ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ ಕಾರುಕ ಸಮ್ಮಗಾರಗೆ ಆವ ಭಾವದ ವ್ರತವ ಮಾಡಲಿಕ್ಕೆ, ಅವ ಭಾವಿಸಿ ನಡೆಯಬಲ್ಲನೆ? ಕಾಗೆಗೆ ರಸಾನ್ನ ಮುಂದಿರಲಿಕೆ, ಹರಿವ ಕೀಟಕಂಗೆ ಸರಿವುದಲ್ಲದೆ ಮತ್ತೆ ಅದು ಸವಿಯಸಾರವ ಬಲ್ಲುದೆ? ಇಂತೀ ಇವು ತಮ್ಮ ಜಾತಿಯ ಲಕ್ಷಣವ ಕೊಂದಡೂ ಬಿಡವಾಗಿ, ವ್ರತಾಚಾರವ ಸಂಬಂದ್ಥಿಸುವಲ್ಲಿ ಶರಣರೆಲ್ಲರ ಕೂಡಿ, ಈ ಗುಣ ಅಹುದು ಅಲ್ಲ ಎಂದು ಹೇಳಿ, ಜಾತಿವರ್ಗದ ಗುಣವ ನೀಕರಿಸಿ ಬಿಡಿಸಿ, ಸುಜಾತಿಯ ಅರಸಿನ ಪಟ್ಟವಂ ಕಟ್ಟಿ ಶರಣರೆಲ್ಲರು ನಿಹಿತಾಚಾರದಲ್ಲಿ ಸಹಭೋಜನವಂ ಮಾಡಿ ಇಂತೀ ಗುಣನಿಹಿತವ್ರತ ಅಜಾತನ ಒಲುಮೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಿಹಿತದ ಶೀಲದ ನೇಮ.
--------------
ಅಕ್ಕಮ್ಮ
ಕಾಮಿಗೆ ವ್ರತವುಂಟೆ, ನಿಃಕಾಮಿಗಲ್ಲದೆ? ಕ್ರೋದ್ಥಿಗೆ ವ್ರತವುಂಟೆ, ಸಮಾಧಾನಿಗಲ್ಲದೆ? ಲೋಬ್ಥಿಗೆ ವ್ರತವುಂಟೆ, ಉದಾರಿಗಲ್ಲದೆ? ಇಂತೀ ಕ್ಷಮೆ ದಮೆ ಶಾಂತಿ ಸಮಾಧಾನಸಂಪದ ಮುಂತಾಗಿ ಗುರುಲಿಂಗಜಂಗಮಕ್ಕೆ, ತನುಮನಧನದಲ್ಲಿ ನಿರತನಾಗಿ, ತನ್ನ ತ್ರಾಣಕ್ಕೆ ಇದ್ದಂತೆ ಚಿತ್ತಶುದ್ಧಾತ್ಮನಾಗಿ ಇಪ್ಪ ಮಹಾಭಕ್ತನೆ ಕೃತ್ಯವಿಲ್ಲದ ಶರಣ. ಆತನ ಪಾದ ಎನ್ನ ಹೃದಯದಲ್ಲಿ ಅಚ್ಚೊತ್ತಿದಂತಿಪ್ಪುದು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರುವ ಎತ್ತುಕಟ್ಟುವ ಗೊತ್ತಾಗಿಪ್ಪನು.
--------------
ಅಕ್ಕಮ್ಮ
ಕೂಪಚಿಲುಮೆ ಬಹುಜಲಂಗಳಲ್ಲಿ ಸ್ವೀಕರಿಸಿಕೊಂಬುದು ಅದೇತರ ಶೀಲ ತನು ಕರಗದೆ, ಮನ ಮುಟ್ಟದೆ, ಆಗಿಗೆ ಮುಯ್ಯಾಂತು ಚೇಗಿಗೆ ಹಲುಬುತ್ತ, ಸುಖದುಃಖವೆಂಬ ಉಭಯವರಿಗಾಣದೆ, ಅಂದಂದಿಗೆ ಆಯು ಸಂದಿತ್ತೆಂದಿರಬೇಕು. ಆ ಗುಣ ಶಿವಲಿಂಗ ಖಂಡಿತನೇಮ, ಈ ಸಂಗವೆ ಎನಗೆ ಸುಖ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಕೂಟ.
--------------
ಅಕ್ಕಮ್ಮ
ಕೆಯಿಗೆ ಬೆಚ್ಚು ಬೆದರ ಕಟ್ಟುವಲ್ಲಿ ಆ ಲೆಪ್ಪಕ್ಕೆ ಇಷ್ಟಲಿಂಗ, ರುದ್ರಾಕ್ಷಿ, ಭಸಿತಪಟ್ಟವ ಕಟ್ಟಿ, ಎನ್ನ ಕೆಯ್ಯ ತಪ್ಪಲಲ್ಲಿ ಕಾಷ್ಠವ ನೆಟ್ಟು ಕಟ್ಟಿದ ಮತ್ತೆ, ವಿಹಂಗಕುಲ ಮೃಗಜಾತಿ ಮುಟ್ಟಲಿಲ್ಲ. ಮೀರಿಬಂದು ಮುಟ್ಟಿಹೆನೆಂದಡೆ ಮುಟ್ಟುವುದಕ್ಕೆ ಮುನ್ನವೆ ಅಟ್ಟಿ ಅದ್ದರಿಸಿ ಕುಟ್ಟಿ ಓಡಿಸುವವು. ಅದು ತೃಣದ ಲೆಪ್ಪದ ಬಲಿಕೆಯೊ? ತನ್ನ ಚಿತ್ತದ ಬಲಿಕೆಯೊ? ಅದು ಎನ್ನ ನಿನ್ನ ದೃಷ್ಟದ ಭಾವ. ಅದು ಎನ್ನ ಸ್ವತಂತ್ರವಲ್ಲ. ಅದು ನಿಮ್ಮಯ ಭಾವ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ.
--------------
ಅಕ್ಕಮ್ಮ
ಕೀಟಕ ವಿಹಂಗ ಮೊದಲಾದ ಆವ ಜೀವವು ಮುಟ್ಟಿದ ಫಲಕುಸುಮ ದ್ರವ್ಯಂಗಳ ಮುಟ್ಟದೆ, ಸಂದೇಹವಿದ್ದಲ್ಲಿ ಒಪ್ಪದೆ, ತಾ ಮಾಡಿಕೊಂಡ ಕೃತ್ಯಕ್ಕೆ ಆರನು ಆರೈಕೆಗೊಳ್ಳದೆ, ತಾ ತಪ್ಪಿದಲ್ಲಿ, ತಪ್ಪನೊಳಗಿಟ್ಟುಕೊಳಬೇಕೆಂದು, ಭಕ್ತರು ಜಂಗಮದ ಬಾಗಿಲಕಾಯದೆ ತಪ್ಪಿದಲ್ಲಿಯೆ ನಿಶ್ಚೈಸಿಕೊಂಡು ಮರ್ತ್ಯದ ಕಟ್ಟಳೆ ತಾನೆ ಎಂಬುದು ಕಟ್ಟಾಚಾರಿಯ ನೇಮ. ಇದು ನಿಷ್ಠೆವಂತರಿಗಿಕ್ಕಿದ ಗೊತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ.
--------------
ಅಕ್ಕಮ್ಮ
ಕೆರೆ ಪೂದೋಟ ಅರವಟ್ಟಿಗೆ ಬಾವಿ ವಿವಾಹ ಮುಂತಾದ ಧರ್ಮಂಗಳ ಕಟ್ಟಿಹೆವೆಂದು ನೇಮದಿಂದ ತಿರುಗುವ ಶೀಲ ಅದಾರಿಗೆ ಯೋಗ್ಯ? ಸರಿಹುದುಗಿನ ಸೂಳೆ ಸೀರೆಯನುಟ್ಟಂತೆ ಅದಾರಿಗೆ ಸುಖದುಃಖವೆಂಬುದ ನೀನೆ ಅರಿ. ಸರಿ ಹುದುಗಿನ ಧರ್ಮವುಂಟೆ? ಅರಿಕೆಯ ಒಡವೆಯ ಊರೆಲ್ಲಕ್ಕೆ ತಂದಿಕ್ಕಿ, ನಾ ಮಾಡಿದೆನೆಂದಡೆ ಇದಾರು ಮೆಚ್ಚುವರು? ಆ ಮಾಟವನಾರಯ್ಯಲಿಲ್ಲ, ಅದು ಸ್ವಕಾರ್ಯಕ್ಕೆ ಏರಿದ ಪಥ. ಇಂತೀ ವ್ರತ ನೇಮ ಶೀಲವನರಿಯಬೇಕು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಧರ್ಮಜ್ಞನಾಗಿ ವ್ರತವನಂಗೀಕರಿಸಬೇಕು.
--------------
ಅಕ್ಕಮ್ಮ
ಕಂಗಳ ಮುಂದೆ ಕಂಡಂತೆ ಕಾಣಬಹುದೆ? ಮನ ನೆನೆದಂತೆ ಆಡಬಹುದೆ? ಕಂಡಕಂಡವರಲ್ಲಿ ಸಂಗವ ಮಾಡಬಹುದೆ? ಅದು ಸ್ವಾನುಭಾವರಿಗೆ ಸಲ್ಲದ ಮತ. ಶಿವಪೂಜಕರಲ್ಲಿ ಶಿವಧ್ಯಾನಮೂರ್ತಿಗಳಲ್ಲಿ, ಶಿವಕಥಾಪ್ರಸಂಗಿಗಳಲ್ಲಿ, ಶಿವಾಧಿಕ್ಯವಲ್ಲದೆ ಪೆರತೊಂದನರಿಯದವರಲ್ಲಿ ತನು ಕರಗಿ, ಮನ ಸಲೆಸಂದು, ತ್ರಿವಿಧಪ್ರಸಾದದಲ್ಲಿ ಮಹಾಪ್ರಸಾದಿಯಾಗಿ ನಿಂದು ವ್ರತಾಂಗಕ್ಕೆ ಅಭಂಗ ಅವಿರಳನಾಗಿಪ್ಪ ಸದ್ಭಕ್ತನಂಗವೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಸುಖ.
--------------
ಅಕ್ಕಮ್ಮ
ಕೊಡುವದು ಬೇಡ ಎಂದಲ್ಲಿ ಸರ್ವರ ಒಡಗೂಡಿ ಕಾಡುವುದು. ನಿಂದಲ್ಲಿ ಮತ್ತಾರಾಗುಳಯದ ಬಾಗಿಲ ಕಾಯ್ದಲ್ಲಿ ಹೆಚ್ಚು ಕುಂದೆಂಬ ಆತ್ಮನಭೀಷ್ಟಿಕೆಯ ಬಿಟ್ಟಲ್ಲಿ ಗೆಲ್ಲ ಸೋಲಕ್ಕೆ ಕಲ್ಲೆದೆಯಾಗದಲ್ಲಿ ಇಂತಿವನೆಲ್ಲವನರಿತು ಮರೆದಲ್ಲಿ ನಿಜ ಬಲ್ಲವನ ಭರಿತಾರ್ಪಣ. ಹೀಗಲ್ಲದೆ ಎಲ್ಲರ ಕಂಡು ಅವರ ಸೊಲ್ಲಿಗೆ ಸೋತು ಅಲ್ಲಿಗಲ್ಲಿಗೆ ತಕ್ಕವನಹ ಕಳ್ಳನ ಭರಿತಾರ್ಪಣ ದ್ರವ್ಯದಲ್ಲಿಯೆ ಉಳಿಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಗೆ ದೂರಸ್ಥನಾದ.
--------------
ಅಕ್ಕಮ್ಮ
ಕಾಯಕಕೃತ್ಯ, ನೇಮಕೃತ್ಯ, ಆಚರಣೆಕೃತ್ಯ, ದಾಸೋಹಕೃತ್ಯ, ಭಾವಕೃತ್ಯ, ಸೀಮೆಕೃತ್ಯ, ಯಾಚಕಕೃತ್ಯ, ಗಮನಕೃತ್ಯ, ಲಿಂಗಕೃತ್ಯ, ಜಂಗಮಕೃತ್ಯ, ಪಾದೋದಕಕೃತ್ವ, ಪ್ರಸಾದಕೃತ್ಯ, ಕೊಡೆಕೊಳ್ಳೆನೆಂಬ ಉಭಯಕೃತ್ಯ, ಮರೆದರಿಯೆ ಅರಿದು ಮರೆಯೆನೆಂಬ ಅರಿವುಕೃತ್ಯ ತನ್ನ ಕೃತ್ಯಕ್ಕೆ ಆವುದು ನಿಷೇಧವೆಂದು ಬಿಟ್ಟಲ್ಲಿ, ರಾಜ ಹೇಳಿದನೆಂದು, ಗುರುವಾಜ್ಞೆಯ ಮೀರಿದಿರೆಂದು, ಶರಣರ ಸಮೂಹ ಹೇಳಿದರೆಂದು ಮಿಕ್ಕಾದ ತನ್ನ ಪರಿಸ್ಪಂದಿಗಳರಿದರೆಂದು ಇಂತೀ ಗುಣಕ್ಕೆ ಅನುಸರಣೆಯ ಮಾಡಿದೆನಾದಡೆ ಎನಗದೆ ಭಂಗ. ಇದಕ್ಕೆ ನೀ ಒಪ್ಪಿದಡೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀ ತಪ್ಪಿದೆಯಾದಡೆ ನಿನಗೆ ಎಕ್ಕಲನರಕ.
--------------
ಅಕ್ಕಮ್ಮ
ಕೂಪಜಲವ ಬಳಸುವನ್ನಕ್ಕ, ಲವಣಬಳಕೆ ಸಾರೋಪಿತ ದ್ರವ್ಯವನ್ನರಿಯಬೇಕು. ಸರ್ವಸಂಗ್ರಹಗಳಲ್ಲಿ ಸೌಕರ್ಯವ ತಿಳಿಯಬೇಕು. ಪರ್ಣಫಲಂಗಳಲ್ಲಿ ಪುನರಪಿ ಪ್ರಕ್ಷಾಲನವಮಾಡಬೇಕು. ಕೂಪೋದಕವ ತ್ರಿಪಾವಡೆಯಲ್ಲಿ ಸೋದಿಸಬೇಕು. ಇಂತಿವು ಸಂತೋಷ: ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಅರ್ಪಿತ.
--------------
ಅಕ್ಕಮ್ಮ