ಅಥವಾ
(9) (1) (2) (0) (2) (2) (0) (0) (6) (1) (0) (1) (0) (0) ಅಂ (2) ಅಃ (2) (16) (0) (3) (1) (0) (1) (0) (0) (0) (0) (0) (0) (0) (0) (0) (9) (0) (2) (0) (4) (2) (0) (9) (5) (10) (0) (0) (0) (1) (1) (1) (0) (1) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕೆಳಗಣ ಅವಳಿವಳೆ, ಮೇಲಣ ಆತನ ಕಾಣೆ, ಆತನೇತರವ. ಬಾಸರ ಕೃಷ್ಣ ಕಪೋತ ತೂತಿನವ ಅಜಾತನಲ್ಲಾಯೆಂದೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕೆಲ ಜೀವದ ಒಲವು ತಲೆಯ ಕಡಿದು ಬೇರೆ ಮಾಡಿದಲ್ಲಿ ಆಡುತ್ತದೆ ಅಂಗ; ಮತ್ತೆ ನರಜೀವದ ಒಲವು ರುಜೆಯಡಸಿ ಪ್ರಾಣ ಬಿಟ್ಟಾಗ ಅಡಿ ಕರವಾದದ ಪರಿಯ ನೋಡಾ! ಘಟ ಜೀವವೊಂದೆಂಬರು ಅಸು ಬೇರಾಗಿದೆ. ಇದರ ಹುಸಿ ಕವಲ ಹೇಳಾ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಾಡಕಲ್ಲು ಹೊಲಗೇರಿಯ ನಾಯಿ, ಇವ ಕೊಂಡಾಡ ಬಂದೆ. ನೋಡದ ಲಿಂಗ, ಹಿಂದೆ ಬಿಟ್ಟೋಡದ ಹೊಲೆಗುಣ ಇದೆಂದಿಗೆ ಹರಿದು? ಈ ಸಂಸಾರದ ಸಂದಣಿ ಬೇಡ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕೈ ಬಾಯಿ ಆಡುವನ್ನಕ್ಕ ಕೆಳಗಣ ಹೂರಿನ ದ್ವಾರವನರಸಿತ್ತು. ಅದು ಸಾಕಾರದ ನೆಳಲು, ಭೀತಿಯ ಕೇಳದೆ ವಿಕಾರ, ಸ್ವಪ್ನದಲ್ಲಿ ಸೋರುವ ಮನೆ. ಇದಾರಿಗೂ ಅಸಾಧ್ಯ, ಮಾರಮಥನ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಾಗೆ ಕುಟುಕುವ ಕೊಂಬಾಗ ಗೂಗೆ ಕಣ್ಣು ತೆರೆಯಿತ್ತು. ಗೂಗೆ ಕಣ್ಣು ತೆರೆವಾಗ ಆದಿಯ ಹಕ್ಕಿ ಬಾಯಿಬಿಟ್ಟಿತ್ತು, ಆದಿಯ ಹಕ್ಕಿ ಬಾಯಿಬಿಡುವಾಗ ಮೂದೇವರೊಡೆಯ ಮೂದೇವನಾದ. ಮೂದೇವಗೆ ಮುಂದೆ ಓಲೆಯ ತೆಗೆವಾಗ ಕೋಡಗ ಏಡಿಸುತ್ತಿದ್ದಿತ್ತು. ಕೋಡಗ ಏಡಿಸುವಾಗ ಬಳ್ಳು ತಲೆದೂಗುತ್ತಿದ್ದಿತ್ತು. ಬಳ್ಳು ತಲೆದೂಗುವಾಗ ಒಳ್ಳೆಗೆ ದಳ್ಳುರಿ ಹೊಡೆಬಂದು, ಜಗವೆಲ್ಲರ ಕೊಂದಿತ್ತು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕುಣಿವ ಕುದುರೆಯ ಮೇಲೆ ಕುಳಿತು, ಆಡುವ ಪಾತ್ರವ ನೋಡುತ ಬಂದವರೆಲ್ಲರು ಅರುಹಿರಿಯರೆ? ಇವರ ಸಂದಣಿಯ ನೋಡಿ ಅಂಜಿ ಅಡಗಿದೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಾಯದ ಕರ್ಮ ಮಾಡುವನ್ನಕ್ಕ ಶಿವಪೂಜಕನಲ್ಲ. ಜೀವ ಭವಕ್ಕೆ ತಿರುಗುವನ್ನಕ್ಕ ವೈರಾಗ್ಯಭಾವ ಸಂಬಂಧಿಯಲ್ಲ. ಇವೆಲ್ಲವೂ ಹೊಟ್ಟೆಯ ಹೊರೆವ ಘಟ್ಟಿಯತನವಲ್ಲದೆ ನಿಶ್ಚಯವಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕುಂಭದಲ್ಲಿ ಕುದಿವ ರೂಪು ಮುಚ್ಚಳ ಅಂಗವ ತೆಗೆದಲ್ಲದೆ ಪಾತಕ ಸಂಗವನರಿಯಬಾರದು. ಶರೀರದ ಕುಂಭದಲ್ಲಿ ಕುದಿವ ಜೀವನ ಇಂದ್ರಿಯಂಗಳ ಹಿಂಗಿಯಲ್ಲದೆ ಲಿಂಗಸಂಗಿಯಲ್ಲ, ಪ್ರಾಣಲಿಂಗಿಯಲ್ಲ, ಆಸು ಭೇದವನರಿವುದಕ್ಕೆ ಸುಸಂಗಿಯಲ್ಲ, ಇಂತಿವನರಿವುದಕ್ಕೆ ಪಶುಪತಿಯ ಶರಣರಲ್ಲಿ ಒಸೆದು ಸಂಗವ ಮಾಡಿ ಅರಿ, ಅಸುವ ಅರಿ, ತೂತ ತರಿ, ಸಂದೇಹದ ಭವವನರಿ, ಘನಲಿಂಗದಲ್ಲಿ ಅರಿದೊರಗು, ಕರಿಗೊಂಡಿರು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕೊಟ್ಟವನೀಶ ಭಕ್ತನಲ್ಲ, ಅರಿವಡೆ ಕರಿಗೊಂಡವನಲ್ಲ. ಅಂಧಕ ಪಂಗುಳನ ಸಂಗದಂತಾಯಿತ್ತು. ಇದ ನೋಡಿ ಬೆಂದು ಬೇಯಲಾರೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕೋಡಗಕ್ಕೆ ಏಡಿಸುವ ಭ್ರಾಂತು, ಹುಲಿಗೆ ಹೊಯಿವ ಗದಕ, ಬಲಿಗೆ ಬಂಟನ ಚಿಂತೆ. ಎನಗೆ ಎಲ್ಲರ ಗೆಲ್ಲುವ ಚಿಂತೆ, ನೀ ಕೊಟ್ಟ ಕಾಯಕ. ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಲ್ಲಿಯ ಹಾಕಿ ನೆಲ್ಲವ ತುಳಿದು ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ; ವಾಗದ್ವೆ ೈತವ ಕಲಿತು ಸಂಸ್ಕøತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು ಮತ್ಸ ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ ಅದೇತರ ನುಡಿ? ಮಾತಿನ ಮರೆ. ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕೈದ ಮಾಡಿದ ಕಾರುಕ ಧೀರನಹನೆ? ಚಿತ್ತದ ಆಮ್ನೆಯಿಂದ ಶಾಸ್ತ್ರ ಭಿತ್ತಿಯಿಂದ, ಕವಿತ್ವದ ಲಕ್ಷಣದಿಂದ, ಅನಿತ್ಯ ಅನಿತ್ಯವೆಂದು ಮಿಕ್ಕಾದವರಿಗೆ ಹೇಳುವ ಕರ್ತುವಲ್ಲದೆ ತತ್ ಪ್ರಾಣಲಿಂಗಾಂಗಯೋಗ ತಾನಾಗಬೇಕು. ಆತುರ ವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಾಯ ಕಲ್ಪಿತಕ್ಕೊಳಗು, ಜೀವ ಭವಕ್ಕೊಳಗು. ಈ ಉಭಯದ ಠಾವನರಿಯದೆ ಧಾವತಿಗೊಂಬರೆಲ್ಲರು. ಕಾವಲಾದರು ಕಾಮನ ಕರ್ಮವಕ್ಕೆ. ಈ ಭಾವವನರಿತು ತೊಲಗು ಸಾರಿದೆ, ಸಾರಧಿಯ ಪತಿಯೊಡೆಯ ಸುತವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಂಗಳ ಮುಂದಣ ಕಾಮವ ಕೊಂದು, ಮನದ ಮುಂದಣ ಆಸೆಯ ತಿಂದು, ಆತನನರಿ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಾಳಕೂಟವ ಕೊಡುವರೆಲ್ಲರು, ಕೊಂಬವನಾರನೂ ಕಾಣೆ. ಮಲತ್ರಯವ ಬಿಡೆಂದು ಹೇಳುವರೆಲ್ಲರನೂ ಕಂಡೆ. ತಾ ತೊಲಗಿ ಹೆರೆಹಿಂಗಿ ಛೀ ಮುಟ್ಟದಿರೆಂಬಿವರನಾರನೂ ಕಾಣೆ. ಸಕಲೇಂದ್ರಿಯದಲ್ಲಿ ತೊಟ್ಟು ಬಿಟ್ಟರೆಂದು ಹೇಳುವರ ಮಾತಿನ ದೃಷ್ಟವ ಕಂಡೆ. ಚಿತ್ತ ವಸ್ತುವಿನಲ್ಲಿ ಬೆಚ್ಚಂತೆ ಕೂಡಿಹರ ಸ್ವಪ್ನದಲ್ಲಿ ಕಾಣೆ. ವಾಗದ್ವೈತದ ಭಾವಿಗಳ ಸಾಕುಬೇಕಾದಷ್ಟು ಕಂಡೆ, ಸ್ವಯಾದ್ವೈತ ಸಂಪನ್ನರ ನಾ ಬಂದಂದಿಂದ ಎಂದೂ ಕಾಣೆ. ಅದು ಎನ್ನ ಇರವೋ? ಪಾಪಿಯ ಕಣ್ಣಿಗೆ ಪರುಷಪಾಷಾಣದಂತೆ! ಎನ್ನ ಭಾವದ ಮಾಯೆ ಎನ್ನಲ್ಲಿ ನೀ ಕಾಣಿಸಿಕೊಳ್ಳದಿರವೊ. ಇಂತೀ ಉಭಯದ ಚೆನ್ನಾಗಿ ಪೇಳು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕೂರಲಗು ಕೊಯ್ಯಿತ್ತು ಜಾಜಿಯ ಬಿರಿಮೊಗ್ಗೆಯ, ಆರವೆ ನುಂಗಿತ್ತು ಸೇರಿದ ಪಕ್ಷಿಯ ಮಾದಿಗನ ಮನೆಯ ಮಡಕೆಯ ಕೂಳ ಹಾರುವನುಂಡ. ಸಹೋದರದವಳ ಕೂಡಿದ ಹಿರಿಯಣ್ಣ. ಅಣ್ಣನ ಹೆಂಡಿರ ತಮ್ಮ ಹಾಕಿಕೊಂಡು ಕೊಡದಿರಲಾಗಿ, ಇದು ಅನ್ಯಾಯವೆಂದು ಅವನ ಕಿರಿಯ ತಮ್ಮ ತಾ ತೆಕ್ಕೊಂಡ. ಇದು ಚೆನ್ನಾಯಿತ್ತು, ಇದರ ಗನ್ನವ ಹೇಳು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ