ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಂಚತತ್ವಂಗಳುವಿಡಿದಾಡುವ ಚತುರ್ದಶೇಂದ್ರಿಯ ವಿಕಾರಂಗಳು ತಾನಲ್ಲ, ತನ್ನವಲ್ಲ. ತನುವುಂಟೆಂದಡೆ ಅಹಮ್ಮಾದಿಗೆ ಸಂದು, ಬಂಧಮೋಕ್ಷಂಗಳಿಗೊಳಗಾಯಿತ್ತು ನೋಡಾ. ಕುರುಹಿಲ್ಲದ ಲಿಂಗ ಅರಿವಿನೊಳು ಬಳಿಸಂದಡೆ ಅರಿವು ಕುರುಹು ತೆರಹಿಲ್ಲದೆ ನಿಂದ ನಿಲವು ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ನಿಜ ತಾನಾದ ಶರಣ.
--------------
ಆದಯ್ಯ
ಪರಿಯಾಣವೇ ಭಾಜನವೆಂಬರು. ಪರಿಯಾಣ ಭಾಜನವೇರಿ ಅಲ್ಲ. ಘನಲಿಂಗಕ್ಕೆ ಶುದ್ಧ ನಿರ್ಮಲವಾದ ಸಕಲಕರಣಂಗಳೇ ಭಾಜನ. ನಿಜಾನಂದವೇ ಭೋಜನ. ಪರಿಣಾಮವೇ ಪ್ರಸಾದ. ಇಂತಿವರಲ್ಲಿ ನಿರುತನಾಗಿರಬಲ್ಲ ¸õ್ಞರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.
--------------
ಆದಯ್ಯ
ಪಂಚೇಂದ್ರಿಯಂಗಳು ಲಿಂಗಮುಖವಾಗಿ ನಿಂದು, ಮನಸಹಿತ ಪಂಚವಿಷಯಂಗಳಂಶದ ಸಕಲಸುಖಂಗಳು ಲಿಂಗಾರ್ಪಿತದಿಂದ ಚರಿಸುತ್ತ, ಬೇರೆ ಮತ್ತೊಂದು ದೆಸೆಯಿಲ್ಲದೆ ನಿಂದುವು, ಸೌರಾಷ್ಟ್ರ ಸೋಮೇಶ್ವರಲಿಂಗನಿವಾಸಿಯಾದ ಶರಣಂಗೆ.
--------------
ಆದಯ್ಯ
ಪೃಥ್ವಿಯ ಕೂಡಿ ನೆಲನಹನಲ್ಲ, ಅಪ್ಪುವ ಕೂಡಿ ಜಲವಹನಲ್ಲ, ಅಗ್ನಿಯ ಕೂಡಿ ಕಿಚ್ಚಿನಹನಲ್ಲ, ವಾಯುವ ಕೂಡಿ ಗಾಳಿಯಹನಲ್ಲ, ಆಕಾಶವ ಕೂಡಿ ಬಯಲಹನಲ್ಲ, ಆತ್ಮನ ಗೂಡಿ ಭವಕರ್ಮಿಯಹನಲ್ಲ. ಲಿಂಗವ ಕೂಡಿ ಲಿಂಗವಹನು ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಸರಣ.
--------------
ಆದಯ್ಯ
ಪರತತ್ವ ಪರಬ್ರಹ್ಮ ಪರಶಿವನಪ್ಪ ಮಂತ್ರಮೂರ್ತಿ ಸದ್ಗುರು ಕಣ್ಣಮುಂದಿರಲು ಸದಾ ಗುರುಸೇವೆಯಳವಟ್ಟು ಗುರು ಶುಶ್ರೂಷೆಯ ಮಾಡುವ ಶಿಷ್ಯಂಗೆ ಆ ಸದ್ಗುರು ಸೇವೆಯೇ ಚತುರ್ವಿಧ ಫಲ. ಗುರುಸೇವೆಯೇ ಅಷ್ಟಮಹದೈಶ್ವರ್ಯ, ಗುರುಸೇವೆಯೇ ಅಷ್ಟಭೋಗಂಗಳ ಅನು. ಇದು ಕಾರಣ ಸದ್ಗುರುಸೇವೆಯೇ ಸದ್ಯೋನ್ಮುಕ್ತಿ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಪುತ್ರೇಷಣ ವಿತ್ತೇಷಣ ದಾರೇಷಣಂಗಳೆಂಬ ಈಷಣತ್ರಯವನುಳಿದು ಅಸಿ ಮಸಿ ಕೃಷಿ ವಾಣಿಜ್ಯಗಳೆಂಬ ವ್ಯಾಪಾರ ಪಾರಂಗತನಾಗಿ ಸಂಸಾರ ಸ್ಪೃಹೆಯನುಳಿದು ನಿಸ್ಪೃಹನಾಗಿ, ರಕ್ತ ಅನುರಕ್ತ ಅತಿರಕ್ತವೆಂಬ ರಕ್ತತ್ರಯಗೆಟ್ಟು ವಿರಕ್ತನಾಗಿ ಸಗುಣದಲ್ಲಿ ಸಲ್ಲದೆ ನಿರ್ಗುಣದಲ್ಲಿ ನಿಲ್ಲದೆ ಸಗುಣ ನಿರ್ಗುಣಕ್ಕುಪಮಾತೀತವಾದ ಶಿವಲಿಂಗಾಂಗಿ ಸೌರಾಷ್ಟ್ರ ಸೋಮೇಶ್ವರಲಿಂಗವಾದುದೆನ್ನ ಇಷ್ಟ.
--------------
ಆದಯ್ಯ
ಪರಿಪೂರ್ಣ ಪರತತ್ವದಿಂದೊದಗಿದ ಆನಂದಭರಿತ ಪ್ರತ್ಯಕ್ಷಪರಮಾರ್ಥನಯ್ಯಾ. ಆಗುಹೋಗಿಲ್ಲದಸಾಧ್ಯವನೇನೆಂದುಪಮಿಸಬಹುದು? ಅಪ್ರತಿಮ ಸ್ವತಂತ್ರ ನಿರಾಳಭರಿತ ಸೌರಾಷ್ಟ್ರ ಸೋಮೇಶ್ವರನ ಶರಣ ನಿಜನಿಂದ ಸಹಜನಯ್ಯಾ.
--------------
ಆದಯ್ಯ
ಪೃಥ್ವಿಯ ಪೂರ್ವಾಶ್ರಯವಳಿದ ಭಕ್ತಂಗೆ ಆಚಾರಲಿಂಗಸಾಹಿತ್ಯ, ಅಪ್ಪುವಿನ ಪೂರ್ವಾಶ್ರಯವಳಿದ ಮಾಹೇಶ್ವರಂಗೆ ಗುರುಲಿಂಗಸಾಹಿತ್ಯ, ಅಗ್ನಿಯ ಪೂರ್ವಾಶ್ರಯವಳಿದ ಪ್ರಸಾದಿಗೆ ಶಿವಲಿಂಗಸಾಹಿತ್ಯ, ವಾಯುವಿನ ಪೂರ್ವಾಶ್ರಯವಳಿದ ಪ್ರಾಣಲಿಂಗಿಗೆ ಜಂಗಮಲಿಂಗಸಾಹಿತ್ಯ, ಆಕಾಶದ ಪೂರ್ವಾಶ್ರಯವಳಿದ ಶರಣಂಗೆ ಪ್ರಸಾದಲಿಂಗಸಾಹಿತ್ಯ, ಆತ್ಮನ ಪೂರ್ವಾಶ್ರಯವಳಿದ ಐಕ್ಯಂಗೆ ಮಹಾಲಿಂಗಸಾಹಿತ್ಯ, ಇಂತೀ ಷಡಂಗಗಳ ಪೂರ್ವಾಶ್ರಯವಳಿದ ನಿರಾಳಂಗೆ ಸೌರಾಷ್ಟ್ರ ಸೋಮೇಶ್ವರಲಿಂಗ ಒಮ್ಮುಖ.
--------------
ಆದಯ್ಯ
ಪ್ರಣವಾಂಕುರದಿಂ ತೋರಿತ್ತು ಚಿತ್ತು, ಆ ಚಿತ್ತುವಿಂ ಕಾಣಿಸಿತ್ತು ಮಹವು, ಆ ಮಹವೆ ವಾಚಸ್ಪತಿಯಾಗಿ ವೇದಾಂತ ವೇದ್ಯವಾಯಿತ್ತು. ಅದು ತಾನೆ ಪರಮಜ್ಞಾನಸ್ವಯದಿಂ ಸಮ್ಯಕ್ ಪರಬ್ರಹ್ಮ ಸ್ವಸುಖವೆಂದುದಾಗಿ ಇದಕ್ಕೆ ಶ್ರುತಿ: ಓಂ ಅಗ್ನಯೇ ಸಮಿಧಮಾರುಹಂ ಬೃಹತೇ ಜಾತವೇದಸ್ಸೇತಯಾ ತ್ವಮಗ್ನೇ ವರ್ಧಸ್ವ ಸಮಿಧಾ ಬ್ರಹ್ಮಣಾ ವಯಂ ಸ್ವಯಮಿತಿ ಇಂತೆಂದುದಾಗಿ. ಸೌರಾಷ್ಟ್ರ ಸೋಮೇಶ್ವರಲಿಂಗ, ಸಯಸುಖವಪೂರ್ವವಯ್ಯಾ.
--------------
ಆದಯ್ಯ
ಪಂಚಬ್ರಹ್ಮದಿಂದಾದುದಲ್ಲ, ಸಂಚಿತ, ಪ್ರಾರಬ್ಧ, ಆಗಾಮಿಯನುಳ್ಳುದಲ್ಲ. ಸಚ್ಚಿದಾನಂದಮಯವಾದಾತ್ಮನನಿಂತೀ ಪರಿಯಲ್ಲಿ ತಿಳಿದು ನೋಡಯ್ಯಾ. ತಾ ಹುಟ್ಟಿ ತಮ್ಮವ್ವೆಯ ಬಂಜೆ ಎಂಬವನಂತೆ, ಹೊತ್ತುದ ಹುಸಿ ಮಾಡುವ ಪರಿಯ ನೋಡಾ. ಅವನಿಲ್ಲದಷ್ಟಪುತ್ರರುಂಟೆ? ಸೌರಾಷ್ಟ್ರ ಸೋಮೇಶ್ವರಲಿಂಗವಿಲ್ಲದಿರಲು ಆನೂ ನೀನೂ ಉಂಟೆ ಹೇಳಾ, ಮಲ್ಲಿಕಾರ್ಜುನಾ?
--------------
ಆದಯ್ಯ
ಪಿಂಡಪ್ರಸಾದಿಗಳ ಕಂಡುಬಲ್ಲೆ, ಇಂದ್ರಿಯಪ್ರಸಾದಿಗಳ ಕಂಡುಬಲ್ಲೆ, ಕರಣಪ್ರಸಾದಿಯ ಕಂಡುಬಲ್ಲೆ, ಕಾಯಪ್ರಸಾದಿಗಳ ಕಂಡುಬಲ್ಲೆ, ಜೀವಪ್ರಸಾದಿಗಳ ಕಂಡುಬಲ್ಲೆ, ಭಾವಪ್ರಸಾದಿಗಳ ಕಂಡುಬಲ್ಲೆ, ಲಿಂಗಪ್ರಸಾದಿಗಳಪೂರ್ವವಯ್ಯಾ. ಭೋಗಲಿಂಗಕ್ಕೆ ಭೋಗವನಿತ್ತು ಭೋಗಿಸಬಲ್ಲನು, ಅಚ್ಚಲಿಂಗಪ್ರಸಾದಿ ಸೌರಾಷ್ಟ್ರ ಸೋಮೇಶ್ವರಲಿಂಗವ ಭೋಗಸಹಿತ ಬೆರೆವ ಪ್ರಸಾದಿ.
--------------
ಆದಯ್ಯ
ಪಂಚಗವ್ಯದಿಂದಾದ ಗೋಮಯವ ತಂದಾರಿಸಿ ಪಂಚಾಮೃತದ ಸಂಪರ್ಕದಿಂ ಪಂಚಾಕ್ಷರಿಯ ಮಂತ್ರದಿಂದಭಿಮಂತ್ರಿಸಿ ಶಿವಜ್ಞಾನವಹ್ನಿಯಲ್ಲಿ ದಹಿಸಿ ಆ ವಿಭೂತಿಯಂ ಸುಕೃತದಿಂ ತೆಗೆದುಕೊಂಡು ಎಡದ ಹಸ್ತದೊಳ್ವಿಡಿದುಕೊಂಡು, ಬಲದ ಹಸ್ತದಿಂ ಮುಚ್ಚಿಕೊಂಡು ಜಲಮಿಶ್ರಮಂ ಮಾಡಿ, ಲಲಾಟ ಮೊದಲಾಗಿ ದಿವ್ಯಸ್ಥಾನಂಗಳೊಳು ಧರಿಸಿ ಲಿಂಗರ್ಚನೆಯ ಮಾಡುವ ಶರಣ ತಾನೆ ವೇದವಿತ್ತು. ಆತನೆ ಶಾಸ್ತ್ರಜ್ಞ, ಆತನೆ ಸದ್ಯೋನ್ಮುಕ್ತನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಪಂಚಬ್ರಹ್ಮದಿಂದುದಯಿಸಿದ ನಂದೆ ಭದ್ರೆ ಸುರಭಿ ಸುಶೀಲೆ ಸುಮನೆ ಎಂಬ ಪಂಚಗೋವುಗಳಿಂ ಭೂತಿ ಭಸಿತ ಭಸ್ಮಕ್ಷಾರ ರಕ್ಷೆಯಿಂದ ಪಂಚನಾಮವಾಯಿತ್ತು. ಅದೆಂತೆಂದಡೆ: ಶಿವಜ್ಞಾನಸುಖದ ಮಹದೈಶ್ವರ್ಯರೂಪದಿಂ ಭೂತಿಯಾಯಿತ್ತು. ಸಕಲಕಾಮಂಗಳ ಬಯಕೆಯ ಸುಟ್ಟು ನಿಃಕಾಮರೂಪದಿಂ ಭಸಿತವಾಯಿತ್ತು. ಪೂರ್ವಕರ್ಮಗಳನುರಪಿ ನಿಃಕರ್ಮರೂಪದಿಂ ಭಸ್ಮವಾಯಿತ್ತು. ಮಲಮಾಯೆಯ ಕಳೆವುದರಿಂ ಕ್ಷಾರವಾಯಿತ್ತು. ಭೂತಪ್ರೇತಪಿಶಾಚಂಗಳ ಹೊದ್ದಲೀಯದಿರ್ಪುದರಿಂ ರಕ್ಷೆಯಾಯಿತ್ತು. ಇಂತಪ್ಪ ವಿಭೂತಿಯ ಮಹಾತ್ಮೆಯನರಿತು, ನೀನೊಲಿದ ವಿಭೂತಿಯ ಆನು ಧರಿಸಿ ಬದುಕಿದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಪತಿವ್ರತೆಯಾದಡೆ ಅನ್ಯಪುರುಷರ ಸಂಗವೇತಕ್ಕೆ? ಲಿಂಗಸಂಗಿಯಾದಡೆ ಅನ್ಯಸಂಗವೇತಕ್ಕೆ? ಈ, ಕಂಡ ಕಂಡವರ ಹಿಂದೆ ಹರಿವ ಚಾಂಡಾಲಗಿತ್ತಿಯಂತೆ ಒಬ್ಬರ ಕೈವಿಡಿದು, ಒಬ್ಬರಿಗೆ ಮಾತಕೊಟ್ಟು, ಮತ್ತೊಬ್ಬರಿಗೆ ಸನ್ನೆಮಾಡುವ ಬೋಸರಗಿತ್ತಿಯಂತೆ ಪ್ರಾಣಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಹರಿಸಿ ಹೊಡೆವಡಲೇತಕ್ಕೆ? ಇದು ಕಾರಣ ಸೌರಾಷ್ಟ್ರ ಸೋಮೇಶ್ವರಾ, ಇಂತಪ್ಪ ಪಾಪಿಗಳ ನುಡಿಸಿದಡೆ ಅಘೋರನರಕ ತಪ್ಪದಯ್ಯಾ.
--------------
ಆದಯ್ಯ
ಪರಶಿವನೆ ಅಪಸ್ವರೂಪನಾಗಿ ಗುರುಸಾಂಪ್ರದಾಯಕನಾದನಾ ಸದ್ಗುರು, ಸರ್ವಕಾರಣನು. ಭೋಗಮೋಕ್ಷೋಪಾಯವನೀವ ನಿತ್ಯನು. ಆ ಸದ್ಗುರುವೆ ಪಂಚಸಂಜ್ಞೆಯೆನಿಸುವ ಪರಬ್ರಹ್ಮಸ್ವರೂಪನು ತಾನೆ, ಸೌರಾಷ್ಟ್ರ ಸೋಮೇಶ್ವರನು ಶಿಷ್ಯಕಾರಣನು.
--------------
ಆದಯ್ಯ
ಪ್ರತಿಯಿಲ್ಲದ ಲಿಂಗದಲ್ಲಿ ಪ್ರತಿರಹಿತವಾದ ಮಹಿಮನಿಗೆ ಅತಿಶಯವೊಂದಿಲ್ಲಾಗಿ ಸಂಸ್ಮೃತಿ ವಿಸ್ಮೃತಿಗಳಿಲ್ಲ. ಸೂಕ್ಷ್ಮಾಸೂಕ್ಷ್ಮವಿಲ್ಲ ಯೋಗವಿಯೋಗವಿಲ್ಲ. ಅಭೇದ್ಯ ಚಿತ್ಪ್ರಕಾಶಂಗೆ ಒಳಹೊರಗಿಲ್ಲ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣಂಗೆ.
--------------
ಆದಯ್ಯ
ಪ್ರಸಾದ ಪ್ರಸಾದವೆಂಬರು, ಪ್ರಸಾದವಾವುದೆಂದರಿಯರು. ಅನ್ನವೆ ಪ್ರಸಾದವೆಂದು ಕೊಡುವಾತ ಶರಣನಲ್ಲ. ಅನ್ನವೆ ಪ್ರಸಾದವೆಂದು ಕೊಂಬಾತ ಭಕ್ತನಲ್ಲ. ಅದೆಂತೆಂದಡೆ: ಅನ್ನ ಮಹಾರೇತ್ಸರ್ವಮನ್ನಮುತ್ಪತ್ತಿಹೇತವೇ ಅನ್ನಮಾಭ್ಯಂತರಂ ಪ್ರಾಣಂ ಸರ್ವಮನ್ನಮಯಂ ಜಗತ್ ಇಂತೆಂದುದಾಗಿ, ಅನ್ನ ಜೀವಕ್ಕೆ ಆಧಾರ, ಅನ್ನವೇ ಸರ್ವಜನಕ್ಕೆ ಸನ್ಮತ. ಇದು ಕಾರಣ, ಅನ್ನವೆ ಪ್ರಸಾದವಲ್ಲ. ಶರಣನಪ್ಪ ಸದ್ಗುರುಸ್ವಾಮಿ ನೆತ್ತಿಯಲ್ಲಿರ್ದ ಉತ್ತಮ ಪ್ರಸಾದವನರು[ಹೆ] ಬ್ರಹ್ಮರಂಧ್ರದಲ್ಲಿ ಪ್ರಕಾಶಿಸುತಿರ್ಪ ಮಹಾಲಿಂಗದೊಳ್ಪುಟ್ಟಿದ ಪರಮಾಮೃತವೆ ಪ್ರಸಾದ. ಅಂತಪ್ಪ ಪ್ರಸಾದಗ್ರಾಹಕತ್ವವೆಂತಪ್ಪುದೆಂದಡೆ, ಅಂಗವ ಮರೆದು ಮನಮಗ್ನವಾಗಿ ಉಚ್ಛ್ವಾಸ ನಿಶ್ವಾಸಂಗಳಡಗಿ, ಪ್ರಾಣನು ಪ್ರಸಾದದೊಳ್ಮುಳುಗಿ ಪರಮಕಾಷೆ*ಯನೆಯ್ದಿ ನಿಂದಾತನೆ, ಸೌರಾಷ್ಟ್ರ ಸೋಮೇಶ್ವರನಲ್ಲಿ ಮಹಾಪ್ರಸಾದಿ ಎನಿಸಿಕೊಂಬನು.
--------------
ಆದಯ್ಯ
ಪರಮಜ್ಞಾನಕ್ಕೆ ಕರ್ತೃವಾದ ಸದಾಶಿವನೆ ಜೀವಭಾವದಿಂ ಪ್ರಪಂಚಿನ ಘಟದಿಂದೈದೆನುವಪ್ಪ ಪಂಚೇಂದ್ರಿಯಗಳ ಪಂಚವಿಷಯಂಗಳನರಿತರ್ಪಿಸಿ ತೃಪ್ತಿಯನೆಯ್ದಿ, ಆ ಜೀವನು ಅಂಡಜ ಸ್ವೇದಜ ಉದ್ಬಿಜ ಜರಾಯುಜಂಗಳೆಂಬ ಚತುರ್ವಿಧವರ್ಗಂಗಳೊಳು ಚತುರ್ದಶಭುವನದೊಳುದಯಿಸಿ, ಸ್ತ್ರೀ[ಪುಂನ]ಪುಂಸಕಾದಿಯಿಂ ಜನಿಸಿ, ಪುತ್ರ ¥õ್ಞತ್ರಂಗಳಿಂ ದೃಶ್ಯಮಾಗಿ ಯಸ್ಯ ಏವಂ ಆ ಮುನ್ನಿನ ಪರಮಜ್ಞಾನದಿಂದ ಜೀವನು ಸದಾಶಿವನಾದುದಕ್ಕೆ ಶ್ರುತಿ: ಯಥಾ ಖಲು ವೈ ಧೇನುಂ ತೀರ್ಥೇ ತರ್ಪಯತಿ ಏವಮಗ್ನಿ ಹೋತ್ರೀ ಯಜಮಾನಂ ತರ್ಪಯತಿ ಯಸ್ಯ ಪ್ರಜಯಾ ಪಶುಭಿಃ ಪ್ರತುಷ್ಯತಿ ಸುವರ್ಗಂ ಲೋಕಂ ಪ್ರಜಾನಾತಿ ಪಶ್ಯತಿ ಪುತ್ರ ಪೌತ್ರಂ ಪ್ರವ್ರಜಯಾ ಪಶುಭಿರ್ಮಿಥುನೈರ್ಜಾಯತೇ ಯಸ್ಯೇನಂ ವಿದುಷೋ[s]ಗ್ನಿಹೋತ್ರಂ ಯ ಏವಂ ವೇದ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರಲಿಂಗ ಶಿವನಾಗಬಲ್ಲ ಜಗವಾಗಬಲ್ಲ ಜೀವವಾಗಬಲ್ಲನಯ್ಯಾ.
--------------
ಆದಯ್ಯ
ಪ್ರಾಣಲಿಂಗಧಾರಣದಲ್ಲಿಯಲ್ಲದೆ ಪ್ರಾಣವಾಯುಧಾರಣದಲ್ಲಿ ಜೀವದ ಅನಾದಿಕರ್ಮ ಕೆಡದು ನೋಡಯ್ಯಾ. ಶಿವಾದ್ವೈತಜ್ಞಾನದಲ್ಲಿಯಲ್ಲದೆ ಆತ್ಮಾದ್ವೈತಜ್ಞಾನದಲ್ಲಿ ಮೂಲ ಅವಿದ್ಯೆ ಕೆಡದು ನೋಡಯ್ಯಾ. ತನುಭಾವವಳಿದು ಬ್ರಹ್ಮಭಾವ ಕರಿಗೊಂಡಲ್ಲದೆ ಅಷ್ಟಾದಶದೋಷಂಗಳಳಿಯವು. ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಅವಿರಳನಾದಲ್ಲದೆ ನಿತ್ಯಮುಕ್ತಿಯಿಲ್ಲ ನೋಡಯ್ಯಾ.
--------------
ಆದಯ್ಯ
ಪರದಿಂದಾದ ಅಪರಸ್ವರೂಪಂಗೆ ಉಪಾಧಿಯೆಂಬುದಿಲ್ಲ. ಸಂಸಾರವಿಲ್ಲ ಸ್ಮೃತಿ ಮೃತಿ ಇಲ್ಲವಾಗಿ ಒಳಗಿಲ್ಲ ಹೊರಗಿಲ್ಲ. ಸ್ವಯಭರಿತನಾಗಿ ತಾನು ತಾನಾಗಿ ನಿಂದ ಸಹಜಂಗೆ ಸೌರಾಷ್ಟ್ರ ಸೋಮೇಶ್ವರಲಿಂಗ ಬೇರಿಲ್ಲ.
--------------
ಆದಯ್ಯ
ಪರಸತಿಗಳುಪುವ ಪಾರದ್ವಾರಿಯರಿವು ಪರವಕ್ಕು ಕಾಣಿಭೋ. ಭ್ರೂಣಹತ್ಯಕರ್ಮಿಯ ಶಿವಜ್ಞಾನ ಸ್ವಯವಲ್ಲ ಕಾಣಿಭೋ. ಸ್ತ್ರೀ ಬಾಲ ಘಾತಕಂಗೆ ನಿಜಭಾವ ತಾನೆ ಭ್ರಮೆಯಕ್ಕು ಕಾಣಿಭೋ. ಕ್ಷಣಕ್ಕೊಂದು ಬಗೆವ ಕ್ಷಣಿಕ ಚಿತ್ತರಿಗೆ ಬ್ರಹ್ಮಾನುಸಂಧಾನದನುವೆಯ್ದದು ಕಾಣಿಭೋ. ಇದಕ್ಕೆ ಶ್ರುತಿ: ಪರದಾರೋ ಪರದ್ವಾರೀ ಭ್ರೂಣಹತ್ಯಾತಿ ಕರ್ಮಣಾ ಸ್ತ್ರೀಬಾಲಘಾತಕೋ ಯಶ್ಚದೇವೋ ಗಚ್ಚನ್ನಗಚ್ಚತಿ ಇಂತೆಂದುದಾಗಿ, ಇಂತಿವರೊಳಗೊಂದುಳ್ಳವರು ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ ಸಲ್ಲರು ಕಾಣಿಭೋ.
--------------
ಆದಯ್ಯ
ಪಂಚಬ್ರಹ್ಮದಿಂದೊಗೆದ ಪಂಚಭೂತಾಂಶದ ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಂಗಳಳವಟ್ಟು, ಪಂಚವಿಷಯಂಗಳು ಲಿಂಗಸಂಗವ ಮಾಡಿದ ಕಾರಣ ಮಲ ಕರ್ಮ ಮೊದಲಾದ ಸರ್ವಸೂತಕ ನಿವೃತ್ತಿಯಾಗಿ ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ ತೃಪ್ತಿಯಾಯಿತ್ತು
--------------
ಆದಯ್ಯ
ಪಾತಾಳದಿಂ ಕೆಳಗೆ ಪಾದ, ಸತ್ಯರ್ಲೋಕದಿಂ ಮೇಲೆ ಉತ್ತಮಾಂಗ, ಬ್ರಹ್ಮಾಂಡವೇ ಮುಕುಟ, ಗಗನವೇ ಮುಖ, ಚಂದ್ರಾರ್ಕಾಗ್ನಿಗಳೇ ನೇತ್ರ, ದಶದಿಕ್ಕುಗಳೇ ಬಾಹುಗಳು, ಮಹದಾಕಾಶವೇ ಶರೀರ, ತರುಗಳೇ ತನೂರುಹ, ಶೂನ್ಯವೇ ಕರಸ್ಥಲದ ಲಿಂಗ, ನಕ್ಷತ್ರವೇ ಪುಷ್ಪ, ನಿತ್ಯವೇ ಪೂಜೆ, ಮೇಘವೇ ಜಡೆ, ಬೆಳ್ದಿಂಗಳೇ ವಿಭೂತಿ, ಪರ್ವತಂಗಳೇ ರುದ್ರಾಕ್ಷಿಗಳು, ಪಂಚಬ್ರಹ್ಮವೇ ಪಂಚಾಕ್ಷರ, ತತ್ವಂಗಳೇ ಜಪಮಾಲೆ, ಮೇರುವೇ ದಂಡಕೋಲು, ಸಮುದ್ರವೇ ಕಮಂಡಲು, ಶೇಷನೇ ಕಟಿಸೂತ್ರ, ಜಗವೇ ಕಂಥೆ. ಅನಂತವೇ ಕೌಪೀನ, ತ್ರಿಗುಣವೊಂದಾದುದೇ ಖರ್ಪರ, ಚತುರ್ಯುಗವೇ ಗಮನ, ಮಿಂಚೇ ಅಂಗರುಚಿ, ಸಿಡಿಲೇ ಧ್ವನಿ, ವೇದಾಗಮವೇ ವಾಕ್ಯ, ಜ್ಞಾನಮುದ್ರೆಯೇ ಉಪದೇಶ, ಪೃಥ್ವಿಯೇ ಸಿಂಹಾಸನ, ದಿವಾರಾತ್ರಿಯೇ ಅರಮನೆ, ಶಿವಜ್ಞಾನವೇ ಐಶ್ವರ್ಯ, ನಿರಾಳವೇ ತೃಪ್ತಿ. ಇಂತಪ್ಪ ಚೈತನ್ಯಜಂಗಮಕ್ಕೆ ಆನು ನಮೋ ನಮೋ ಎನುತಿರ್ದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಪ್ರಸಾದವೇ ಪರಮಜ್ಞಾನ, ಪ್ರಸಾದವೇ ಪರಾಪರ, ಪ್ರಸಾದವೇ ಪರಬ್ರಹ್ಮ, ಪ್ರಸಾದವೇ ಪರಮಾನಂದ, ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಪ್ರಸಾದವೇ ಜಂಗಮ, ಪ್ರಸಾದವೇ ಪರಿಪೂರ್ಣ, ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸನ್ನತೆಯೆ ಪ್ರಸಾದ. ಇಂತಪ್ಪ ಪ್ರಸಾದದ ಮಹಾತ್ಮೆಗೆ ಆನು ನಮೋ ನಮೋಯೆನುತಿರ್ದೆನು.
--------------
ಆದಯ್ಯ
ಪೃಥ್ವಿಯ ಕಠಿಣವಳಿದ ಭಕ್ತಂಗೆ ಜಾಗ್ರಾವಸ್ಥೆಯಿಲ್ಲ. ಅಪ್ಪುವಿನ ಮೃದುವಳಿದ ಮಾಹೇಶ್ವರಂಗೆ ಸ್ವಪ್ನಾವಸ್ಥೆಯಿಲ್ಲ. ಅಗ್ನಿಯ ಉಷ್ಣವಳಿದ ಪ್ರಸಾದಿಗೆ ಸುಷಪ್ತ್ಯವಸ್ಥೆಯಿಲ್ಲ. ವಾಯುವಿನ ಗಮನವಳಿದ ಪ್ರಾಣಲಿಂಗಿಗೆ ತುರೀಯಾವಸ್ಥೆಯಿಲ್ಲ. ಆಕಾಶದ ಶಬ್ದಗುಣವಳಿದ ಶರಣಂಗೆ ತುರೀಯಾತೀತ ನಿರವಸ್ಥೆಯಿಲ್ಲ. ಆತ್ಮತೇಜದ ಮೂಲಾಹಂಕಾರವಳಿದ ಐಕ್ಯಂಗೆ ಇನಿತೆನಿತೇನೂ ಇಲ್ಲ. ಸೌರಾಷ್ಟ್ರ ಸೋಮೇಶ್ವರನಂಗಂಗೊಂಡ ಸುರಾಳ ನಿರಾಳ ನಿರವಯ ಧ್ಯಾನಾತೀತ ಮನಾತೀತ ಭಾವಾತೀತ ಜ್ಞಾನಾತೀತ ಅಗೋಚರ ಅತ್ಯತಿಷ*ದ್ದಶಾಂಗುಲಂ.
--------------
ಆದಯ್ಯ

ಇನ್ನಷ್ಟು ...