ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಪೇಕ್ಷೆಯುಳ್ಳನ್ನಕ್ಕ ಭಕ್ತನಲ್ಲ, ಹಿತಶುತ್ರುವಾಗಿಹನ್ನಕ್ಕ ಮಾಹೇಶ್ವರನಲ್ಲ. ಪರದ್ರವ್ಯಭಕ್ಷಿತ ಪ್ರಸಾದಿಯಲ್ಲ. ಪ್ರಜ್ಞಾಹೀನ ಪ್ರಾಣಲಿಂಗಿಯಲ್ಲ. ಕುಚಿತ್ತ ಅಪಸರೆಯ ಕ್ಷಣಿಕ ಶರಣನಲ್ಲ. ಉಪಮಾ ಭೇದ ಗುಪ್ತಪಾತಕ ಐಕ್ಯನಲ್ಲ. ಇಂತೀ ಷಡುಸ್ಥಲಂಗಳ ಸ್ಥಾನ ವಿವರಂಗಳನರಿತು ಸ್ಥಲನಿರ್ವಾಹಿಯಾಗಿ ತತ್ವದ ಮುಖದಿಂದ ನಿತ್ಯ ಅನಿತ್ಯವತಿಳಿದು ಪರತತ್ವದ ಗೊತ್ತಿನಲ್ಲಿ ನಿಜ ನಿರವಯವಪ್ಪ ಆತ್ಮನಬೆಚ್ಚಂತೆ ಬೈಚಿಟ್ಟು ತತ್ಕಾಲ ಉಚಿತವನರಿದು ಕಾಂತಿ ನಷ್ಟವಾಗಿ ಕಳವಳಿಸಿ ಕಂಗೆಡದೆ ಕುರುಹಿನ ಲಕ್ಷ ್ಯದಲ್ಲಿ ಚಿತ್ತ ಸಮೂಹದಲ್ಲಿ ಎಚ್ಚರಿಕೆ ನಿಜವಸ್ತುವಿನಲ್ಲಿ ಚಿತ್ತು ಲೇಪವಾದುದು ಸಾವಧಾನ ಸಂಬಂದ್ಥಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಉರಿಯ ಗಿರಿಯಲ್ಲಿ ಕರ್ಪುರದ ತರು ಹುಟ್ಟಿ, ಉರಿ ನಷ್ಟವಾಗಿ, ಆ ತರುವಿನಲ್ಲಿ ಬೆಂಕಿಯ ಹಣ್ಣು ಹುಟ್ಟಿ, ಅಪ್ಪುವಿನ ಪಕ್ಷಿ ಬಂದು ಮೆಟ್ಟಿ ಕುಟುಕಲಾಗಿ, ಆ ಹಣ್ಣಿನ ತೊಟ್ಟಿನೊಳಡಗಿತ್ತು ಹಕ್ಕಿ. ಮಧುಕೇಶ್ವರಲಿಂಗ ಎತ್ತ ಹೋದನೆಂದರಿಯೆ.
--------------
ದಾಸೋಹದ ಸಂಗಣ್ಣ