ಅಥವಾ
(4) (1) (1) (0) (0) (1) (0) (0) (1) (0) (0) (0) (0) (0) ಅಂ (1) ಅಃ (1) (4) (0) (4) (0) (0) (0) (0) (3) (0) (0) (0) (0) (0) (0) (0) (0) (0) (0) (0) (1) (3) (0) (0) (0) (2) (0) (0) (0) (0) (0) (1) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜ್ಞಾನದಲರಿದಡೇನಯ್ಯ, ಕ್ರೀಯನಾಚರಿಸದನ್ನಕ್ಕ? ನೆನೆದ ಮಾತ್ರದಲ್ಲಿ ಅಹುದೆ, ಕಾರ್ಯದಲಲ್ಲದೆ? ಕುರುಡ ಕಾಣ ಪಥವ, ಹೆಳವ ನಡೆಯಲರಿಯ. ಒಂದಿಲ್ಲದಿರ್ದಡೊಂದಾಗದು. ಜ್ಞಾನವಿಲ್ಲದಿರ್ದ ಕ್ರೀ ಜಡನು, ಕ್ರೀಯಿಲ್ಲದ ಜ್ಞಾನ ವಾಗ್ಜಾಲ ಭ್ರಾಂತು. ಇದು ಕಾರಣ ಸಿದ್ಧಸೋಮನಾಥಲಿಂಗವ ಕೂಡುವ ಶರಣಂಗೆ ಎರಡೂ ಬೇಕು.
--------------
ಅಮುಗಿದೇವಯ್ಯ
ಜಟಾಜೂಟ ಮಕುಟಕೋಟಿಗಳಾದಡೇನು? ನೊಸಲ ಕಣ್ಣು ಚತುರ್ಭುಜದವರಾದಡೇನು? ಅಂಗದ ಮೇಲೆ ಲಿಂಗವಿಲ್ಲದವರ ಕಂಡಡೆ ಬರುಕಾಯರೆಂಬೆನು, ಬರುಮುಖರೆಂಬೆನು. ಸಿದ್ಧಸೋಮನಾಥಲಿಂಗವಾದೊಡೆಯು ನಮಗೇನು? ಕೊಂದಡೆ ಕೊಲಲಿ, ಇಂತೆಂಬುದ ಮಾಣೆನಯ್ಯಾ.
--------------
ಅಮುಗಿದೇವಯ್ಯ
ಜ್ಞಾನಸೂತಕ, ಮೋನಸೂತಕ, ಜಪತಪ ಅನುಷಾ*ನಸೂತಕ, ಸೋಹಂ ಎಂಬ ಸೂತಕ, ಸಿದ್ಧಸೋಮನಾಥ ಪ್ರಾಣಲಿಂಗವಾಗಿ ಸೂತಕ ಹಿಂಗಿತ್ತು ಯಥಾ ಸ್ವೇಚ್ಛೆ.
--------------
ಅಮುಗಿದೇವಯ್ಯ