ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಯೋಗವೆಂಬುದೇನು ಲಕ್ಷ ್ಯದೊಳಗೆ ಅಲಕ್ಷ ್ಯವಡಗಿಪ್ಪುದು; ಇಷ್ಟದಲ್ಲಿ ಅಭೀಷ್ಟವಡಗಿಪ್ಪುದು; ಸ್ಥೂಲದಲ್ಲಿ ಸೂಕ್ಷ ್ಮವಡಗಿಪ್ಪುದು; ಅರಿದಲ್ಲಿ ಆ ಆರಿಕೆ ಅಡಗಿಪ್ಪುದು, ವಸ್ತುಕದಲ್ಲಿ ಆ ವಸ್ತು ಅಡಗಿ, ರಂಜನೆಯಲ್ಲಿ ನಿರಂಜನ ಕುರುಹುಗೊಂಡು ಆ ರಂಜನೆ ರಂಜಿಸುವಂತೆ, ತಾನರಿವ ಕುರುಹಿನಲ್ಲಿ ನಿಜದರಿವು ಕರಿಗೊಂಡು ಇಷ್ಟಲಿಂಗಕ್ಕೆ ದೃಷ್ಟಾತ್ಮಲೇಪವಾಗಿ ಇದು ಕ್ರಿಯಾ ಲಿಂಗಾಂಗಯೋಗ. ನಿಜವನರಿಯದೆ ಕುಟಿಲ ಘಟಂಗಳಿಂದ ಅಂಬಿಕಾ ಹಠ ಘಟಯೋಗಿಗಳೆಲ್ಲರು ಭವಸಾಗರದ ಸಟೆಯೋಗಿಗಳು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 79 ||
--------------
ದಾಸೋಹದ ಸಂಗಣ್ಣ