ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತಲೆಯಿಲ್ಲದ ಕಾಗೆ ನೆಲದಲ್ಲಿ ನಡೆಯಿತ್ತು. ಹುಲಿ ನಲಿದು ಗಿಲಿಗಿಸಿ ಗೆಜ್ಜೆಗಟ್ಟಿ ಒಲೆದಾಡಿತ್ತು. ಬಲುಹೆನಿಸಿದ ಕರಡಿ ಹಾಡಿ ಹರಸಿ ಬೆಳೆಯಿತ್ತು. ಕಾಳರಕ್ಕಸಿಯ ಮಗುವು ಚಂದ್ರಸೂರ್ಯರ ರಾಟಾಳದ ಹುರಿಯೊಳಗೆ ತಿರಿಗಿತ್ತು. ಕಳವಳಿಸುವ ಕಪಿಯ ಭೂತ ಹೊಡೆದು, ಚೋಳೂರೆ ಘಾಳಿಯೊಳು ಸಿಕ್ಕಿ, ಸೌರಾಷ್ಟ್ರ ಸೋಮೇಶ್ವರನ ಕಾಣದೆ ಕನ್ನಡಕದ ಕಣ್ಣಿನಂತೆ ಕಣ್ಣೆನಿಸಿ ಕಣ್ಣುಗೆಟ್ಟಿತ್ತು.
--------------
ಆದಯ್ಯ
ತನುಗುಣ ಮನಗುಣ ಪ್ರಾಣಗುಣಾದಿಗಳು ಹುಸಿಯೆಂಬ ಜ್ಞಾನವೇ ಮೂಲದ್ರವ್ಯವಾಗಿ `ಆತ್ಮಾವ್ಯಾರೇ ದ್ರಷ್ಟವ್ಯಃ ಶ್ರೋತವ್ಯೋ ಮಂತವ್ಯೋ ನಿದಿಧ್ಯಾಸಿತವ್ಯಃ ಇಂತೆಂಬ ಮಂತ್ರಾರ್ಥವ ಮೀರಿ ನಮೋ ಹಿರಣ್ಯಬಾಹವೇ ಹಿರಣ್ಯವರ್ಣಾಯ ಹಿರಣ್ಯರೂಪಾಯ ಹಿರಣ್ಯಪತಯೇ ಅಂಬಿಕಾಪತಯೇ ಉಮಾಪತಯೇ ಪಶುಪತಯೇ ನಮೋ ನಮಃ ಇಂತೆಂಬ ಶ್ರುತ್ಯರ್ಥವೇ ಪರಮಾರ್ಥವಾಗಿ ಸೌರಾಷ್ಟ್ರ ಸೋಮೇಶ್ವರಲಿಂಗದರ್ಥ ಸದರ್ಥವಾಯಿತ್ತು.
--------------
ಆದಯ್ಯ
ತನ್ನ ತಾನರಿವುದೇನೋ, ತನ್ನ ತಾ ಮರೆವುದು ಮತ್ತದೇನೋ? ಅರಿವುದು ಒಂದೆ, ತನ್ನನರಿಯಲುಂಟೆ? ಅರಿವು ತಾನೆ ತನ್ನ ಮರೆಯಲುಂಟೆ? ಆ ಅರಿವು ತಾನೆಂದರಿತಂಗೆ ಮೂರಿಲ್ಲ ಆರಿಲ್ಲ, ಎಂಟಿಲ್ಲ ಹದಿನೆಂಟಿಲ್ಲ. ಪುಸಿ ತನ್ನ ಭ್ರಾಮಕದಿಂದ ತೋರಿತ್ತು ನೋಡಾ. ಸೌರಾಷ್ಟ್ರ ಸೋಮೇಶ್ವರಲಿಂಗವಿಪ್ಪುದಕ್ಕೆ ಇದು ಚಿಹ್ನ.
--------------
ಆದಯ್ಯ
ತನುಗುಣವಳಿದಾತನಲ್ಲದೆ ಭಕ್ತನಲ್ಲ, ಮನೋಗುಣವಳಿದಾತನಲ್ಲದೆ ಮಹೇಶ್ವರನಲ್ಲ ಪ್ರಕೃತಿಗುಣರಹಿತನಾದಾತನಲ್ಲದೆ ಪ್ರಸಾದಿಯಲ್ಲ, ಪ್ರಾಣಗುಣವನಳಿದಾತನಲ್ಲದೆ ಪ್ರಾಣಲಿಂಗಿಯಲ್ಲ, ಶಬ್ದದುದ್ದೇಶವಳಿದಾತನಲ್ಲದೆ ಶರಣನಲ್ಲ, ಆತ್ಮನ ನೆಲೆಯನರಿದಾತನಲ್ಲದೆ ಐಕ್ಯನಲ್ಲ. ಇಂತೀ ಷಡಂಗಕ್ಕೆ ಅತೀತವಾದಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತನಲ್ಲ.
--------------
ಆದಯ್ಯ
ತಿಳಿದ ತಿಳಿಗೊಳದ ತಳಿತ ತಾವರೆಯರಳ ತಂಡುಲದ ರುಚಿಯ ಕಳಹಂಸೆ ಬಯಸುವಂತೆ, ಸುಧಾಕಿರಣನಿಂ ಬೆಳಗಿದ ಬೆಳುದಿಂಗಳ ರುಚಿಯ ಚಕೋರ ಬಯಸುವಂತೆ ಆನು ನಿಮ್ಮ ಶರಣರ ಬರವ ಹಾರಿ ಹಂಬಲಿಸುತ್ತಿದ್ದೇನೆ. ಕರುಣಿಸಯ್ಯಾ, ಎಲೆ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಆದಯ್ಯ
ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ, ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ, ಜ್ಞಾನದಲ್ಲಿ ಪರಮಾನಂದವೆಡೆಗೊಂಡ ಬಳಿಕ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೆ.
--------------
ಆದಯ್ಯ
ತಮೋಗುಣವೆಂಬ ಮಯಣದಲ್ಲಿ ರಜೋಗುಣವೆಂಬ ರಜವನೆತ್ತಿ ಸತ್ವಗುಣವೆಂಬ ಹಸ್ತದಿಂ ಪಿಡಿದು ಬೋಧವೆಂಬ ನೇತ್ರದಿಂ ಕಂಡು ಮಾಯಾ ಜೀವರ ಎರಡೊರೆಗೆ ಸರಿಯೆಂದು ಕಳೆದು ತ್ರಿವಿಧಾಹಂಕಾರದಲ್ಲಿಯ ತಾಮಸಾಹಂಕಾರವಪ್ಪ ಮಯಣವ ಶಿವಜ್ಞಾನದಿಂ ಕರಗಿಸಿ, ರಾಜಸಾಹಂಕಾರವಪ್ಪ ರಜವ ತೆಗೆದು, ಸಾತ್ವಿಕದಲ್ಲಿ ನಿಂದ ದ್ರವ್ಯವ ಸೌರಾಷ್ಟ್ರ ಸೋಮೇಶ್ವರಂಗಿತ್ತು, ಮೂಲಾಹಂಕಾರ ನಷ್ಟವಾಯಿತ್ತು.
--------------
ಆದಯ್ಯ
ತನು ಮಾಯೆ, ತನುವಿಂಗೆ ಮನ ಮಾಯೆ, ಮನಕ್ಕೆ ನೆನಹು ಮಾಯೆ, ನೆನಹಿಂಗೆ ಅರಿವು ಮಾಯೆ, ಅರಿವಿಂಗೆ ಕುರುಹು ಮಾಯೆ. ಇದನರಿಯದೆ ಹರಿಹರಬ್ರಹ್ಮಾದಿಗಳೆಲ್ಲರೂ ಮಾಯೆಯ ಕಾಲಸರಮಾಲೆಗಳಾದರು. ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಮಾಯೆ ದೇವದಾನವಮಾನವರಿಗೆ ದಸರಿದೊಡಕಾಗಿ ಕಾಡಿತ್ತು.
--------------
ಆದಯ್ಯ
ತತ್ವಮೂವತ್ತಾರ ಮೀರಿ ನಾದಬಿಂದುಕಳಾತೀತನಾದ ಶಿವನು ಜಗನ್ಮಯನಾದ ಆಗಿಯೂ ಜಗದ ಸ್ಥಿತಿಗತಿ ತನಗಿಲ್ಲವದೆಂತೆಂದಡೆ: ಏಕ ಏವ ಹಿ ಭೂತಾತ್ಮಾ ಭೂತೇಷು ಸುವ್ಯವಸ್ಥಿತಃ ಏಕಧಾ ಬಹುಧಾ ಚೈವ ದೃಶ್ಯತೇ ಜಲಚಂದ್ರವತ್ ಎಂದುದಾಗಿ, ಜಲದೊಳಗೆ ಸೂರ್ಯನ ಪ್ರತಿಬಿಂಬ ವಿಕಾರಿಸುತಿರ್ದಡೇನುರಿ ಆ ವಿಕಾರ ಜಲಕ್ಕಲ್ಲದೆ ಸೂರ್ಯಂಗಿಲ್ಲದಂತಿಪ್ಪನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ತನುಮುಟ್ಟಿ ಮನಮುಟ್ಟದೆ ಒಂದೊಂದನೆ ನೆನೆದು ಮುಟ್ಟಿಮುಟ್ಟಿ ಅರ್ಪಿಸಿ ಪ್ರಸಾದವಾಯಿತ್ತೆಂದು ಕೊಳ್ಳಬಹುದೆ ಅನರ್ಪಿತವ? `ಅರ್ಪಿತಾನರ್ಪಿತಂ ನಾಸ್ತಿ ಇತಿ ಭೇದಂ ಸಮರ್ಪಿತಂ' ಎಂಬ ಈ ಸಕೀಲಸಂಬಂಧವನರಿತು ಅರ್ಪಿಸಿಕೊಳ್ಳದೆ, ಅನರ್ಪಿತವ ಮುಟ್ಟದೆ, ರೂಪು ರುಚಿಯ ಹೊರದೆ, ಸಂಗುಖದ ಸೋಂಕು ತನುವ ಸೋಂಕದ ಮುನ್ನವೆ, ಷಡುರಸಾದಿಗಳು ಮನವ ಸೋಂಕದ ಮುನ್ನವೆ, ಪರಿಪೂರ್ಣಭಾವಿ ತಾನಾಗಿ ಲಿಂಗಭಾವವಂಗವಾದಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸಾದ ದೊರಕೊಳ್ಳದು.
--------------
ಆದಯ್ಯ
ತಳದಲೊಂದು ಕೋಲ ಕುಳಿ ಮಾಡಿ, ಮೇಲೊಂದು ಕೋಲ ಮೊನೆ ಮಾಡಿ [ಮಥಿ]ಸಲು ಅಗ್ನಿ ದೃಷ್ಟವಾಗಿ ಕಾಣಿಸಿಕೊಂಬಂತೆ, ಆತ್ಮನ ಸತಿಗೋಲಮಾಡಿ, ಪ್ರಣವವ [ಪ]ತಿಗೋಲ ಮಾಡಿ, ಪ್ರಣವಾತ್ಮಕನು ಶಿವಧ್ಯಾನದಿಂ ಮಥಿಸಲು ಆ ಧ್ಯಾನಪರ್ದಣದಲ್ಲಿ ಶಿವನು ಗೂಢವಿಲ್ಲದೆ ಕಾಣಿಸಿಕೊಂಬನು. ಇದಕ್ಕೆ ಶ್ರುತಿ: ಆತ್ಮಾನಮರಣಿಂ ಕೃತ್ವಾ ಪ್ರಣವಂ ಚೋತ್ತರಾರಣಿಂ ಧ್ಯಾನನಿರ್ಮಥನಾಭ್ಯಾಸಾತ್ಪಾಶಂ ದಹತಿ ಪಂಡಿತಃ ಎಂದುದಾಗಿ ಶಿವಧ್ಯಾನದಿಂ ¸õ್ಞರಾಷ್ಟ್ರ ಸೋಮೇಶ್ವರ ಲಿಂಗವ ಕಾಂಬುದಕ್ಕಿದೇ ಬಟ್ಟೆ ಕಂಡಯ್ಯಾ!
--------------
ಆದಯ್ಯ
ತಿಳಿದ ತಿಳಿಗೊಳದ ತಳಿತ ತಾವರೆಯರಳ ತಂಡುಲದ ರುಚಿಯ ಕಳಹಂಸೆ ಬಲ್ಲುದಲ್ಲದೆ, ಒಡನಿರ್ದ ನೀರುಗಾಗೆ ತಾನೆತ್ತ ಬಲ್ಲುದೊರಿ ಸುಧಾಕಿರಣನಿಂ ಬೆಳಗಿದ ಬೆಳುದಿಂಗಳ ರುಚಿಯ ಚಕೋರ ಬಲ್ಲುದಲ್ಲದೆ, ಒಡನಿರ್ದ ಕಾಕೋಳಿ ತಾನೆತ್ತ ಬಲ್ಲುದೊರಿ ಕಾರ್ಗಾಲ ಮುಂಬನಿಯ ಸುಖವ ಚಾದಗೆ ಬಲ್ಲುದಲ್ಲದೆ, ಅಡವಿಯಲ್ಲಿರ್ದ ಕೊಕರ ತಾನೆತ್ತ ಬಲ್ಲುದೊರಿ ¸õ್ಞರಾಷ್ಟ್ರ ಸೋಮೇಶ್ವರನ ಶರಣರ ಇರವ ಮಹಾನುಭಾವಿಗಳು ಬಲ್ಲರಲ್ಲದೆ, ಒಡನಿರ್ದ ಜಡಮತಿಯ ಮಾನವರು ತಾವೆತ್ತ ಬಲ್ಲರೊರಿ
--------------
ಆದಯ್ಯ
ತಾನು ತನ್ನನರಿಯದ ಮುನ್ನ ತನ್ಮಯವಾದರಿವು ತನ್ನನರಿವಲ್ಲಿ, ಆ ಅರಿವು ತನ್ಮಯವೆಂದರಿತರಿವು ಮರೆಯದಂತೆ ಮುನ್ನಿನರಿವೆ ಕರಿಗೊಂಡು ಇನ್ನು ಅರಿಯಲಿಲ್ಲದರಿವು, ನೀನೆ, ¸õ್ಞರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ತನು ಮನ ಧನದ ಲೋಭ ಎನಗೇಕೋ? ಅರ್ಥಪ್ರಾಣ ಅಭಿಮಾನಂಗಳ ತಾತ್ಪರ್ಯ ಎನಗೇಕೋ? ಪುತ್ರ ಮಿತ್ರ ಕಳತ್ರ ಭೃತ್ಯ ಭ್ರಾತಾದಿಗಳ ಹಂಗು ಎನಗೇಕೋ? ಸೌರಾಷ್ಟ್ರ ಸೋಮೇಶ್ವರಾ, ನಿನಗೆ ಎನ್ನ ಹಂಗಿಲ್ಲವಾಗಿ, ಎನಗಿವರ ಹಂಗಿಲ್ಲ.
--------------
ಆದಯ್ಯ
ತನಗೊಬ್ಬರು ಮುನಿದರು ತಾನಾರಿಗೂ ಮುನಿಯಲಾಗದು. ಮನೆಯ ಕಿಚ್ಚು ಮೊದಲೊಮ್ಮೆ ಮನೆಯ ಸುಡುವಂತೆ ತನ್ನ ಕೋಪ ತನ್ನನೆ ಸುಡುವುದು ನೋಡಯ್ಯ. ಸವಿಮಾತುಗಳು ಬೇಗದಿಂದ ಆ ಕ್ರೋಧವ [ಗೆಲಿದಿರ್ಪುದು] ಸಾಕ್ಷಿ: ಸಶ್ರುತಃ ಸಾತ್ವಿಕೋ ವಿದ್ವಾನ್ ಸ ತಪಸ್ವೀ ಜಿತೇಂದ್ರಿಯಃ ಯೇನ ಶಾಂತೇನ ಖಡ್ಗೇನ ಕ್ರೋಧಶತ್ರುರ್ನಿಪಾದಿತಃ ಇಂತೆಂದುದಾಗಿ ಆ ಕ್ರೋಧ ದುರ್ಜನರ ಗೆಲುವುದು. ಇಂತೀ ಸೋತುದಕ್ಕೆ ಸೋತವರ ಕೂಡೆ ಎತ್ತಣ ವಿರೋಧವಯ್ಯ? ಸೌರಾಷ್ಟ್ರ ಸೋಮೇಶ್ವರನ ಶರಣರು ಸಚರಾಚರಪ್ರಾಣಿಗಳಲ್ಲಿ ವಿರೋಧವಿಲ್ಲದಿರಬೇಕು.
--------------
ಆದಯ್ಯ
ತೆರಹಿಲ್ಲದ ಘನ ತನು ಮನ ಮಹವ ಮೀರಿತ್ತು, ಭಾ[ವಾ] ಭಾವವ ಮೀರಿತ್ತು. ಅರಿವ[ರ]ತುದಾಗಿ ನಿಜವನರಿಯದು, ನಿರ್ಣಯವನರಿಯದು. ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜ ತಾನಾಗಿ ಒಂದೆರಡೆಂಬ ಭಾವಾಭಾವ ನಷ್ಟವಾಯಿತ್ತು.
--------------
ಆದಯ್ಯ
ತನುಗುಣವಿರಹಿತ ಗಮನರಹಿತ ಅನುಪಮಜ್ಞಾನಸನ್ನಹಿತ ಶರಣ, ನೋಡಿದುದೆಲ್ಲವೂ ಪ್ರಸಾದ, ನುಡಿದುದೆಲ್ಲವೂ ಪ್ರಸಾದ, ಸೋಂಕಿದುದೆಲ್ಲವೂ ಪ್ರಸಾದವಯ್ಯಾ, ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸಾದಿಗೆ.
--------------
ಆದಯ್ಯ
ತೆರೆಯಡಗಿದ ಸಾಗರದೊಳಗೆ ಆಕಾಶ ಬಿಂಬಿಸಿ ಅಂಬರ ಜಲವನೊಳಕೊಂಡಂತೆ, ದಿನಮಣಿ ಮಣಿಮುಕುರದಲ್ಲಿ ಹೊಳೆಯಲು ಮುಕುರವೇ ರವಿಯಾಗಿಪ್ಪಂತೆ, ಗುರುಶಿಷ್ಯ ಸಂಬಂಧ ಅಭಿನ್ನಸೇವ್ಯವಾದ ಬಳಿಕ ಗುರವೆಂದನಲುಂಟೆ ಶಿಷ್ಯಂಗೆ? ಶಿಷ್ಯನೆನಲುಂಟೆ ಗುರುವಿಂಗೆ? ಇಂತು ಉಭಯನಾಸ್ತಿಯಾದ ಉಪದೇಶ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಸ್ವಯವಾಯಿತ್ತು.
--------------
ಆದಯ್ಯ
ತನುಗುಣವಳಿದಲ್ಲಿ ತ್ಯಾಗಾಂಗ, ಲಿಂಗದೊಡನೆ ಸಕಲಭೋಗಂಗಳ ಭೋಗಿಸುವಲ್ಲಿ ಭೋಗಾಂಗ, ನಿಜದಲ್ಲಿ ಬೆರಸಿದಲ್ಲಿ ಯೋಗಾಂಗ. ಇಂತೀ ತ್ರಿವಿಧದಲ್ಲಿಯೆ ಶಿವಯೋಗಾಂಗ. ಇದಲ್ಲದನ್ಯಯೋಗಂಗಳೆಲ್ಲಾ ವಿಯೋಗಂಗಳಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ತನು ಮನ ನೆನಹು, ಹಲವು ನೆನಹಾಗಿ ಜನಿಸಬಲ್ಲವೆ ಆತ್ಮನಿಲ್ಲದಿರಲು? ಉರಿಯಂತಲ್ಲ, ಹಿರಿದಪ್ಪ ನೆಳಲಂತಲ್ಲ, ಜಗದಂತಲ್ಲ, ಮುಗಿಲಂತಲ್ಲ. ಇರುಹೆ ಮೊದಲಾದ ಎಂಭತ್ತುನಾಲ್ಕು ಲಕ್ಷ ಜೀವಜಂತುಗಳಂತಲ್ಲ. ಇವ ಬಿಟ್ಟು ಬೇರೊಂದೆಡೆಯಲಿಪ್ಪುದಲ್ಲ. ತೆರಹಿಲ್ಲದಾತ್ಮಂಗೆ ಕುರುಹೊಂದಿಲ್ಲವಾಗಿ ತೋರಲಿಲ್ಲದಾತ್ಮನ ಬೀರಲಿಲ್ಲಾರಿಗೂ. ನಿಶ್ಶಬ್ದದಿಂ ಶಬ್ದ ಜನಿಸಿ, ಆ ಶಬ್ದ ನಿಶ್ಶಬ್ದದಲ್ಲಿಯೇ ಲಯವಪ್ಪಂತೆ. ಮಾನವಾತ್ಮನ ತಿಳವರಿವೆ ತಿಳಿವು. ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ತನ್ನ ತಾನೇ ತನ್ನಿಂ ತನ್ನ ಬೆ[ಳೆ]ಯಬೇಕಯ್ಯಾ ಮಲ್ಲಿಕಾರ್ಜುನ.
--------------
ಆದಯ್ಯ
ತೀರ್ಥಯಾತ್ರೆಯ ಮಾಡಿ ಪಾಪವ ಕಳೆದಿಹೆನೆಂಬ ಯಾತನೆ ಬೇಡ ಕೇಳಿರಣ್ಣಾ, ಅನಂತಕರ್ಮವೆಲ್ಲಾ ಒಬ್ಬ ಶಿವಭಕ್ತನ ದರುಶನ ಸ್ಪರ್ಶನದಿಂದ ಕೆಡುವವು. ಅದೆಂತೆಂದಡೆ: ಉಪಪಾತಕಕೋಟೀನಿ ಬ್ರಹ್ಮಹತ್ಯಾ ಶತಾನ್ಯಪಿ ಮಹಾಪಾಪಶ್ಚ ನಶ್ಯಂತಿ ಲಿಂಗಭಕ್ತಸ್ಯ ದರ್ಶನಾತ್ ಎಂದುದಾಗಿ, ಅದೇನು ಕಾರಣವೆಂದಡೆ ಆ ಭಕ್ತನಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗವಿಪ್ಪುದಾಗಿ ಹೋಹವಯ್ಯಾ ಹುಲ್ಲಿನಲ್ಲಿ ತೊಡೆದು.
--------------
ಆದಯ್ಯ
ತನು ನಿರ್ವಾಣವಾದಡೇನೋ, ಆಶೆ ನಿರ್ವಾಣವಾಗದನ್ನಕ್ಕ! ಮಂಡೆ ಬೋಳಾದಡೇನೋ, ಹುಟ್ಟು ಬೋಳಾಗದನ್ನಕ್ಕ! ಇಂದ್ರಿಯ ನಿಗ್ರಹವಾದಡೇನೋ, ಷಡುಸ್ಥಲಾನುಗ್ರಹವಾಗದನ್ನಕ್ಕ ಸೌರಾಷ್ಟ್ರ ಸೋಮೇಶ್ವರಲಿಂಗವು ಬರಿದೆ ಒಲಿವನೇ!
--------------
ಆದಯ್ಯ
ತನುಗುಣ ಮನಗುಣ ಪ್ರಾಣಗುಣಾದಿಗಳಲ್ಲಿ ಹುದುಗಿದಡೆ, ಪಂಚೇಂದ್ರಿಯ ಅರಿಷಡ್ವರ್ಗಂಗಳೊಳು ಮನ ಕೂರ್ತು ಬೆರಸಿದಲ್ಲಿ, ಆ ಮನದ ಹಸ್ತದಲ್ಲಿ ಲಿಂಗವಿಲ್ಲ. ಲಿಂಗವಿಲ್ಲವಾಗಿ ಭಕ್ತಿಯಿಲ್ಲ, ಭಕ್ತಿಯಿಲ್ಲವಾಗಿ ವಿವೇಕವಿಲ್ಲ, ವಿವೇಕವಿಲ್ಲವಾಗಿ ಅರಿವಿಲ್ಲ, ಅರಿವಿಲ್ಲವಾಗಿ ಸುಜ್ಞಾನವಿಲ್ಲ, ಸುಜ್ಞಾನವಿಲ್ಲವಾಗಿ ಪರಮಾರ್ಥ ಘಟಿಸದು. ಇವೆಲ್ಲವ ಕಳೆದುಳಿದಲ್ಲಿ ಮನದ ಹಸ್ತದಲ್ಲಿ ಲಿಂಗವಿದ್ದಿತ್ತು, ಲಿಂಗದಲ್ಲಿ ಮನ ಸಂದಿತ್ತು, ಮನ ಸಂದಲ್ಲಿ ಸೌರಾಷ್ಟ್ರ ಸೋಮೇಶ್ವರ ಸ್ವಸ್ಥಿರವಾದನು.
--------------
ಆದಯ್ಯ
ತನು ಸೋಂಕಿ ಅರ್ಪಿಸುವುದೇ ಸಂದೇಹ, ಮನ ಸೋಂಕಿ ಅರ್ಪಿಸುವುದೇ ಸಂಕಲ್ಪ, ಭಾವ ಸೋಂಕದ ಮುನ್ನವೆ ಲಿಂಗ ಸೋಂಕಿ ಬಂದುದೇ ಅಚ್ಚಪ್ರಸಾದವಯ್ಯಾ! ಇಂತಪ್ಪ ಪ್ರಸಾದಗ್ರಾಹಿಗಳನೆನಗೊಮ್ಮೆ ತೋರಿಸಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ತ್ರಿಪುರಸಂಹಾರವ ಮಾಡುವಲ್ಲಿ ಶಿವನ ಉನ್ಮಿಷೋನ್ಮೀಲದೃಷ್ಟಿಯಿಂ ಪುಳಕಬಿಂದು ಕಾಶ್ಯಪಿಯ ಮೇಲೆ ಬೀಳಲುಣ್ಮಿದ ರುದ್ರಾಕ್ಷಿ ಸರ್ವಕಾರಣಾಧಿಕ್ಯವೆಂಬುದನರಿತು ರುದ್ರಾಕ್ಷಿಯ ಧರಿಸಿದಾತನೇ ಸರ್ವಥಾ ರುದ್ರನಪ್ಪುದು ತಪ್ಪದು. ಇದಕ್ಕೆ ಶ್ರುತಿ: `ಪುರಾ ತ್ರಿಪುರವಧಾಯೋನ್ಮೀಲಿತಾಕ್ಷೊಡಿಹಂ ತೇಭ್ಯೋ ಜಲಬಿಂದವೋ ಭೂಮೌ ಪತಿತಾಸ್ತೇ ರುದ್ರಾಕ್ಷಾಃ ಜಾತಾಃ ಸರ್ವಾನುಗ್ರಹಾರ್ಥಾಯ ಅತ ಏವ ರುದ್ರಾಕ್ಷಧಾರಣಾತ್ ರುದ್ರಃ ಎಂದುದಾಗಿ, ಇಂತಪ್ಪ ರುದ್ರಾಕ್ಷಿಯಂ ಧರಿಸಿದಾತ ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲದೆ ಬೇರೆ ಅಲ್ಲ.
--------------
ಆದಯ್ಯ

ಇನ್ನಷ್ಟು ...