ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಬ್ಬನಿಗೆ ರೂಹಿಲ್ಲ, ಒಬ್ಬನಿಗೆ ರೂಹುಂಟು, ಒಬ್ಬನ ರೂಹು ಹೋಗುತ್ತ ಬರುತ್ತದೆ. ಮೂವರನೊಂದೆಡೆಗೆ ತಂದಡೆ ಏನಹರೆಂಬುದ ನೋಡಿಕೊಳ್ಳಿರಣ್ಣಾ. ಕಂಡಡೆ ಉಣಲಿಲ್ಲ, ಕಾಣದಿರ್ದಡೆ ಉಣದಿರಲಿಲ್ಲ. ಇದೇನು ಸೋಜಿಗವಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಒಡಲೋಪಾದಿಯಿಂದ ತನುವ ಹೊರೆವವನಲ್ಲ. ಶಿವಪ್ರಸಾದವಲ್ಲದನ್ಯವ ಭೋಗಿಸ. ಗುರುಕುರುಣವಿಡಿದಿಪ್ಪನಾಗಿ ಜನ್ಮಜಾಡ್ಯ ಸೂತಕಪಾತಕಂಗಳಿಲ್ಲ. ಜಂಗಮಲಿಂಗದ ತೃಪ್ತಿಯಿಂದ ತನ್ನ ತಾ ಹಾರಿ ಸಂಸಾರಕುಲಗಿರಿಯ ದಾಂಟಿ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಭಾವಶುದ್ಧಿಯಿಂದಿಪ್ಪನಯ್ಯಾ.
--------------
ಆದಯ್ಯ
ಒಂದು ಕಪಿಗೆ ಹತ್ತು ಮುಖ, ಆ ಹತ್ತು ಮುಖದಲ್ಲಿ ಹತ್ತುಮರದ ಹತ್ತು ಹಣ್ಣಯೆತ್ತೆತ್ತಿ ತಿನುತಿದ್ದಿತಯ್ಯಾ. ಆ ಹಣ್ಣಿನ ವಿಷಯವು ತಲೆಗೇರಿ ಮೂರು ಲೋಕವೆಲ್ಲಾ ಉರಿವುತ್ತಿದೆ. ಈ ಪರಿಯ ಪರಿಹರಿಸುವಡೆ ಹರಿಬ್ರಹ್ಮಾದಿಗಳಿಗೆಳವಲ್ಲ ನೋಡಯ್ಯಾ. ಅಗ್ನಿಯ ಘಟಿಕೆಯ ನುಂಗಲು ಉರಿಕೆಟ್ಟು ಸೌರಾಷ್ಟ್ರ ಸೋಮೇಶ್ವರಲಿಂಗ ಸಾಧ್ಯವಾಯಿತ್ತು.
--------------
ಆದಯ್ಯ