ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಿಡಿಯೆನೆಂಬುದ ಹಿಡಿದಲ್ಲಿ ಅದು ಸುರಾಪಾನ. ಒಡಗೂಡೆನೆಂದು ಮತ್ತೊಡಗೂಡಿದಡೆ ಅದು ಪರಪಾಕ. ಮತ್ತಾವುದೊಂದು ಲಿಂಗಕ್ಕೆ ಸಲ್ಲದೆಂಬುದನರಿತು ಮತ್ತೆಲ್ಲರ ಮಾತು ಕೇಳಿ ಮೆಲ್ಲನೆ ಆದಲ್ಲಿ ಆ ಗುಣ ಸಲ್ಲದು. ಇವನೆಲ್ಲವನರಿತು ಮತ್ತೆ ಸಲ್ಲದುದ ಸಲ್ಲಿಸಿದೆನಾದಡೆ ಎಲ್ಲಾ ಯೋನಿಗೆ ಕಡೆಯಪ್ಪ ಶ್ವಾನನಯೋನಿಯಲ್ಲಿ ಬಪ್ಪೆ. ಈ ಗುಣ ತಪ್ಪದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ಅಕ್ಕಮ್ಮ
ಹಲವುತೆರದ ಕ್ರೀಯನಾಧರಿಸಿ ನಡೆವಲ್ಲಿ ಅಂಗಕ್ಕೆ ಆಚಾರ, ಮನಕ್ಕೆ ಅರಿವು ಮುಂತಾಗಿ, ಪೂರ್ವದ ಸ್ವಸ್ಥಾನ, ಉತ್ತರದ ನಿಶ್ಚಯವ ಕಂಡು, ಸತ್ಕ್ರೀಯಿಂದ ಆದರಿಸಿ, ಪರಧನ ಪರಸತಿ ಪರಾಪೇಕ್ಷೆ ಅನ್ಯನಿಂದೆ ದುರ್ಗುಣ ದುಶ್ಚರಿತ್ರ ದುರ್ವಿಕಾರ ದುರ್ಬೋಧೆ ಇಂತೀ ಅನ್ಯವ ನೇತಿಗಳೆದು, ತನಗೆ ಅನ್ಯವಿಲ್ಲದುದ ಅಂಗೀಕರಿಸಿ, ತಾ ಹಿಡಿದ ವ್ರತಕ್ಕೆ ತನ್ನ ಸತಿಸುತ, ತನ್ನ ಕ್ರೀ ಮುಂತಾದ ಒಡೆಯರು ಭಕ್ತರು ಸಹವಾಗಿ ತಾ ತಪ್ಪದೆ, ತಪ್ಪಿದವರ ಕಂಡು ಒಳಗಿಟ್ಟುಕೊಂಡು ಒಪ್ಪದೆ ಇಪ್ಪ ಭಕ್ತನ ಸತ್ಯದ ಕಾಯವಳಿಯಿತ್ತು ಉಳಿಯಿತ್ತೆಂಬ ಸಂದೇಹವಿಲ್ಲ. ಆತನಿಹಪರದಲ್ಲಿ ಸುಖಿ. ಆತನಾಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಹೆಣ್ಣು ಹೊನ್ನು ಮಣ್ಣಿಗಾಗಿ ವ್ರತವೆಂಬ ನೇಮವ ಮಾಡಿಕೊಳ್ಳಬಹುದೆ ? ಕೂಲಿಗೆ ಬಳಿನೀರ ಕುಡಿದಡೆ ಅದಾರ ಮುಟ್ಟುವುದು ? ವಾಸಿಗೆ ಮೂಗನರಿದುಕೊಂಡಡೆ ನಾಚಿಕೆ ಯಾರಿಗೆಂಬುದನರಿದ ಮತ್ತೆ ಇಂತಿವ ಹೇಸಿ ಶೀಲವಂತನಾಗಬೇಕು. ಇಂತೀ ಗುಣಕ್ಕೆ ನಾಚಿ ನೇಮವ ಮಾಡಿಕೊಳ್ಳಬೇಕು. ಇಂತೀ ವ್ರತದ ಆಗುಚೇಗೆಯನರಿದ ಮತ್ತೆ ಇದಿರ ಬಯಕೆಯ ಬಿಟ್ಟು ತನ್ನ ತಾನರಿಯಬೇಕು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
--------------
ಅಕ್ಕಮ್ಮ
ಹೊಳೆಯ ಹರುಗೋಲಲ್ಲಿಯೆ ಮೆಟ್ಟಡಿಯ ಮೆಟ್ಟಿಹೆನೆಂದು ಚರ್ಮಕ್ಕೆ ಕೊಟ್ಟು ತನ್ನ ಠಾವಿನಲ್ಲಿ ಕಚ್ಚಾಡಲೇತಕ್ಕೆ ? ಆ ಗುಣ ವ್ರತನೇಮಿಗಳಿಗೆ ನಿಶ್ಚಯವೆ ? ಕೊಟ್ಟಲ್ಲಿ ಬೇಯದೆ ತಂದಲ್ಲಿ ನೋಯದೆ ಭಕ್ತರ ಒಡೆಯರ ಚಿತ್ತವಿದ್ದಂತೆ ಅಚ್ಚೊತ್ತಿದಂತಿರಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ನೇಮ ಸಂದಿತ್ತು.
--------------
ಅಕ್ಕಮ್ಮ
ಹರಿ ಬ್ರಹ್ಮ ದೇವರ್ಕಳು ಮುಂತಾಗಿ ಇದ್ದವರೆಲ್ಲರು ತಮ್ಮ ತಮ್ಮ ಮಾರ್ಗದ ಕಲೆಯಲ್ಲಿಯೆ ಎಯ್ದಿ, ಜಪ ತಪ ನೇಮ ನಿತ್ಯಂಗಳು ತಪ್ಪದೆ ಮಹಾದೇವನ ಓಲೈಸಿದರಾಗಿ, ಇದು ಕಾರಣದಲ್ಲಿ ಕೊಂಡ ವ್ರತಕ್ಕೆ ಹಾನಿಯಿಲ್ಲದೆ, ನೇಮಕ್ಕೆ ಅನುಸರಣೆಯಿಲ್ಲದೆ, ತಾ ನಡೆವಲ್ಲಿ, ಇದಿರ ತಾ ಕಾಬಲ್ಲಿ, ಅಣುಮಾತ್ರ ತಪ್ಪದೆ, ಕ್ಷಣಮಾತ್ರ ಸೈರಿಸದೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಹಾದಿಯನರಿಯಬೇಕು.
--------------
ಅಕ್ಕಮ್ಮ
ಹೋತಿನ ಗಡ್ಡದಂತೆ ಗಡ್ಡದ ಹಿರಿಯರ ನೋಡಾ. ಬಿಡಾರ ಬಿಡಾರವೆಂದು ಹಿರಿಯತನಕ್ಕೆ ಅಹಂಕರಿಸಿ. ಆಚಾರವಂ ಬಿಟ್ಟು ಅನಾಚಾರವಂ ಸಂಗ್ರಹಿಸಿ, ಭಕ್ತರೊಳು ಕ್ರೋಧ, ಭ್ರಷ್ಟರೊಳು ಮೇಳ ಇವರು ನರಕಕ್ಕೆ ಯೋಗ್ಯರು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
--------------
ಅಕ್ಕಮ್ಮ