ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಂದ್ರಿಯದ ಬಾಗಿಲಲ್ಲಿ ಮನವಿಪ್ಪುದು. ಮನದ ಮುಂಬಾಗಿಲಲ್ಲೇ ಭೋಗಲಿಂಗವಿದ್ದು, ಅದ್ಥಿಕಾರ ಲಯಹೊದ್ದದೆ ಸಕಲಭೋಗಂಗಳ ಭೋಗಿಸಿ ಪ್ರಸಾದವ ಕರಣಂಗಳಿಗೆ ಕೊಟ್ಟು ಅರುಹಿ ಎನ್ನ ಮನವ ತನ್ನತ್ತ ಸೆಳೆದು ಮರಹ ಮಾಣಿಸಿ ಕುರುಹಳಿದು ತೆರಹುಗೊಡದ ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡೆ.
--------------
ಆದಯ್ಯ
ಇನನ ಕರದಲ್ಲಿ ತಮವಿದ್ದು ಬದುಕಬಲ್ಲುದೆ? ವಾಯುವಿದ ಹಸ್ತದಲ್ಲಿ ಸೊಡರಿದ್ದು ಬೆಳಗಬಲ್ಲುದೆ? ಉರಿಯ ಮುಖದಲ್ಲಿ ಕರ್ಪುರವಿದ್ದು ಜೀವಿಸಬಲ್ಲುದೆ? ಸೌರಾಷ್ಟ್ರ ಸೋಮೇಶ್ವರನ ಶರಣರ ಮುಂದಣ ಕರಣಮಥನ, ಇಂದ್ರಿಯದಿಚ್ಛೆ, ತನುಗುಣ, ಮನಗುಣ, ಪ್ರಾಣಗುಣಾದಿಗಳಿರಬಲ್ಲವೆ?
--------------
ಆದಯ್ಯ
ಇಲ್ಲವುಂಟೆಂಬ ಶಬ್ದನಿಃಶಬ್ದವೆಲ್ಲಾ ಮಹದಾಕಾಶದಲ್ಲಿಯೇ ಬಯಲಾಯಿತ್ತು. ಶೂನ್ಯವೆಂಬ ನಾಮರಹಿತನು ನಿಃಶೂನ್ಯವಾದ ಘನಕ್ಕೆ ಗಮನನಲ್ಲ.
--------------
ಆದಯ್ಯ
ಇಷ್ಟಲಿಂಗಕ್ಕೆ ರೂಪನರ್ಪಿಸಿ, ಪರಾಣಲಿಂಗಕ್ಕೆ ರುಚಿಯನರ್ಪಿಸಿ ತೃಪ್ತಿಲಿಂಗಕ್ಕೆ ಪರಿಣಾಮವನರ್ಪಿಸುವುದಲ್ಲದೆ ಇಷ್ಟಲಿಂಗಕ್ಕೆ ರುಚಿಯ ಪ್ರಾಣಲಿಂಗಕ್ಕೆ ಪರಿಣಾಮವ ತೃಪ್ತಿಲಿಂಗಕ್ಕೆ ರೂಪವನರ್ಪಿಸುವನರಿವು ಹೊರಸಿನೆಕ್ಕೆಯ ಶಂಖದ ಮಣಿಯ ಸರಗೊಳಿಸುವನಂತಾಯಿತ್ತು. ಅಗ್ನಿಯ ಗಾಯವ ತೃಣದಲ್ಲಿ ಮಂತ್ರಿಸುವನಂತಾಯಿತ್ತು. ಆಕಾಶಕ್ಕೆ ಮಂಜಿನ ಪಟವ ಹೊದಿಸುವನಂತಾಯಿತ್ತು. ಇದರಂತುವನಾರು ಬಲ್ಲರಯ್ಯಾ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರಲ್ಲದೆ.
--------------
ಆದಯ್ಯ