ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಾಟಿ ಗುಂಡು ಬಂಧನ ಕಲಕೇತ ಯಾಚಕ ಪಗುಡಿ ಪರಿಹಾಸಕಂಗಳಿಂದ ಬೇಡಿ ತಂದು ಗುರುಲಿಂಗಜಂಗಮಕ್ಕೆ ಮಾಡಿಹೆನೆನಬಹುದೆ? ಮಾಡುವ ಠಾವಿನಲ್ಲಿ, ಮಾಡಿಸಿಕೊಂಬವರಾರೆಂದು ತಾನರಿದ ಮತ್ತೆ ಅಲ್ಲಿ ಬೇಡಬಹುದೆ ? ಭಕ್ತಿಯ ಮಾಡಿಹೆನೆಂದು ಕಾಡಬಹುದೆ ತಾ ? ತಾ ದಾಸೋಹಿಯಾದ ಮತ್ತೆ ಅಲ್ಲಿಗೆ ತಾ ದಾಸನಾಗಿ ಸಲ್ಲೀಲೆಯಿಂ ಪ್ರಸಾದವ ಕೊಂಡು ಅಲ್ಲಿ ಇಲ್ಲಿ ಎಲ್ಲಿಯೂ ತಾನಾಗಿ ಇರಬೇಕಲ್ಲದೆ, ಅಲ್ಲಿ ಮಾಡಿಹೆನೆಂದು ಎಲ್ಲರ ಬೇಡುವ ಕಲ್ಲೆದೆಯವನನೊಲ್ಲ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಚತುಷ್ಪಾದಿ ಮುಂತಾದ, ನರ ವಿಹಂಗ ಕೀಟಕ ಮುಂತಾದ ಜೀವಂಗಳೆಲ್ಲವು ತಮ್ಮ ತಮ್ಮ ಸ್ವಜಾತಿಯ ಕೂಡುವುದೆ ಶೀಲ. ತಮ್ಮ ತಮ್ಮ ವ್ಯವಹಾರಂಗಳಲ್ಲಿ ಕೊಡುವ ಕೊಂಬುದೆ ಶೀಲ. ಇಂತೀ ಜಾತಿವರ್ತಕದಲ್ಲಿ ನಡೆವ ಶೀಲವಂ ಬಿಟ್ಟು, ಲಿಂಗವಂತ ಲಿಂಗಮುಂತಾಗಿ ನಡೆವ ಶೀಲವೆಂತುಟೆಂದಡೆ ಅಸಿ, ಕೃಷಿ, ವಾಣಿಜ್ಯ, ವಾಚಕ ಮುಂತಾದ ಕಾಯಕಂಗಳ ವಿವರವನರಿತು ಪಾಪ ಪುಣ್ಯ ಬಹುಕಾಯಕಮಂ ಕಂಡು, ತನ್ನ ವಂಶದ ಸ್ವಜಾತಿಯಂ ಬಿಟ್ಟು, ಶಿವಭಕ್ತರೆ ಬಂಧುಗಳಾಗಿ ಶಿವಾಧಿಕ್ಯವೆ ದಿಕ್ಕಾಗಿ ಕೊಂಡು ಗಮನಕ್ಕೆ ಕಾಯಲಿಂಗ ಮನವರಿಕೆಯಾಗಿ, ತ್ರಿಕರಣ ಶುದ್ಧಾತ್ಮನಾಗಿ, ಅಂಗಕ್ಕೆ ಆಚಾರ, ಮನಕ್ಕೆ ಅರಿವು, ಅರಿವಿಂಗೆ ಜ್ಞಾನ ನಿರ್ಧಾರವಾಗಿ ಕರಿಗೊಂಡುದೆ ವ್ರತ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಎಡೆದೆರಪಿಲ್ಲದ ನೇಮ.
--------------
ಅಕ್ಕಮ್ಮ
ಚಂದ್ರ ಸೂರ್ಯಾದಿಗಳು ಭವಿಯೆಂದಲ್ಲಿ ಅವೆರಡರ ಸಂಸಂಧಿಯ ಜಗದಲ್ಲಿ ಇರಬಹುದೆ? ಇದರಂದವ ಹೇಳಿರಯ್ಯಾ. ತಾ ಕೊಂಡ ನೇಮದ ಸಂದೇಹವಲ್ಲದೆ, ಅವರಂದದ ಇರವ ವಿಚಾರಿಸಲಿಲ್ಲ, ಅದೆಂತೆಂದದಡೆ : ತಾನಿಹುದಕ್ಕೆ ಮುನ್ನವೆ ಅವು ಪುಟ್ಟಿದವಾಗಿ, ನೀರು ನೆಲ ಆರೈದು ಬೆಳೆವ ದ್ರವ್ಯಂಗಳೆಲ್ಲವು ಆಧಾರ ಆರೈಕೆ. ಇಂತೀ ಗುಣವ ವಾರಿಧಿಯನೀಜುವನಂತೆ ತನ್ನಿರವೆ ತನ್ನ ಸಂದೇಹಕ್ಕೆ ಒಡಲಾಗಿ ನಿಂದುದೆ ತನ್ನ ನೇಮ. ತನ್ನ ಹಿಂಗಿದುದೆ ಜಗದೊಳಗು ಎಂಬುದನರಿದ ಮತ್ತೆ ಸಂದೇಹದ ವ್ರತವ ಸಂದೇಹಕ್ಕಿಕ್ಕಲಿಲ್ಲ. ತಾ ಕೊಂಡುದೆ ವ್ರತ, ಮನನಿಂದುದೆ ನೇಮ. ಇದಕ್ಕೆ ಸಂದೇಹವೆಂದು ಒಂದನೂ ಕೇಳಲಿಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಚಿನ್ನ ಒಡೆದಡೆ ಕರಗಿದಡೆ ರೂಪಪ್ಪುದಲ್ಲದೆ, ಮುತ್ತು ಒಡೆದು ಕರಗಿದಡೆ ರೂಪಪ್ಪುದೆ? ಮತ್ರ್ಯದ ಮನುಜ ತಪ್ಪಿದರೊಪ್ಪಬೇಕಲ್ಲದೆ, ಸದ್ಭಕ್ತ ಸದೈವ ತಪ್ಪಿದಡೆ ಒಪ್ಪಬಹುದೆ? ಆಚಾರಕ್ಕು ಅಪಮಾನಕ್ಕು ಅಂಗವೆ ಕಡೆಯಿಲ್ಲದೆ, ಬೇರೊಂದಂಗವ ಮಾಡಿ ಗುರುಲಿಂಗಜಂಗಮದ ಮುಖದಿಂದ ಶುದ್ಧವೆಂದು ತಂದು ಕೂಡಿಕೊಳಬಹುದೆ? ಲಿಂಗಬಾಹ್ಯನ, ಆಚಾರಭ್ರಷ್ಟನ, ಜಂಗಮವ ಕೊಂದವನ ಇವರುವ ಕಂಡು ನುಡಿದಡೆ ಕುಂಭೀಪಾತಕಕ್ಕೆ ಒಳಗು ಇದಕ್ಕೆ ಸಂದೇಹವಿಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಆಣತಿ.
--------------
ಅಕ್ಕಮ್ಮ