ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಚಾರಲಿಂಗ ನಾಸ್ತಿಯಾದಲ್ಲದೆ ಭಕ್ತನಲ್ಲ. ಗುರುಲಿಂಗ ನಾಸ್ತಿಯಾದಲ್ಲದೆ ಮಾಹೇಶ್ವರನಲ್ಲ. ಶಿವಲಿಂಗ ನಾಸ್ತಿಯಾದಲ್ಲದೆ ಪ್ರಸಾದಿಯಲ್ಲ. ಜಂಗಮಲಿಂಗ ನಾಸ್ತಿಯಾದಲ್ಲದೆ ಪ್ರಾಣಲಿಂಗಿಯಲ್ಲ. ಪ್ರಸಾದಲಿಂಗ ನಾಸ್ತಿಯಾದಲ್ಲದೆ ಶರಣನಲ್ಲ, ಇಂತೀ ಷಡಂಗಗಳು ಕೆಟ್ಟಲ್ಲದೆ ಸೌರಾಷ್ಟ್ರ ಸೋಮೇಶ್ವರನಲ್ಲಿ ಲಿಂಗೈಕ್ಯನಲ್ಲ.
--------------
ಆದಯ್ಯ
ಆಯತ ಸ್ವಾಯತ ಸನ್ನಿಹಿತವೆಂದು ನುಡಿವ ಅನಾಯತದ ಹೇಸಿಕೆಯನೇನಂಬೆನಯ್ಯಾ? ತನುಗುಣಂಗಳನೊರಸದೆ, ಭೋಗಭೂಷಣಂಗಳನತಿಗಳೆಯದೆ, ಅನೃತ ಅಸತ್ಯ ಅಸಹ್ಯ ಋಣಸಂಚವಂಚನೆ ಪರಧನಕ್ಕಳುಪದ ಆಯತ ಅಂಗಕ್ಕಿಲ್ಲ ಮತ್ತೆಂತಯ್ಯಾ? ಆಯತವು ಮನೋವಿಕಾರವಳಿದು, ಸರ್ವೇಂದ್ರಿಯಂಗಳಲ್ಲಿ ಸಾವಧಾನಿಯಾಗಿ ಅನ್ಯವಿಷಯ ಬ್ಥಿನ್ನರುಚಿಯ ಮರೆದು ಸಕಲಭ್ರಮೆ ನಷ್ಟವಾದ ಸ್ವಾಯತ ಮನಕ್ಕಿಲ್ಲ. ಮತ್ತೆಂತಯ್ಯಾ ಸ್ವಾಯತವು? ತನ್ನರಿವಿನ ಕುರುಹನರಿತು ನಿಜಸಾಧ್ಯವಾದ ಸನ್ನಹಿತ, ಸದ್ಭಾವದಲ್ಲಿ ಅಳವಟ್ಟುದಿಲ್ಲದೆ ಭಾಜನಕ್ಕೆ ಬರಿಯ ಮುಸುಕಿಟ್ಟು ಆಯತವೆಂದು ನುಡಿವ ಅನಾಯತದ ನಾಚಿಕೆಯನೇನೆಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ?
--------------
ಆದಯ್ಯ
ಆತ್ಮ ತೇಜ, ದೇಹೋ[ಹಂ] ಹಮ್ಮು, ಮನದ ಬಿಮ್ಮು, ತಥ್ಯ-ಮಿಥ್ಯ, ರಾಗ-ದ್ವೇಷ, ಸುಖ-ದುಃಖ ಮೋಹಂಗಳಡಗವಯ್ಯಾ. ಇಂತಿವನಳಿದಾತನ ನೀನೆಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಆಶ್ರಮಿಗಳಿದ್ದು ಅತ್ಯಾಶ್ರಮವ ತಳೆದು ತತ್ವಜ್ಞಾನಭರಿತ[ವಾ]ಗಿ ನಿಂದುದೆನ್ನ ಇಷ್ಟ. ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯವನುಳಿದು ನಿರ್ಮಲಾಂಗವಾದುದೆನ್ನ ಇಷ್ಟ. ಅರಿವರತು ಮರಹು ನಷ್ಟವಾಗಿ ಶರಣಸ್ಥಲಕ್ಕೆ ಸಂದು, ದ್ವಿಕರ್ಮನಷ್ಟವಾಗಿ ನಿಂದುದೆನ್ನ ಇಷ್ಟ. ಸತ್ಯಜ್ಞಾನಾನಂದ ಶಿವಲಿಂಗಾಂಗಿ ಸೌರಾಷ್ಟ್ರ ಸೋಮೇಶ್ವರಲಿಂಗವಾದುದೆನ್ನ ಇಷ್ಟ.
--------------
ಆದಯ್ಯ
ಆದಿ ಅನಾದಿಯಿಲ್ಲದಂದು, ನಾದ ಬಿಂದು ಕಳೆ ಮೊಳೆದೋರದಂದು, ಶ್ರುತಿ ಸ್ಮøತಿಗಳು ತಲೆದೋರದಂದು, ಚತುರ್ದಶಭುವನಂಗಳ ರಚನೆ ರಚಿಸದಂದು, ಲಯಭೋಗಾದಿ ಕರಣಂಗಳಲ್ಲಿಯ ತತ್ವಪ್ರಭಾವ ಮೂರ್ತಿಗಳೆಂಬ ಅರಿವು ಕುರುಹಿಗೆ ಬಾರದಂದು, ತಿಥಿ, ವಾರ, ನಕ್ಷತ್ರ, ಯೋಗ, ಕರಣಂಗಳೆಂಬ ಪಂಚಾಂಗ ಲಗ್ನವಿಲ್ಲದಂದು, ಅನುಪಮ ಅಸಾಧ್ಯ ಅಭೇದ್ಯ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ನಿಜವನಾರು ಬಲ್ಲರಯ್ಯಾ.
--------------
ಆದಯ್ಯ
ಆರು ಬಣ್ಣದ ಆರು ಲಿಂಗದಲ್ಲಿ ಮೂರು ಬಣ್ಣದ ಮೂರು ಲಿಂಗವ ಕೂಡಲು ನವಲಿಂಗದ ಒಂಬತ್ತು ಬಣ್ಣದಲ್ಲಿ ಗುರುಲಿಂಗಜಂಗಮಪ್ರಸಾದವೆಂಬ ನಾಲ್ಕು ಬಣ್ಣವ ಕೂಡಿದ ಹದಿಮೂರು ಬಣ್ಣವ ಕ್ರೀಯೆಂಬ ಕಮ್ಮರನ ಕೈಯಲ್ಲಿ ಕೊಟ್ಟಡೆ, ವಾಸನೆಯೆಂಬ ಸೀಸವ ಬೆರಸಿದ ನೋಡಾ. ಕಮ್ಮಾರನ ಬಾಯಕುಟ್ಟಿ ಸೆಳೆಯಲಾಗಿ ಆ ವಾಸನೆ ಅಲ್ಲಿಯೇ ಅಡಗಿ, ಅಂಗಭವಿ ಲಿಂಗಭವಿಯೆಂಬ ಅಡಗಿದ ಕಾಳಿಕೆಯಳಿದ ಸ್ವಯಬಣ್ಣದ ಮಿಸುನಿಗೆ ತನುವೆಂಬ ಒರೆಗಲ್ಲ ಹಂಗಿಲ್ಲ, ಮನವೆಂಬ ಮಚ್ಚದ ಹಂಗಿಲ್ಲ. ಭಾವವೆಂಬ ಹಸ್ತದ ಹಂಗಿಲ್ಲ, ತಮೋಗುಣವೆಂಬ ಮಯಣದ ಹಂಗಿಲ್ಲ. ಬೋಧವೆಂಬ ನೇತ್ರದ ಹಂಗಿಲ್ಲ. ಇಂತಿವರ ಹಂಗು ಹರಿದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ಪರವಳಿದು ಸಯವಾಯಿತ್ತು
--------------
ಆದಯ್ಯ
ಆಕಾಶದಲ್ಲಿ ಪಂಚಮಹಾನಾದಂಗಳುಂಟು, ಆ ಪಂಚಮಹಾನಾದಂಗಳೇ ಪಂಚಮಹಾವೇದಂಗಳು ಕಂಡಿರೇ. ಇಂತೀ ವೇದ-ನಾದಂಗಳ ಭೇದಿಸಬಲ್ಲಡೆ ಸೌರಾಷ್ಟ್ರ ಸೋಮೇಶ್ವರಲಿಂಗವೆಂಬೆನು.
--------------
ಆದಯ್ಯ
ಆ ಪರಬ್ರಹ್ಮವೆ ಓಂಕಾರವಪ್ಪ ಪ್ರಣವಸ್ವರೂಪು, ಪರಮಾತ್ಮನೆನಿಸಿ ಪರಶಿವನಾಮದಿಂ ಪರಶಕ್ತಿಸಂಯುಕ್ತವಾಗಿ, ಆಕಾರ ಉಕಾರ ಮಕಾರವೆಂಬ ಬೀಜಾಕ್ಷರಂಗಳಿಂ ನಾದಬಿಂದುಕಳೆಯಾಗಿ, ದಶನಾಡಿ ದಶವಾಯು ದಶವಿಧೇಂದ್ರಿಯ ಸಪ್ತಧಾತು ಷಡುಚಕ್ರ ಷಡುವರ್ಗ ಪಂಚಭೂತ ಚತುರಂತಃಕರಣ, ತ್ರಿದೋಷಪ್ರಕೃತಿ, ತ್ರಯಾವಸ್ಥೆ, ಸತ್ವ ರಜ ತಮ, ಅಂಗ ಪ್ರಾಣ, ಅರಿವು ಭಾವ ಜ್ಞಾನ, ಮೊದಲಾದ ಬಾಹತ್ತರ ವಿನಿಯೋಗಮಂ ತಿಳಿದು ಭೂಲೋಕ ಭುವರ್ಲೋಕ ಸ್ವರ್ಲೋಕ ಮಹರ್ಲೋಕ ಜನಲೋಕ ತಪೋಲೋಕ, ಸತ್ಯಲೋಕ, ಅತಳ, ವಿತಳ, ಸುತಳ, ಮಹಾತಳ, ರಸಾತಳ, ತಳಾತಳ, ಪಾತಾಳಂಗಳೊಳಗಾದ ಚತುರ್ದಶಭುವನಂಗಳೊಳಹೊರಗೆ ಅಂತರ್ಗತ ಬಹಿರ್ಗತವಾಗಿ, ನಾದಮಂ ತೋರಿ ಭರ್ಗೋದೇವನೆಂಬ ನಾಮಮಂ ತಳೆದು ಊಧ್ರ್ವರೇತುವೆನಿಸಿ, ವಿಶ್ವತೋಮುಖ, ವಿಶ್ವತಶ್ಚಕ್ಷು, ವಿಶ್ವತೋ ಬಾಹು, ವಿಶ್ವತಃಪಾದದಿಂ ವಿಶ್ವಗರ್ಭೀಕೃತವಾಗಿ, ಉತ್ಪತ್ತ್ಯಸ್ಥಿತಿಲಯಂಗಳನೆಣಿಕೆಗೆಯ್ಯದೆ ದೇವತಾಂತರದಿಂ ಮಾನಸಾಂತರವನನುಕರಿಸಿ, ಮಾನಸದಲ್ಲಿ ರವಿಕೋಟಿತೇಜದಿಂ ಸಕಲಪಾಪಾಂಧಕೂಪಮಂ ತೊಳೆದು ಸುರಕ್ಷಿತದಿಂ ಪ[ರಾ] ಪಶ್ಯಂತಿ ಸುಮಧ್ಯ ವೈಖರಿಯೆಂಬ ಚತುರ್ವಿಧದಿಂ ದುರಿತ ದುರ್ಮದ ಕಾಲಮೂಲಾದಿಮೂಲಮಂ ಬಗೆಗೊಳ್ಳದೆ, ಚಿತ್ಸುಧಾಮೃತವೆ ಅಂಗವಾಗಿ ಚಿದರ್ಕಪ್ರಭಾಕರವೆ ಪ್ರಾಣವಾಗಿ, ಸೌರಾಷ್ಟ್ರ ಸೋಮೇಶ್ವರನಿಂತಿಂತು ಕರ್ತನು-ಭರ್ತನು ತಾನೆ ಆಗಿ, ಪರಮಸ್ವಯಂಭೂ ಸ್ವತಃಸಿದ್ಧದಿಂ ಸಚ್ಚಿದಾನಂದಸ್ವರೂಪದಿಂ ನಿತ್ಯಪರಿಪೂರ್ಣತ್ವದಿಂದೆಡದೆರಹಿಲ್ಲದಿರ್ಪನಯ್ಯಾ.
--------------
ಆದಯ್ಯ
ಆಚಾರದನುವಳವಟ್ಟು, ಕರಣಂಗಳನುಡುಗಿ, ತನುವ ಸವೆವುದು ಗುರುವಿನಲ್ಲಿ. ವ್ರತನೇಮಂಗಳಿಂ ಪಲ್ಲಟವಿಲ್ಲದೆ, ಮನವ ಸವೆವುದು ಲಿಂಗದಲ್ಲಿ. ಆಶೆ ರೋಷಗಳಿಲ್ಲದೆ ಆದರಣೆಯಿಂಧನವ ಸವೆವುದು, ಜಂಗಮದಲ್ಲಿ. ಇಂತೀ ತ್ರಿವಿಧದಲ್ಲಿ ತ್ರಿವಿಧ ಸವೆದು ಪ್ರಳಯಪ್ರಕೃತಿಗೊಳಗಾಗದೆ, ಸುಜ್ಞಾನಮುಖದಿಂ ಪ್ರಸಾದವ ಹಿಂಗದೆ ಗ್ರಹಿಸಿಪ್ಪ ಭಕ್ತನನೇನೆಂದುಪಮಿಸುವೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಆಡಿನ ತತ್ತಿಯೊಳಗೊಂದು ಹೇರಡವಿಯಿದ್ದಿತ್ತು. ಆ ಹೇರಡವಿಯೊಳಗೆ ಮೇರುವಿದ್ದಿತ್ತು. ಆ ಮೇರುವಿನ ಒಡಲಲ್ಲಿ ಚತುರ್ದಶಭುವನ ಸಚರಾಚರಂಗಳೆಲ್ಲಾ ಇದ್ದಿತ್ತು. ತತ್ತಿ ಒಡೆಯಿತ್ತು ಅಡವಿ ಅಡಗಿತ್ತು. ಸೌರಾಷ್ಟ್ರ ಸೋಮೇಶ್ವರಲಿಂಗವಿಲ್ಲದಂತಿದ್ದಿತ್ತು.
--------------
ಆದಯ್ಯ
ಆತ್ಮನೆಂಬ ಅಂಬುಧಿಯಲ್ಲಿ ನೊರೆ ತೆರೆ ತುಂತುರು ಸಾರ ಬುದ್ಬುದಂಗಳೆಂಬ ತನು, ಮನ, ಶಬ್ದ, ಸ್ಪರ್ಶ, ರೂಪು, ರಸ, ಗಂಧ, ಅಹಂಕಾರ, ಮಮಕಾರಂಗಳಾದವಯ್ಯಾ. ಮನ ನೆನಹಿನಂತೆ ತೋರಿ ಅಡಗುವುದಲ್ಲ, ಆತ್ಮನು ಶುಕ್ಲಶೋಣಿತದಿಂ ತನು ಮನವಾದಂದು, ಆಗಿ ಅವು ಹೋದಂದು ಹೋಹುದಲ್ಲ ನೋಡಾ ಆತ್ಮನು. ಅಂತಹ ಆತ್ಮನಿಲ್ಲದಿರ್ದಡೆ ಅನಂತಕೋಟಿ ಬ್ರಹ್ಮಾಂಡ ಪಿಂಡವೆಂಬ ಭಾಂಡಂಗಳಾಗಬಲ್ಲವೆ? ಅಂತಹ ಆತ್ಮನಿಲ್ಲದಿರ್ದಡೆ ವಿಶ್ವ ಬ್ರಹ್ಮವೆನಿಸುವದೆ? ಅಂತಹ ಆತ್ಮನಿಲ್ಲದಿರ್ದಡೆ ಮನನೆನಹು ಜನಿಸಬಲ್ಲವೆ? ಅಂತಹ ಆತ್ಮನಿಲ್ಲದಿರ್ದಡೆ ವಿಷಯವ್ಯಸನಂಗಳು ತೋರಬಲ್ಲವೆ? ಇದು ಕಾರಣ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಮನದ ನೆನಹೇ ಆತ್ಮನಲ್ಲವಯ್ಯಾ ಮಲ್ಲಿಕಾರ್ಜುನಾ.
--------------
ಆದಯ್ಯ
ಆರು ದರುಶನಂಗಳು ತಮತಮಗೆ ಬೇರೆ ಬೇರೊಂದರಿಕೆ ಕಲ್ಪಿಸಿಕೊಂಡ, ಆರರಿಂ ಮೀರಿಪ್ಪ ಅಜಡಾದ್ವೈತವನಾರು ಬಲ್ಲರಯ್ಯಾ? ಒಂದು ಪಾಷಾಣವ ಸೀಳಿ ಹೋಳುಗುಟ್ಟಿ ತರಿದು ತೊರೆದು ಕರೆದು ಕಡೆದು ಕಂಡರಿಸಿ ಪೂಜೆಗೈದರಲ್ಲದೆ ನಿಜಲಿಂಗೈಕ್ಯವನಾರು ಬಲ್ಲರಯ್ಯಾ? ಸೌರಾಷ್ಟ್ರ ಸೋಮೇಶ್ವರಲಿಂಗದ ತನ್ನೈಕ್ಯ ಬೊಮ್ಮದನುಸಂಧಾನವೆಂದಾರು ಬಲ್ಲರಯ್ಯಾ?
--------------
ಆದಯ್ಯ
ಆಶ್ರಯನಲ್ಲ ಅನಾಶ್ರಯನಲ್ಲ, ದ್ವೈತಿಯಲ್ಲ ಅದ್ವೈತಿಯಲ್ಲ. ದೇಹವಿಲ್ಲದ ಲಿಂಗ, ಪ್ರಾಣವಿಲ್ಲದ ಶರಣ, ಉಭಯವಿಲ್ಲದ ಪರಮಾತ್ಮ,
--------------
ಆದಯ್ಯ
ಆಕಾಶದಲಾಡುವ ಹದ್ದನೊಂದು ಸರ್ಪನುಂಗಿತ್ತ ಕಂಡೆ. ಆ ಸರ್ಪ ಕಿಚ್ಚಿನೊಳು ಬಿದ್ದು ನಿಂದುರಿವುದ ಕಂಡೆ. ಷಣ್ಮುಖನ ಶಿರ ಹರಿದು ಬಯಲಾದುದ ಕಂಡೆ. ಉರಿ ಕೆಟ್ಟಲ್ಲಿ ಕರಿಯಿಲ್ಲ, ಭಸಿತವಿಲ್ಲ. ಈ ಪರಿಯ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರೆ ಬಲ್ಲರು
--------------
ಆದಯ್ಯ
ಆದಿಬಿಂದುವಿನಲ್ಲಿ ಅಖಂಡಿತ ಬಯಲು ನಾದ ಸುನಾದ ಮಹಾನಾದ ನಿಃಕಲನಾದತ್ರಯವ ಕೂಡಿದ ಚಿನ್ಮೂರ್ತಿ ತಾನಾದ ಅಖಂಡಿತ ಪರಿಪೂರ್ಣನಯ್ಯಾ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.
--------------
ಆದಯ್ಯ
ಆತ್ಮತೇಜದಿಂ ತೋರ್ಪ ಚಿದಹಮ್ಮಿನ ಮೂಲಾಹಂಕಾರವೆ ಕಾಯದ ಮೊದಲಿಂಗೆ ಬೀಜವೆಂಬುದನರಿತು, ಕೋಹಂ ಕೋಹಂ ಸೋಹಂ ಅಳಿದು ಬೀಜನಷ್ಟವಾಗಿ, ವೃಕ್ಷವಡಗಿ ಯಜ್ಞಸೂತ್ರದ ತ್ರಿನಾಡಿಯ ತ್ರಿಸರ ಹರಿದು, ಚೈತನ್ಯ ನಿಶ್ಚ್ಯೆತನ್ಯವಾದಲ್ಲಿ, ಸೌರಾಷ್ಟ್ರ ಸೋಮೇಶ್ವರಲಿಂಗ ನಿರುತ ಭರಿತ
--------------
ಆದಯ್ಯ
ಆಯತಲಿಂಗ ಅಂಗದಲ್ಲಿ ವೇಧಿಸಿಕೊಂಡ ಬಳಿಕ ಘನವೇದ್ಯವು ತಾನೆ, ಬೇರಿಲ್ಲ ಕಾಣಿರೆ. ಸ್ವಾಯತ ಸನ್ನಿಹಿತವೆಂಬವು ಬೇರಾಗಲರಿಯವಾಗಿ ಇಷ್ಟಲಿಂಗದಲ್ಲಿ ದೃಷ್ಟವ ಕಾಣಬಲ್ಲಡೆ, ಸೌರಾಷ್ಟ್ರ ಸೋಮೇಶ್ವರಲಿಂಗವೊಂದೇ, ಬೇರಿಲ್ಲ ಕಾಣಿರೆ.
--------------
ಆದಯ್ಯ
ಆಕಾರವಿಡಿದು ಅರ್ಚನೆಯ ಮಾಡಬೇಕಲ್ಲದೆ ನಿರಾಕಾರವ ನಂಬಲಾಗದಯ್ಯಾ, ಅಲ್ಲಿ ಮತ್ತೊಂದಿಲ್ಲವಾಗಿ. ನಿಧಾನ ಕೈಸಾರಿದ ಬಳಿಕ ಬಳಸಲರಿಯದೆ ಬಡತನವನನುಭವಿಸಬಹುದೆ? ಕಂಡು ಕಂಡು ನಂಬಲರಿಯದೆ ಇದ್ದಡೆ ಆ ಭಕ್ತಿಯ ಬಾಯಲ್ಲಿ ಹುಡಿಯ ಹೊಯ್ದು ಹೋಹನಯ್ಯಾ, ಸೌರಾಷ್ಟ್ರ ಸೋಮೇಶ್ವರನು.
--------------
ಆದಯ್ಯ
ಆನೆಂಬ ಹಮ್ಮು, ನೀನೆಂಬ ಚಿದಹಮ್ಮು, ಬೇರೆಂಬ ದಾಸೋಹಮ್ಮಳಿದ ಮತ್ತೆ ಆನೀನೆಂಬುದಿಲ್ಲ, ಅರಿವು ಮರವೆಯಿಲ್ಲ, ಬಂಧಮೋಕ್ಷವಿಲ್ಲ, ಪುಣ್ಯಪಾಪವಿಲ್ಲ, ಇಹಪರವಿಲ್ಲ. ಇಂತೀ ಚತುರ್ವಿಧಕ್ಕೊಳಗಲ್ಲದ ಹೊರಗಲ್ಲದ ಸೌರಾಷ್ಟ್ರ ಸೋಮೇಶ್ವರಲಿಂಗವನೇನೆನ್ನಬಹುದು?
--------------
ಆದಯ್ಯ
ಆಕೃತಿ ನಿರಾಕೃತಿಗಳೆಂಬ ಆಕೃತಿಯಳಿದು, ವ್ಯಾಕುಳ ನೀರಾಕುಳಂಗಳಡಗಿ, ನೀಕರಿಸುವುದು ಸ್ವೀಕರಿಸುವುದಿಲ್ಲದೆ ಚರಾಚರನಲ್ಲದೆ ಅಖಿಲಾತೀತನಾಗಿ ನಿಂದ ನಿಲುವು, ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.
--------------
ಆದಯ್ಯ