ಅಥವಾ
(2) (5) (1) (2) (4) (0) (0) (0) (5) (0) (1) (0) (0) (0) ಅಂ (0) ಅಃ (0) (25) (0) (4) (0) (0) (1) (0) (2) (0) (0) (0) (0) (1) (0) (0) (4) (0) (0) (0) (7) (2) (0) (9) (2) (5) (1) (1) (0) (4) (4) (0) (0) (4) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎತ್ತು ಹಸುವ ಹಾಯಲಾಗಿ ತೆಕ್ಕೆಯನಿಕ್ಕಿದ ಕಣ್ಣಿಯಲ್ಲಿ ತೆಕ್ಕೆಗೆ ನಡೆಯದ ಹಸು, ಕಟ್ಟುಗೊಳ್ಳದ ಹೋರಿ. ಇವೆರಡ ಸಿಕ್ಕಿಸುವ ಪರಿಯಿನ್ನೆಂತೊ? ಕಟ್ಟಿದ ಕಣ್ಣಿಯ ಕುಣಿಕೆ ಕಳಚಿ ಹೋರಿಯ ಕೊರಳಲ್ಲಿ ಹೋಯಿತ್ತು, ಹಸು ಬೆತ್ತಲೆಯಾಯಿತ್ತು, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಎಮ್ಮಾಕೆಯ ಕೈಯ ಮೊಗೆಯ ನೀರಿನಲ್ಲಿ ನಾಮವ ತೇಯಲಾಗಿ ನಾಮವುಳಿದು ನೀರಳಿಯಿತ್ತು. ಅಳಿದ ನೀರ ಹಣೆಗಿಕ್ಕಲಾಗಿ ನಿರ್ನಾಮವಾಯಿತ್ತು; ನಾರಾಯಣಪ್ರಿಯ ರಾಮನಾಥನಲ್ಲಿ ನಿಶ್ಚಯವಾಯಿತ್ತೆನಗೆ.
--------------
ಗುಪ್ತ ಮಂಚಣ್ಣ
ಎಲ್ಲರಿಗೂ ಬಲ್ಲತನವ ಹೇಳಿ ಬಲ್ಲವನೆಂದಡೆ ಅದು ಇಲ್ಲದ ಮಾತು. ಬಲ್ಲತನವನರಿವುದೆಂದು ಹೇಳುವ ಮಾತು ಅವರಿಗೊ ತನಗೊ? ಸಾಧನೆಯ ಮಾಡುವ ಭೇದಕ ಗಾಯದ ಆಗ ತೋರಿ ತಿವಿಯೆಂದಡೆ ಅದರ ಆಗು ಹೋಗು ಆರಿಗೆಂಬುದನರಿ. ತಂಬಿಗೆಯಲ್ಲಿ ತುಂಬಿದ ಉದಕವ ಕೊಂಬುದು ತಂಬಿಗೆಯೊ ಕೊಂಬುವ ತಾನೊ ಎಂಬುದನರಿ. ತನಗಾ ನಿರಂಗದ ಸಂಗ ನಿಬದ್ಧಿಯಾದಲ್ಲಿ, ಅಂತಾ ಇರವ ಇದಿರು ಕಂಡು ಪ್ರಮಾಣಿಸುವಲ್ಲಿ, ಅವರಿಗದೇ ನಿಂದ ಉಪದೇಶ. ಇದು ಅರಿಕೆವಿದರ ಇರವು. ಹಾಗಲ್ಲದೆ ಬೆಳೆಗೆ ನೀರನೆರೆದು ಫಲವ ಭೋಗಿಸುವಂತೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಎನ್ನ ಹರಿಭಕ್ತಿಯಿಂದ ಸಾವಿರ ಕಮಲ ಕುಸುಮ ತಂದು ಪಶುಪತಿಯ ಚರಣಕ್ಕೆ ಒಸೆದು ಮಾಡುತಿರಲಾಗಿ, ಶಶಿಧರ ಒಂದು ಕುಸುಮವ ಕಡಿಮೆ ಮಾಡಲಾಗಿ, ಹುಸಿಯ ಹೊರಲಾರದೆ ತೆಗೆದಿಕ್ಕಿದ ಕಣ್ಣು ಕಾಲಸಂಹಾರನ ಕಾಲಲಿದೆ. ಇದು ಕಾರಣ, ನಾರಾಯಣಪ್ರಿಯ ರಾಮನಾಥ.
--------------
ಗುಪ್ತ ಮಂಚಣ್ಣ
ಎನ್ನ ಕ್ರಿಯಾಜ್ಞಾನದ ಕೂಟ ಮಡಕೆ ಮಣ್ಣಿನಂತಾಯಿತ್ತಯ್ಯಾ, ಭ್ರಮರ ಗಂಧದಂತಾಯಿತ್ತು ತಂದೆ. ಮಧುರ ವಾಣಿಯಂತೆ ಸರ ಶರಧಿಯಂತಾಯಿತ್ತಯ್ಯಾ. ಅಮೃತ ಅಮೃತದಂತಾಯಿತ್ತು. ಬೆಳಗಿನಂತೆ ಬಯಲು ಬೆಳಗಿನಂತಾಯಿತ್ತು. ಎಡೆ ಬಿಡುವಿಲ್ಲದೆ ಕಡೆನಡು ಮೊದಲೆನ್ನದೆ ಸಕ್ಕರೆಯ ದಂಡದಂತೆ ಆ ಗುಣವೆತ್ತಲೂ ಸರಿ, ಎಲೆ ಅಚ್ಯುತಪ್ರಿಯ, ರಾಮನಾಥಾ ನಿಮ್ಮಲ್ಲಿ ಎನಗೆ.
--------------
ಗುಪ್ತ ಮಂಚಣ್ಣ