ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೇತ್ರಂಗಳ ಮುಚ್ಚಿ ರೂಹಿಲ್ಲದ ನಿಲವ ಕಾಣಬೇಕು. ಶ್ರೋತ್ರಂಗಳ ಮುಚ್ಚಿ ಶಬ್ದವಿಲ್ಲದ ನಾದವ ಕೇಳಬೇಕು. ಜಿಹ್ವೆಯ ಮುಚ್ಚಿ ಸ್ವಾದುವಿಲ್ಲದ ರುಚಿಯನರಿಯಬೇಕು. ನಾಸಿಕವ ಮುಚ್ಚಿ ಉಸುರ ನುಂಗಿದ ಪರಿಮಳವನರಿಯಬೇಕು. ಅಂಗವ ಮುಚ್ಚಿ ಲಿಂಗಸಂಗ ಸಮಸುಖವನರಿಯಬೇಕು. ಸೌರಾಷ್ಟ್ರ ಸೋಮೇಶ್ವರವಿಡಿದು, ಪಂಚೇಂದ್ರಿಯಗಳಳಿದು ಲಿಂಗೇಂದ್ರಿಯಗಳಾಗಬೇಕು.
--------------
ಆದಯ್ಯ
ನೆಲದ ಮೇಲಣ ನಿಧಾನವ ಕಂಡವರಲ್ಲದೆ ಆಕಾಶದೊಳಗೆ ಹೂಳಿರ್ದ ನಿಕ್ಷೇಪವ ಕಂಡವರಾರನೂ ಕಾಣೆ. ಖೇಚರಿಯ ಮುದ್ರೆಯಿಂದ ಗಗನದ ನಿಧಿಯನೆ ಕಂಡು ಆ ನಿದ್ಥಿಯೊಳಗೆ ನಿಧಾನವಾಗಿರಬಲ್ಲಡೆ ಸೌರಾಷ್ಟ್ರ ಸೋಮೇಶ್ವರಲಿಂಗ ಬೇರಿಲ್ಲ ಕಾಣಿರೆ,
--------------
ಆದಯ್ಯ
ನಾಲ್ಕುವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟು ಆಗಮ, ಮೂವತ್ತೆರಡು ಉಪನಿಷತ್ತುಗಳೆಲ್ಲವೂ ಪಂಚಾಕ್ಷರದ ಸ್ವರೂಪವನರಿಯದೆ ನಿಂದವು. ಏಳುಕೋಟಿ ಮಹಾಮಂತ್ರಂಗಳಿಗೆ ತಾನೆ ಮೂಲಮಂತ್ರವಾಗಿ ಸುರತಿಗೆ ಅಣಿಮಾದಿಯ ಕೊಟ್ಟು ಶರಣರಿಗೆ ತ್ರಿಣಯನ ಕೊಟ್ಟುದು ಈ ಪಂಚಾಕ್ಷರ ಪ್ರಣವದೊಳಡಕವಾದ ಪಂಚಾಕ್ಷರವನರಿತಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗಸಂಜ್ಞೆಯ ವರ್ಣವೆನ್ನ ಸರ್ವಾಂಗದಲ್ಲಡಗಿದವಯ್ಯಾ.
--------------
ಆದಯ್ಯ
ನೀರಮೇಲೆ ಒಂದು ನಟ್ಟ ಕಂಬವಿದ್ದಿತ್ತು. ಕಂಬದ ತುದಿಯಲ್ಲಿ ದೇಗುಲವಿದ್ದಿತ್ತು. ದೇಗುಲದ ಕೋಣೆಯಲ್ಲಿ ದೇವರಿದ್ದಿತ್ತು. ದೇವರ ದೇಗುಲವ ಅರಿದ ತಲೆನುಂಗಿ ಅಸುಗಳೆಯಿತ್ತು. ಸೌರಾಷ್ಟ್ರ ಸೋಮೇಶ್ವರಾ, ಇದೇನು ಚೋದ್ಯವೊ.
--------------
ಆದಯ್ಯ
ನಟ್ಟಡವಿಯಲ್ಲಿ ಕೆಂಡದ ಮಳೆ ಕರೆದು ಊರಡವಿಯನೊಂದಾಗಿ ಸುಟ್ಟಿತ್ತು ನೋಡಾ. ಊರೈವರನಾರೈವರ ಮೂಗು ಹೋಯಿತ್ತು ನೋಡಾ. ಹೋಗದ ಊರಿನ ಬಾರದ ದಾರಿಯ ಕಂಡು ಸುಖಿಯಾದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ನೆಳಲ ನುಡಿಸಿಹೆನೆಂದು ಬಳಲುವನಂತೆ, ಆಕಾಶವನಳೆತಕ್ಕೆ ತಂದಿಹೆನೆಂಬ ಪಂಡಿತನಂತೆ, ಆತ್ಮಸ್ವರೂಪವ ವರ್ಣದಿಂ ಕಂಡಿಹೆನೆಂಬ ಯೋಗಿಯಂತೆ, ವರ್ಣಾತೀತ ವೇದಾತೀತವೆಂಬ ಮಾತು ಹುಸಿಯಪ್ಪಡೆ ನಿಃಕಳಂಕ ಶಾಂತಮಲ್ಲಿಕಾರ್ಜುನನೆಂಬ ಲಿಂಗದಲ್ಲಿಯೇ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗದಲ್ಲಿಯೇ ಕಾಣಿರೇ.
--------------
ಆದಯ್ಯ
ನಾದವೇ ಲಿಂಗ, ಬಿಂದುವೇ ಪೀಠವಾಗಿ ಶಿವಶಕ್ತಿಸಂಪುಟವಾದ ಪಂಚಮದ ಕರ್ಮೇಶ ಲಿಂಗನಿರ್ವಯಲ ಪಿಂಡ, ಅಂಗವೆಂಬ ಪಿಂಡ ತದ್ರೂಪವೆನೆಯ್ದಿ ಪರಿಪೂರ್ಣ ಪಿಂಡಾಕಾಶರೂಪ ತಾನಾಗಿ ನುಡಿಗೆಡೆ ಇಲ್ಲ[ದೆ] ನಿಂದ ನಿರವಯ ಘನತೇಜ ಹೋ ಜ್ಯೋತಿಯಂತೆ ಇರ್ದುಯಿಲ್ಲದ ಬೆಡಗಿನ ಭೇದವ ನಿಮ್ಮಲ್ಲಿಯೇ ಕಂಡೆನಯ್ಯಾ, ಸೌರಾಷ್ಟ್ರ ಸೋಮೇಶ್ವರ.
--------------
ಆದಯ್ಯ
ನಾಲ್ಕು ವೇದಂಗಳುಪಮೆ, ಹದಿನಾರು ಶಾಸ್ತ್ರಂಗಳುಪಮೆ, ಹದಿನೆಂಟು ಪೌರಾಣ, ಇಪ್ಪತ್ತೆಂಟು ದಿವ್ಯಾಗಮಂಗಳುಪಮೆ, ಮೂವತ್ತೆರಡುಪನಿಷತ್ತುಗಳುಪಮೆ, ಏಳುಕೋಟಿ ಮಹಾಮಂತ್ರಂಗಳುಪಮೆ, ಅನೇಕ ಶಬ್ದ, ಅನೇಕ ಶಾಸ್ತ್ರ, ಅನೇಕ ತರ್ಕವ್ಯಾಕರಣಂಗಳೆಲ್ಲಾ ಉಪಮೆ, ಅನೇಕ ಮಂತ್ರ ತಂತ್ರ ಯಂತ್ರಸಿದ್ಧಿ ಬದ್ಧಂಗಳೆಲ್ಲಾ ಉಪಮೆ, ಚೌಷಷಿ* ವಿದ್ಯಂಗಳುಪಮೆ, ಕಾಣದ ಕಾಂಬುದುಪಮೆ, ಕೇಳದ್ದ ಕೇಳುವುದುಪಮೆ, ಅಸಾಧ್ಯವ ಸಾಧಿಸುವುದುಪಮೆ, ಅಭೇದ್ಯವ ಭೇದಿಸುವುದುಪಮೆ, ಉಪಮೆ ನಿಸ್ಥಲವಾಗಿ ಉಪಮಾಬಂಧನ ಮೀರಿ ಉಪಮೆ ನಿರುಪಮೆಗಳೆಂಬ ಜಿಗುಡಿನ ಜಿಡ್ಡುಗಳಚಿ ತರಂಗ ನಿಸ್ತರಂಗಗಳೆಂಬ ಭಾವದ ಸೂತಕವಳಿದು, ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದ ಉಪಮಾಬದ್ಧರು, ಉಪಮೆಯಿಂದುಪಮಿಸಿ ಉಪಮೆ[ಯಿಂ]ದಿಪ್ಪರಯ್ಯಾ.
--------------
ಆದಯ್ಯ
ನಾದಬ್ರಹ್ಮ ನಾದಾತೀತಬ್ರಹ್ಮ ಶಬ್ದಬ್ರಹ್ಮ ನಿಶ್ಶಬ್ದಬ್ರಹ್ಮ ವಿಶ್ವಬ್ರಹ್ಮ ಏಕಬ್ರಹ್ಮ ಸರ್ವಂ ಖಲ್ವಿದಂ ಬ್ರಹ್ಮ. ಇದಕ್ಕೆ ಶ್ರುತಿ: ನಾದಬ್ರಹ್ಮಮಯೋ ದೇವೋ ನಾದಾತೀತಂತು ತತ್ಪದಂ ಶಬ್ದಬ್ರಹ್ಮಮಯಂ ಸರ್ವಂ ನಿಶ್ಶಬ್ದಾ ಬ್ರಹ್ಮವೇದಿನಃ ವಿಶ್ವಬ್ರಹ್ಮಪ್ರವರ್ತಂತೇ ಏಕಂ ಬ್ರಹ್ಮ ಚ ಸುಧ್ರುವಂ ಸರ್ವಂ ಖಲ್ವಿದಂ ಬ್ರಹ್ಮ ಸರ್ವಾತೀತೋ ಮಹಾಪ್ರಭುಃ ಇಂತೆಂದುದಾಗಿ ಒಂದಹುದು ಒಂದನಲ್ಲವೆಂದಡೆ, ಶಿರ ತನ್ನದು ದೇಹ ಮತ್ತೊಬ್ಬರದೆಂದಡೆ, ಮೆಚ್ಚುವರೆ ಶಿವಜ್ಞಾನಿಗಳು? ಸೌರಾಷ್ಟ್ರ ಸೋಮೇಶ್ವರಲಿಂಗವನಹುದಲ್ಲವೆಂಬರೆ ಬಲ್ಲವರುರಿ
--------------
ಆದಯ್ಯ
ನೀರು ನೀರ ಕೂಡಿದಂತೆ, ಕ್ಷೀರಕ್ಷೀರ ಬೆರಸಿದಂತೆ ಸುಜ್ಞಾನಗುರುಪಾದೋದಕಾನಂದದೊಳಗೆ ಪ್ರಜ್ಞಾನಶರಣ, ಆನಂದಭಕ್ತಿಯಿಂದ ಸಮರಸವಾದ ಪರಮಸುಖದೊಳಗೆ ಎರಡರಿಯದ ವರಿõ್ಞನಿ, ನಿಜಭರಿತ ನಿರಾಳ ಸೌರಾಷ್ಟ್ರ ಸೋಮೇಶ್ವರನ ಶರಣ.
--------------
ಆದಯ್ಯ
ನಿರಿಂದ್ರಿಯನಾದ ಶಿವನು ತಾನೇ ದೇವದೇಹಿಕ ಭಕ್ತನಾಗಿ `ಅನ್ಯಪೂಜಾವಿನಿರ್ಮುಕ್ತೋ ಭಕ್ತೋ ಜಂಗಮಪೂಜಕಃ' ಅನ್ಯಪೂಜೆಯಂ ಬಿಟ್ಟು ಜಂಗಮಲಿಂಗವನೆ ಪೂಜಿಸುವಂಥ ಭಕ್ತ ಲಿಂಗೇಂದ್ರಿಯ ಮುಖದಿಂದವೇ ಸಕಲಭೋಗಂಗಳ ಭೋಗಿಸುವನು. ಅದೆಂತೆಂದಡೆ: ಜ್ಯೋತಿಯ ಮುಖದಲ್ಲಿ ರಜ್ಜು ತೈಲವನವಗ್ರಹಿಸುವಂತೆ, ಸಕಲದ್ರವ್ಯಂಗಳ ಅಗ್ನಿಯ ಮುಖದಲ್ಲಿ ನಿರ್ಜರರು ತೃಪ್ತಿಯನೆಯ್ದುವಂತೆ, ಸದ್ಬಕ್ತರ ಹೃದಯದಲ್ಲಿ ತೃಪ್ತಿಯನೆಯ್ದಿಪ್ಪನು ಶಿವನು. ಇದು ಕಾರಣ ಶಿವಭಕ್ತನಿರ್ದುದೆ ಅವಿಮುಕ್ತಕ್ಷೇತ್ರ. ಆತನ ಶಿರವೆ ಶ್ರೀಪರ್ವತ, ಭಾಳವೇ ಕೇತಾರ, ಭ್ರೂಮಧ್ಯವೇ ವಾರಣಾಸಿ, ನೇತ್ರವೇ ಪ್ರಯಾಗ, ಸರ್ವೇಂದ್ರಿಯಂಗಳೇ ಸರ್ವತೀರ್ಥಂಗಳು, ಪಾದವೇ ಅಷ್ಟಾಷಷಿ* ಕ್ಷೇತ್ರಂಗಳು, ಇಂತಪ್ಪ ಪವಿತ್ರಗಾತ್ರನ ಕಾಯವೇ ಕೈಲಾಸ. ಇಂತಪ್ಪ ಸದ್ಭಕ್ತನನೆನಗೆ ತೋರಿಸಿ ಬದುಕಿಸಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ನೆಣದ ಕೊಣ, ರಕ್ತದ ಹುತ್ತ, ಕೀವಿನ ಬಾವಿ, ರೋಮದ ಸೀಮೆ, ತ್ವಕ್ಕಿನಿಕ್ಕೆ, ಮಾಂಸದ ವಾಸ, ಕರುಳ ತಿರುಳು, ನರದ ಕರವತಿಗೆ, ಮಲಮೂತ್ರಂಗಳ ನೆಲೆವನೆ, ಕ್ರಿಮಿಯ ಸಮಯ, ಕೀಟಕದ ಕೊಟಾರ, ಶುಕ್ಲದ ಸಾಕಾರ, ಎಲುವಿನ ಬಲುಹಿಂದಿಪ್ಪ ಈ ಕಾಯ ಹೇಯ. ತೋರಿ ಹಾರುವ ಅದೃಶ್ಯ ದೃಶ್ಯವೀ ದೇಹ ತನ್ನದೆಂದು ನಚ್ಚಿ ಮಚ್ಚಿ ಹೆಚ್ಚಿ ಬೆಚ್ಚಿ ಕೆಚ್ಚುಗೊಂಡೊಚ್ಚತವೋದ ಮನಕ್ಕೆ ಇನ್ನಾವುದು ಗತಿಯೊ? ಸೌರಾಷ್ಟ್ರ ಸೋಮೇಶ್ವರಾ ಇಂತು ಭವಕ್ಕೆ ಮಾರುವೋದವರು ನಿಮ್ಮ ನೆನೆವುದೇ ಹುಸಿಯಯ್ಯಾ.
--------------
ಆದಯ್ಯ
ನಿಷ್ಕಲ ಷಟ್‍ಸ್ಥಲಲಿಂಗದ ಮೂಲಾಂಕುರವೆನಿಸುವ ಪರಮ ಕಳೆ, ಆ ಪರಮ ಕಳೆಯ ಪರಬ್ರಹ್ಮ ಪರಂಜ್ಯೋತಿ ಪರಾತ್ಪರ ಪರತತ್ವ ಪರಮಾತ್ಮ ಪರಮಜ್ಞಾನ ಪರಮಚೈತನ್ಯ ನಿಷ್ಕಲ ಚರವೆನಿಸುವ ಪರವಸ್ತು ಅದೆಂತೆಂದಡೆ: ವಾಚಾತೀತಂ ಮನೋತೀತಂ ಭಾವಾತೀತಂ ಚ ತತ್ಪರಂ ಜ್ಞಾನಾತೀತಂ ನಿರಂಜನಂ ನಿಃಕಲಾಃ ಸೂಕ್ಷ್ಮಭಾವತಃ ಎಂತೆಂದುದಾಗಿ, ನಿರವಯವಹ ಚರಲಿಂಗದ ಚೈತನ್ಯವೆಂಬ ಪ್ರಸನ್ನಪ್ರಸಾದಮಂ ಇಷ್ಟಲಿಂಗಕ್ಕೆ ಕಳಾಸಾನ್ನಿಧ್ಯವಂ ಮಾಡಿ ಆ ಚರಲಿಂಗದ ಸಮರಸ ಚರಣಾಂಬುವಿಂ ಮಜ್ಜನಕ್ಕೆರೆದು ನಿಜಲಿಂಗೈಕ್ಯವನೆಯ್ದಲರಿಯರು. ಅದೆಂತೆಂದಡೆ: ಹಸ್ತಪೀಯೋಠೇ ನಿಜಮಿಷ್ಟಲಿಂಗಂ ವಿನ್ಯಸ್ಯ ತಲ್ಲೀನ ಮನಃ ಪ್ರಚಾರಃ ಬಾಹ್ಯಕ್ರಿಯಾಸಂಕುಲನಿಃಸ್ಪೃಹಾತ್ಮಾ ಸಂಪೂಜಯತ್ಯಂಗ ಸ ವೀರಶೈವಃ ಆವನಾನೋರ್ವನು ಕರಪೀಠದಲ್ಲಿ ತನ್ನ ಶ್ರೀಗುರು ಕೊಟ್ಟ ಪ್ರಾಣಲಿಂಗವನ್ನು ಇರಿಸಿ, ಆ ಶಿವಲಿಂಗದಲ್ಲಿ ಮನವನೆಯ್ದಿದ ಮನಃಸಂಚಾರವುಳ್ಳಾತನಾಗಿ ಹೊರಗಣ ಕ್ರಿಯಾಸಮೂಹದಲ್ಲಿ ಬಯಕೆಯಳಿದು ಬುದ್ಧಿಯುಳ್ಳಾತನಾಗಿ ತನ್ನ ಪ್ರಾಣಲಿಂಗಮಂ ಪೂಜಿಸುತ್ತಿಹನು. ಆ ಪ್ರಾಣಲಿಂಗಾರ್ಚಕನಾದ ಲಿಂಗಾಂಗಸಂಬಂಧಿಯೇ ವೀರಶೈವನೆಂದರಿವುದು. ಅದೆಂತೆಂದಡೆ: ಕಂಡವರ ಕಂಡು ತೀರ್ಥದಲ್ಲಿ ಮಂಡೆಯ ಬೋಳಿಸಿಕೊಂಬ ಭಂಡರ ಮೆಚ್ಚುವರೆ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ನಾದಬಿಂದುಕಳೆಯ ಸಂದನರಿತು ಪಿಂಡಜ್ಞಾನಿಯಾಗಿ ಸ್ವಾನುಭಾವವುದಯಿಸಿ ಅನಾದಿಸಿದ್ಧನಾದ ತನ್ನ ತಾನೇ ಕಂಡು, ಚಿದ್ವಪುಷಲಿಂಗ ಆದಿಬಿಂದುವಿನೊಳು ನಿಂದು ಮೆರೆದ ಮಹಿಮನಲ್ಲಿ ಭೇದವಿಲ್ಲದಪ್ರತಿಮರು, ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ನೆಳಲಂತೆ ಮಾಯಾತಂತ್ರಿಯಲ್ಲ. ಆಕಾಶದಂತೆ ಶೂನ್ಯವಾದುದಲ್ಲ. ಯೋಗಿಗಳಂತೆ ಭ್ರೂನಿಟಿಲಮಧ್ಯದಲ್ಲಿ ಕಂಡೆನೆಂಬ ಸೊರಹಲ್ಲ. ವರ್ಣಾತೀತ ವೇದಾತೀತ ಭಾವಾತೀತವೆಂಬುದೇ ಪರಬ್ರಹ್ಮ ನೋಡಾ. ವ್ಯಾಪಕ ಸಗುಣನ ವಸ್ತು ಸಾಂಚಲ್ಯ ರೂಪು ರುಚಿಯ ವಿಜ್ಞಾನಿಯ ಸುತ್ತಿಪ್ಪುದು ಮನ, ಅಂತದಕ್ಕೆ ಸಾಕ್ಷಿಕನಾಗಿಪ್ಪುದಾತ್ಮ. ಇದು ಕಾರಣ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಮನವಾತ್ಮನ ತಿಳಿದು ನೋಡಯ್ಯಾ.
--------------
ಆದಯ್ಯ
ನಾಸಿಕಾಗ್ರ ಭ್ರೂನಿಟಿಲ ಮಧ್ಯದೊಳ್ಪ್ರಜ್ವಲಿಸಿ ಬೆಳಗಿದ ಸ್ವಯಂಪ್ರಕಾಶಲಿಂಗಕ್ಕೆ ಆಕಾಶದಿಂದೊಸರ್ದ ಅಗ್ಗವಣಿಯಿಂ ಮಜ್ಜನಂ ಮಾಡಿ, ಸ್ವಯಾನುಭಾವದಿಂ ಸವೆದ ನಿಜತತ್ವದ ಗಂಧವನಿತ್ತು, ಪಕ್ಷಾಪಕ್ಷಂಗಳಳಿದ ಅಕ್ಷಯದ ಅಕ್ಷತೆಯಂ ಧರಿಸಿ, ನೆನಹು ನಿರ್ವಾಣವಾದ ಮನೋಲಯವೆಂಬ ಪುಷ್ಪವನರ್ಪಿಸಿ, ಭಾವನಿರ್ಭಾವಂಗಳ ಸುಳುಹು ನಷ್ಟವಾದ ಸದ್ಭಾವದ ಧೂಪವನಿಕ್ಕಿ, ಸಮ್ಯಜ್ಞಾನದಿಂ ಪ್ರಕಾಶಿಸಿ ತೋರ್ಪ ದೀಪಮಂ ಬೆಳಗಿ, ಬ್ರಹ್ಮರಂಧ್ರದಿಂದೊಸರ್ದು ಪರಿತಪ್ಪ ಪರಮಾಮೃತವನಾರೋಗಣೆಯನವಧರಿಸಿ, ಉಲುಹಡಗಿದ ನಿಃಶಬ್ದವೆಂಬ ತಾಂಬೂಲವನ್ನಿತ್ತು, ಇಂತಪ್ಪ ಅಷ್ಟವಿಧಾರ್ಚನೆಯಿಂದರ್ಚಿಸಿ ಪರಮ ಪರಿಣಾಮವಿಂಬುಗೊಂಡ ಪರಮಪ್ರಸಾದವನವಗ್ರಹಿಸಿ ಪರಮಸುಖಿಯಾಗಿಪ್ಪ ಮಹಾಶರಣರ ತೋರಿ ಬದುಕಿಸಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ನಿಜಸುಖದ ಸಂಗದಿಂದ ನೆನಹಳಿದು, ಶಿವಾನುಭಾವದ ಸುಖದಲ್ಲಿ ಪ್ರಾಣವಡಗಿ ತೃಪ್ತಿಯಾಗಿ ನಿಂದ ನಿಲುವಿನ ನಿರ್ಣಯವೆ ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ ಓಗರವಾಯಿತ್ತು.
--------------
ಆದಯ್ಯ
ನಿಮ್ಮ ನೆನಹಿನ ಪಂಚಾಕ್ಷರವೆಂಬ ಪಂಚಾಮೃತದಿಂ ಮಜ್ಜನಕ್ಕೆರದು, ಶ್ರದ್ಧೆ ನಿಷೆ* ಅವಧಾನವೆಂಬ ಗಂಧಾಕ್ಷತೆ ಪುಷ್ಪವನಿತ್ತು, ಮೂಲದ ಜ್ವಾಲೆಯಲ್ಲಿ ಉಸುರ ನುಂಗಿದ ಧೂಪವನಿಕ್ಕಿ, ಸುಮನೋಜ್ಯೋತಿಯ ನಿವಾಳಿಯನೆತ್ತಿ, ಆನಂದ ಅಮೃತದಾರೋಗಣೆ, ಸಮತೆಯ ವೀಳೆಯವಿತ್ತು, ಪರಮೇಶ್ವರನ ಪ್ರಸನ್ನಪ್ರಸಾದಕ್ಕೆ ಮುಯ್ಯಾಂತಿರ್ದೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ