ಅಥವಾ
(4) (2) (2) (0) (4) (1) (0) (0) (1) (0) (0) (5) (0) (0) ಅಂ (1) ಅಃ (1) (14) (0) (10) (0) (0) (4) (0) (2) (0) (0) (0) (0) (0) (0) (0) (5) (0) (1) (2) (3) (8) (0) (1) (4) (7) (0) (1) (0) (1) (0) (5) (0) (5) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಾಲು ಹಣ್ಣು ಬೇಳೆ ಬೆಲ್ಲದ ನೇಮಸ್ತರು ನೀವು ಕೇಳಿರೊ. ಬಾಲೆಯರ ಮೇಲಣ ಭ್ರಾಂತು ಬಿಟ್ಟುದೆ ಹಾಲನೇಮ. ಶಿವಯುಕ್ತವಲ್ಲದ ಪರಹೆಣ್ಣು ಹೊನ್ನು ಮಣ್ಣು ಬಿಟ್ಟುದೆ ಹಣ್ಣಿನ ನೇಮ. ತಾರ ತಮ್ಮುಸ ಗರಗಳು ಪಿಶಾಚಿಗಳಿದ್ದುವೆ ಬೇಳೆಯನೇಮ. ಇಂತಲ್ಲಿ ಸಲ್ಲ, ಇಲ್ಲಿ ಉಂಟುಯೆಂಬ ತಳ್ಳಿ ಬಳ್ಳಿಯ ಬಿಟ್ಟುದೆ ಬೆಲ್ಲದ ನೇಮ. ಇಂತಲ್ಲದೆ ಉಳಿದಾದ ಭ್ರಾಂತುನೇಮದವರಿಗೆ ಭಕ್ತಿ ಯುಕ್ತಿ ಮುಕ್ತಿಯೆಲ್ಲಿಯದೊ ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಹಲುಬಿ ದಯದ ದಾಸೋಹವ ಮಾಡುವ ನಿರಾಸ್ಕರರು ನೀವು ಕೇಳಿರೊ. ಕೇಶ ಜಡೆ ಬೋಳಿನವರ ಕಂಡು ಓಸರಿಸದೆ ಮಾಡುವುದು ದಾಸೋಹ. ಅವರಲ್ಲಿ ಆಸೆ ನಿರಾಸೆಯ ನೋಡದೆ ಸರ್ವೇಶ್ವರನ ಶರಣರಿಗೆ ಮಾಡುವುದೆ ದಾಸೋಹ. ಇಂತಲ್ಲದಿರ್ದಡೆ ಅವನ ಮನೆಯ ವೇಶಿಯ ಮನೆಯಹೊಕ್ಕು ಹೊರಟಂತಾಯಿತ್ತು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಹಡಪ ಚಾಮರ ಸುರಗಿ ರಜಬೋವರಿಗೆ ಧೂಪ ವಚನ ಕನ್ನಡಿ ಗುಂಡಿನಕಾಯಕವೆಂಬ ಮಂದಚಾರಿಗಳು ನೀವು ಕೇಳಿರೊ. ಒಡಲಾಸೆಯಳಿದುದೆ ಹಡಪದಕಾಯಕ. ಚಂಚು ವಂಚನೆಯ ಬಿಟ್ಟುದೆ ಚಾಮರದಕಾಯಕ. ಪರವನಿತೆಯರ ಆಸೆಯಳಿದುದೆ ಸುರಗಿಯಕಾಯಕ. ಋಣ ರುಜೆಯಿಲ್ಲದುದೆ ರಜಬೋವರಿಗೆಕಾಯಕ. ದುಸ್ಸಂಗ ದುಸ್ವಪ್ನ ದುರ್ವಾಸನೆಯಳಿದುದೆ ಧೂಪದಕಾಯಕ. ರಚ್ಚೆ ರಚನೆಯಳಿದುದೆ ವಚನಕಾಯಕ. ಪರವಧುವ ನೋಡದಿಪ್ಪುದೆ ಕನ್ನಡಿಯಕಾಯಕ. ತೊಂಡು ತೊಳಸು ಮುಂಡು ಮುರುಹು ಭಂಡ ಬೂತು ದಿಂಡೆಯತನ ಕೊಂಡೆಯವಳಿದುದೆ ಗುಂಡಿಗೆಯಕಾಯಕ. ಇಂತಲ್ಲದೆ ಕಂಡಕಂಡವರ ಕೊಂಡಾಡದೆ ಇದ್ದರೆ ಬಂಡುಗೆಲವ ಮಂಡ ಮೂಕೊರೆಯ ಭಂಡ ಬಹುಕಳ್ಳರಿಗೆ ಕಾಯಕ ಸಲ್ಲದು. ಭಕ್ತಿ ಮುಕ್ತಿಯಿಲ್ಲ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಹಂದಿಗೆ ಅಂದಳವನಿಕ್ಕಿದರೆ ಅರಸಾಗಬಲ್ಲುದೆ ಅದು ? ಕುನ್ನಿಗೆ ರನ್ನದ ಹಲ್ಲಣವ ಹಾಕಿದರೆ ಕುದುರೆಯಾಗಬಲ್ಲುದೆ ಅದು ? ಕನ್ನೆವೆಣ್ಣು ಕಲೆಯಸೂಳೆಯಾಗಬಲ್ಲಳೆ ಅವಳು ? ಹೊನ್ನು ಕಬ್ಬುನವಾಗಬಲ್ಲುದೆ ? ಬಿನ್ನಣದ ಭಕ್ತಿಯ ಮಾಡಿ ತಪ್ಪುವ ಅನ್ಯಕಾರಿಗಳ ಮುಖವ ನೋಡಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಹಲವು ಜಲ್ಮಂಗಳಲ್ಲಿ ತೊಳಲಿ ಸಂಕಲ್ಪ ಕಟ್ಟಿ ಪಾಪಗಳೆಂಬ ಕರ್ಮಂಗಳ ಸುಟ್ಟು ಶುದ್ಧಿಸಿ ಪ್ರಕಟಿಸಿ ತೋರಿದ ಸದ್ಗುರುವಿಂಗೆ ನಮೋ ನಮೋ ಎಂಬೆನಯ್ಯ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಹೇಲುಚ್ಚೆಯ ಕೊಂಡ ಜೋಲುವ ಕಂಡ ಮೇಲೆ ನಾರುವ ಬಾಯಿ ಇವು ಮೂರು ಹೇಹವೆಂದರಿಯದೆ ಹೆಚ್ಚುನುಡಿ ಬಣ್ಣವಿಟ್ಟುಕೊಂಬ ಉಚ್ಚೆಯ ಕುಡಿವವರ ಬಾಳು ಕೆಚ್ಚಲ ಕಚ್ಚಿದ ಉಣ್ಣೆಯ ತೆರನಂತೆ. ನಚ್ಚದಿರು ನಾರಿಯರ ಮೋಹವ. ಕರ್ಮದ ಕಾಳಕಿಚ್ಚು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಹದಿರಿನ ಹಗರಣಗಿತ್ತಿ, ಚದುರಿನ ತಿಗುಳತಿ, ಕುದುರೆ ಗೋವನ ಸತಿಯ ಸಂಗವ ಮಾಡುವ ಸದರದ ಸೂಳೆಯಮಕ್ಕಳ ಮುಖವ ನೋಡಲಾಗದು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ