ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗಂಧವ ಬಂದ್ಥಿಸಿ ಹಿಡಿದೆಹೆನೆಂದಡೆ ಆ ಗಂಧದ ಅಂಗವಿಲ್ಲದೆ ನಿಂದುದುಂಟೆ ಸುಗಂಧ? ಈ ಶಿವಲಿಂಗವನರಿಯದ ಆತ್ಮನು ಮುಂದೆ ಏತರಿಂದ ಸಂದ್ಥಿಸುವುದು? ಇದು ಲಿಂಗಾಂಗಿಯ ಸಾವಧಾನ ಸಂಬಂಧ. ನಿಳಯದ ಬಾಗಿಲು ತಿಳುವಳ. ಲಿಂಗಮೂರ್ತಿಯ ತದ್ದಾ ್ಯನ ಶುದ್ಧ ಲೇಪವಾದುದು ತತ್ಕಾಲ ಸಂಬಂದ್ಥಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಗುರುವನರಿದಲ್ಲಿ ಮೂರನರಿದು ಐದ ಬಿಡಬೇಕು. ಲಿಂಗವನರಿದಲ್ಲಿ ಅರನರಿದು ಮೂರ ಬಿಡಬೇಕು ಜಂಗಮವನರಿದಲ್ಲಿ ಮೂವತ್ತಾರನರಿದು ಇಪ್ಪತ್ತೆ ೈದ ಬಿಡಬೇಕು. ಇಂತೀ ತ್ರಿವಿಧವನೊಡಗೂಡಿ, ನಾನಾ ಸ್ಥಲಂಗಳ ಶತ ಕುರುಹಿನಲ್ಲಿ ಗತಮಾಡಿ ಒಂದು ಎಂಬ ಸಂದೇಹ ಬಿಟ್ಟಿತ್ತು. ಆ ಸಂದೇಹವುಂಟೆಂಬ ಸಂಧಿಯಲ್ಲಿ ಗುರುವಿಂಗೆ ಎರಡಡಿ ಲಿಂಗಕ್ಕೆ ಮೂರಡಿ, ಜಂಗಮಕ್ಕೆ ಆರಡಿ, ಇಂತೀ ತ್ರಿವಿಧದಲ್ಲಿ ಸ್ಥಲಂಗಳನರಿತು ಗುರುವಿನ ಭವಪಾಶಮಂ ಕೆಡಿಸಿ, ಲಿಂಗದ ತ್ರಿವಿಧದ ಬೇರೆ ಕಿತ್ತು ಜಂಗಮದ ಸರ್ವಸಂಗವ ಮಾಡುವ ಜಂಗುಳಿ ಜಂಘೆಯಮುರಿದು, ಮೂರನವಗವಿಸಿ ನಿಂದ ಪರಮಭಕ್ತಂಗೆ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರಲಿಂಗಕ್ಕಿಂದತ್ತ ನಮೋ ನಮೋ ಎನುತ್ತಿದ್ದೆನು.
--------------
ದಾಸೋಹದ ಸಂಗಣ್ಣ
ಗುರುವೈದು ಬಂದು ಮೂರು ಲಘುವಾರರಿಂದ ಹುಟ್ಟಿದಅಂಡ ಪಿಂಡ. ಆ ಪಿಂಡದ ಪಿಂಡಕ್ಕೆ ಗುರು ಇಪ್ಪತ್ತೈದು, ಬಿಂದು ಮೂವತ್ತಾರು, ಲಘ ಐವತ್ತೊಂದರಲ್ಲಿ ಕೂಡಿದ ನಾದವೊಂದು. ಅದು ನೇಮಾಕ್ಷರಲೇಪ, ತ್ರಿಕರಣ ಲೊಪ, ಜ್ಞಾನಪಿಂಡವೈಕ್ಯ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಗುರುವಿಂಗೊಂದು ಲಿಂಗಕ್ಕೆರಡು ಜಂಗಮಕ್ಕೆ ಮೂರು ಸತಿಸಂದಲ್ಲಿ, ಗುರು ಸತ್ತು ಲಿಂಗ ಚಿತ್ತು ಜಂಗಮ ಆನಂದವೆಂದಲ್ಲಿ, ಹಿಂಗದವು ಮೂರು ನಿಜವಸ್ತು ಒಂದರಲ್ಲಿ. ಆ ಒಂದು ಸಂಗನಬಸವಣ್ಣನಲ್ಲಿ ಅಡಗಿ ಚನ್ನಬಸವಣ್ಣನಲ್ಲಿ ತಲ್ಲೀಯವಾಯಿತ್ತು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಗುರುಸ್ವರೂಪನಾಗಿ ಬಂದು ಬ್ರಹ್ಮನ ಉತ್ಪತ್ಯವ ಕೆಡಿಸಿ ಮಾಂಸಪಿಂಡವ ಕಳೆದು ಮಂತ್ರಪಿಂಡದಿಂದ ಪ್ರತಿಷೆ*ಯ ಮಾಡಿ ನಾನಾ ಕ್ರೀ ವರ್ತನಕ್ಕೆ ಹೊಲಬನಿಟ್ಟುಕೊಟ್ಟು ನಿನ್ನ ಕರಕಮಲದಲ್ಲಿ ಜ್ಯೋತಿರ್ಮಯವಪ್ಪ ನಿನ್ನ ನಿಜಾತ್ಮದರಿವ ಆ ಕುರುಹಿನಲ್ಲಿ ಬೈಚಿಟ್ಟು ನಿಜಲಿಂಗವ ಮಾಡಿ ಎನ್ನ ಕೈಯಲ್ಲಿ ಕೊಟ್ಟೆ. ಆ ಲಿಂಗಸ್ವರೂಪು ನೀನಾಗಿ ಬಂದು ಹೃತ್ಕಮಲದಲ್ಲಿ ನಿಂದು ಕರಣ ನಾಲ್ಕು ಮದವೆಂಟು ಇಂದ್ರಿಯವೈದು ವಿಷಯವಾರು ಇಂತಿವರೊಳಗಾದ ಸರ್ವೇಂದ್ರಿಯವ ಕೆಡಿಸಿ ತ್ರಿಗುಣಾತ್ಮಕದ ತ್ರಿಶಕ್ತಿ ಭೇದವ ತ್ರಿಮಲದ ಘೋಷವ ಕೆಡಿಸಿ ನಿಶ್ಚಯಪದದಿಂದ ಹೃತ್ಕಮಲವಾಸಿಯಾದೆ; ಆ ಗುಣದಿಂದ ನಾ ಸಾಫಲ್ಯನಾದೆ. ಜಂಗಮಮೂರ್ತಿಯಾಗಿ ಬಂದು ಎನಗೆ ದೀಕ್ಷಾಗುರು ಶಿಕ್ಷಾಗುರು ಮೋಕ್ಷಾಗುರುವಾಗಿ ಶುದ್ಧ ಸಿದ್ಧ ಪ್ರಸಿದ್ಧಮಂ ತೋರಿ ಎನ್ನ ಭವಛೇದನಮಂ ಮಾಡಿದೆ. ಇಂತೀ ತ್ರಿವಿಧಮೂರ್ತಿ ಭಕ್ತಿ ವಿಷಯದಿಂದ ಬಸವಣ್ಣ ಚನ್ನಬಸವಣ್ಣಗೋಸ್ಕರವಾಗಿ ಕ್ರಿಯಾಸಂಬಂಧಿಯಾದೆ. ಶಂಭುವಿನಿಂದಿತ್ತ ಸ್ವಯಂಭುವಿನಿಂದಿತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ