ಅಥವಾ
(4) (1) (1) (0) (0) (1) (0) (0) (1) (0) (0) (0) (0) (0) ಅಂ (1) ಅಃ (1) (4) (0) (4) (0) (0) (0) (0) (3) (0) (0) (0) (0) (0) (0) (0) (0) (0) (0) (0) (1) (3) (0) (0) (0) (2) (0) (0) (0) (0) (0) (1) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗ ಅನಂಗವೆಂಬೆರಡರ ಸಂದಳಿದ ಮಹಂತನ ಅಂಗ ಸೋಂಕಿತ್ತೆಲ್ಲಾ ಪವಿತ್ರ ಕಾಣಿರೆ. ಪವಿತ್ರವಿರ್ದಲ್ಲಿ ಪದಾರ್ಥವಿಹುದು, ಪದಾರ್ಥವಿರ್ದಲ್ಲಿ ಮನವಿಹುದು. ಮನವಿರ್ದಲ್ಲಿ ಹಸ್ತವಿಹುದು, ಹಸ್ತವಿರ್ದಲ್ಲಿ ಜಿಹ್ವೆಯಿಹುದು ಜಿಹ್ವೆಯಿರ್ದಲ್ಲಿ ರುಚಿಯಿಹುದು, ರುಚಿಯಿರ್ದಲ್ಲಿ ಅವಧಾನವಿಹುದು. ಅವಧಾನವಿರ್ದಲ್ಲಿ ಭಾವವಿಹುದು, ಭಾವವಿರ್ದಲ್ಲಿ ಲಿಂಗವಿಹುದು. ಲಿಂಗವಿರ್ದಲ್ಲಿ ಅರ್ಪಿತವಿಹುದು, ಅರ್ಪಿತವಿರ್ದಲ್ಲಿ ಪ್ರಸಾದವಿಹುದು. ಪ್ರಸಾದವಿರ್ದಲ್ಲಿ ಪರಿಣಾಮವಿಹುದು. ಇದು ಕಾರಣ ಮಹಾಘನ ಸದ್ಗುರು ಸಿದ್ಧಸೋಮನಾಥಾ, ನಿಮ್ಮ ಶರಣರು ಪ್ರಾಣಲಿಂಗಪ್ರವೇಶಿಗಳಾಗಿ ಪರಿಣಾಮಪ್ರಸಾದಿಗಳಯ್ಯಾ.
--------------
ಅಮುಗಿದೇವಯ್ಯ
ಅಲಗಿನ ಮೊನೆಯನೇರಬಹುದು, ಹುಲಿಯ ಬಲೆಯ ಹೊಗಬಹುದು, ಸಿಂಹದ ಕೊರಳಿಗೆ ಹಾಯಬಹುದು, ಸಿದ್ಧಸೋಮನಾಥಾ, ನಿಮ್ಮ ಮುಟ್ಟದೆ ನಿಮಿಷ ಕುಳ್ಳಿರಬಾರದು.
--------------
ಅಮುಗಿದೇವಯ್ಯ
ಅರಿವನ್ನಕ್ಕ ಭೃತ್ಯಾಚಾರಿ, ಮೀರಿ ಮಿಕ್ಕು ಶರಣಪಥ ಸೋಂಕು ತಾನಾಗಿದ್ದ ಸುಖವು ಕೂಡುವನ್ನಕ್ಕ ಪ್ರಾಣಲಿಂಗಿ. ಕೊಡಲಿಲ್ಲ ಕೊಳಲಿಲ್ಲ, ಲಿಂಗಪ್ರಾಣಿಯಾದವಂಗೆ ಸಿದ್ಧಸೋಮನಾಥಲಿಂಗದಲ್ಲಿ ಅರುವಿದ್ದ ಬಳಿಕ.
--------------
ಅಮುಗಿದೇವಯ್ಯ
ಅರ್ಪಿತವಿಲ್ಲದ ಲಿಂಗಕ್ಕೆ ಅನರ್ಪಿತವಿಲ್ಲದ ಶರಣಪ್ರಸಾದಿ. ರೂಪಿಲ್ಲದ ಲಿಂಗಕ್ಕೆ ರುಚಿಯಿಲ್ಲದ ಪ್ರಸಾದಿ[ಪ್ರಸಾದಿ] ಅರ್ಪಿಸಲರಿಯದ ಶರಣ, ಅನರ್ಪಿತವನೊಲ್ಲದ ಪ್ರಸಾದಿ. ಇದುಕಾರಣ ಮಹಾಘನ ಸದ್ಗುರು ಸಿದ್ಧಸೋಮನೆಂಬ ಲಿಂಗವಿರ್ದು, ತಾನಿಲ್ಲದ ಸುಯಿಧಾನಿ.
--------------
ಅಮುಗಿದೇವಯ್ಯ