ಅಥವಾ
(9) (1) (2) (0) (2) (2) (0) (0) (6) (1) (0) (1) (0) (0) ಅಂ (2) ಅಃ (2) (16) (0) (3) (1) (0) (1) (0) (0) (0) (0) (0) (0) (0) (0) (0) (9) (0) (2) (0) (4) (2) (0) (9) (5) (10) (0) (0) (0) (1) (1) (1) (0) (1) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಾಯಾರಿ ರಸ ಬತ್ತಿದವಂಗೆ ಪಾಯಸದ ಗಡಿಗೆಯ ತಂದಿರಿಸಿದಡೆ ಬಾಯಾರು ಹಿಂಗುವುದೆ? ಸಕಲ ಸುಖದಲ್ಲಿ ಇಹಂಗೆ ಸಕಳೇಶ್ವರನ ಅಕಲ ಬಲ್ಲನೆ? ಇಂತಿವರೆಲ್ಲರು ಅಖಿಳರೊಳಗೆ ಅಡಗಿ ಸುಖದುಃಖವ ಭೋಗಿಸುವ ಪ್ರಕೃತಿ ವಿಧರಿಗೇಕೆ ಅಕಳಂಕನ ಮಾತು. ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಬಲ್ಲವನ ನುಡಿ ಸರ್ವವೆಲ್ಲಕ್ಕೂ ನನ್ನಿ. ಬೆಲ್ಲದ ಘಟ್ಟಿ ಸರ್ವವೆಲ್ಲಕ್ಕೂ ಮಧುರ. ಕಳವಿಲ್ಲದವನ ನುಡಿ ಸರ್ವವೆಲ್ಲಕ್ಕೂ ದಿಟ. ಹುಸಿ ಒಂದಕ್ಕೆ ದಿಟವೆರಡಕ್ಕೆ ಸಂದೇಹ ಮೂರಕ್ಕೆ ಬೀಡು. ಮೂಕೊರೆಗನ ಶುದ್ಧಿಯೇತಕ್ಕೆ? ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಬ್ರಹ್ಮ ಅವ್ವೆಯ ಗಂಡನಾದ. ವಿಷ್ಣು ಅಕ್ಕನ ಗಂಡನಾದ. ರುದ್ರ ಕಿರುತಂಗಿಯ ಗಂಡನಾದ. ಈ ಮೂವರ ಹೋಬಳಿ ಇದೇನು ಚೋದ್ಯ! ಇಂತಿವು ಮಾಯಾಮಲಯೋನಿ ಸಂಬಂಧ. ಏಕಗುಣ ಭಾವ, ತರುಕೊಂಬು ಫಲದಂತೆ. ಸಾಕು ಸಂಸರ್ಗ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಬಂದ ಬಂದವರೆಲ್ಲರೂ ನೀರ ಕಾಸುವರಲ್ಲದೆ ಮಿಂದುಂಡು ಹೋಹವರನಾರನೂ ಕಾಣೆ. ಕಾಗಲೆತ್ತಿತ್ತು ಮೇಲು ಮಡಕೆಯಿಲ್ಲ. ಸೌದೆ ಬೆಂದಿತ್ತು, ಬೆಂಕಿಯ ಕಾಣೆ. ಮೀವಾತ ಬಂದ, ಉದಕವನೆರೆವವರನಾರನೂ ಕಾಣೆ. ಕಂಡವರ ಕೇಳಿದಾತ ಬಂದು ಕಾಣಿಸಿಕೊಂಡವನಿಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಬ್ರಹ್ಮ ಮಡಕೆಯಾಗಿ, ವಿಷ್ಣು ಮಂತಾಗಿ, ಯುಗಜುಗಂಗಳು ಮೊಸರಾಗಿ, ಅಹುದಲ್ಲಯೆಂಬ ಎರಡು ಕಡೆಗುಣಿಯ ನೇಣು; ನೆಟ್ಟ ಸ್ಥಾಣು ರುದ್ರಮುರ್ತಿ, ಹಿಡಿದು ಕಡೆವ ಕಣ್ಣ ಕಂಗಳ ನೋಟ ಇದು ಅತಿ ಮಥನವಾಗಿದೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಬೀಜವೊಡೆದು ಮೊಳೆಯಂಕುರಿಸುವಾಗ ಎಲೆ ಎಲ್ಲಿದ್ದಿತ್ತು? ಎಲೆ ಸುಳಿಬಿಟ್ಟು ಕಮಲುವಾಗ ಶಾಖೆಯೆಲ್ಲಿದ್ದಿತ್ತು? ಶಾಖೆ ಒಡೆದು ಕುಸುಮ ತೋರುವಾಗ ಫಲವೆಲ್ಲಿದ್ದಿತ್ತು? ಫಲ ಬಲಿದು ರಸ ತುಂಬುವಾಗ ಸವಿಯೆಲ್ಲಿದ್ದಿತ್ತು? ಸವಿಯ ಸವಿದು ಪರಿಣತೆಗೊಂಬಾಗ ಅದೇತರೊದಗು? ಇಷ್ಟರಿ ನೀತಿಯನರಿ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಬಲ್ಲವನಾಗಿ ಮಾತಿನ ವೈರಕ್ಕೆ ಎಲ್ಲರೊಳಗೂ ಹೋರಿ, ಕೃಪೆಯಿಲ್ಲಿದವನಾಗಿ ತತ್ಕಾಲ ಉಚಿತ ದೇಹಕ್ಕೆ ದಳ್ಳುರಿಯವನಾಗಿ, ಮಿಕ್ಕವರೆಲ್ಲರಿಗೆ ಸನ್ಮತಿಯ ಹೇಳುವ ಚಿಳ್ಳನ ನೋಡಾ, ಆತುರವೈರಿ ಮಾರೇಶ್ವರಾ
--------------
ನಗೆಯ ಮಾರಿತಂದೆ
ಬಿರಿದ ಕಟ್ಟಿದಾತನ ಬಿರಿದದೆ. ಕಟ್ಟಿದೊಡೆಯನೆತ್ತ ಹೋದನೆಂದರಿಯೆ. ಇನ್ನಾರೊಳಗೆ ಕದನ? ವಾದಿಸುವರಿಲ್ಲ. ಭೇದದ ಗುರು, ಚೋದ್ಯದ ಶಿಷ್ಯ, ಇಂತೀಲಾಗುಕಾರನೊಲ್ಲ. ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಬೆಲ್ಲ ಹಣ್ಣಾದುದುಂಟೆ, ಪಾದಪಕ್ಕೆ ಫಲವಲ್ಲದೆ? ಬಲ್ಲವ ಎಲ್ಲರೊಳಗೆ ಬಲ್ಲಿದನಾದೆಹೆನೆಂದು ಗೆಲ್ಲ ಸೋಲಕ್ಕೆಹೋರುವ. ಅವನಲ್ಲಿಯೆ ಉಳಿದ ಎಡದೊಡೆ ಸಂದಿಯಲ್ಲಿ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ