ಅಥವಾ
(4) (2) (2) (0) (4) (1) (0) (0) (1) (0) (0) (5) (0) (0) ಅಂ (1) ಅಃ (1) (14) (0) (10) (0) (0) (4) (0) (2) (0) (0) (0) (0) (0) (0) (0) (5) (0) (1) (2) (3) (8) (0) (1) (4) (7) (0) (1) (0) (1) (0) (5) (0) (5) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಳ್ಳಿ ಇಂಗು ಬೆಲ್ಲ ಮೆಣಸು ಇವ ಕೊಳ್ಳಬಾರದುಯೆಂಬ ಒಳ್ಳೆ ವ್ರತಿಗಳು ನೀವು ಕೇಳಿರೊ. ಸುಳ್ಳು ಸಟೆಯ ಬಿಟ್ಟು ತಳ್ಳಿಬಳ್ಳಿಯ ಬಿಟ್ಟು ಒಳ್ಳಿತಾಗಿ ನಡೆಯಬಲ್ಲಡೆ ಬಳ್ಳೇಶ್ವರನ ಭಕ್ತರೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಉಪ್ಪು ಹುಳಿಯನು ಬಿಟ್ಟು ಸಪ್ಪೆ ಆಯತವೆಂಬ ಹಿಪ್ಪೆಗಳ್ಳರು ನೀವು ಕೇಳಿರೊ. ಉಪ್ಪಲ್ಲವೆ ನಿಮ್ಮುದರದಾಸೆ ? ಹುಳಿಯಲ್ಲವೆ ನಿಮ್ಮುದರದಾಸೆ ? ತುಪ್ಪವಲ್ಲವೆ ನಿಮ್ಮ ತುದಿನಾಲಿಗೆಯ ಸವಿಯು ? ಇಂತಪ್ಪ ಉಪ್ಪು ಹುಳಿಯನು ಬಿಟ್ಟು ತಪ್ಪದು ಸಪ್ಪೆಯ ಶೀಲ ನೀವಿಪ್ಪುದು ಗುರುಪಾದದಲ್ಲಿ ಸರ್ಪಭೂಷಣ ನಿಮಗೊಲಿವ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಉದಯದಲೆದ್ದು ಗಡಗಡನೆ ನಡುಗುತ ಹೋಗಿ ಹೂ ಗಿಡು ಪತ್ರೆಯ ಕಡಿವ ದೃಢಗೇಡಿಗಳು ನೀವು ಕೇಳಿರೊ. ಅದು ಕಡುಪಾಪವಲ್ಲವೆ ನಿಮಗೆ ? ನಡುಗಿರೊ ಪರಧನ ಪರಸ್ತ್ರೀಯರಿಗೆ. ನಡುಗಿರೊ ಕೊಲೆ ಹುಸಿ ಕಳವು ಪಾರದ್ವಾರ ಅತಿಕಾಂಕ್ಷಕ್ಕೆ. ನಡುಗಿರೊ ಹರನಿಂದ್ಯ ಗುರುನಿಂದ್ಯ ಅನಾಚಾರಕ್ಕೆ, ಇದಕ್ಕೆ ನಡುಗದೆ ಮಳಿ ಛಳಿ ಗಾಳಿಗೆ ನಡುಗಿ ಹೂ ಗಿಡ ಪತ್ರೆಯ ಕಡಿವ ಕಡುಪಾಪಿಗಳಿಗೆ ನಿಮಗೆ ಮೃಡಪೂಜೆಯೆಲ್ಲಿಯದೊ ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಉಡಿಯಲಿಂಗವ ಬಿಟ್ಟು, ಗುಡಿಯಲಿಂಗದ ಮುಂದೆ ನಿಂದು ನುಡಿಗಳ ಗಡಣವ ಮಾಡುವ ತುಡುಗುಣಿ ಕಳ್ಳುಗುಡಿ ಹೊಲೆಯರ ಮುಖವ ನೋಡಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ