ಅಥವಾ
(4) (1) (1) (0) (0) (1) (0) (0) (1) (0) (0) (0) (0) (0) ಅಂ (1) ಅಃ (1) (4) (0) (4) (0) (0) (0) (0) (3) (0) (0) (0) (0) (0) (0) (0) (0) (0) (0) (0) (1) (3) (0) (0) (0) (2) (0) (0) (0) (0) (0) (1) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಲಿಂಗ ಸಂಯೋಗವಾದಲ್ಲಿ ಶಿವಲಿಂಗದುದಯ. ಶಿವಲಿಂಗ ಸಂಯೋಗವಾದಲ್ಲಿ ಜಂಗಮಲಿಂಗದುದಯ. ಜಂಗಮಲಿಂಗ ಸಂಯೋಗವಾದಲ್ಲಿ ಪ್ರಸಾದದುದಯ. [ಪ್ರಸಾದ ಸಂಯೋಗವಾದಲ್ಲಿ ಪ್ರಾಣದುದಯ] ಪ್ರಾಣಸಂಯೋಗವಾದಲ್ಲಿ ಜ್ಞಾನದುದಯ. ಜ್ಞಾನಾನುಭಾವ ಸಂಯೋಗವಾದಲ್ಲಿ ಸುಜ್ಞಾನದುದಯ. ಇಂತೀ ಗುರುವಿನ ಘನವ, ಲಿಂಗದ ನಿಜವ, ಜಂಗಮದ ಮಹಿಮೆಯ, ಪ್ರಸಾದದ ರುಚಿಯ, ಪ್ರಾಣನ ನೆಲೆಯ, ಸುಜ್ಞಾನದ ನಿಲವ, ಮಹಾನುಭಾವದ ಸುಖವನರಿದು ಮರೆದಲ್ಲಿ, ಮಹಾಘನ ಸದ್ಗುರು ಸಿದ್ಧಸೋಮನಾಥನೆಂಬ ಲಿಂಗದಲ್ಲಿ ಜ್ಞಾನಭರಿತವಾದಂದು ಸುಜ್ಞಾನ.
--------------
ಅಮುಗಿದೇವಯ್ಯ
ಗುರುಕಾರುಣ್ಯವ ಪಡೆದು ಲಿಂಗದೊಳವಗ್ರಾಹಕನಾಗದೆ, ಅಂಗಲಿಂಗ, ಪ್ರಾಣಲಿಂಗ, ಆತ್ಮಲಿಂಗಸಂಬಂಧದ ವಿಚಾರವಿಲ್ಲದೆ ಬರಿಯ ಜ್ಞಾನಯೋಗವೆಂಬ ಶೂನ್ಯದನುಭಾವಿಗೆ ಗುರುಭಕ್ತಿ ಇಲ್ಲ, ಗುರುಭಕ್ತಿ ಇಲ್ಲವಾಗಿ ಲಿಂಗಭಕ್ತಿ ಇಲ್ಲ, ಲಿಂಗಭಕ್ತಿಯಿಲ್ಲವಾಗಿ ಜಂಗಮಭಕ್ತಿ ಇಲ್ಲ, ಜಂಗಮಭಕ್ತಿ ಇಲ್ಲವಾಗಿ ಪ್ರಸಾದವಿಲ್ಲ, ಪ್ರಸಾದಪ್ರಸನ್ನವಿಲ್ಲವಾಗಿ ಮೋಕ್ಷವಿಲ್ಲ. ಇದು ಕಾರಣ, ಸದ್ಗುರು ಸಿದ್ಧಸೋಮನಾಥನಲ್ಲಿ ಗುರುಕರಜಾತರಾದ ಲಿಂಗಾಂಗಸಂಬಂಧಿಗಳಪೂರ್ವವಯ್ಯಾ ಪ್ರಭುವೆ.
--------------
ಅಮುಗಿದೇವಯ್ಯ
ಗುರುಶಿಷ್ಯಸಂಬಂಧದನುಭಾವವ ಕೇಳಿರಯ್ಯ: ಗುರುವೆಂಬ ಪರಾಪರ, ಶಿಷ್ಯನೆಂಬ ಇಹಪರ, ಗುರುವೆಂಬ ಪರಮಾರ್ಥ, ಶಿಷ್ಯನೆಂಬ ಏಕಾರ್ಥ, ಗುರುವೆಂಬನಲ್ಲ, ಶಿಷ್ಯನೆಂಬನಲ್ಲ ಏಕೈಕ ಸಿದ್ಧಸೋಮನಾಥನಲ್ಲಿ ಶಬ್ದಕಿಂಬಿಲ್ಲ.
--------------
ಅಮುಗಿದೇವಯ್ಯ
ಗುರುವಿನ ಕರುಣದಿಂದ ಲಿಂಗಜಂಗಮವ ಕಂಡೆನಯ್ಯಾ. ಇಂದಿನ ಸುಖಕ್ಕೆ ಹವಣಿಲ್ಲೆಂದು ಕಂಡೆನಯ್ಯಾ, ಸಿದ್ಧಸೋಮನಾಥಲಿಂಗವಲ್ಲದಿಲ್ಲೆಂದು ಕಂಡೆನಯ್ಯಾ.
--------------
ಅಮುಗಿದೇವಯ್ಯ