ಅಥವಾ
(9) (1) (2) (0) (2) (2) (0) (0) (6) (1) (0) (1) (0) (0) ಅಂ (2) ಅಃ (2) (16) (0) (3) (1) (0) (1) (0) (0) (0) (0) (0) (0) (0) (0) (0) (9) (0) (2) (0) (4) (2) (0) (9) (5) (10) (0) (0) (0) (1) (1) (1) (0) (1) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮನ ಮಹದಲ್ಲಿ ನೆಮ್ಮಿ ಮತ್ತೊಂದು ಜಿನುಗುವ ನೇಮವೇತಕ್ಕೆ? ತಲೆ ಪೂಣ್ಯದ ತತ್ತಿಂಗೆ ಪೂಜೆ. ಆಗಣ್ಯನನರಿವುದಕ್ಕೆ ತ್ರಿಕರಣ. ಅಣ್ಣಾ, ಇವ ತಿಳಿದು ನೋಡಿ ಪ್ರಸನ್ನನರಿ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮಾಡುವರ ಮಾಟಕ್ಕಂಜಿ ತೂತ ಬಿಟ್ಟಡೆ ಅದೇತರ ಯೋಗ? ಅದೇತರ ಪೂಜೆ? ಪರರ ಬೇಡುವ ಬಾಯಿ ತೂತ ಮುಚ್ಚಿದಡೆ ಆಸೆಗೆ ಹೊರಗು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮಣ್ಣೆಂಬುದು ದೇಹ, ಹೊನ್ನೆಂಬುದು ಕಾಂಕ್ಷೆ, ಹೆಣ್ಣೆಂಬುದು ಸಕಲ ಸುಖಭೋಗಂಗಳು. ಅಣ್ಣಾ, ಇದ ಹೇಳದೆ ಮಣ್ಣ ಮುದ್ದೆಯ ಕೈಯಲ್ಲಿ ಕೊಟ್ಟು ನುಣ್ಣನೆ ಹೋದೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮಾತಿನ ವೈರಕ್ಕೆ ಹೋತುವಾಗದೆ, ಖ್ಯಾತಿಯ ಲಾಭಕ್ಕೆ ಮಾಟಕೂಟವಾಗದೆ ವಾಸಿಯ ಮಾತಿಗೆ ನಾಸಿಕವನರಿದುಕೊಳ್ಳದೆ, ವೇಸಿಯ ಕೂಸಿಗಾಗಿ ಸತಿಪುತ್ರರ ಘಾಸಿಮಾಡದೆ, ಕಿಂಚಿತ್ತು ತೂತಿಗಾಗಿ ಆತನ ಬಿಡದಿರು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮೆಟ್ಟದ ಮೃತ್ತಿಕೆಯ ಇಕ್ಕುವುದೊಂದೆ ಚಕ್ರ. ತುರುಗೂಡೊಂದೆ ಭೇದ, ಹಿಡಿದವನೊಬ್ಬನೆ. ಘಟ ಹಲವು ತೆರನಾದವು, ಬೇಗ ಒಂದೆ. ಇದರ ಭೇದವ ಹೇಳಾ. ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮಾತು ಬ್ರಹ್ಮಾಂಡವ ಮುಟ್ಟಿ, ನೀತಿ ಮಾತಿನ ಬಾಗಿಲ ಕಾಯ್ವುದು, ಅದೇತರ ಮಾತು? ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮಾತ ವೆಗ್ಗಳವನಾಡಿ, ಹಿರಿಯತನದಿ ಪಾಶವ ತೋರಿ, ಜಗಹಿತಾರ್ಥವಾಗಿ ಆಸೆಯೆಂಬ ಕೂಸು ದ್ರವ್ಯದ ಗಾತ್ರದ ಮೊಲೆಯನುಣುತದೆ. ನಿಹಿತವ ಬಿಟ್ಟು ಕೂತನಾಗಿ ಬಿಡು ಭಾಷೆಯೇಕೆ? ವೇಷದ ಪಾಶವೇಕೆ? ಬಿಡು ತೂತಿಗೆ ಪೋಗಿ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮಡಿವಳ ವಸ್ತ್ರಕ್ಕೆ ಮುನಿದಲ್ಲಿ, ಅರಿ ಸಮರಿಪು ಮುನಿದಲ್ಲಿ, ಸರಸಮ ಮುನಿದಲ್ಲಿ ಸುರ ಅಂತಕ ಮುನಿದಲ್ಲಿ ಇವು ಸರಸವೆ? ಇಂತಿವು ವಿರಸವಲ್ಲಾ ಎಂದು ಉಸುರಿದೆ. ನಿಮ್ಮ ದೆಸೆಯವನೆಂದು ಎನ್ನ ಗಸಣೆಗೊಳಬೇಡ, ಅಸುಕುತನ ದೂರವಾಗಿರಿ, ಬಾಳಾಂಬಕನ ಬಾಲಲೋಲರಾಗಿರಿ. ವಿಶಾಲ ಗುಣನಿಧಿ ಭಕ್ತಗುಣಲೋಲ ಶರಣರನಳಿನರ್ಗ ಕಾಲುಮಾಡಿದಿರೆನ್ನ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮಾರುತನಂತೆ ಮನ, ಮರಾಳನಂತೆ ಬುದ್ಧಿ, ಸಂಚಾರಿಸುವ ಅಂಬುಧಿಯಂತೆ ಅಂಗ, ಮೊಳೆದೋರದ ವೃಕ್ಷದಂತೆ ಸಲೆ ಸಂದಿಹ ಜ್ಞಾನ. ಬಲುಗೈಯನ ತೋಟಿಯ ತೊಡಕಿನಂತೆ, ಗೆಲು ಇಂದ್ರಿಯ ವರ್ಗಂಗಳ, ಆತುರವೈರಿಮಾರೇಶ್ವರಾ.
--------------
ನಗೆಯ ಮಾರಿತಂದೆ
ಮನ ಮನವ ಕೂಡಿ, ತನು ತನುವ ಕೂಡಿ, ಅರಿವು ಅರಿವನರಿತು ಹೆರೆಹಿಂಗದವ ಕರಿಗೊಂಡು ತನ್ನರಿವಿನ ಕುರುಹಿನ ಕುರಿತು ಇಷ್ಟದಲ್ಲಿ ಅನೈಷಿ*ಕತ್ವವೆ ವಸ್ತು ತಾನಾಗಿ ಇದ್ದು ಭಿನ್ನಭಾವವಿಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ