿವು ನಷ್ಟವಾದಲ್ಲಿ, ಉಭಯವ ಭೇದಿಸುವದಕ್ಕೆ ಅಪ್ರಮಾಣು. ರೂಪು ರುಚಿ ದೃಷ್ಟವಾಗಬೇಕು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ
ತನುವಿನೊಳಗಣ ತನುವಿನಲ್ಲಿ ಕೂಡಿದವನಾರೊ ? ಮನದೊಳಗಣ ನೆನಹಿನಲ್ಲಿ ನೆನೆಹಿಸಿಕೊಂಬವನಾರೊ ? ಬಾಯೊಳಗಣ ಬಾಯಲ್ಲಿ ಉಂಬವನಾರೊ ? ಕಣ್ಣಿನೊಳಗಣ ಕಣ್ಣಿನಲ್ಲಿ ನೋಡುವನಾರೊ ? ನಾ ನೀನೆಂಬಲ್ಲಿ ಅದೇನು ಹೇಳಾ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ತನು ಹೇಳಿಗೆ, ಮನ ಸರ್ಪನಾಗಿ, ತನ್ನಯ ವಿಲಾಸಿತದಿಂದ ಹೆಡೆಯೆತ್ತಿ ಆಡುತ್ತಿರಲಾಗಿ, ನಾನಾರೂಪು ತೋ[ರುವ] ಆಕಾಶದ ಮಧ್ಯದಲ್ಲಿ, ಉಭಯನಷ್ಟವಾದ ಚಿದ್ಘನರೂಪಿನ ಹದ್ದು ಬಂದು, ಹೊಯ್ಯಿತ್ತು ಸರ್ಪನ. ಆ ಸರ್ಪ ಹದ್ದಿನ ಕೊರಳ ಸುತ್ತಿ, ಬಾಯ ಬಿಟ್ಟು ಕಚ್ಚದಂತೆ ಹೆಡೆಯೊಳು ಮುಚ್ಚಿ, ಹದ್ದೆದ್ದಾಡದಂತಿರಲು, ಆ ಬುದ್ಧಿಯ ನೆನೆದು ಒದ್ದು, ತನ್ನ ಸಖದ ಉಗುರಿನಲ್ಲಿ ಹೆಡೆ ಉಡುಗಿ, ಹಾವಿನ ತೆಕ್ಕೆ ಬಿಟ್ಟು ಹದ್ದೆದ್ದಿದಿತ್ತು ಮಹದಾಕಾಶಕ್ಕೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದಲ್ಲಿ.
--------------
ಸಗರದ ಬೊಮ್ಮಣ್ಣ
ತನುವಿನ ಮಹಾಮನೆಯಲ್ಲಿ ಮಾಡುವ ಮಾಟ, ಘನಕ್ಕೆ ಘನವೆಂದು ಎದ್ದಿತ್ತು ಉಪ್ಪರಗುಡಿ ಲೀಲೋಲ್ಲಾಸವೆಂಬ ಕಳೆ ನೆಟ್ಟಿತ್ತು , ಭವವಿರಹಿತನೆಂಬ ಗುಡಿಗಟ್ಟಿತ್ತು , ಮಾಡುವ ದಾಸೋಹಕ್ಕೆ ಕೇಡಿಲ್ಲಾ ಎಂದು. ಕಾಯ ಸವೆದು ಮನಮುಟ್ಟಿ, ಭಾವನಿಶ್ಚಯವಾಗಿ ಮಾಟಕೂಟಸಂದಿತ್ತು , ಮಹಾಮನೆ ಮಹವನೊಡಗೂಡಿತ್ತು , ಕಾಯದ ಕಣೆ ಹಿಂಗಿತ್ತು, ಭಾವಗೂಡಿ ಅಳಿಯಿತ್ತು ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ತಾನಾದಲ್ಲಿ ,
--------------
ಸಗರದ ಬೊಮ್ಮಣ್ಣ
ತನುವಿನ ಒಳಗಣ ಕಣ್ಣಿನಲ್ಲಿ ನೋಡುವನಾರೊ ? ನಾನೆಂಬಲ್ಲಿ ಅದೇನು ಹೇಳು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ