ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಂಜರಿ ನುಂಗಿದ ಚೂಡ ತನ್ನ ಕಾಲವೇಳೆಗೆ ನಿಂದು ಕೂಗಿದುದುಂಟೆ? ಲಿಂಗವನರಿದ ಚಿತ್ತ ಸಂಸಾರದ ಸಂದಣಿಯಲ್ಲಿ ಮುಳುಗುವುದೆ? ಈ ದ್ವಂದ್ವವನರಿದು ಯೋಗ ಸಂಬಂದ್ಥಿಯಾಗಿರಬೇಕು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 71 ||
--------------
ದಾಸೋಹದ ಸಂಗಣ್ಣ
ಮರ್ಕಟನ ಉಚಿತ, ವಿಹಂಗನ ಪವನ, ಪಿಪೀಲಿಕನ ಧ್ಯಾನ, ತ್ರಿವಿಧಾತ್ಮನ ಭೇದ, ಸ್ಥೂಲದ ವಿವರ, ಸೂಕ್ಷ ್ಮದ ಸುಳುಹ, ಕಾರಣದ ಚೋದ್ಯ. ಇಂತೀ ತ್ರಿವಿಧ ವಿವರಂಗಳಲ್ಲಿ ತತ್ವಮಸಿ ಎಂಬ ಭಿತ್ತಿಯ ವಿಚಾರಿಸಿ ಶ್ರುತದಲ್ಲಿ ಕೇಳದುದ ದೃಷ್ಟದಲ್ಲಿ ಕಂಡುದ ಅನುಮಾನದಲ್ಲಿ ಅರಿದುದ ಭಿನ್ನವಿಲ್ಲದೆ ಚಿನ್ಮಯಮೂರ್ತಿ ತಾನಾಗಿ ಕರ್ಮಕ್ರೀಯಲ್ಲಿಯೆ ಲೋಪ. ಶಂಭುವಿನಿಂದಿತ್ತ ಸ್ರಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 69 ||
--------------
ದಾಸೋಹದ ಸಂಗಣ್ಣ
ಮೂಲಾಧಾರ ಮುಂತಾದ ಷಡಾಧಾರಂಗಳಲ್ಲಿ ಆಶ್ರಯವರ್ಣ ದಳವರ್ಣ ಭಾವವರ್ಣ ಆತ್ಮವರ್ಣ ಅಕ್ಷರವರ್ಣ ಸ್ಥಲವರ್ಣಂಗಳ ಕಲ್ಪಿಸಿ, ಭೇದಕ್ರೀಯಿಂದ ಅರಿಯಬೇಕಾಗಿ ಕ್ರೀ ಮೂರು, ಸ್ಥಲವಾರು, ತತ್ವವಿಪ್ಪತ್ತೈದು, ಕಥನ ಮೂವತ್ತಾರು, ಪ್ರಸಂಗ ನೂರೊಂದರಲ್ಲಿ ನಿರ್ವಾಹ. ಈ ಏಕವಸ್ತು ತ್ರಿಗುಣಾತ್ಮಕವಾದ ಸಂಬಂಧ. ಇಂತಿವನರಿತೆಹೆನೆಂದು ಒಂದಕ್ಕೊಂದು ಸಂದನಿಕ್ಕದೆ ಗುರುವಿನ ಕಾರುಣ್ಯವನರಿತು, ಲಿಂಗದಲ್ಲಿ ಚಿತ್ತವ ಮೂರ್ತಿಗೊಳಿಸಿ ಜಂಗಮದಲ್ಲಿ ಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ಭಕ್ತಿಯನೊಪ್ಪಿ ನಿಶ್ಚಯನಾಗಿಪ್ಪುದೆ ಭಕ್ತಿಯ ಅಂಗಕ್ಕೆ ಇಕ್ಕಿದ ಗೊತ್ತು ವಿಶ್ವಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 77 ||
--------------
ದಾಸೋಹದ ಸಂಗಣ್ಣ
ಮಾರುತನ ಮನೆಯಂತೆ ಉದಕ ಮುಕುರದ ಬಿಂಬದಂತೆ ರತ್ನಕಾಂತಿಯ ಕಳೆಯಂತೆ ಪಾವಕದ ಪ್ರಥಮ ಬೀಜದಂತೆ ಸುವರ್ಣವನೊಡಗೂಡಿದ ಸುವಳಿಯಂತೆ ಮರೀಚಿಕವ ಕೂಡಿದ ವರುಣದಂತೆ ಸುನಾದವನೊಳಕೊಂಡ ಬಯಲಿನಂತೆ ಇಂತೀ ನಾಮ ರೂಪು ಪಿಂಡಜ್ಞಾನ ಭೇದ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 75 ||
--------------
ದಾಸೋಹದ ಸಂಗಣ್ಣ
ಮಣ್ಣಿನಲ್ಲಿ ಹುಟ್ಟಿದ ಹೊನ್ನು, ಕಲ್ಪಿನಲ್ಲಿ ಹುಟ್ಟಿದ ರನ್ನ, ಚಿಪ್ಪಿನಲ್ಲಿ ಹುಟ್ಟಿದ ಮುತ್ತು, ವೃಕ್ಷದಲ್ಲಿ ಹುಟ್ಟಿದ ಗಂಧ ಅವು ತಮ್ಮ ಸ್ವಸ್ಥಾನಂಗಳ ಮೀರಿ ಪರಸ್ಥಾನಂಗಳಲ್ಲಿ ನಿಂದು ಪ್ರಾಪ್ತಿಯನೆಯ್ದುವಂತೆ, ಪಿಂಡ ಅಂಡದಲ್ಲಿ ಹುಟ್ಟಿ ಅಂಡವನಿತಿಗಳೆದು ನಿಜ ಪಿಂಡವಾದಂತೆ, ಗುರುವಿನ ಕರಕಮಲದಲ್ಲಿ ಹುಟ್ಟಿ, ಲಿಂಗಮೂರ್ತಿಯ ಸರ್ವಾಂಗದಲ್ಲಿ ಬೆಳೆದು ಜಂಗಮವಪ್ಪ ನಿರಂಗ ಪ್ರಸಾದದಲ್ಲಿ ಬೆರೆದು ಅವಿರಳನಾದವಂಗೆ ಬಂಧ ಮೋಕ್ಷ ಕರ್ಮಂಗಳ ಬೆಂಬಳಿಗೆ ಸಲ್ಲ! ಅದು ನಿರಂಗವಸ್ತು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 72 ||
--------------
ದಾಸೋಹದ ಸಂಗಣ್ಣ
ಮರ್ಕಟನ ಲಾಗು ಶಾಕೆಯುಳ್ಳನ್ನಕ್ಕ, ವಿಹಂಗನ ಪಥ ಬಯಲುಳ್ಳನ್ನಕ್ಕ, ಪಿಪೀಲಿಕನ ಜ್ಞಾನ ಮಧುರರಸವುಳ್ಳನ್ನಕ್ಕ, ಇಂತೀ ತ್ರಿವಿಧ ಗುಣ ಇದಿರುಳ್ಳನ್ನಕ್ಕ ಇಂತೀ ವಸ್ತು ಉಂಟಾಗಿ ದೃಷ್ಟ ಇದಿರಿಟ್ಟವು. ಉರಿ ಕರ್ಪೂರವ ಸುಡಿಲಿಕ್ಕೆ ಘಟದ ತಿಟ್ಟವಳಿದಂತೆ ವಸ್ತು ದೃಷ್ಟದ ಅಂಗದಲ್ಲಿ ಬಂದು ಪ್ರತಿಷೆ*ಯಾಗಲಾಗಿ ಘಟದ ಸರ್ವೇಂದ್ರಿಯಂಗಳು ಅಲ್ಲಿಯೇ ನಷ್ಟ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 70 ||
--------------
ದಾಸೋಹದ ಸಂಗಣ್ಣ
ಮರಾಳನ ಗದಕ ತೇಜಿಯ ಚಿತ್ತ ಪನ್ನಗನ ವಳಿ ಹೊಳಹಿನಂತೆ ಘಟಾತ್ಮನ ಭೇದ. ಇದು ನಿರುತ ಸ್ವಯಾನುಭಾವದಿಂದ ಸಂಬಂಧಿಸಿ ಉರಿ ಲೋಹದ ಯೋಗದಂತೆ ಆಗದೆ, ಉರಿ ಕರ್ಪೂರದಿರವಿನಂತೆ ಆಗಬೇಕು. ಇದು ಸಾವಧಾನ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 73 ||
--------------
ದಾಸೋಹದ ಸಂಗಣ್ಣ
ಮುತ್ತಿನ ನೀರಿನಂತೆ, ರತ್ನದ ಬೆಂಕಿಯಂತೆ, ಸುರಚಾಪದಂತೆ, ಶರಧಿಯ ಹೊಳೆಯಂತೆ, ವರವಳಿದ ಶಿಲಾಮೂರ್ತಿಯಂತೆ, ದೃಷ್ಟವಿದ್ದು ನಷ್ಟವಪ್ಪುದು ನಿಜ ನಿಷೆ*ವಂತನ ಸಾವಧಾನ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 76 ||
--------------
ದಾಸೋಹದ ಸಂಗಣ್ಣ
ಮೆಟ್ಟಿದ ಪಂಕವ ಅಪ್ಪುವಿನಿಂದಲ್ಲದೆ ನೀಗಬಾರದು. ಮಾಡುವ ಕ್ರೀಯ ಅರಿವಿನ ದೆಸೆಯಿಂದಲ್ಲದೆ ಬಿಡುಮುಡಿಯನರಿಯಬಾರದು. ಮಹಾನಿಜತತ್ವದ ಬೆಳಗ ಮಹಾಶರಣ ಸಂಸರ್ಗದಲ್ಲಿ ಅಲ್ಲದೆ ಅರಿದು ಹರಿಯಬಾರದು. ಶಂಭುವಿನಿಂದತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 78 ||
--------------
ದಾಸೋಹದ ಸಂಗಣ್ಣ
ಮಾಂಸ ಪಿಂಡತ್ರಯ, ಸೂಕ್ಷ ್ಮ ಪಿಂಡತ್ರಯ, ಕಾರಣ ಪಿಂಡತ್ರಯ ಇಂತಿವ ಶೋಧಿಸಿ, ಲಿಂಗವ ಸಾಗಿಸಿ ದೀಕ್ಷೆಯ ಮಾಡಬೇಕು. ಇದು ಸದ್ಗುರು ಮೂರ್ತಿಯ ತೆರ. ಶಂಭುವಿನಿಂದಿತ್ತು ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 74 ||
--------------
ದಾಸೋಹದ ಸಂಗಣ್ಣ