ಅಥವಾ
(4) (2) (2) (0) (4) (1) (0) (0) (1) (0) (0) (5) (0) (0) ಅಂ (1) ಅಃ (1) (14) (0) (10) (0) (0) (4) (0) (2) (0) (0) (0) (0) (0) (0) (0) (5) (0) (1) (2) (3) (8) (0) (1) (4) (7) (0) (1) (0) (1) (0) (5) (0) (5) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಾದೋದಕ ಪ್ರಸಾದವ ಕೊಂಡು ಪ್ರಪಂಚವ ಮಾಡುವ ಪರಸತಿಯರ ಸಂಗವ ಮಾಡುವ ಪಂಚಮಹಾಪಾತಕರು ನೀವು ಕೇಳಿರೊ. ಪಂಚಮಹಾಪಾತಕವ ಬಿಟ್ಟದ್ದೇ ಪಾದೋದಕ. ಅಲ್ಲದಿದ್ದಡೆ ಮುಂದೆ ನಿಮ್ಮ ಬಾದ್ಥಿಸುವದಕ್ಕೆ ಕಾದಸೀಸ. ಪ್ರಸಾದವೆ ಮುಂದೆ ನಿಮ್ಮ ಪೊರೆವುದಕ್ಕೆ ಪರುಷ. ಪ್ರಪಂಚ ಮುಂದೆ ನಿಮ್ಮ ಪಾಕುಳಕ್ಕೆ ಹಾಕುವುದು. ಪರಸ್ತ್ರೀಯರ ಸಂಗವೆ ಮುಂದೆ ನಿಮಗೆ ಉರಿಗಿಚ್ಚು, ಇರಿವ ಸುರಗಿ. ಇಂತಿವ ಬಿಟ್ಟು ಭಕ್ತ ವಿರಕ್ತನಾಗಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ನಂಬಿದರೆ ಪರಶಿವ ನಮಗೊಲಿವ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಪುರಜನಂಗಳ ಮೆಚ್ಚಿಸುವರೆ ಪುರಪತಿಯೆ ಶರಣು ? ಪರಿಜನಂಗಳ ಮೆಚ್ಚಿಸುವರೆ ಹಾದರಗಿತ್ತಿಯೆ ಶರಣು ? ಸರ್ವಜನಂಗಳ ಮೆಚ್ಚಿಸುವರೆ ಸಂತೆಯ ಸೂಳೆಯೆ ಶರಣು ? ತನ್ನ ಲಿಂಗವ ನಚ್ಚಿ ಮೆಚ್ಚೆ ಮುಕ್ತಿಗೆ ಇದೊಂದಚ್ಚು. ಮುಂದೆ ನಿಂದಕರೆದೆಯ ಸುಡುವ ಕಿಚ್ಚು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಪಾಕುಳದ ಆಗರದ ಮೂತ್ರದ ಕುಳಿಯೊಳು ಮುಳುಗಾಡುವವಂಗೆ ಸ್ತೋತ್ರ ಮಂತ್ರ ಜಪ ತಪ ಹೋಮ ನೇಮ ಧ್ಯಾನ ಸಮಾಧಿ ಅಷ್ಟವಿಧಾರ್ಚನೆಯೇಕೊ? ಭೈತ್ರಕ್ಕೆ ಗುಂಡನಿಕ್ಕಿದಂತಿರಬೇಕು ಬಲ್ಲವರು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಪರದೈವ ಪತಿಪೂಜೆಯ ಬಿಟ್ಟು ಇಷ್ಟವನರಿಯದೆ ಹೊಟ್ಟೆಯ ಹೊರಕೊಂಬ ಭ್ರಷ್ಟಬಂಟರು ನೀವು ಕೇಳಿರೊ. ಪಂಚಮಾಪಾತಕವಬಿಟ್ಟಡೆ ಬಿಟ್ಟುದು. ಪ್ರಪಂಚ ಬಿಟ್ಟಡೆ ಪತಿಪೂಜೆಯ ಬಿಟ್ಟುದು. ನುಡಿ ಎರಡಿಲ್ಲದೆ ನಡೆಯಬಲ್ಲಡೆ ಒಡೆಯನ ಕಟ್ಟಳೆ. ನಂಬಿಸಿ ಒಡಲ ಹೊರೆಯದಿರ್ದುದೆ ಒಡೆಯನ ಕಟ್ಟಳೆ. ಪಾತ್ರ ಸತ್ಪಾತ್ರವರಿತು ಕೊಡಬಲ್ಲಡೆ ಬಿಡುಗಡೆ. ಇಂತಲ್ಲದೆ ವಾರ್ತೆಕೀರ್ತಿಗೆ ಕೊಂಡಾಡಿಸಿಕೊಂಡು ಕೊಡುವ ಧೂರ್ತ ಹೊಲೆಯರ ಮುಖವ ನೋಡಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಪುರಾತರÀ ಗೀತವನೋದಿ ಪುರಾತರ ಮಕ್ಕಳಾದಬಳಿಕ- ಕಿರಾತರ ಮಕ್ಕಳಂತೆ ಹೊತ್ತಿಗೊಂದು ಬಗೆ ದಿನಕ್ಕೊಂದು ಗುಣವ ನಡೆವುದಲ್ಲ, ಭಕ್ತನೇನು ಮುಗಿಲಬೊಂಬೆಯೆ ? [ಮೊಲೆ]ನಾಗರಕಾಟವೆ ? ಸುರಚಾಪವೆ ? ಗೋಸುಂಬೆಯೆ ? ನೋಡಿರೈ-ಕಡೆದು ಕಂಡಿಸಿದರೆ ಕುಂದಣದ ಪುತ್ಥಳಿಯಂತೆ ನಿಜಗುಂದದಿರುವುದೀಗಲೇ ಭಕ್ತಸ್ಥಲ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಪಾದಪೂಜೆಯೆಂಬುವುದು ಅಗಮ್ಯ-ಅಗೋಚರ- ಅಪ್ರಮಾಣ ! ಶ್ರೀಗುರುಬಸವೇಶ್ವರದೇವರು ತಮ್ಮ ಅಂತರಂಗದಲ್ಲಿರ್ದ ತೀರ್ಥಪ್ರಸಾದಮಂ ಗಣಸಮೂಹಕ್ಕೆ ಸಲ್ಲಲೆಂದು ನಿರ್ಮಿಸಿ ಭಕ್ತಿ ತೊಟ್ಟು ಮೆರದರು. ಇಂತಪ್ಪ ತೀರ್ಥಪ್ರಸಾದವ ಸೇವಿಸುವ ಕ್ರಮವೆಂತೆಂದಡೆ- ಗ್ರಾಮದ ಮಠದಯ್ಯ, ಮಠಪತಿ, ಓದಿಸುವ ಜಂಗಮ, ಹಾಡುವ ಜಂಗಮ, ಆಡುವ ಜಂಗಮ, ಬಾರಿಸುವ ಜಂಗಮ, ಅಗಹೀನ, ಅನಾಚಾರಿ, ಕಂಬಿಕಾರ, ಓಲೆಕಾರನಾಗಿಹ, ವಾದಿಸುವನು, ಗರ್ವಿಸುವವನು, ಅಹಂಕಾರಿ, ದಲ್ಲಾಲ, ವೈದಿಕ, ಧನಪಾಲ, ಉದ್ಯೋಗಿ, ನಾನಾ ವಿಚಾರವ ಹೊತ್ತು, ಕಾಣಿಕಿಗೆ ಒಡೆಯರಾಗಿ ಚೆಂಗಿತನದವರು, ಪರಿಹಾಸಕದವರು, ಮರುಳು ಮಂಕುತನ ಮಾಡುವ[ವರು], ಪಟ್ಟಾಧಿಪತಿಯೆಂದೆನಿಸಿ, ಚರಮೂರ್ತಿಯೆಂದೆನಿಸಿ, ವಿರಕ್ತರೆಂದೆನಿಸಿ, ನಾಸಿ, ತೊಂಬಾಕ, ಭಂಗಿ, ಮಾಜೂಮ, ಗಂಜಿ ಅರವಿ, ಅಪು ಹೊದಿಕೆ[ಯವರು], ಹಲ್ಲುಮುರುಕ, ಉದ್ದೇಶಹೀನ, ಬೆಚ್ಚಿದವ, ಚುಚ್ಚಿದವ, ಕಚ್ಚಿದವ, ಬೆಳ್ಳಿಬಂಗಾರ ಹಲ್ಲಣಿಸಿಕೊಂಡ ಭವಿಸಂಗ, ಕರ್ಣಹೀನ, ಮೂಕ, ನಪುಂಸಕ, ವೀರಣ್ಣ, ಬಸವಣ್ಣ, ಸ್ಥಾವರದೈವಂಗಳಿಗೆ ತೀರ್ಥಕುಡುವ, ಉಡಕಿ, ಸೋಹಿ ಬಯಲಾದ ಜಂಗಮಕ್ಕೆ ಕಟಕಟೆಯಿಟ್ಟು ಹಾವಿಗೆಯಿಟ್ಟು ಧೂಳತಿಟ್ಟು ಗೊರವನಂತೆ ಪೂಜೆ ಮಾಡಿಸುವ- ಇಂತಿಷ್ಟು ಅಜ್ಞಾನಿಜಂಗಮರಲ್ಲಿ ಪಾದೋದಕ ಪ್ರಸಾದವ ಕೊಳಲಾಗದು ! ಅಥವಾ ಕೊಂಡಡೆ ಕೊಟ್ಟಾತಂಗೆ ದೋಷ, ಕೊಂಡಾತಂಗೆ ಪಾಪ ! ತ್ರಿನೇತ್ರವಿರ್ದಡು ಕೊಳಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಪ್ರಣಮದ ಮಂತ್ರ, ಪ್ರಣಮದ ಯಂತ್ರ, ಪ್ರಣಮದ ತಂತ್ರ, ಪ್ರಣಮದ ಕಾರ್ಯ, ಪ್ರಣಮದ ಕರಣ, ಪ್ರಣಮದ ಭಕ್ತಿ, ಪ್ರಣಮವಲ್ಲದೆ ಅನ್ಯಮಂತ್ರ ತಂತ್ರ ಯಂತ್ರ ನಿಜಕ್ಕೆ ಸ್ವತಂತ್ರವಿಲ್ಲ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಪಾದರಗಿತ್ತಿ ಪಾದಲುಂಬಿಮರನ ಪರಪುರುಷನೆಂದು ಪ್ರತಿಜ್ಞೆಯ ಮಾಡಿ ದೃಢವ ನುಡಿವಂತೆ, ಸಾಧಕ ಸರ್ವಜನರು ಶಿಷ್ಯ ಶಿವಭಕ್ತರೆಂದು ಗುರುವಿನ ಕೂಡೆ ಭೇದವ ಮಾಡಿ ವಾದಿಸಿ ನುಡಿವ ಮಾದಿಗ ಹೊಲೆಯರ ಮುಖವ ನೋಡಬಾರದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ