ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಂಚಾಚಾರವ ಧರಿಸಿದ ಶರೀರಕ್ಕೆ ಅಷ್ಟೋತ್ತರಶತವ್ಯಾಧಿ ಬಂದಿತ್ತೆಂದು ಕಲ್ಪಿಸಬಹುದೆ ? ಪಾದತೀರ್ಥ ಪ್ರಸಾದವೆಂದು ನೈಷ್ಠಿಕದಲ್ಲಿ ಕೊಂಬ ಜಿಹ್ವೆ, ಔಷಧಿ ಕಷಾಯ ಕೊಂಡಡೆ ಪಂಚಾಚಾರಕ್ಕೆ ದೂರ ಪಾದೋದಕ ಪ್ರಸಾದವಿಲ್ಲ ಇಹಪರಕ್ಕೆ ಸಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಅವರನೊಲ್ಲ.
--------------
ಅಕ್ಕಮ್ಮ
ಪಂಚಾಚಾರಶುದ್ಧವಾಗಿ ಇರಬೇಕೆಂಬರಲ್ಲದೆ, ಪಂಚಾಚಾರದ ವಿವರವನರಿಯರು ನೋಡಾ? ತಮ್ಮ ಸ್ವಯಾಯತವೆಂಬುದನರಿಯದೆ ಉಂಡಲ್ಲಿ, ತಮ್ಮ ಲಿಂಗಕ್ಕೆ ಅಲ್ಲದುದ ವಾಸಿಸಿದಲ್ಲಿ, ತಮ್ಮ ವ್ರತಾಚಾರಕ್ಕೆ ಸಲ್ಲದುದ ನಿರೀಕ್ಷಿಸಿದಲ್ಲಿ, ತಮ್ಮಾಯತಕ್ಕೊಳಗಲ್ಲದ ಕುಶಬ್ದವ ಕೇಳಿ ಒಪ್ಪಿದಲ್ಲಿ, ತಮ್ಮ ಲಿಂಗಾಯತಕ್ಕೆ ಹೊರಗಾದುದ ಮುಟ್ಟಿ ಅಂಗೀಕರಿಸಿದಲ್ಲಿ, ಇಂತೀ ಪಂಚಾಚಾರದಲ್ಲಿ ಶುದ್ಧತೆಯಾಗಿ ಗುರುಲಿಂಗಜಂಗಮ ಪಾದತೀರ್ಥ ಪ್ರಸಾದ ಇಂತೀ ವರ್ತನ ಪಂಚಾಚಾರಶುದ್ಧವಾಗಿ, ಬಾಹ್ಯ ಅಂತರಂಗದಲ್ಲಿ ಉಭಯನಿರತವಾಗಿ, ನಿಂದುದು ವ್ರತವಲ್ಲದೆ, ಉಂಬ ಉಡುವ ಕೊಂಬ ಕೊಡುವ ಸಂದಣಿಗಾರರ ಶೀಲ ಹಿಂದೆ ಉಳಿಯಿತ್ತು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವ ಮುಟ್ಟದೆ.
--------------
ಅಕ್ಕಮ್ಮ
ಪರಪಾಕವ ಬಿಟ್ಟಿಹುದೊಂದೆ ವ್ರತ. ಲವಣ ನಿಷೇಧವೆಂದು ಬಿಟ್ಟಿಹುದೊಂದೆ ವ್ರತ. ಸಪ್ಪೆಯೆಂದು ಚಿತ್ತ ಬಿಟ್ಟಿಹುದೊಂದೆ ವ್ರತ. ಇಂತೀ ತ್ರಿವಿಧವ್ರತಂಗಳಲ್ಲಿ ನಿರತವಾದವಂಗೆ ಮತ್ತಾವ ವ್ರತಕ್ಕೂ ಅವಧಿಗೊಡಲಿಲ್ಲ. ನುಡಿಗಡಣಕ್ಕೆ ತೆರಪಿಲ್ಲ; ತಾವು ತಾವು ಕೊಂಡ ವ್ರತಕ್ಕೆ ತಾವೆ ಮುಕ್ತರು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಪಂಚಾಚಾರ ಶುದ್ಧವಾದ ಸದ್ಭಕ್ತಂಗೆ, ಪಾದತೀರ್ಥಪ್ರಸಾದದಲ್ಲಿ ನಿರತಂಗೆ, ಆವ ವ್ರತ ನೇಮವ ನಡೆಸುವ ಸದೈವಂಗೆ ಆತನ ಸುಕಾಯಕದ ಇರವೆಂತೆಂದಡೆ: ತಾ ದೃಷ್ಟದಲ್ಲಿ ಕಾಬ ಪ್ರಾಣಿಗಳ ಕೊಲ್ಲದೆ, ಕೊಲ್ಲುವುದಕ್ಕೆ ಒಡಂಬಡದೆ, ತಾ ಮಾಡುವ ಕಾಯಕದಲ್ಲಿ ಅಧಮ ವಿಶೇಷವೆಂಬುದನರಿತು, ನಡೆನುಡಿ ಸಿದ್ಧಾಂತವಾಗಿ ಲಿಂಗವ ಒಡಗೂಡಿಪ್ಪ ಕಾಯಕದಿರವೆಂತೆಂದಡೆ: ನಿರತವಾಗಿ ಆ ಮುಖದಿಂದ ಬಂದ ದ್ರವ್ಯದ ಗುರುಲಿಂಗಜಂಗಮದ ಮುಂದಿಟ್ಟು ಆ ಪ್ರಸಾದಮಂ ಕೊಂಡ ಸದ್ಭಕ್ತನ ಪ್ರಸಾದವ ಕೊಂಡ ಗುರುವಿಂಗೆ ಇಹಸುಖ, ಲಿಂಗಕ್ಕೆ ಪರಸು, ಜಂಗಮಕ್ಕೆ ಪರಮಸುಖ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಆ ಪ್ರಸಾದವೆ ಪರಮಪದ
--------------
ಅಕ್ಕಮ್ಮ
ಪಾಕಲವಣವ ಬಿಟ್ಟಲ್ಲಿ ಪರವಧುವ ಅಪೇಕ್ಷಿಸಿ ಬೇಡಲಾಗದು. ಅಪ್ಪುಲವಣವ ಬಿಟ್ಟು ಸಪ್ಪೆಯ ಕೊಂಬಲ್ಲಿ ಉಚ್ಚೆಯಬಚ್ಚಲ ಮುಟ್ಟಲಾಗದು. ಉಚ್ಚೆಯ ಬಚ್ಚಲ ಬಿಟ್ಟಲ್ಲಿ ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು ಬಾಗಿಲತಪ್ಪಲ ಕಾಯಲಾಗದು. ಇಂತೀ ವ್ರತ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ತಪ್ಪದ ನೇಮ.
--------------
ಅಕ್ಕಮ್ಮ