ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವೇದಾಗಮಂಗಳ ದ್ವೈತಾದ್ವೈತದ ಬಗೆಗೆ ನಿಲುಕುವನಲ್ಲ, ಅತಕ್ರ್ಯನು ಅಖಿಲಾತೀತನು ಚರಾಚರಕ್ಕೆ ಸಿಲುಕುವನಲ್ಲ. ಅತ್ಯತಿಷ್ಠದ್ದಶಾಂಗುಲನು, ಅಹಂಕಾರವೈದದ ಅನುಪಮನು. ಸ್ಥಾವರಜಂಗಮವಲ್ಲದ ಭರಿತನು. ಸರ್ವಜ್ಞ ಸರ್ವಕರ್ತೃ ಸೌರಾಷ್ಟ್ರ ಸೋಮೇಶ್ವರನಲ್ಲಿ ಅವಿರಳನಾದ ಶರಣ.
--------------
ಆದಯ್ಯ
ವೇದಂಗಳ ಹಿಂದೆ ಹರಿಯದಿರು ಹರಿಯದಿರು. ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು. ಪುರಾಣಂಗಳ ಹಿಂದೆ ಬಳಸದಿರು ಬಳಸದಿರು. ಆಗಮಂಗಳ ಹಿಂದೆ ತೊಳಲದಿರು ತೊಳಲದಿರು. ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು.
--------------
ಆದಯ್ಯ
ವೇದಾಗಮಂಗಳು ಹೋದ ಸರಣಿಯಲ್ಲಿ ಹೋದರಲ್ಲದೆ ದ್ವೈತಾದ್ವೈತಕ್ಕೆ ನಿಲುಕದ ನಿಜವ ಕಂಡವರಾರನೂ ಕಾಣೆ. ವಾಣಿಯ ಹಂಗಿನಲ್ಲಿ ಉಲಿದುಲಿದು ಹೋದರಲ್ಲದೆ ಉಲುಹಡಗಿದ ನಿಲವ ಕಂಡವರಾರನೂ ಕಾಣೆ. ತನು ಕರಣ ಭುವನ ಭೋಗಂಗಳ ಕಂಡಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗದುಳುಮೆಯ ಕಂಡು ಸುಖಿಯಾದವರಾರನೂ ಕಾಣೆ.
--------------
ಆದಯ್ಯ
ವೈದಿಕರಪ್ಪ ವೇದವಿತ್ತುಗಳೊಂದು ಕೋಟಿಗೆ ಅನ್ನವನಿಕ್ಕಿದ ಫಲಕ್ಕೆ ಕೋಟಿ ಮಿಗಿಲು ಶಿವಶರಣಂಗೆ ಒಂದು ಭಿಕ್ಷವನಿಕ್ಕಿದ ಫಲ. ಕೋಟಿ ಯಜ್ಞ ಕೋಟಿ ಕನ್ಯಾದಾನದ ಫಲಕ್ಕೆ ಮಿಗಿಲು ಒಬ್ಬ ಭಸ್ಮಾಂಗಿಯ ಒಂದು ವೇಳೆಯ ತೃಪ್ತಿ. ಅದೆಂತೆಂದೊಡೆ: ಕ್ಷೀರಕುಂಭಸಹಸ್ರೇಣ ಘೃತಕುಂಭಶತೇನ ಚ ಭಸ್ಮಧಾರಿಣಿನಸುಫಭಿಕ್ಷಾತಃ ಕೋಟಿಯಜ್ಞ ಫಲಂ ಭವೇತ್ ಎಂದುದಾಗಿ, ಚತುರ್ವೇದಿಗಳಿಗೆ ಮೃಷ್ಟಾನ್ನವನಿಕ್ಕಿ ಅಕ್ಷಪಾದಂಗೆ ಗೋವೇಧೆಯಾಯಿತ್ತು. ಒಬ್ಬ ಶಿವಗಣನಾಥಂಗೆ ಚೋಳ ದಾಸರು ಉಣಲುಡಲಿತ್ತು, ಯೊಡನೆ ಹೊಮ್ಮಳೆ ತವನಿಧಿಯ ಪಡೆದರು. ಇದು ಕಾರಣ, ನೆಮ್ಮುಗೆವಿಡಿದು ಮಾಡುವ ಭಕ್ತಂಗಿದೆ ಮಾಟವಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ವ್ಯಾಪಕಾಕ್ಷರದಲ್ಲಿ ನಾಲ್ಕಕ್ಷರ, ಸ್ಪರ್ಶನಾಕ್ಷರದಲ್ಲಿ ಏಕಾಕ್ಷರ, ಇಂತೀ ಪಂಚಾಕ್ಷರವೆ ಪಂಚಬ್ರಹ್ಮಸ್ವರೂಪವು ಶಿವಜ್ಞಾನಕ್ಕೆ ಮೂಲವೆಂದರಿತು, ಮೂಲಪಂಚಾಕ್ಷರ, ಸ್ಥೂಲಪಂಚಾಕ್ಷರ, ಸೂಕ್ಷ್ಮಪಂಚಾಕ್ಷರ ಮಾಯಾಖ್ಯಪಂಚಾಕ್ಷರ, ಪ್ರಸಾದಪಂಚಾಕ್ಷರವೆಂಬ ಪಂಚಪಂಚಾಕ್ಷರದ ಸ್ವರೂಪನರಿತು ಪಂಚಾಕ್ಷರವ ಜಪಿಸಲು ಸೌರಾಷ್ಟ್ರ ಸೋಮೇಶ್ವರಲಿಂಗವಪ್ಪುದು ತಪ್ಪದಯ್ಯಾ.
--------------
ಆದಯ್ಯ
ವೇದವಿತ್ತುಗಳು ಅಗ್ನಿಪುರುಷನೆ ದೇವರೆಂಬರಯ್ಯಾ. ಶಾಸ್ತ್ರವಿತ್ತುಗಳು ಪಾಷಾಣವನೆ ದೇವರೆಂಬರಯ್ಯಾ. ಆತ್ಮವಿತ್ತುಗಳು ಆತ್ಮನೆ ದೇವರೆಂಬರಯ್ಯಾ. ಶಬ್ದವಿತ್ತುಗಳು ಸಮಯಂಗಳನೆ ದೇವರೆಂಬರಯ್ಯಾ ಇವರೆಲ್ಲರೂ ನಮ್ಮ ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜವನರಿಯದೆ ಜವನ ಜಾಡ್ಯಂಗಳಿಂ ಭವಭಾರಿಗಳಾದರಯ್ಯಾ.
--------------
ಆದಯ್ಯ
ವೀರಶೈವ, ಶುದ್ಧಶೈವವೆಂಬುಭಯ ಪಕ್ಷದ ನಿರ್ಣಯ ನಿಷ್ಪತ್ತಿಯೆಂತೆಂದಡೆ: ಮಲ ಮಾಯಾ ಮಲಿನವನು ಶ್ರೀಗುರು ತನ್ನ ಕೃಪಾವಲೋಕನದಿಂದದನಳಿದು, ನಿರ್ಮಲನಾದ ಶಿಷ್ಯನ ಉತ್ತಮಾಂಗದಲ್ಲಿಹ ಪರಮಚಿತ್ಕಳೆಯನು ಹಸ್ತಮಸ್ತಕಸಂಯೋಗದ ಬೆಡಗಿನಿಂದ ತೆಗೆದು, ಆ ಮಹಾಪರಮ ಕಳೆಯನು ಸ್ಥಲದಲ್ಲಿ ಕೂಡಿ, ಮಹಾಲಿಂಗವೆಂದು ನಾಮಕರಣಮಂ ಮಾಡಿ, ಶಿಷ್ಯನಂಗದ ಮೇಲೆ ಬಿಜಯಂಗೆಯಿಸಿ, ಕರ್ಣದ್ವಾರದಲ್ಲಿ ಪ್ರಾಣಂಗೆ ಆ ಮಹಾಲಿಂಗವ ಜಪಿಸುವ ಪ್ರಣವಪಂಚಾಕ್ಷರಿಯನು ಪ್ರವೇಶವಂ ಮಾಡಿ, ಅಂಗಪೀಠದಲ್ಲಿರಿಸಿ, ಅಭಿನ್ನಪ್ರಕಾಶವಾದ ಪೂಜೆಯ ಮಾಡಹೇಳಿದನು, ಇದೀಗ ವೀರಶೈವದ ಲಕ್ಷಣವೆಂದರಿವುದು. ಇನ್ನು ಶುದ್ಧಶೈವಂಗೆ ಗುರು ತನ್ನ ನಿರೀಕ್ಷಣ ಮಾತ್ರದಲ್ಲಿ ಅವನ ಶುದ್ಧಾಂಗನ ಮಾಡಿ, ಆತನ ಕರ್ಣದ್ವಾರದಲ್ಲಿ ಪಂಚಾಕ್ಷರಿಯನುಪದೇಶವಂ ಮಾಡಿ, ಸ್ಥಾವರಲಿಂಗಪೂಜಕನಾಗಿರೆಂದು ಲಿಂಗವನು ಕೊಟ್ಟು, ಭೂಪೀಠದಲ್ಲಿರಿಸಿ ಅರ್ಚನೆ ಪೂಜನೆಯ ಮಾಡೆಂದು ಹೇಳಿದನು. ಹೇಳಲಿಕ್ಕಾಗಿ ಶುದ್ಧಶೈವನೆ ಪೀಠದಲ್ಲಿರಿಸಿ ಭಿನ್ನಭಾವಿಯಾಗಿ ಅರ್ಚನೆ ಪೂಜೆನೆಯಂ ಮಾಡುವನು. ವೀರಶೈವನು ಅಂಗದ ಮೇಲೆ ಧರಿಸಿ ಅಭಿನ್ನಭಾವದಿಂದ ಅರ್ಚನೆ ಪೂಜನೆಯಂ ಮಾಡುವನು. ಶುದ್ಧಶೈವಂಗೆ ನೆನಹು, ವೀರಶೈವಂಗೆ ಸಂಗವೆಂತೆಂದಡೆ: ಅತ್ಯಂತ ಮನೋರಮಣನಪ್ಪಂತಹ ಪುರುಷನ ಒಲುಮೆಯಲ್ಲಿಯ ಸ್ತ್ರೀಗೆ ನೆನಹಿನ ಸುಖದಿಂದ ಸಂಗಸುಖವು ಅತ್ಯಧಿಕವಪ್ಪಂತೆ ಶುದ್ಧಶೈವದ ನೆನಹಿಂಗೂ ವೀರಶೈವದಲ್ಲಿಯ ಸಂಗಕ್ಕೂ ಇಷ್ಟಂತರ. ಆ ಲಿಂಗದಲ್ಲಿ ಶುದ್ಧಶೈವನ ನೆನಹು ನಿಷ್ಪತ್ತಿಯಾದಡೆ ಸಾರೂಪ್ಯನಹನು. ಆ ಲಿಂಗದಲ್ಲಿ ವೀರಶೈವನ ನೆನಹು ನಿಷ್ಪತ್ತಿಯಾದಡೆ ಸಾಯುಜ್ಯನಹನು ಅದು ಕಾರಣ, ಸ್ಥಾವರಲಿಂಗದ ಧ್ಯಾನಕ್ಕೂ ಪ್ರಾಣಲಿಂಗದ ಸಂಗಕ್ಕೂ ಇಷ್ಟಂತರ. ಸ್ಥಾವರಲಿಂಗದ ಧ್ಯಾನದಿಂದ ಸಾರೂಪ್ಯಪದವನೈದಿದ ತೆರನೆಂತೆಂದಡೆ: ಕೀಟನು ಭ್ರಮರಧ್ಯಾನದಿಂದ ಆ ಭ್ರಮರರೂಪಾದಂತೆ ಶೈವನು ಶಿವಧ್ಯಾನದಿಂದ ಶಿವನ ಸಾರೂಪ್ಯಪದವನೈದಿ ಇದಿರಿಟ್ಟು ಭಿನ್ನಪದದಲ್ಲಿರುತ್ತಿಹನು. ಮತ್ತಂ, ವೀರಶೈವನು ಜಂಗಮಾರ್ಚನೆಯಂ ಮಾಡಿ ಪ್ರಾಲಿಂಗಸಂಬಂಧದಿಂ ಸಾಯುಜ್ಯಪದವನೆಯ್ದಿದ ತೆರನೆಂತೆಂದಡೆ: ಅಗ್ನಿಯ ಸಂಗವ ಮಾಡಿದ ಕರ್ಪುರ ನಾಸ್ತಿಯಾದ ಹಾಂಗೆ, ಈತನು ಶಿವನಲ್ಲಿ ಸಾಯುಜ್ಯಪದವನೈಯ್ದಿ ರೂಪುನಾಸ್ತಿಯಾಗಿ ಶಿವನೆಯಹನು. ಇದು ಕಾರಣ ಶುದ್ಧಶೈವ ವೀರಶೈವದಂತರ ಮಹಾಂತರ, ಈ ಪ್ರಕಾರ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯವಿಡಿದ ಸ್ಥೂಲ ಸೂಕ್ಷ್ಮ ಕಾರಣ ತನುವಿನ ಸುಬುದ್ಧಿ ಸುಮನ ಸದ್ಭಾವವೆಂಬ ಹಸ್ತದಿಂ ಕರ್ಮ ಭಕ್ತಿ ಜ್ಞಾನ ತತ್ವದಿಂದೊದಗಿದ ಪದಾರ್ಥವ ಇಷ್ಟ ಪ್ರಾಣ ತೃಪ್ತಿಲಿಂಗಕ್ಕೆ ಕಾಯಾರ್ಪಣ ಕರಣಾರ್ಪಣ ಭಾವಾರ್ಪಣದಿಂದರ್ಪಿಸಿಕೊಂಬ ಪ್ರಸಾದ ಪಿಂಡೇಂದ್ರಿಯದ್ವಾರ ಸಂಚಲಕ್ಕವಧಿಯಾಯಿತ್ತು. ಪಿಂಡ ಬ್ರಹ್ಮಾಂಡವ ಮೀರಿ ತೋರುವ ಮಹಾಘನವೆ ನಿಜವಾಗಿ ನಿಜವಗಣಿತ ಅನುಪಮ ಅತಕ್ರ್ಯ ಅದ್ವಯಲಿಂಗಕ್ಕೆ ಅರ್ಪಿಸಲೊಂದಿಲ್ಲ, ಅನರ್ಪಿತ ಹೊದ್ದದಾಗಿ. ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು ಅಚ್ಚ ಪ್ರಸಾದಿಗಳು.
--------------
ಆದಯ್ಯ
ವೇದಶಾಸ್ತ್ರಪುರಾಣಂಗಳ ಗತಿಯಲ್ಲಿ ನಡೆದು ತಪ್ಪಿತ್ತೆಂಬವನಲ್ಲ ಶರಣ. ಲಿಂಗದ ಹೆಸರ ಹೇಳಿ ಫಲಪದವೆಂಟತೋರಿ ಮಾರುವನಲ್ಲ ಶರಣ. ಅಚೇತನವ ಚೇತನಿಸುವ ಪೂರ್ವಕರ್ಮವಿಡಿದು ಆಚರಿಸುವವನಲ್ಲ ಶರಣ. ಆರು ಮೂರಕ್ಕೆ ತಂದು, ತ್ರಿವಿಧವನೊಂದು ಮಾಡಿ ಬಿಚ್ಚಿ ಬೇರಿಲ್ಲದೆ ಬೆರಸಿ, ಒಂದಿಲ್ಲದಿರಬಲ್ಲನಾಗಿ ತರ್ಕಂಗಳಿಗೆ ಅತಕ್ರ್ಯ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ವಾಯುವಿನ ಹಸ್ತದಲ್ಲಿ ಸೊಡರಿದ್ದು ಬೆಳಗಬಲ್ಲುದೆ ? ಉರಿಯ ಮುಖದಲ್ಲಿ ಕರ್ಪುರವಿದ್ದು ಜೀವಿಸಬಲ್ಲುದೆ ? ಸೌರಾಷ್ಟ್ರ ಸೋಮೇಶ್ವರನ ಶರಣರ ಮುಂದೆ ಕರಣಮಥನ ಇಂದ್ರಿಯದಿಚ್ಛೆ ತನುಗುಣ ಮನಗುಣ ಪ್ರಾಣಗುಣಾದಿ ಗಳಿರಬಲ್ಲವೆ ?
--------------
ಆದಯ್ಯ