ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಡೆಯರು ಭಕ್ತರಿಗೆ ಸಲುವ ಸಹಪ:ಕ್ತಿಯಲ್ಲಿ ಗುರುವೆಂದು, ಅರಸೆಂದು, ತನ್ನ ಪರಿಸ್ಪಂದದವರೆಂದು, ರಸದ್ರವ್ಯವನೆಸಕದಿಂದ ನೀಡಿದೊಡೆ, ಅದ ನಾನರಿದು ಕೈಕೊಂಡಡೆ ಕಿಸುಕುಳದ ಪಾಕುಳಕಿಚ್ಚೈಸಿದಂತೆ ; ಅಲ್ಪ ಜಿಹ್ವಾಲಂಪಟಕ್ಕೆ ಸಿಕ್ಕಿದ ಮತ್ಸ್ಯ ಬಂಧನದಿ ಸತ್ತಂತೆ. ಇದನರಿದು ಭಕ್ತನಾಗಲಿ, ಗುರುವಾಗಲಿ, ಜಂಗಮವಾಗಲಿ, ಶಿವಗಣಪ:ಕ್ತಿಯ ನಡುವೆ ತಾ ಕುಳ್ಳಿರ್ದು ಮಿಗಿಲಾಗಿ ಷಡುರಸಾನ್ನವಾದಿಯಾದ ಸುಪದಾರ್ಥಂಗಳನಿಕ್ಕಿಸಿಕೊಂಡು ತಿಂದನಾದಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
--------------
ಅಕ್ಕಮ್ಮ
ಒಡೆಯರ ಕಟ್ಟಳೆಯೆಂದು ಮಾಡಿಕೊಂಡು ಆಡುವ ತನಕ ಅಂಗಳ ಬಾಗಿಲಲ್ಲಿ ಗುಡಿಗೂರಿ ಎನಬಹುದೆ? ಒಡೆಯರಂತೆ, ಮನೆಗೊಡೆಯನಂತೆ ಗಡಿತಡಿಯಲ್ಲಿ ಕಾಯಲುಂಟೆ? ಅದು ತುಡುಗುಣಿಕಾರರ ನೇಮ. ಒಡೆಯರತ್ತ ನಾವಿತ್ತ. ಗಡಿಗೆಯ ತುಪ್ಪ, ಹೆಡಿಗೆಯ ಮೃಷ್ಟಾನ್ನತುಡುಗುಣಿಯಂತೆ ತಿಂಬವಂಗೆ ಮತ್ತೊಡೆಯರ ಕಟ್ಟಳೆಯೆ? ಇಂತೀ ಕಡುಕರ ಕಂಡು ಅಂಜಿದೆಯಲ್ಲಾ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ?
--------------
ಅಕ್ಕಮ್ಮ
ಒಂದ ವಿಶೇಷವೆಂದು ಹಿಡಿದು, ಮತ್ತೊಂದಧಮವ ಮುಟ್ಟದಿದ್ದುದೆ ಭರಿತಾರ್ಪಣ. ಪರಸ್ತ್ರೀ ಪರಧನಂಗಳಲ್ಲಿ ದುರ್ವಿಕಾರ ದುಶ್ಚರಿತ್ರದಲ್ಲಿ ಒಡಗೂಡದಿಪ್ಪುದೆ ಭರಿತಾರ್ಪಣ. ಮರವೆಯಲ್ಲಿ ಬಂದ ದ್ರವ್ಯವ ತಾನರಿದು ಮುಟ್ಟಿದಲ್ಲಿಯೆ ಭರಿತಾರ್ಪಣ. ತನ್ನ ವ್ರತ ನೇಮ ನಿತ್ಯಕೃತ್ಯಕ್ಕೆ ಅಪರಾಧ ಬಂದಲ್ಲಿ ಸಕಲವ ನೇತಿಗಳೆದು, ಆ ವ್ರತ ನೇಮದ ಆಳಿ ತಪ್ಪದೆ ಸಲೆ ಸಂದುದು ಭರಿತಾರ್ಪಣ. ಹೀಗಲ್ಲದೆ ಓಗರ ಮೇಲೋಗರದ ಲಾಗಿಗೆ ಭರಿತಾರ್ಪಣವುಂಟೆಂದು ನುಡಿವುದು ಸಹಜವೆ ! ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಭರಿತಾರ್ಪಣದ ಸಹಜದ ಭಾವ.
--------------
ಅಕ್ಕಮ್ಮ
ಒಡೆಯರ ಸಮಯಾಚಾರವೆಂದ ಮತ್ತೆ ಹಲ್ಲುಕಡ್ಡಿ, ದರ್ಪಣ, ನಖಚಣ, ಮೆಟ್ಟಡಿ ಮುಂತಾದ ತಾ ಮುಟ್ಟುವ, ತಾ ತಟ್ಟುವ, ಸೋಂಕುವ, ತನ್ನಯ ಸಂದೇಹ ಮುಂತಾದ ದಿಟ ಮೊದಲು ಹುಸಿ ಕಡೆಯಾದ ದ್ರವ್ಯವೆಲ್ಲವನು ಕೊಟ್ಟು ತಾ ಕೊಳ್ಳದಿದ್ದನಾಯಿತ್ತಾದಡೆ ಬೈವುದಕ್ಕೆ ಬಾಯಿ ತೆರಪಿಲ್ಲ ; ಹೊಯ್ವದಕ್ಕೆ ಕೈಗೆ ಅಡಹಿಲ್ಲ. ನೋಡುವ ಕಣ್ಣನೆ ಮುಚ್ಚುವೆ, ಈ ನೋವನಿನ್ನಾರಿಗೂ ಹೇಳೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ, ನೀನೇ ಬಲ್ಲೆ.
--------------
ಅಕ್ಕಮ್ಮ