ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದಕ್ಷಿಣದ್ವಾರದ ವೃಕ್ಷದ ತಂಪಿನಲ್ಲಿ ಸ್ವಯಂಜ್ಯೋತಿ ಉರಿವುದ ಕಂಡೆ. ದೀಪ ಕೆಟ್ಟು ವೃಕ್ಷವಳಿದು ದಕ್ಷಿಣದ್ವಾರವ ದಾಂಟಿ ಉತ್ತರದ್ವಾರದ ಬಾಗಿಲ ಬಿಯ್ಯಗ ತೆಗೆದಲ್ಲಿ ನಾದಮೂರುತಿಲಿಂಗವ ಕಂಡೆ. ಮುಟ್ಟಿ ಪೂಜಿಸಿ ಹೋದಾತನ ನೆಟ್ಟನೆ ನುಂಗಿ, ತಾ ಬಟ್ಟಬಯಲಾಯಿತ್ತು ನೋಡಾ, ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು.
--------------
ಆದಯ್ಯ
ದೇಹಿಯಲ್ಲ ನಿರ್ದೇಹಿಯಲ್ಲ ನಿತ್ಯ, ಫಲಪದವ ಮೀರಿದ ಸ್ವತಂತ್ರ, ಆಗುಹೋಗಿಲ್ಲದ ಭರಿತ, ಅಚಲಲಿಂಗ ಸನ್ನಹಿತ, ನಿಜನಿಂದ ಘನತೇಜ. ಹೆಸರಿಡಬಾರದ ಹಿರಿಯನಯ್ಯಾ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ದೇಹಾಭಿಮಾನವಳಿದು, ಪರಶಿವಜ್ಞಾನವು ಸ್ವಾನುಭಾವಜ್ಞಾನವು ಒಂದೆಯಾಗಿ, ಭಿನ್ನಜ್ಞಾನದ ಬನ್ನವಳಿದು ಅವಿರಳಜ್ಞಾನವಳವಟ್ಟಲ್ಲಿ ಮನವೆಲ್ಲೆಲ್ಲಿಗೆಯ್ದಿದರಲ್ಲಲ್ಲಿಯೇ ಶಿವನು ಸ್ವಯವದೆಂತೆಂದಡೆ, ಇದಕ್ಕೆ ಶ್ರುತಿ: ದೇಹಾಭಿಮಾನೇ ಗಲಿತೇ ವಿಜ್ಞಾತೇಚ ಪದೇ ಶಿವೇ ಯತ್ರ ಯತ್ರ ಮನೋ ಯಾತಿ ತತ್ರ ತತ್ರ ಶಿವಃ ಸ್ವಯಂ ಎಂದುದಾಗಿ ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ಸಚ್ಚಿದಾನಂದಭರಿತರು.
--------------
ಆದಯ್ಯ
ದೇಹಾರ್ಥಪ್ರಾಣಾಭಿಮಾನಕ್ಕೆ ಶ್ರೀಗುರು ಕರ್ತನಾಗಿ ತಾನು ಭೃತ್ಯನಾಗಿ ಒಂದು ನಿಮಿಷ ತ್ರಿಕರಣಶುದ್ಧನಾಗಿ ಗುರುಸೇವೆಯ ಮಾಡುವ ಶಿಷ್ಯಂಗೆ ಗುರುವುಂಟು, ಗುರುವುಂಟಾಗಿ ಲಿಂಗವುಂಟು, ಲಿಂಗವುಂಟಾಗಿ ಜಂಗಮವುಂಟು, ಜಂಗಮವುಂಟಾಗಿ ಪ್ರಸಾದವುಂಟು, ಇಂತು ಗುರುಚರಲಿಂಗಪ್ರಸಾದ ಒಂದೇಯಾಗಿ ಸೇವಿಸಬಲ್ಲನಾ[ಗೆ] ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ನಿತ್ಯಮುಕ್ತಿ.
--------------
ಆದಯ್ಯ
ದೇವದೇಹಿಕ ಭಕ್ತನಾಗಿ ಶ್ರೋತ್ರವ ಲಿಂಗಕ್ಕೆ ಕೇಳಲಿತ್ತು ಪ್ರಸಾದಶ್ರೋತ್ರದಲ್ಲಿ ಕೇಳುವನಾ ಶರಣನು. ತ್ವಕ್ಕು ಲಿಂಗಕ್ಕೆ ಸೋಂಕಲಿತ್ತು ಪ್ರಸಾದತ್ವಕ್ಕಿನಲ್ಲಿ ಸೋಂಕುವನಾ ಶರಣನು. ನೇತ್ರವ ಲಿಂಗಕ್ಕೆ ನೋಡಲಿತ್ತು ಪ್ರಸಾದನೇತ್ರದಲ್ಲಿ ನೋಡುವನಾ ಶರಣನು. ಜಿಹ್ವೆಯ ಲಿಂಗಕ್ಕೆ ರುಚಿಸಲಿತ್ತು ಪ್ರಸಾದಜಿಹ್ವೆಯಲ್ಲಿ ರುಚಿಸುವನಾ ಶರಣನು. ಪ್ರಾಣವ ಲಿಂಗಕ್ಕೆ ಘ್ರಾಣಿಸಲಿತ್ತು ಪ್ರಸಾದಘ್ರಾಣದಲ್ಲಿ ವಾಸಿಸುವನಾ ಶರಣನು. ಮನವ ಲಿಂಗಕ್ಕೆ ನೆನೆಯಲಿತ್ತು ಪ್ರಸಾದಮನದಲ್ಲಿ ನೆನೆವನಾ ಶರಣನು. ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣಂಗೆ ಪ್ರಸಾದವಲ್ಲದಿಲ್ಲವಯ್ಯಾ.
--------------
ಆದಯ್ಯ
ದೇಶ ಉಪದೇಶವಾಗದನ್ನಕ್ಕ, ಜೀವ ಉಜೀವವಾಗದನ್ನಕ್ಕ, ಕರಣಂಗಳುಪಕರಣಂಗಳಾಗದನ್ನಕ್ಕ, ನಯನಂಗಳುಪನಯನಂಗಳಾಗದನ್ನಕ್ಕ, ಭೋಗಂಗಳುಪಭೋಗಂಗಳಾಗದನ್ನಕ್ಕ ಅಂಗ ಪ್ರಾಣ ಮನ ಭಾವ ಕರಣಂಗಳಲ್ಲಿ ಭರಿತವೆಂತೆಪ್ಪೆಯಯ್ಯಾ? ಸೌರಾಷ್ಟ್ರ ಸೋಮೇಶ್ವರಾ, ನೀನು ಒಲಿ ಒಲಿಯೆಂದರೆತೊಲಿವೆಯಯ್ಯಾ.
--------------
ಆದಯ್ಯ
ದೇಹ ಪ್ರಾಣದಂತೆ ಕೂಡಿದ ಭಕ್ತ ಜಂಗಮ[ದ] ಉಭಯದನುವನೇನೆಂಬೆನಯ್ಯಾ, ಅಂಗದೊಳಗೆ ಅನುಭಾವಸಾಹಿತ್ಯ, ಆಚಾರಲಿಂಗಸಂಬಂಧ. ಚಿದಂಗದೊಳಗೆ ಸ್ವಾನುಭಾವ ಸಮ್ಯಕ್‍ಜ್ಞಾನದುದಯ, ಪ್ರಾಣಲಿಂಗಸಂಬಂಧ. ಇಂತೀ ಉಭಯದನುವನಾನೇನೆಂಬೆನಯ್ಯಾ. ಅರಿವಿನೊಳಗನುಭವ, ಅನುಭವದೊಳಗರಿವಿಪ್ಪಂತೆ ಭಕ್ತನೊಳಗೆ ಜಂಗಮ, ಜಂಗಮದೊಳಗೆ ಭಕ್ತ. ಇಂತೀ ಭಕ್ತ ಜಗಂಮದ ಸಕೀಲಸಂಬಧವ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರೇ ಬಲ್ಲರು.
--------------
ಆದಯ್ಯ
ದಿವಾರಾತ್ರಿಯ ಮಧ್ಯದಲ್ಲಿ ಕತ್ತಲೆ ಬೆಳಗು ತಳೆದಿಪ್ಪ ಬಯಲು ಶ್ವೇತವೊ ಕಪೋತವೊ, ಬಲ್ಲಡೆ ನೀವು ಹೇಳಿರೆ. ತನುಮನದ ಮಧ್ಯದಲ್ಲಿ ಕರಣೇಂದ್ರಿಯಂಗಳ ತಳೆದಿಪ್ಪ ಆತ್ಮನು ಶ್ವೇತವೊ ಪೀತವೊ, ಬಲ್ಲಡೆ ನೀವು ಹೇಳಿರೆ. ಸ್ವಯ ಪರದ ಮಧ್ಯದಲ್ಲಿ ನಿಜವ ತಳೆದಿಪ್ಪ ಸೌರಾಷ್ಟ್ರ ಸೋಮೇಶ್ವರಲಿಂಗ ಶ್ವೇತವೊ ಪೀತವೊ, ಬಲ್ಲಡೆ ನೀವು ಹೇಳಿರೆ.
--------------
ಆದಯ್ಯ
ದ್ವೈತಾದ್ವೈತದ ಬಳಿವಿಡಿದರಸುವನಲ್ಲ. ಅರಿವ ಮುಂದಿಟ್ಟುಕೊಂಡು, ಜ್ಞಾನದ ಮಾತ ಜಿನುಗಿ, ಕುರುಹ ತೋರಿ, ತಿರುಗುವ ಉಪಾಧಿಕನಲ್ಲ. ತ್ರಿಪುಟಿಸಂಕಲ್ಪ ಮೀರಿ ``ದಾಸೋಹಂ ಸ್ಯೋಹಂ ಹಂಸಃ ಎಂಬ ಬಳಲಿಕೆಯಳಿದು, ತಾ ಬೈಚಿಟ್ಟ ಬಯ್ಕೆಯ ತಾನೆ ಕಂಡಂತೆ . ತಾನೇ ತನ್ನ ನಿಜ ನಿಧಾನಗಂಡ ನಿಜಸುಖಿ, ಸ್ವಾನುಭಾವಭರಿತ ಸ್ವತಂತ್ರ ನಿತ್ಯಮುಕ್ತ, ಸೌರಾಷ್ಟ್ರ ಸೋಮೇಶ್ವರಲಿಂಗ ತಾನಾದ ಶರಣ.
--------------
ಆದಯ್ಯ