ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದೇವರಿಗೆಂದು ಬಂದ ದ್ರವ್ಯ ಮತ್ತೆ ಸಂದೇಹವಾಯಿತ್ತೆಂದು ಹಾಕೆಂದಾಗವೆ ಘನಲಿಂಗಕ್ಕೆ ದೂರ. ಬೇಹುದಕ್ಕೆ ಮೊದಲೆ ಸಂದೇಹವನಳಿದು ತರಬೇಕಲ್ಲದೆ ಉಂಡು ಊಟವ ಹಳಿಯಲುಂಟೆ ! ತಂದುಕೊಟ್ಟು ಕುಲವನರಸಲುಂಟೆ ! ಇಂತಿವರು ತಮ್ಮಂಗ ವ್ರತವನರಿಯದೆ ಇದಿರ ವ್ರತದಂಗ ತಪ್ಪಿತೆಂದು ಕೊಂಡಾಡುವರ ಕಂಡು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರು ಕಂಡಹರೆಂದು ಅಂಜುತ್ತಿದ್ದನು.
--------------
ಅಕ್ಕಮ್ಮ
ದಾಸಿ ವೇಶಿ ಪರನಾರಿ ಸಹೋದರನಾಗಿರಬೇಕು. ವ್ರತಹಸ್ತಂಗೆ, ಸದ್ಭಕ್ತಂಗೆ, ಸತ್ಪುರುಷಂಗೆ ವ್ರತಕ್ಕೆ ತಪ್ಪದೆ ನೇಮಕ್ಕೆ ನಿತ್ಯವಾಗಿ ಭಾವಭ್ರಮೆಯಳಿದಿರಬೇಕು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ.
--------------
ಅಕ್ಕಮ್ಮ
ದುಷ್ಟರಿಗಂಜಿ ಕಟ್ಟಿಕೊಳ್ಳಬಹುದೆ ಕಡ್ಡಾಯದ ವ್ರತವ ! ಆ ವ್ರತದ ವಿಚಾರವೆಂತೆಂದಡೆ ; ಅಲಗಿನ ತುಪ್ಪದ ಸವಿಗೆ ಲಲ್ಲೆಯಿಂದ ನೆಕ್ಕಿದಡೆ ಅಲಗಿನ ಧಾರೆ ನಾಲಗೆಯ ತಾಗಿ, ಆ ಜೀವ ಹಲುಬುವ ತೆರದಂತೆ. ಒಲವರವಿಲ್ಲದ ಭಕ್ತಿ, ಛಲವಿಲ್ಲದ ನಿಷ್ಠೆ, ಎಲವದ ಮರನ ಕಾಯ್ದ ವಿಹಂಗನಂತೆ. ಇಂತೀ ಸಲೆನೆಲೆಯನರಿಯದವನ ವ್ರತಾಚಾರ ಕೊಲೆ ಹೊಲೆ ಸೂತಕಕ್ಕೊಡಲಾಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಹೊರಗಾದ ನೇಮ
--------------
ಅಕ್ಕಮ್ಮ
ದೃಷ್ಟದಲ್ಲಿ ಆಗಾಗ ಅರ್ಪಿಸಿಕೊಂಡಿಹೆನೆಂಬುದು ನಿನ್ನ ಚಿತ್ತದ ಕಲೆಯೊ? ವಸ್ತುವಿಗೆ ನೀ ತೃಪ್ತಿಯ ಮಾಡಿಹೆನೆಂಬ ನಿಶ್ಚಯವೊ? ಆ ವಸ್ತು ವಿಷದ ಬುಡದಂತೆ, ಅಮೃತದ ಗಟ್ಟಿಯಂತೆ. ನಿನ್ನ ಸರ್ವಾಂಗದಲ್ಲಿ ಛೇದಿಸಿದ ಲಿಂಗಕ್ಕೆ ಸಹಭೋಜನದ ಭಾವವ ನಿನ್ನ ನೀನೆ ತಿಳಿ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
--------------
ಅಕ್ಕಮ್ಮ