ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಂಬತ್ತುನಾಲ್ಕು ಲಕ್ಷ ಜೀವಜಂತುವಿನೊಳಗಿಪ್ಪ ಆತ್ಮನು ಏಕಾತ್ಮನೊ, ಹಲವಾತ್ಮನೊ, ಬಲ್ಲಡೆ ನೀವು ಹೇಳಿರೆ? ಅನಂತಕೋಟಿಬ್ರಹ್ಮಾಂಡದೊಳಗಿಪ್ಪ ಬ್ರಹ್ಮವು ಏಕಬ್ರಹ್ಮವೊ, ಅನಂತಬ್ರಹ್ಮವೊ, ಬಲ್ಲಡೆ ನೀವು ಹೇಳಿರೆ? ಬ್ರಹ್ಮಾಂಡವೊಂದು ತತ್ತಿ ಒಡೆದು, ಬಹಿರಾವರಣವಾದಲ್ಲಿ ಆ ಬ್ರಹ್ಮವು ಹೋಗಿ ಮತ್ತೊಂದು ಬ್ರಹ್ಮಾಂಡದಲ್ಲಿ ಹೊಕ್ಕುದ ಕಂಡಡೆ, ಕಂಡು ಬಲ್ಲವರು ನೀವು ಹೇಳಿರೆ. ಗಂಧರ್ವಪಟ್ಟಣದಲ್ಲಿ ಹುಟ್ಟುವ ಬಹು ಬಣ್ಣವ ಬಲ್ಲರೆ ಬಲ್ಲ. ಆಕಾಶಕ್ಕಡರಿದ ವಿಹಂಗನ ಮಾರ್ಗವ ಬಲ್ಲರೆ ಬಲ್ಲ. ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜವ ಬಲ್ಲರೆ ಬಲ್ಲ.
--------------
ಆದಯ್ಯ
ಎಂತೆಂತು ನೋಡಿದಡಂತಂತು ತೋರ್ಪುದೆಲ್ಲಾ ಜಡದೃಶ್ಯ, ಇದೆಲ್ಲಾ ಮಾಯೆ ಎಂದು. ಈ ಮಾಯೆಯ ಗಾಹುಕಂಡಿಯೊಳು ನುಸುಳುವ ಮಾಯಾವಾದಿಗಳಂತಲ್ಲ ನೋಡಾ. ಮಾಯೆ ಅನಿರ್ವಾಚ್ಯ, ಹೇಳಬಾರದ ಮಾಯೆಯೆಂದು ಹೇಳಿಕೊಂಬ ವೇದಾಂತಿಗಳಂತಲ್ಲ ನೋಡಾ, ಸಿದ್ಧಾಂತಿಗಳಪ್ಪ ಶಿವಶರಣರು. ಮಾಯೆಯ ಹುಸಿ ಮಾಡಿ ಸರ್ವಾಂಗಲಿಂಗ ಸೋಂಕಿನಲ್ಲಿ ಲೀಲೆಯಿಂ ಸುಳಿದಾಡುವ ನಿಜಲಿಂಗೈಕ್ಯರಿಗೆ ಮಿಕ್ಕಿನ ಭವಭಾರಿಗಳನೆಂತು ಸರಿಯೆಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಎಲ್ಲೆಲ್ಲಿ ಸುಳಿದಡೆ ಅಲ್ಲಲ್ಲಿ ಉಪಾಧಿ ಬಿಡದಯ್ಯಾ. ಈ ಉಪಾಧಿಗೆ ಅಪಾಯವನಿತ್ತು, ನಿರುಪಾಧಿಯಲ್ಲಿ ನಿಲಿಸಯ್ಯಾ. ಎಲ್ಲಾ ಬಯಕೆಯರತ ಬಟ್ಟೆಯ ತೋರಯ್ಯಾ. ಸಹಜ ಸಮ್ಯಕ್ ಪದವನಿತ್ತು ಸಲಹಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಎನ್ನಂಗ ಮನ ಪ್ರಾಣ ತ್ರಿವಿಧದಲ್ಲಿ ತ್ರಿವಿಧಲಿಂಗ ಸನ್ನಿಹಿತವೆಂತೆಂದಡೆ: ಗುರುಸಂಬಂಧದಿಂದಾದ ಇಷ್ಟಲಿಂಗ, ಲಿಂಗಸಂಬಂಧದಿಂದಾದ ಪ್ರಾಣಲಿಂಗ, ಜಂಗಮಸಂಬಂಧದಿಂದಾದ ತೃಪ್ತಿಲಿಂಗ. ತನುವಿನ ಕೈಯಲ್ಲಿ ಇಷ್ಟಲಿಂಗ, ಮನದ ಕೈಯಲ್ಲಿ ಪ್ರಾಣಲಿಂಗ, ಪ್ರಾಣನ ಕೈಯಲ್ಲಿ ತೃಪ್ತಿಲಿಂಗ. ಇಂತು ಅಂತರಂಗ ಬಹಿರಂಗ ಆತ್ಮಸಂಗದಿಂ ತೆರಹಿಲ್ಲದಿಪ್ಪ ಗುರುಲಿಂಗಜಂಗಮ ತ್ರಿವಿಧಸಾರಾಯಸಂಪತ್ತು ಸೌರಾಷ್ಟ್ರ ಸೋಮೇಶ್ವರಾ, ನೀನೊಲಿದ ಶರಣಂಗೆ.
--------------
ಆದಯ್ಯ
ಎಲುವಿನ ನಿಲವು ಅಮೇಧ್ಯದಾಗರ ಉಚ್ಛಿಷ್ಟದೊರತೆ ಮಿದುಳ ಸದನ ಕೀವು ನೆಣದೋವರಿ ಜಂತಿನ ಜನ್ಮಭೂಮಿ ಕ್ರಿಮಿಯ ಗೂಡು ಶುಕ್ಲದ ಜೀಗೊಳವೆ ರುಧಿರದ ತಾಣ ಅಡಗಿನಂತರಂಗ ತೊಗಲಬಹಿರಂಗ ರೋಮರಾಜಿಯ ಜಾಳಂದ್ರ ನರದ ನೇಣಜಂತ್ರ ಆಧಿವ್ಯಾಧಿಯ ವಾಸ ಇಂತಿದರೊಳಗೆ ನಿನ್ನ ಕುಲಗೋತ್ರಂಗಳಾವುವು ಹೇಳಾ ಎಲೆ ಮರುಳೆ. ಇದಕ್ಕೆ ಶ್ರುತಿ: ಅಂತ್ಯಜಾತಿದ್ರ್ವಿಜಾತಿರ್ವಾ ಏಕಯೋನಿಸಮುದ್ಭವಃ ಸಪ್ತಧಾತುಮಯಂ ಪಿಂಡಂ ವರ್ಣಾನಾಂ ಕಿಂ ಪ್ರಯೋಜನಂ ಇದನರಿತು ಷಡುಭ್ರಮೆಗಳಲ್ಲಿ ಭ್ರಮಿತರನೇನೆಂಬೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಎತ್ತನೇರಿ ಎತ್ತನರಸುವನಂತೆ, ತಾನಿರ್ದು ತನ್ನನರಸಿ ಕೇಳುವನಂತೆ, ಹೊತ್ತ ನಿಜವನರಿಯದತ್ತಲಿತ್ತ ಸುತ್ತಿ ಬಳಲುವನಂತೆ, ಹಿಡಿದಿರ್ದ ಲಿಂಗವ ಕಾಣದೆ ಮೂವಿಧಿಗಾಣ್ಬರನೇನೆಂಬೆನಯ್ಯಾ! ಅಜ್ಞಾನಬದ್ಧರನೆನಗೆ ತೋರದಿರಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಎಚ್ಚರು, ಕನಸು, ನಿದ್ರೆ, ಮೂರ್ಛೆ, ಅರಿವು, ಮರವೆ, ಸಂಕಲ್ಪ, ವಿಕಲ್ಪ, ಅಹಂಮಮತೆ ರೂಪು ರುಚಿಯನರಿವುತಿರ್ಪ ಮನವನರಿಯಬಹುದಲ್ಲದೆ ಅರಿವಿಂಗರಿವಾದಾತ್ಮನ ಅರಿಯಲುಂಟೆ? ಸರ್ವಸಾಕ್ಷಿಕನಾದ ಆತ್ಮನನರಿವೊಡೆ ಶ್ರುತಿಗತೀತ, ಬ್ರಹ್ಮವಿಷ್ಣುರುದ್ರಾದಿಗಳಿಗಳವಲ್ಲ, ಸೌರಾಷ್ಟ್ರ ಸೋಮೇಶ್ವರಲಿಂಗ ಅಸಾಧ್ಯವಾದ ಕಾರಣ.
--------------
ಆದಯ್ಯ