ಅಥವಾ
(2) (5) (1) (2) (4) (0) (0) (0) (5) (0) (1) (0) (0) (0) ಅಂ (0) ಅಃ (0) (25) (0) (4) (0) (0) (1) (0) (2) (0) (0) (0) (0) (1) (0) (0) (4) (0) (0) (0) (7) (2) (0) (9) (2) (5) (1) (1) (0) (4) (4) (0) (0) (4) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಾದ ವಶ್ಯ ಯಂತ್ರ ಮಂತ್ರ ಇಂದ್ರಜಾಲ ಮಹೇಂದ್ರಜಾಲ ಅದೃಶ್ಯಾಕರಣ ಪರಕಾಯಪ್ರವೇಶ ತೀರ್ಥಯಾತ್ರೆ ದಿಗ್ವಳಯದಲ್ಲಿ ಜನಜನಿತದ ಆಗುಚೇಗೆಯಲ್ಲದೆ ಎಲ್ಲಿಯೂ ಕಾಬುದಿಲ್ಲ. ಕಾಬುದಕ್ಕೆ ತೆರಪು ಮೂರನರಿದು ಮೂರ ಮರೆದು ಆರನರಿದು ಹದಿನಾರ ಹರಿದು, ಐದ ಬಿಟ್ಟು ಇಪ್ಪತ್ತೈದ ಕಟ್ಟಿ ಬಟ್ಟ ಬಯಲು ತುಟ್ಟತುದಿಯ ಮೆಟ್ಟಿ ನೋಡಿ ಕಂಡ ನಾರಾಯಣಪ್ರಿಯ ರಾಮನಾಥನಲ್ಲಿ ಕೂಟದ ಶರಣ.
--------------
ಗುಪ್ತ ಮಂಚಣ್ಣ
ವೇದ ಪ್ರಣವದ ಶೇಷ. ಶಾಸ್ತ್ರ ಸಂಕಲ್ಪದ ಸಂದು. ಪುರಾಣ ಪುಣ್ಯದ ತಪ್ಪಲು. ಇಂತೀ ವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ ವಾದಕ್ಕೆ ಹೋರುವ ವಾಗ್ವಾದಿಗಳು ಭೇದವನರಿಯದೆ ಹೋರಲೇಕೆ? ಹೊಲಬುದಪ್ಪಿ ಬೇವಿನ ಮರನ ಹತ್ತಿ ಬೆಲ್ಲವ ಮೆದ್ದಡೆ ಕಹಿಯೊ? ಸಿಹಿಯೊ? ಎಂಬುದನರಿತಾಗ, ಆವ ಬಳಕೆಯಲ್ಲಿದ್ದಡೂ ದೇವನ ಕಲೆಯನರಿತಲ್ಲಿ ಆವ ಲೇಪವೂ ಇಲ್ಲ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ವಾದ್ಯದೊಳಗಣ ನಾದದೊಲು ಪಾಷಾಣದೊಳಗಣ ಪಾವಕನೊಲು ಕಿಸಲಯದೊಳಗಣ ರಸದವೊಲು ಅಸಿಮೊನೆಯಲ್ಲಿ ತೋರುವ ನಯ ಕುಶಲದವೊಲು ಮುಸುಕಿನೊಳಗೆ ತೋರುವ ಆಕಾಶದ ಪ್ರತಿರೂಪಿನವೊಲು ಗಜಗತಿಯಂತೆ ಮಯೂರನಂತೆ ಉಲುಹಡಗಿದ ವೃಕ್ಷ ಬಯಲೊಳಗಡಗಿದ ನಾದ ಹೊರಹೊಮ್ಮದ ಐಕ್ಯ. ಇಂತಿವರಂದದಲ್ಲಿ ಸಂದ ಶರಣಂಗೆ ಸಂದೇಹ ಪಥವಿಲ್ಲ ನಂದಗೋಪಿಯ ಕಂದಪ್ರಿಯ ನಿಸ್ಸಂಗಲಿಂಗ ರಾಮನಾಥಾ.
--------------
ಗುಪ್ತ ಮಂಚಣ್ಣ
ವಸ್ತು ಭಾವದ ಶಕ್ತಿಸ್ವರೂಪು ವಿಷ್ಣು. ವಿಷ್ಣುಭಾವದ ಶಕ್ತಿಸ್ವರೂಪು ಬ್ರಹ್ಮ. ಆ ವಿಷ್ಮುವಿನ ಅವತಾರ ಅರುಹಂತ. ಇಂತಿವೆಲ್ಲವು ವಸ್ತು ಬುಡವೆಂದರಿದು ಹೇಳುತ್ತದೆ ಪ್ರಣವದಲ್ಲಿ, ಸಾಗಿಸುತ್ತದೆ ವೇದಶಾಸ್ತ್ರ ಸಂದೇಹವಿಲ್ಲದೆ ಕೂಗುತ್ತದೆ ಪುರಾಣ ಪುಣ್ಯ ಗತಿಮತಿ ಒಬ್ಬನೇ ಎಂದು. ಮುಕುರವ ಹಿಡಿದು ಮುಖವ ಕೇಳಲೇಕೆ? ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ