ಅಥವಾ
(4) (2) (2) (0) (4) (1) (0) (0) (1) (0) (0) (5) (0) (0) ಅಂ (1) ಅಃ (1) (14) (0) (10) (0) (0) (4) (0) (2) (0) (0) (0) (0) (0) (0) (0) (5) (0) (1) (2) (3) (8) (0) (1) (4) (7) (0) (1) (0) (1) (0) (5) (0) (5) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನಗೆ ಹುಟ್ಟಿದ ಮಕ್ಕಳಿಗೆ ತನ್ನ ಗುರುವ ಬಿಟ್ಟು ತನ್ನ ಮಕ್ಕಳಿಗೆ ತಾನಟ್ಟಣೆಯ ಗುರುವಾಗಿ ಲಿಂಗವ ಕಟ್ಟುವ ಆ ಕುಲಗೆಟ್ಟ ಹೊಲೆಯರ ಮುಖವ ನೋಡಲಾಗದು. ಅದೇನು ಕಾರಣವೆಂದರೆ ಅವರಿಗೆ ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವಿಲ್ಲ. ಅವರಿಗೆ ಪಾದೋದಕ ಪ್ರಸಾದವಿಲ್ಲ. ಅವ ಪರವಾದಿ ; ಅವ ಪಂಚಮಹಾಪಾತಕಿ ಪಾಷಂಡಿ. ಅವನ ಮುಖವ ನೋಡಲಾಗದು. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ತಿಥಿ ಮತಿ [ಹಾಳ] ಮಹಳವ ಮಾಡುವ ಮತಿಗೇಡಿ ಮೂಳಿಗಳು ನೀವು ಕೇಳಿರೊ. ತಿಥಿಯಲ್ಲಿ ತಿಂಬನೆ ನಿಮ್ಮ ದೇವ ? ಮತಿಯಲ್ಲಿ ಉಂಬನೆ ನಿಮ್ಮ ದೇವ ? [ಹಾಳ] ಮಹಳವ ಮಾಡ ಹೇಳುವನೆ ನಿಮ್ಮ ದೇವ ? ಗುರುಲಿಂಗಜಂಗಮದ ಪಾದಸೇವೆಯಮಾಡಿ ಬದುಕಿರೊ ಬಲ್ಲವರು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ತ್ರಿವಿಧ ತೀರ್ಥ, ತ್ರಿವಿಧ ಪ್ರಸಾದ, ತ್ರಿವಿಧ ಲಿಂಗ, ತ್ರಿವಿಧ ಪೂಜೆ, ತ್ರಿವಿಧ ಮಾಟ, ತ್ರಿವಿಧ ಕೂಟವಲ್ಲದೆ ಅನ್ಯರೊಳಾಡುವ ಆಟ ನೋಟ ಮಾಟ ಕಾಳಕೂಟ ಗಿರಿಯಕ್ಕೆ ನಿಘಾಟ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ತೊರೆಯೊಳಗಣ ಶಂಖು ಭೋರು ಭುಗಿಲೆಂದಿತೆಂದು ಕೆರೆಯೊಳಗಣ ಗುಳ್ಳೆ ಕಿರಿಕಿರಿಯೆಂಬಂತೆ, ಚಂದನ ಗಂಧ ಕಸ್ತೂರಿ ಕರ್ಪೂರ ಪುನಗು ಜವಾದಿ- ಗಂಡನುಳ್ಳ ಹೆಂಡತಿಗೆ ಯೋಗ್ಯವಲ್ಲದೆ ಮುಂಡೆಗೆಲ್ಲಿಯದೊ ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ತಸ್ಮದ ಮೇಲಣ ಕಿಸುಕುಳದ ಕುಳಿಯೊಳು ಬಿದ್ದು ನಿರ್ಧರವಿಲ್ಲದೆ ದೆಸೆಗಾಣದೆ ಜೀವದಭ್ಯಸಕ್ಕಾಗಿ ಹುಸಿಯ ನುಡಿವ ಹುಸಿಯ ಹೊಲೆಯಂಗೆ ಬಸವಭಕ್ತಿಯೆಲ್ಲಿಯದೊ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗ ಗುರುಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ