ಅಥವಾ
(4) (2) (2) (0) (4) (1) (0) (0) (1) (0) (0) (5) (0) (0) ಅಂ (1) ಅಃ (1) (14) (0) (10) (0) (0) (4) (0) (2) (0) (0) (0) (0) (0) (0) (0) (5) (0) (1) (2) (3) (8) (0) (1) (4) (7) (0) (1) (0) (1) (0) (5) (0) (5) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಿತ್ರದಬೊಂಬೆ ರೂಪಾಗಿದ್ದರೇನು? ಚೈತನ್ಯವಿಲ್ಲದ ಕಾರಣ ಪ್ರಯೋಜನವಾದುದಿಲ್ಲ. ಹಾವುಮೆಕ್ಕೆಯ ಹಣ್ಣು ನುಣ್ಣಾಗಿದ್ದರೇನು ? ಕಹಿ ಬಿಡದ ಕಾರಣ ಪ್ರಯೋಜನಕಾರಿಯಾದುದಿಲ್ಲ. ಹತ್ತಿಯ ಹಣ್ಣು ಕಳಿತಿದ್ದರೇನು ? ಕ್ರಿಮಿ ಬಿಡದ ಕಾರಣ ಪ್ರಯೋಜನಕಾರಿಯಾದುದಿಲ್ಲ. ತಿಪ್ಪೆಯಗುಂಡಿಯ ನೀರು ತಿಳಿದಿದ್ದರೇನು? ಅಮೇಧ್ಯ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ. ಭಕ್ತನಾದೆನೆಂಬ ಸಂತವ ತಾಳಿದರೇನು? ತೊತ್ತಿಗೆ ಸಿರಿಬಂದರೇನು? ಹಿತ್ತಲಿಗೆ ತಳೆಯ ಹಿಡಿಸುವಂತೆ. ಕರ್ತೃ ಕ್ರೀಯವಿಲ್ಲದವನ ಭಕ್ತಿ ಕತ್ತೆ ನಾಯಂತೆ. ಅವನಿಗೆ ಸತ್ಯವಿಲ್ಲ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಚೆನ್ನಯ್ಯ ನನ್ನಯ್ಯ ಸುಜ್ಞಾನ ಅನ್ನದದೇವರಿಗೆ ಚೆನ್ನಬಸವಣ್ಣ ಚೇರಮರಾಯ ನಂಬೆಣ್ಣಗೆ ಅಲ್ಲಮ ಅಜಗಣ್ಣ ಜಗದೇವಯ್ಯ ಮಲುಹಣ ಮಲುಹಣಿಗೆ ಮಹಾದೇವನೊಲಿದ ಮಹಿಮ ಮಹಾತ್ಮರಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಚಿತ್ತಸದ್ಗತಿಯ ವಚನವ ಬರೆದೋದಿ ಕೇಳಿದವರಿಗೆ ಮತಿಯ ಕೊಡುವ ಮಹೇಶ ಗುರುಬಸವೇಶ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಚಿತ್ತಸದ್ಗತಿಯ ವಚನವ ನೂರೊಂದು ಸಾರಿ ಪೇಳಿದ ವೀರ ವಿಜೇಯ ಕರಿಬಸವರಾಜದೇವರು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ