ಅಥವಾ
(4) (1) (1) (0) (0) (1) (0) (0) (1) (0) (0) (0) (0) (0) ಅಂ (1) ಅಃ (1) (4) (0) (4) (0) (0) (0) (0) (3) (0) (0) (0) (0) (0) (0) (0) (0) (0) (0) (0) (1) (3) (0) (0) (0) (2) (0) (0) (0) (0) (0) (1) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಮ್ಮ ನಲ್ಲನ ಬಯಲ ಬಣ್ಣವ ಕಂಡು ಎನ್ನ ಮನ ಬೆರಗಾಯಿತ್ತವ್ವಾ, ಇದು ಕಾರಣ ನೋಡದೆ ನೋಡುತಿರ್ದೆನು. ಆತನ ನೋಡುವ ತವಕದಿಂದ ಮುಂದೆ ಬಂದೆನ್ನ ಕೂಡಿದನಾಗಿ, ಕೂಡದೆ ಕೂಡುತಿರ್ದೆನು. ಆತನ ಬೆರಸುವ ಭೇದದಿಂದ ಆನೆನ್ನ ಮರೆದರೆ ಮೆಚ್ಚಿ ತಾನೆನಗೊಲಿದನಾಗಿ ಬೆರಸದೆ ಬೆರಸುತಿರ್ದೆ! [ತಾ]ನೆನ್ನ ಹರಣ ಹಾರದಂತೆನ್ನ ತನುವನಾರಡಿಗೊಂಡನಾಗಿ ಜ್ಞಾನಾಂಗನೆಯೆಂದೆನಿಸು. ಇದು ಕಾರಣ, ಮಹಾಘನ ಸಿದ್ಧಸೋಮನಾಥನ ಅಂಗಸುಖದ ಸಂಗವ ಮೆಚ್ಚಿ ನೆನೆಯದೆ ನೆನೆವುತ್ತಿದ್ದೆನು.
--------------
ಅಮುಗಿದೇವಯ್ಯ