ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಾಗ್ರದಲ್ಲಿ ಮಾಡುವ ಹಾಹೆಯ ಗುಣಂಗಳು ಸ್ವಪ್ನದಲ್ಲಿ ತೋರುವಂತೆ ಬಂದ ಮಣಿಹವ ಕಂಡು ಮುಂದಕ್ಕೆ ಶುಭಸೂಚನೆಯನ್ನರಿಯಬೇಕು. ಅರಿವನ್ನಕ್ಕ ವ್ರತ, ಮಾಟ ವಸ್ತು ವಸ್ತುವಿನಕೂಟ ನೆರಿಗೆಯಲ್ಲಿ ನೆರೆ ನಂಬಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಗೆ.
--------------
ಅಕ್ಕಮ್ಮ
ಜಗಮೆಚ್ಚಬೇಕೆಂಬ ಶೀಲವ ನಾನರಿಯೆ, ಕೊಳುಕೊಡೆಯಾಗಬೇಕೆಂಬ ಶೀಲವ ನಾನರಿಯೆ, ದ್ರವ್ಯದ ಕಳ್ಳತನಕ್ಕಂಜಿ ಶೀಲವಾದುದ ನಾನರಿಯೆ. ಹೊರಗಣ ಬಾವಿ, ಮನೆಯ ಮಡಕೆ - ತನುಘಾತಕಕ್ಕಾದ ಶೀಲವೆಂದು ನಾನರಿಯೆ. ತಾ ಹೋದಲ್ಲಿ ಇದಿರ ಕೇಳುವಲ್ಲಿ ಆಯತ ಸ್ವಾಯತ ಸನ್ನಹಿತನೆಂಬುದ ವಿಚಾರಿಸಿ, ಅಹುದಲ್ಲವೆಂಬುದ ಮನಕ್ಕೆ ಕುರುಹಿಟ್ಟು, ನೇಮಕ್ಕೆ ಬಂದುದ ವ್ರತಕ್ಕೆ ಸಂದುದ ಸಂದೇಹವುಳ್ಳನ್ನಕ್ಕ ವಿಚಾರಿಸಿ, ಸಂದೇಹ ನಿಂದಲ್ಲಿ ತನ್ನ ಆಯತದ ಅನುವನರಿತು ಕೊಂಬುದು ಪ್ರಸಾದವು. ಇಂತೀ ತನುವಿಚಾರ ಕ್ರೀವಿಚಾರ ; ಇಂತೀ ಭಾವಶುದ್ಧಾತ್ಮವಾದಲ್ಲಿ ವ್ರತ ಸಂದಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಶೀಲವಂತನಾದ.
--------------
ಅಕ್ಕಮ್ಮ
ಜಾಗ್ರದಲ್ಲಿ ಹೋಹಡೆ, ಎನ್ನ ವ್ರತಕ್ಕೆ ಅರ್ಹರಾಗಿದ್ದವರಲ್ಲಿಗಲ್ಲದೆ ಹೋಗೆನು. ಸ್ವಪ್ನದಲ್ಲಿ ಕಾಂಬಲ್ಲಿ ಎನ್ನ ಸಮಶೀಲವಂತರನಲ್ಲದೆ ಕಾಣೆನು. ಸುಷುಪ್ತಿಯಲ್ಲಿ ತೊಳಗಿ ಬೆಳಗಿ ಆಡುವಾಗ ಎನ್ನ ನೇಮದಲ್ಲಿಯೆ ಅಡಗುವೆ. ಈ ಸೀಮೆಯಲ್ಲಿ ತಪ್ಪಿದೆನಾದಡೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ತಪ್ಪುಕನಹೆನು.
--------------
ಅಕ್ಕಮ್ಮ