ಅಥವಾ
(2) (5) (1) (2) (4) (0) (0) (0) (5) (0) (1) (0) (0) (0) ಅಂ (0) ಅಃ (0) (25) (0) (4) (0) (0) (1) (0) (2) (0) (0) (0) (0) (1) (0) (0) (4) (0) (0) (0) (7) (2) (0) (9) (2) (5) (1) (1) (0) (4) (4) (0) (0) (4) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗಂಡ ಸತ್ತ ಮುಂಡೆಗೆ ಮೂವರು ಮಿಂಡರು. ಒಬ್ಬಂಗೆ ಅಂಡಿನ ಆಶೆ, ಒಬ್ಬಂಗೆ ಖಂಡಿಯಾಶೆ, ಒಬ್ಬಂಗೆ ಮಂಡೆಯಾಶೆ. ಇಂತೀ ಮೂವರಿಗಾದ ಸೂಳೆ ಸೂಳಕೊಡುವ ಪರಿಯಿನ್ನೆಂತೊ? ಅಂಡಿಗೆ ಖಂಡಿಗೆ ಮಂಡೆಗೆ ದಿಂಡೊಂದೆ ಮೂವರು ಕೊಂದಾಡುತ್ತಿದ್ದರು. ಅಭಿಸಂಧಿಯ ತಿಳಿ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಗಡಿಗೆ ಗುಡವನು ನುಂಗಿತ್ತು ಅಡಿಯಲ್ಲಿದ್ದ ಕುಡಿಕೆ ಆ ಉಭಯವ ನುಂಗಿತ್ತು. ನುಂಗಿಹೆನೆಂದ ಚಿತ್ತವ ಸಂದೇಹ ನುಂಗಿತ್ತು. ಈ ಉಭಯದ ಸಂದೇಹದ ಸಂಚ ಹಿಂಗಿಯಲ್ಲದೆ ಲಿಂಗವಿಲ್ಲ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಗುರುವ ನುಡಿಯಬಾರದೆಂದು ಅಡಗಿಪ್ಪುದೆ ಗುರುದ್ರೋಹ. ಅಪ್ಪು ನಷ್ಟವಾದಲ್ಲಿ ತಪ್ಪದೆ ಬೆಳೆ? ಘಟವಳಿದಲ್ಲಿ ಆತ್ಮಂಗೆ ಮಠವಿಲ್ಲ. ಗುರುವಿನ ಮರವೆ ಶಿಷ್ಯನ ವಿಶ್ವಾಸದ ಕೇಡು. ಕೈಗೆ ಕಣ್ಣು ಮನ ಅಂಗಕ್ಕೆ ಬೇರೆ ನೋವುಂಟೆ? ಬಿತ್ತು ನಷ್ಟವಾದಲ್ಲಿ ಅಂಕುರವುಂಟೆ? ನೋವ ಗುರು ಇದಕ್ಕಂಜಿ ಹೇಳದ ಶಿಷ್ಯ ಕಿವಿಮೂಳ ಮೌಕ್ತಿಕದ ಜಾವಳಿಯ ಗಳಿಸಿದಂತೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಗೋವಿನ ಮರೆ ವಿಹಂಗನಂತಾಗಲಾಗದು. ತೋಹಿನ ಮರೆಯಲ್ಲಿದ್ದ ಶಬರನಂತಾಗಲಾಗದು. ಲಾಂಛನದ ಮರೆಯಲ್ಲಿದ್ದ ವೇಷಧಾರಿಯಂತಾಗಲಾಗದು. ಹೊರವೇಷಮಂ ತೊಟ್ಟು ವ್ಯಾಪ್ತಿಯ ಮನುಜರಂತೆ ನಡೆದು ಮತ್ತೆ ಅರಿವೇಕೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ