ಅಥವಾ
(9) (1) (2) (0) (2) (2) (0) (0) (6) (1) (0) (1) (0) (0) ಅಂ (2) ಅಃ (2) (16) (0) (3) (1) (0) (1) (0) (0) (0) (0) (0) (0) (0) (0) (0) (9) (0) (2) (0) (4) (2) (0) (9) (5) (10) (0) (0) (0) (1) (1) (1) (0) (1) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ. ಇದು ಮೆಲ್ಲಮೆಲ್ಲನೆ ಕಲ್ಲಾಗಿ ಬರುತ್ತಿದೆ; ಇದ ನಾನೊಲ್ಲೆ. ಬಲ್ಲವರು ಹೇಳಿ; ಉಂಬಡೆ ಬಾಯಿಲ್ಲ, ನೋಡುವಡೆ ಕಣ್ಣಿಲ್ಲ. ಎನ್ನ ಬಡತನಕ್ಕ ಬೇಡುವಡೆ ಏನೂ ಇಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಎಲ್ಲರಂತೆ ಮಾಡಿ ಮನನಗುಂದಲಾರೆ. ಅರಿತು ಮರೆಯಲಾರೆ, ಕಂಡು ಕಾಣದಂತಿರಲಾರೆ. ಹೇಳಿದಡೆ ಭಕ್ತರ ತೊಡಕು, ಹೇಳದಿದ್ದಡೆ ನಿನ್ನ ತೊಡಕು. ಇಂತೀ ಎರಡರ ಏರಿನಲ್ಲಿ ಗುರಿಯಾಗಲಾರೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಎನ್ನ ಮಾತು ನಿಮಗೆ ಅನ್ಯವೆ? ರಂಭದ ಸಂಚಾರ ರಂಭಕ್ಕೆ ಕೇಡು. ಕುರುಂಬದ ಸಂಚಾರ ರಂಭದ ಕೇಡು. ಎನ್ನಿಂದ ನಿಮ್ಮಿಂದ ಬಂದ ಕೊರತೆ ಪ್ರಮಥ ಸಮೂಹಕ್ಕೆ ಭಂಗ. ಹುಲಿಯ ಪ್ರಾಣ ಕಳ್ಳನ ತಲೆ ಹಗೆಯ ಮರಣವೆಲ್ಲಕ್ಕೂ ಲೇಸು. ಇಂದು ಎನಗೆ ಅಗೂಢವಿಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಎನಗೆ ಅಂಗವೆಂಬುದೊಂದು ಹೆಣ್ಣು. ಬಾಯಿ ಎಂಬುದು ಭಗ, ಕೈ ಎಂಬುದು ಪುರುಷ. ಇಕ್ಕಲಾಗಿ ಸಂಸಾರವೆಂಬ ಬಿಂದು ನಿಂದಿತ್ತು. ಆಸೆಯೆಂಬ ಮಾಸಿನ ಕುಪ್ಪಸದಲ್ಲಿ ಬೆಳೆ ಪತ್ತಿದೆ. ನವಮಾಸ ತುಂಬುವನ್ನಕ್ಕ ಕೂಸು ಬಲಿವುದಕ್ಕೆ ಮೊದಲೆ ಮಾಸ ಹರಿದು ಕೂಸ ಕೊಂದು ಪಾಶವ ಕೆಡಿಸಿ, ನಿಜತತ್ವದ ಮೂರ್ತಿ ಗುರುವಾಗಿ, ಅದರ ಕಳೆ ಲಿಂಗವಾಗಿ, ಕೊಟ್ಟ ಲಿಂಗ ಎನ್ನ ಚಿತ್ತದಲ್ಲಿ ನಿಲ್ಲುವುದಲ್ಲದೆ ಈ ಕೊಟ್ಟಿನ ಕೋಮಳೆ ಕೊಟ್ಟುದ ಎತ್ತಲೆಂದರಿಯೆ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಎಲ್ಲವ ಜರೆದೆನೆಂದು, ಜಗದವರೆಲ್ಲರ ಗೆದ್ದೆನೆಂದು, ದೇವಪದದಲ್ಲಿ ಸಲೆ ಸಂದನೆಂದು, ಅಲ್ಲಿ ಅಲ್ಲಿ ನುಡಿದು ಎಲ್ಲರ ಮಂದಿರದಲ್ಲಿ ಬಂಧನಾಗಲೇಕೆ? ಅವಳವಳ ಸಂಧಿಯೊಳಗೆ ಅಡಗಿದ ಈ ಭವದ ಅಂದವ ಹೇಳಾ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಎಲೆ ದೇವಾ, ಏತಕ್ಕೆ ನುಡಿಯೆ ಎನ್ನೊಳು? ನಿನ್ನಯ ಚಿತ್ತವ ನೀಕರಿಸಿ ನುಡಿವರೆಂದೆ? ನಿನ್ನಯ ನೋವು ಎನ್ನೊಳು ನೀ ಮಾಡುವ ಮಾಟ ಅನೇಕ. ಕುಟಿಲ ಯೋನಿಯ ಸುತ್ತಿ ಮುತ್ತಿದ ಹರಿತದ ಪಾಶದ ಮಲ ನಿನ್ನಲ್ಲಿ ಅನೇಕರ ಕೊಲುವ ಪಾಶ ಕೈಯಲ್ಲಿ, ಭವ ವೇಷ ಅಂಗದಲ್ಲಿ. ಭಕ್ತರ ಕೊಲುವ ದೋಷಕ್ಕೆ ಅಂಜಿದೆಯಾ? ನಿನಗದು ನೀತಿ, ರುದ್ರನ ವೇಷಕ್ಕೆ ಸಹಜ. ಅದ ಬಿಟ್ಟಾಡು, ನೀಕರಿಸು. ಉಮಾಪತಿಯ ವೇಷವ ಬಿಟ್ಟು ಸ್ವಯಂಭುವಾಗು. ಅದ ಬಿಟ್ಟು ಇಚ್ಛೆಯಲ್ಲಿ ನಿಂದು, ನಿರ್ಮಾಯ ಮಲನಾಸ್ತಿಯಾಗಿ, ಮುಕುರ ಪ್ರತಿಬಿಂಬಿಸುವಂತೆ ಎನ್ನಿರವು ನಿನ್ನಲ್ಲಿ ತೋರುತ್ತದೆ. ಅದೇಕೆ? ನಿರ್ಮಾಯನಾದ ಕಾರಣ ನಿನ್ನಿರವು ಎನ್ನಲ್ಲಿ ಕೂರ್ತು, ದರ್ಪಣದ ಆಕಾರ ಬೆಳಗಿನಲ್ಲಿ ತೋರುವ ನಿರಾಕಾರ ಎರಡಕ್ಕೂ ರೂಪು ನಿರೂಪು ಉಭಯ ಬಿನ್ನವಿಲ್ಲದಂತೆ. ಎನ್ನಂಗವಂತಿರಲಿ ಮನವ ಒಡಗೂಡಿಕೊ. ಉರದ ಮಾತಿಂಗೆ ಮಾರನ ಕೊಂದ ಮಲತ್ರಯ ದೂರ, ಅನಾಗತ ಸಂಸಿದ್ಧ ಭೋಗಮಯ ನಯನಚರಣವಿರಾಜಿತ, ಜೀಮೂತ ಮೃತ ದಗ್ಧ ಸರ್ವವ್ಯಾಪಕ ನಾಶನ, ಸರ್ವ ಅಂತರ್ಗತ ವಿಮಲತರಂಗ, ಕರುಣಾಬ್ಧಿ ಪೂರ್ಣಚಂದ್ರ ವಿಲಾಸಿತ, ಒಡಗೂಡಿದ ಭಕ್ತರ ಚಿತ್ತದ ಸಾಕಾರ ಪುಂಜವೆ, ಸರ್ವಾತುರಂಗಳ ವಿರೋಧಿ, ಆಜಾತ, ಶಂಭು ಮಾರೇಶ್ವರಾ.
--------------
ನಗೆಯ ಮಾರಿತಂದೆ