ಅಥವಾ
(4) (2) (2) (0) (4) (1) (0) (0) (1) (0) (0) (5) (0) (0) ಅಂ (1) ಅಃ (1) (14) (0) (10) (0) (0) (4) (0) (2) (0) (0) (0) (0) (0) (0) (0) (5) (0) (1) (2) (3) (8) (0) (1) (4) (7) (0) (1) (0) (1) (0) (5) (0) (5) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಂಕರದಾಸಿಮಯ್ಯಗೆ ಸುಂಕದಬಂಕಯ್ಯಗೆ ಶಿವಲೆಂಕಮಂಚಣ್ಣಗೆ ಶಿವರಾತ್ರಿಯಯ್ಯಗಳಿಗೆ ಸಿದ್ಧರಾಮಯ್ಯಗಳಿಗೆ ಚಿಮ್ಮುಲಿಗೆಯ ಚಂದಯ್ಯ ಚಿಕ್ಕಯ್ಯ ಡೋಹರ ಕಕ್ಕಯ್ಯ ಒಕ್ಕುಮಿಕ್ಕ ಪ್ರಸಾದವಯಿಕ್ಕೆಯ್ಯಲ್ಲಿ ಕೊಂಬ ಅಕ್ಕನಾಗಾಯಿಗೆ ಹರಳಯ್ಯ ಮಧುವಯ್ಯ ಬಳ್ಳೇಶ್ವರಯ್ಯಗಳಿಗೆ ಹಾವಿನಾಳ ಕಲ್ಲಯ್ಯಗಳಿಗೆ ಸರವೂರ ಬಂಕಯ್ಯಗೆ ಸುರಗಿಯ ಚೌಡಯ್ಯಗೆ ಪರಿಪರಿಯ ಶರಣರಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಶೀಲ ಶೀಲವೆಂದೇನೊ ? ಶೀಲವಂಥಾ ಸೂಲವೆ ? ಶುದ್ಧ ಹರಿವ ನೀರನು ನೂಲರಿವೆ ಸುತ್ತಿಯದ ಕಟ್ಟಿ ತಂದದ್ದು ಶೀಲವೆ ? ಅದಲ್ಲ ನಿಲ್ಲು ಮಾಣು. ಜ್ವಾಲೆಯಂದದಿ ಹರಿವ ಮನವನು ಖತಿ ಹೋಗದ ಹಾಗೆ ಕಟ್ಟಿ ನಿಲಿಸಿದುದೆ ಶೀಲ. ಬಾಲೆಯರ ಬಣ್ಣದ ಬಗೆಗೆ ಭ್ರಮೆಗೊಳ್ಳದುದೆ ಶೀಲ. ಕಾಲಕರ್ಮಂಗಳ ಗೆದ್ದುದೆ ಶೀಲ. ಇಂತಲ್ಲದೆ ಉಳಿದುವೆಲ್ಲ ದುಶ್ಶೀಲ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಶಿವಭಕ್ತಿರಿಗೆ ಭವಿ ಸರಿಯೆಂಬ ಭ್ರಷ್ಟ ಭಂಡರು ನೀವು ಕೇಳಿರೊ. ಅದೇನು ಕಾರಣವೆಂದರೆ ಕತ್ತೆಗೆ ಕುದುರೆ ಸರಿಯೆ ? ಗರತಿಗೆ ತೊತ್ತು ಸರಿಯೆ ? ಭಿತ್ತಿಗೆ ಕೇರು ಸರಿಯೆ ? ವಿರಕ್ತಿಗೆ ಪಿರಿತಿ ಸರಿಯೆ ? ಕತ್ತಲೆಗೆ ಬೆಳಗು ಸರಿಯೆ ? ಕರ್ತಗೆ ಭೃತ್ಯ ಸರಿಯೆಂಬ ದುರುಕ್ತಿಯ ದುರಾಚಾರಿ ದೂಷಕ ಹೊಲೆಯರಿಗೆ ಭಕ್ತಿ ಮುಕ್ತಿಯೆಲ್ಲಿಯದೊ ? ವಿರಕ್ತಿ ವೀರಶೈವ ವಿಚಾರ ಅವನಿಗೆಲ್ಲಿಯದೊ ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಶಿವಾಶ್ರಯದಲ್ಲಿ ಜನಿಸಿ ಭವಾಶ್ರಯವ ನೆನೆವ ಭಂಡರ ಮುಖವ ನೋಡೆ ನೋಡೆ. ಶಿವಾಶ್ರಯವೆ ಶ್ರೀಗುರುನಾಥನ ಕರಕಮಲವೆಂಬ ಪರಿ. ಭವಾಶ್ರಯವೆ ತನ್ನ ಹಿಂದಣ ಪೂರ್ವದ ಭವಿ ತಾಯಿ ತಂದೆ ಬಂಧು ಬಳಗವೆಂಬ ಪರಿ. ಇದು ಕಾರಣ ಗುರುಕರಜಾತನಾಗಿ ನರರ ಹೆಸರ ಹೇಳಿ ಹಾಡಿ ಹೊಗಳಿಸುವ ನರಕಿ ಭವಿಯ ಎನಗೊಮ್ಮೆ ತೋರದಿರಾ. ಆ ಕುಲಗೆಟ್ಟ ಹೊಲೆಯರ ಮುಖವ ನೋಡಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಶೀಲ ವ್ರತ ನೇಮ ನಿತ್ಯವ ಹಿಡಿದು ಬಿಡುವ ಕಳ್ಳುಗುಡಿಗಳಿರಾ ನೀವು ಕೇಳಿರೊ. ಹಿಡಿದು ಬಿಡಲಿಕ್ಕೆ ವಿಶ್ವಕರ್ಮನ ಕೈಯ ಇಕ್ಕುಳವೆ ವ್ರತ ? ಬ್ರಹ್ಮಪಿಶಾಚಿಯೆ ಹಿಡಿದು ಬಿಡಲಿಕ್ಕೆ ವ್ರತ ? ರವಿ ಶಶಿಯ ಗ್ರಹಣವೆ ಹಿಡಿದು ಬಿಡಲಿಕ್ಕೆ ವ್ರತ ? ಕಲೆವಿದಿಯೆ ಹಿಡಿದುಬಿಡಲಿಕ್ಕೆ ವ್ರತ ? ಇದಲ್ಲ ನಿಲ್ಲು ನಿಲ್ಲು ಮಾಣು. ಹಿಡಿಯಬೇಕಾದರೆ ಸರ್ಪ ವೃಶ್ಚಿಕ ಅನಲ ಅಸಿಯಾದರೆಯು ಹಿಡಿದಹರೆ ಹಿಡಿಯಬೇಕು, ದೃಢಭಕ್ತಿಯಿದಲ್ಲಾ. ಕಳ್ಳುಗುಡಿ ಕುಡಿದು ಕುಣಿಕುಣಿದಾಡಿ ಬಿಡುವ ಹಾಗೆ ಬಿಡುವ ತುಡುಗುಣಿ ಹೊಲೆಯರ ಮುಖವ ನೋಡಬಾರದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ