ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಕ್ರೋದ್ಧರಣದ ಬಹಿರಾವರಣದ ತಮೋಗುಣದಲ್ಲಿ ಏಕಾಕ್ಷರವದೆ, ತೃತೀಯಾವರಣದಲ್ಲಿ ಸತ್ವಗುಣದಲ್ಲಿ ನಾಲ್ಕಕ್ಷರವವೆ, ಇಂತೀ ಪಂಚಾಕ್ಷರವೆ ಶಿವನ ಪಂಚಮುಖದಲ್ಲಿ ಅವೆ. ಅಂಗೋದ್ಧರಣದ ಬಹಿರಂಗದಲ್ಲಿ ಅವೆ, ಲಿಂಗೋದ್ಧರಣದ ಅಂತರಂಗದಲ್ಲಿ ಅವೆ, ಲಿಂಗಾಂಗಸಂಗದಿಂದೊಳಹೊರಗೆ ತೆರಹಿಲ್ಲದವೆ. ತವರ್ಗದ ಕಡೆಯಿಲ್ಲದೆ, ಪವರ್ಗದಂತ್ಯದಲ್ಲಿದೆ, ಶವರ್ಗದ ಮೊದಲಲ್ಲದೆ, ಯವರ್ಗದ ತುದಿಮೊದಲಲ್ಲವೆ. ಸೌರಾಷ್ಟ್ರ ಸೋಮೇಶ್ವರಲಿಂಗವಿದೆ, ಅರಿತು ಜಪಿಸಿರಯ್ಯಾ ಪಂಚಾಕ್ಷರವ.
--------------
ಆದಯ್ಯ
ಚತುರ್ದಶಭುವನವನಗ್ನಿ ಕೊಂಡಡೆ, ಇದ ಕಂಡು ಬೆರಗಾದೆ. ನವಖಂಡಪೃಥ್ವಿಯನಗ್ನಿ ಕೊಂಡಡೆ, ಇದ ಕಂಡು ಬೆರಗಾದೆ. ಪಂಚಾಶತ್ಕೋಟಿ ವಿಸ್ತೀರ್ಣವನಗ್ನಿ ಕೊಂಡಡೆ, ಇದ ಕಂಡು ಬೆರಗಾದೆ. ಸೌರಾಷ್ಟ್ರ ಸೋಮೇಶ್ವರಲಿಂಗವನಗ್ನಿ ಕೊಂಡಡೆ ಇದ ಕಂಡು ಬೆರಗಾದೆ.
--------------
ಆದಯ್ಯ
ಚರಿಸಿ ವರ್ತಿಸುವುದೆ ಆಚಾರವಾದ ಕಾರಣ, ಇಡಾಪಿಂಗಳನಾಡಿಯಂ ರೇಚಕಪೂರಕಂಗಳು ಚರಿಸಿ ವರ್ತಿಸುವ ದೆಸೆಯಿಂ ನಾಸಿಕಕ್ಕೆ ಆಚಾರಲಿಂಗವಾಗಬೇಕಾಯಿತ್ತು. ಮಂತ್ರಮೂರ್ತಿಯೆ ಗುರುವಾದ ಕಾರಣ, ಷಡಕ್ಷರವೆ ಷಡುರುಚಿಯಾಗಿ ತೋರಿಹುದಾಗಿ ಅಂತಪ್ಪ ಷಡುರುಚಿ ಜಿಹ್ವೆಯ ಮುಖಕ್ಕೆ ಸಲುವ ದೆಸೆಯಿಂ ಜಿಹ್ವೆಗೆ ಗುರುಲಿಂಗವಾಗಬೇಕಾಯಿತ್ತು. ಸ್ವಯಂಪ್ರಕಾಶವೆ ಶಿವನಾದ ಕಾರಣ, ಆ ಮಹಾಪ್ರಕಾಶವೆ ನೇತ್ರಂಗಳೊಳು ನೆಲೆಗೊಂಡು, ಸಕಲಪದಾರ್ಥಂಗಳ ಕಾಣಿಸಿ ತೋರ್ಪ ದೆಸೆಯಿಂ ನೇತ್ರಕ್ಕೆ ಶಿವಲಿಂಗವಾಗಬೇಕಾಯಿತ್ತು. ಚರವೆ ಜಂಗಮವಾದ ಕಾರಣ, ತ್ವಕ್ಕು ಸರ್ವಾಂಗದಲ್ಲಿ ನೆಲೆಗೊಂಡು, ಅಲ್ಲಿಗಲ್ಲಿ ಪರುಶನವನರಿವುತ್ತಿಹ ದೆಸೆಯಿಂ ತ್ವಕ್ಕಿಂಗೆ ಜಂಗಮಲಿಂಗವಾಗಬೇಕಾಯಿತ್ತು. ನಾದಸುನಾದಮಹಾನಾದವೆ ಪ್ರಸಾದವಾದ ಕಾರಣ, ಪ್ರಸಾದವಪ್ಪ ಶಬ್ದಶ್ರೂೀತ್ರಮುಖಕ್ಕೆ ಸಲುವ ದೆಸೆಯಿಂ ಶ್ರೂೀತ್ರಕ್ಕೆ ಪ್ರಸಾದಲಿಂಗವಾಗಬೇಕಾಯಿತ್ತು. ಇಂತೀ ಪಂಚೇಂದ್ರಿಯಕ್ಕೆ ಪಂಚಲಿಂಗಂಗಳಾಗಬೇಕಾಯಿತ್ತು. ಆತ್ಮನು ನಿರವಯ ನಿರ್ಗುಣ ನಿಃಕಲ ನಿರ್ಭಿನ್ನ ನಿರುಪಮ್ಯನಾದ ದೆಸೆಯಿಂ ಗೋಪ್ಯವಾದ ಆತ್ಮಂಗೆ ಘನಕ್ಕೆ ಘನತೆಯುಳ್ಳ ಮಹಾಲಿಂಗವಾಗಬೇಕಾಯಿತ್ತು. ಇಂತೀ ಷಡುಸ್ಥಲಂಗಳಾದ ದೆಸೆಯಿಂದ ಸೌರಾಷ್ಟ್ರ ಸೋಮೇಶ್ವರನೊರ್ವ ಷಡುಲಿಂಗವಾಗಬೇಕಾಯಿತ್ತಯ್ಯಾ.
--------------
ಆದಯ್ಯ
ಚೌಷಷಿ*ವಿದ್ಯೆಗಳ ಕಲಿತಡೇನೊ? ಅಷ್ಟಾಷಷಿ*ಕ್ಷೇತ್ರಂಗಳ ಮೆಟ್ಟಿದಡೇನೊ? ಬಿಟ್ಟಡೇನೊ? ಕಟ್ಟಿದಡೇನೊ? ಅರಿವಿನಾಚಾರ ಕರಿಗೊಳ್ಳದನ್ನಕ್ಕ. ಘನಲಿಂಗದ ಬೆಳಗು ಸ್ವಯವಾದ ಶರಣಂಗಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗಸುಖವೆಡೆಗೊಳ್ಳದು.
--------------
ಆದಯ್ಯ
ಚರಪಾದೋದಕದಿಂದ ಲಿಂಗಾಂಗಗಳಿಗೆ ಮಜ್ಜನವ ಮಾಡುವುದೆ ಆಚಾರ, ಆಪ್ಯಾಯನೋದಕವಾಗಿ ಕೊಟ್ಟುದಕವನೆ ಪಾನವ ಮಾಡುವುದೆ ಆಚಾರ, ಪ್ರಸಾದೋದಕವನು ಆಯತ ಸ್ವಾಯತ ಅವಧಾನದಿಂದ ಅರ್ಪಿತವ ಮಾಡುವುದೆ ಆಚಾರ. ಇಂತೀ ತ್ರಿವಿಧೋದಕದಿಂದ ಪರಮಪದವೆಂದಾಚರಿಸುವಂಗೆ ಆ ಜಂಗಮಪ್ರಸಾದಾರ್ಪಿತದಿಂದವೆ ನಿಜಲಿಂಗೈಕ್ಯವಪ್ಪುದು ತಪ್ಪದು ಕಾಣಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಚೈತನ್ಯಾತ್ಮಕವಪ್ಪ ನಾದಬಿಂದುವಿನೊಳಡಗಿಪ್ಪ ಭೇದವ ಭೇದಿಸಲರಿಯದೆ ಭೇದವಾದದಿಂ ತಿಳಿದು ಕಾಯಜೀವದ ಹೊಲಿಗೆಯ ಹೊಲ[ಬ]ನರಿಯದೆ ನೆಲೆಗೆಟ್ಟಾತ್ಮನರಿವ ಅರಿವಿಂಗೆಳತಟವಾಯಿತ್ತು. ಅದೆಂತೆಂದಡೆ, ಶ್ರುತಿ: ಅಂಗಭೇದವಿಮೂಢಜ್ಞಃ ಆತ್ಮಜ್ಞಾನವಿವರ್ಜಿತಃ ಆತ್ಮಭೇದಮಹಾಪ್ರಾಜ್ಞಃ ಪರಮಾತ್ಮೇತ್ಯುದಾಹೃತಃ ಇಂತೆಂದುದಾಗಿ ಆತ್ಮದೃಕ್ಕಿಂದಾತ್ಮನ ಭೇದಿಸಬಲ್ಲಡೆ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಮನವಾತ್ಮನ ತಿಳಿಯಬಪ್ಪುದಯ್ಯಾ ಮಲ್ಲಿಕಾರ್ಜುನಾ.
--------------
ಆದಯ್ಯ
ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿ ಅನಂತ ವಿಚಿತ್ರಭುವನಂಗಳಡಗಿಪ್ಪವಯ್ಯಾ. `ಆಲಯಃ ಸರ್ವಭೂತಾನಾಂ ಲಯನಾಲ್ಲಿಂಗಮುಚ್ಚ್ಯತೇ ಎಂದುದಾಗಿ, ಅನಂತಕೋಟಿ ಬ್ರಹ್ಮಾಂಡಗಳು ನಿಮ್ಮ ರೋಮಕೂಪದೊಳಗೆ ಅಡಗಿಪ್ಪವೆಂದಡೆ ಬ್ರಹ್ಮ ವಿಷ್ಣು ರುದ್ರ ಇವರೆಲ್ಲ ಒಂದು ಬ್ರಹ್ಮಾಂಡದೊಳಗಣ ಬಾಲಕರು. ಇವರೆತ್ತ ಬಲ್ಲರೋ ಲಿಂಗದ ನಿಜವ! ಅಪ್ರಮಾಣವಗೋಚರ ಮಹಾಂತ, ನಿಮ್ಮ ನಿಜದೊಳಗನಾರು ಬಲ್ಲರಯ್ಯಾ ಸೌರಾಷ್ಟ್ರ ಸೋಮೇಶ್ವರಾ!
--------------
ಆದಯ್ಯ
ಚೈತನ್ಯಕ್ಕೆ ಚೈತನ್ಯ ನೀನಾಗಿ ನಿನ್ನೊಳಗೆ ಪ್ರಾಣ, ಪ್ರಾಣದೊಳಗೆ ನೀನಿಪ್ಪ ಭೇದವ ನಿಮ್ಮ ಜ್ಞಾನದಿಂದವೆ ಕಂಡು, ನೀನಾನೆಂಬ ಭೇದವ ಮರೆದು ನಿಜಲಿಂಗ ಪ್ರಾಣಸಂಗ ಸುಖಿಯಾಗಿಪ್ಪ ಶರಣರ ನಾನೇನೆಂಬೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ!
--------------
ಆದಯ್ಯ